ಸೀತಾ-ರಾಮ ಅದ್ಧೂರಿ ಎಂಗೇಜ್‌ಮೆಂಟ್‌: ರಿಯಲ್ಲೋ ರೀಲೊ? ನಿಜವಾಗ್ಲೂ ಮದ್ವೆ ಆಗ್ತಿದ್ದಾರಾ?

By Suchethana D  |  First Published May 29, 2024, 2:44 PM IST

ವೀಕ್ಷಕರು ಬಹಳ ತಿಂಗಳುಗಳಿಂದ ಕಾಯುತ್ತಿದ್ದ ಘಳಿಗೆ ಕೊನೆಗೂ ಬಂದಿದೆ. ಸೀತಾ ಮತ್ತು ರಾಮನ ಎಂಗೇಜ್‌ಮೆಂಟ್‌ ಆಗಿದೆ. ಇದನ್ನು ನೋಡಿ ಥಹರೇವಾರಿ ಕಮೆಂಟ್‌ಗಳ ಸುರಿಮಳೆಯಾಗುತ್ತಿದೆ. 
 


ಧಾರಾವಾಹಿಗಳು ಎಂದರೆ ಹಾಗೇನೇ ಅಲ್ವಾ? ಇಲ್ಲಿ ನಡೆಯುವುದು ಎಲ್ಲವೂ ರೀಲೇ ಆಗಿದ್ದರೂ ರಿಯಲ್‌ ಲೈಫ್‌ಗೆ ಹತ್ತಿರ ಎನಿಸುವುದು ಉಂಟು. ಅದೇ ಕಾರಣಕ್ಕೆ ಸೀರಿಯಲ್‌ಗಳಲ್ಲಿ ಎಲ್ಲವನ್ನೂ ರಿಯಲ್‌ ಆದಂತೆಯೇ ತೋರಿಸಲಾಗುತ್ತದೆ. ಇನ್ನು ಮದುವೆ, ನಿಶ್ಚಿತಾರ್ಥ ಅಥವಾ ಇನ್ನಾವುದೇ ಹಬ್ಬ-ಹರಿದಿನಗಳು ಬಂದರೂ ಅದನ್ನು ರಿಯಲ್‌ ಆಗಿಯೇ ತೋರಿಸಲಾಗುತ್ತದೆ. ಸಿನಿಮಾಗಳಲ್ಲಿ ಮಾತ್ರ ತೋರಿಸಲಾಗುವ ಇಂಥ ದೃಶ್ಯಗಳನ್ನು ಸೀರಿಯಲ್‌ಗಳಲ್ಲಿಯೂ ತೋರಿಸಲಾಗುತ್ತದೆ. ಇದೇ ಕಾರಣಕ್ಕೆ ಸೀರಿಯಲ್‌ಗಳು ಇಂದು ಜನರಿಗೆ ಅಷ್ಟು ಆಪ್ತ ಆಗಿರುವುದು. ಇದೀಗ ಸೀತಾರಾಮ ಸೀರಿಯಲ್‌ನಲ್ಲಿಯೂ ಇದೇ ರೀತಿ ಆಗಿದೆ.

ಕೆಲವು ದಿನಗಳ ಹಿಂದೆ ಅಶೋಕ್‌ ಮತ್ತು ಪ್ರಿಯಾ ಮದುವೆಯನ್ನೂ ಸಕತ್‌ ಭರ್ಜರಿಯಾಗಿ ಸೆಲೆಬ್ರೇಟ್‌ ಮಾಡಲಾಗಿತ್ತು. ಅವರ ಫಸ್ಟ್‌ನೈಟ್‌ ಡೆಕೋರೇಷನ್‌ ನೋಡಿದವರೂ ಇದು ರಿಯಲ್ಲಾ, ರೀಲಾ ಕೇಳಿದ್ದರು.  ಇನ್ನು ಸೀತಾ ಮತ್ತು ರಾಮನ ಮದುವೆ, ಎಂಗೇಜ್‌ಮೆಂಟ್‌ ಎಂದ ಮೇಲೆ ಕೇಳಬೇಕೆ? ವರ್ಷದಿಂದ ಸೀರಿಯಲ್‌ ಪ್ರಿಯರು ಕಾಯುತ್ತಿದ್ದ ಸವಿ ಘಳಿಗೆ ಬಂದೇ ಬಿಟ್ಟಿದೆ. ಹಲವು ಅಡೆತಡೆಗಳನ್ನು ಎದುರಿಸಿ ಇವರ ಎಂಗೇಜ್‌ಮೆಂಟ್‌ ನಡೆಯುತ್ತಿದೆ. ಅತ್ತ ರುದ್ರಪ್ರತಾಪ್‌ ಈ ಎಂಗೇಜ್‌ಮೆಂಟ್‌ ಅನ್ನು ತಡೆಯಲು ಹರಸಾಹಸ ಮಾಡುತ್ತಿದ್ದಾನೆ. ಆದರೆ ವಿಲನ್‌ ಭಾರ್ಗವಿ ಕೂಡ ಆತನಿಗೆ ಸಾಥ್‌ ನೀಡುತ್ತಿಲ್ಲ. ಏಕೆಂದರೆ ಅವಳ ಪ್ಲ್ಯಾನ್‌ ಬೇರೆಯದ್ದೇ ಇದೆ.

Tap to resize

Latest Videos

ಪತ್ನಿಯನ್ನು ಪ್ರಾಣಿಗೆ ಹೋಲಿಸಿದ ತಾಂಡವ್​: ಭಾಗ್ಯಲಕ್ಷ್ಮಿ ಸೀರಿಯಲ್​ ವಿರುದ್ಧ ನೆಟ್ಟಿಗರ ಭಾರಿ ಆಕ್ರೋಶ

ಇನ್ನು ಸೀತಾ ಮತ್ತು ರಾಮರ ಎಂಗೇಜ್‌ಮೆಂಟ್‌ಗೆ ಭರ್ಜರಿ ಸೆಟ್ಟಿಂಗ್‌ ಮಾಡಲಾಗಿದೆ. ರಿಯಲ್‌ ರೀತಿಯಲ್ಲಿಯೇ ಕಾಣುವಂತೆ ಆಮಂತ್ರಣ ಪತ್ರಿಕೆಯನ್ನೂ ರೆಡಿ ಮಾಡಲಾಗಿದೆ. ನಿಜವಾಗಿಯೂ ಶ್ರೀಮಂತರ ಮದುವೆ ಎಂದರೆ ಹೇಗೆ ಇರುತ್ತದೆಯೋ ಅದೇ ರೀತಿ ಸೆಟ್‌ ಅಪ್‌ ಮಾಡಲಾಗಿದೆ. ಆದ್ದರಿಂದ ಈ ಎಂಗೇಜ್‌ಮೆಂಟ್‌ ನೋಡಿದವರು ನಿಜವಾಗಿಯೂ ಇವರಿಬ್ಬರು ಮದ್ವೆ ಆಗ್ತಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.

ಅಷ್ಟಕ್ಕೂ ಬಹುತೇಕ ಸೀರಿಯಲ್‌ಗಳಲ್ಲಿನ ನಾಯಕ-ನಾಯಕಿಯ ಜೋಡಿಯನ್ನು ನೋಡಿ ವೀಕ್ಷಕರು ನೀವಿಬ್ಬರೂ ಯಾಕೆ ಒಟ್ಟಾಗಬಾರದು? ಮದ್ವೆಯಾಗ್ಬಾರದು ಎಂದೆಲ್ಲಾ ಕೇಳುವುದು ಇದೆ. ಅದೇ ನಾಯಕ ಅಥವಾ ನಾಯಕಿ ಇನ್ನೊಂದು ಸೀರಿಯಲ್‌ನಲ್ಲಿ ಬೇರೊಬ್ಬರ ಜೊತೆ ನಟಿಸುವಾಗಲೂ ಅದೇ ಪ್ರಶ್ನೆ ಎದುರಾಗುತ್ತದೆ. ಇದಾಗಲೇ ಸೀತಾ ಮತ್ತು ರಾಮ್‌ ಪಾತ್ರಧಾರಿಗಳಿಗೆ ಹಲವಾರು ಅಭಿಮಾನಿಗಳು ಇದೇ ಪ್ರಶ್ನೆಯನ್ನು ಮುಂದಿಟ್ಟಿದ್ದು ಇದೆ. ಇದೀಗ ಎಂಗೇಜ್‌ಮೆಂಟ್‌ ಸೆಟ್‌ ನೋಡಿ ನಿಜವಾಗಿಯೂ ಇಬ್ಬರದ್ದೂ ಮದ್ವೆ ಆಗ್ತಿದೆಯಾ? ಇವರದ್ದು ರೀಲ್‌ ಎಂಗೇಜ್‌ಮೆಂಟೋ, ರಿಯಲ್ಲೋ ಎಂದೆಲ್ಲಾ ಪ್ರಶ್ನಿಸುತ್ತಿದ್ದಾರೆ. 

ಹನಿಮೂನ್​ನಿಂದ ಬರುತ್ತಿದ್ದಂತೆಯೇ ಮದ್ವೆ ಫೋಟೋ ಡಿಲೀಟ್​ ಮಾಡಿದ ನಟಿ: ಕಾರಣ ಕೇಳಿ ಫ್ಯಾನ್ಸ್​ ಶಾಕ್​!

click me!