ಕಣ್ಣುಮುಚ್ಚಿ ಮೇಕಪ್​ ಮಾಡಿದ ಸೀತಾ-ಸಿಹಿ: ಸೀರಿಯಲ್​ ನಿರ್ದೇಶಕರಿಗೆ ಬೆದರಿಕೆ ಹಾಕಿದ ಫ್ಯಾನ್ಸ್​!

By Suchethana D  |  First Published Sep 12, 2024, 4:01 PM IST

ಸೀತಾ ಮತ್ತು ಸಿಹಿ ಒಂದಕ್ಕೊಂದು ಬಿಡಿಸಲಾಗದ ಬಂಧವಿದು. ಆದರೆ ಸಿಹಿಯ ಒಡಲಿನ ಸತ್ಯ ತಿಳಿದಿದ್ದು, ಸೀತಾಳಿಂದ ಆಕೆ ದೂರವಾಗುವ ಸಮಯ ಬಂದಿದೆ. ಈ ಅಮ್ಮ-ಮಗಳ ಮೇಕಪ್​ ವಿಡಿಯೋ ನೋಡಿ ಫ್ಯಾನ್ಸ್​ ಹೇಳ್ತಿರೋದೇನು?
 


 ಸೀತಾ ಮತ್ತು ಸಿಹಿಯ ಜೋಡಿ ಮಾತ್ರ ಥೇಟ್​ ಅಮ್ಮ-ಮಗಳಂತೆಯೇ ಇದೆ. ಸೀರಿಯಲ್​ನಲ್ಲಿ ಇವರಿಬ್ಬರೂ ಅಮ್ಮ-ಮಗಳು ಎನ್ನುವುದಕ್ಕಿಂತ ಹೆಚ್ಚಾಗಿ ನಿಜ ಜೀವನದಲ್ಲಿಯೂ ಇವರು ಅಮ್ಮ-ಮಗಳು ಇದ್ದಿರಬಹುದು ಎಂದು ಹಲವರಿಗೆ ಎನ್ನಿಸುವುದು ಉಂಟು. ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ತಮ್ಮ ಮತ್ತು ಸಿಹಿ ಪಾತ್ರಧಾರಿ ರೀತು ಸಿಂಗ್​ ಫೋಟೋ, ವಿಡಿಯೋ ಶೇರ್ ಮಾಡಿದಾಗಲೆಲ್ಲಾ, ಇವಳು ನಿಮ್ಮ ಮಗಳು ಅಲ್ಲ ಎಂದು ಮನಸ್ಸು ಒಪ್ಪಿಕೊಳ್ಳುವುದೇ ಇಲ್ಲ ಎನ್ನುತ್ತಲೇ ಇರುತ್ತಾರೆ. ಈಗಲೂ ಈ ಅಮ್ಮ-ಮಗಳು ಪರಸ್ಪರ ಕಣ್ಣು ಕಟ್ಟಿಕೊಂಡು ಒಬ್ಬರಿಗೊಬ್ಬರು ಮೇಕಪ್​ ಮಾಡಿಕೊಂಡಿದ್ದಾರೆ. ಸಿಹಿ ಕಣ್ಣುಮುಚ್ಚಿಕೊಂಡು ಸೀತಾಳಿಗೆ ಮೇಕಪ್​  ಮಾಡಿದ್ರೆ, ಸೀತಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸಿಹಿಗೆ ಮೇಕಪ್​ ಮಾಡಿದ್ದಾಳೆ. 

ಇದನ್ನು ನೋಡಿದ ನೆಟ್ಟಿಗರು ನಿಜಕ್ಕೂ ನಿಮ್ಮದು ಹೋದ ಜನ್ಮದಲ್ಲಿ ಅಮ್ಮ-ಮಗಳ ಬಾಂಧವ್ಯವೇ ಆಗಿರಬಹುದು. ಇಲ್ಲದಿದ್ದರೆ ನಿಮ್ಮಿಬ್ಬರ ಕೆಮೆಸ್ಟ್ರಿ ಹೀಗೆ ಆಗುವುದು ಕಷ್ಟವಾಗಿತ್ತು. ಸಿಹಿ ನಿಮ್ಮ ಜೊತೆ ಇರುವಾಗಲೆಲ್ಲಾ ಅವಳು ನಿಮ್ಮದೇ  ಮಗಳು ಎನಿಸುತ್ತದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಬೇಗ ಮದ್ವೆಯಾಗಿ ಮೇಡಂ, ನಿಮಗೂ ಹೀಗೆಯೇ ಸಿಹಿ ಹುಟ್ಟುತ್ತಾಳೆ ಎನ್ನುತ್ತಿದ್ದಾರೆ ಮತ್ತೆ ಕೆಲವರು. ನಿಮಗೆ ಮಗಳು ಹುಟ್ಟಿದ್ರೆ ಸಿಹಿ ಅಂತಾನೇ ಹೆಸರು ಇಡಿ ಎನ್ನುತ್ತಿದ್ದಾರೆ ಮತ್ತೆ ಕೆಲವರು. ಹಲವರು ಇವರು ಸೀರಿಯಲ್​ ಅಮ್ಮ-ಮಗಳು ಎನ್ನುವುದನ್ನೇ ಮರೆತು, ಸೀತಾರಾಮ ನಿರ್ದೇಶಕರಿಗೆ ಪ್ಲೀಸ್​ ಅಮ್ಮ-ಮಗಳನ್ನು ಬೇರೆ ಮಾಡಬೇಡಿ ಎಂದು ದುಂಬಾಲು ಬೀಳುತ್ತಿದ್ದಾರೆ. ಅಮ್ಮ-ಮಗಳು ಬೇರೆಯಾದರೆ ಸೀರಿಯಲ್​ ನೋಡೋದನ್ನೇ ನಿಲ್ಲಿಸ್ತೀವಿ ಅನ್ನುತ್ತಿದ್ದಾರೆ. ಸೀರಿಯಲ್​ ನೋಡಬೇಕೋ, ಬೇಡ್ವೋ ನೀವೇ ಡಿಸೈಡ್ ಮಾಡಿ ಎಂದು ಧಮ್ಕಿಯನ್ನೂ ಕಮೆಂಟ್​​ನಲ್ಲಿ ಹಾಕುತ್ತಿದ್ದಾರೆ! 

Tap to resize

Latest Videos

undefined

ಸರ್ಕಾರ ಸರಿಯಿಲ್ಲ ಎಂದು ಬೈತಾ ಕೂತ್ಕೊಳೋಕೆ ಆಗತ್ತಾ? ಸಿನಿ ಇಂಡಸ್ಟ್ರಿ ಬಗ್ಗೆ ಕಿರಣ್​ ರಾಜ್​ ಹೇಳಿದ್ದೇನು?

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ವರ್ಷದಿಂದ ಕಾಯುತ್ತಿದ್ದ ಸಿಹಿಯ ಜನ್ಮರಹಸ್ಯ ಕೊನೆಗೂ ತಿಳಿದುಬಿಟ್ಟಿದೆ. ಮೇಘಶ್ಯಾಮ್​ ಸಿಹಿಯ ಅಪ್ಪ ಎನ್ನುವ ವಿಷಯ ರಿವೀಲ್​ ಆಗಿದೆ. ಸಿಹಿ ಸೀತಾಳ ಮಗಳು ಅಲ್ಲ ಎನ್ನುವುದು ಇದಾಗಲೇ ತಿಳಿದಿದ್ದರೂ, ಆಕೆ ಬಾಡಿಗೆ ತಾಯಿ, ಜನ್ಮ ಕೊಟ್ಟ ತಾಯಿ. ಆದರೆ ಕಾನೂನಿನ ಪ್ರಕಾರ ತಾಯಿಯಲ್ಲ. ಅದೇ ಇನ್ನೊಂದೆಡೆ,  ಡಾ.ಮೇಘಶ್ಯಾಮಗೆ ತಮ್ಮ ಮಗಳು ಬದುಕಿರುವ ಸತ್ಯ ತಿಳಿದಿದೆ. ಸಿಹಿಯ ಮೇಲೆ ಆತನಿಗೆ ಇನ್ನಿಲ್ಲದ ಪ್ರೀತಿ. ಆದರೆ ಅವಳೇ ತನ್ನ ಮಗಳು ಎನ್ನುವ ಸತ್ಯ ಗೊತ್ತಿಲ್ಲ. ಆದರೆ ಸೀತಾಳಿಗೆ ವಿಷಯ ಗೊತ್ತಾಗಿ ಕಂಗಾಲಾಗಿ ಹೋಗಿದ್ದಾಳೆ.  ಇದರ ನಡುವೆಯೇ ಶಾಲಿನಿ ನಾವು ಬಾಡಿಗೆ ತಾಯಿಯ ಮೋಸಕ್ಕೆ ಒಳಗಾಗಿ ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಭಾರ್ಗವಿ   ಮುಂದೆ ಹೇಳಿದ್ದಾಳೆ. ಅವಳು ಸೀತಾಳ ಮುಖದಲ್ಲಿ ಆಗುತ್ತಿದ್ದ ಬದಲಾವಣೆ ಗಮನಿಸಿ, ಸಿಹಿಯೇ ಅವರ ಮಗು ಎನ್ನುವ ಅನುಮಾನ ಶುರುವಾಗಿದೆ. 

ಕಾನೂನು ಏನೇ ಇದ್ದರೂ ಈ ತಾಯಿ-ಮಗುವನ್ನು ಬೇರೆ ಮಾಡುವುದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಅಷ್ಟಕ್ಕೂ ಸೀತಾ ಮಗು ಹುಟ್ಟಿದ ಬಳಿಕ ಅದರ ಅಪ್ಪ-ಅಮ್ಮನನ್ನು ಹುಡುಕಲು ಟ್ರೈ ಮಾಡಿದ್ದಳು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಮಗುವನ್ನು ಅನಾಥಾಶ್ರಮದಲ್ಲಿ ಇರಿಸುವಂತೆ ವೈದ್ಯೆ ಹೇಳಿದ್ದರೂ, ಮಗುವನ್ನು ನೋಡಿ ಆಕೆಗೆ  ಮಮತೆ ಹುಟ್ಟುತ್ತದೆ. ಹೆತ್ತ ಮಗು ಅದು, ಅನಾಥಾಶ್ರಮದಲ್ಲಿ  ಬಿಡಲು ಯಾವ ತಾಯಿಗಾದರೂ ಮನಸ್ಸು ಬರುವುದಾದರೂ ಹೇಗೆ? ಆದರೆ ಈಗ ಆಕೆ ಮಗುವನ್ನು ಕಾನೂನಿನ ಪ್ರಕಾರ ಅದರ ಜೈವಿಕ ಅಪ್ಪ-ಅಮ್ಮನಿಗೆ ನೀಡಲೇಬೇಕಿದೆ. ಅದೇ ಇನ್ನೊಂದೆಡೆ,  ಮೇಘಶ್ಯಾಮನಿಗೆ ಮಗು ಹುಡುಕಲು  ಸಹಾಯ ಮಾಡುವುದಾಗಿ ರಾಮ್​ ಬೇರೆ ಭರವಸೆ ನೀಡಿದ್ದಾನೆ. 

ತುಳಸಿ ಸರಿಯೋ, ಸಮರ್ಥ್​ ಸರಿಯೋ... ಗೊಂದಲದಲ್ಲಿದ್ದಾರೆ ಸೀರಿಯಲ್​ ಪ್ರೇಮಿಗಳು! ನಿಮ್ಮ ನಿಲುವೇನು?
 

click me!