ಹೀರೋ ಆಗಲು ಇಷ್ಟವಿಲ್ಲ ಎನ್ನುತ್ತಲೇ ಸಿನಿಮಾಗಳ ಕುರಿತು ಓಪನ್ನಾಗಿ ಮಾತನಾಡಿದ್ದಾರೆ ಬಿಗ್ಬಾಸ್ ಖ್ಯಾತಿಯ ವಿನಯ್ ಗೌಡ. ಅವರು ಹೇಳಿದ್ದೇನು?
ಬಿಗ್ಬಾಸ್ನಲ್ಲಿ ಸದಾ ಜಗಳದಿಂದಲೇ ಫೇಮಸ್ ಆಗಿರೋ ವಿನಯ್ ಗೌಡ (Vinay Gowda) ಅವರು ‘ಹರ ಹರ ಮಹದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿದ್ದರು. ನಂತರ ಅವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 10’ ಆಫರ್ ಬಂದಿದ್ದೇ ತಡ, ಸ್ಟಾರ್ ಆಗಿಬಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರು ಸಾಕಷ್ಟು ಗಮನ ಸೆಳೆದರು. ಜಗಳ ಮಾಡಿಕೊಂಡೂ ಸುದ್ದಿ ಆದರು. ಬಿಗ್ಬಾಸ್ನಿಂದ ಮೂರನೆ ರನ್ನರ್ ಅಪ್ ಆಗಿ ಮಿಂಚಿದರು. ಬಿಗ್ ಬಾಸ್ನಿಂದ ಹೊರ ಬಂದ ಅವರಿಗೆ ಜನರು ಸಾಕಷ್ಟು ಪ್ರೀತಿ ನೀಡುತ್ತಿದ್ದಾರೆ. ವಿಶೇಷ ಎಂದರೆ ಈಗ ಅವರಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಂದಿವೆ. ಮೂರು ಸಿನಿಮಾಗಳಿಗೆ ವಿಲನ್ ಆಗಿ ವಿನಯ್ ಸಹಿ ಹಾಕಿದ್ದಾರೆ.
ಈ ಕುರಿತು ಈಗ ಅವರು ಓಪನ್ ಆಗಿ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ (Rapid Rashmi) ಅವರ ಷೋನಲ್ಲಿ ಮಾತನಾಡಿರುವ ವಿನಯ್ ಅವರು, ಬಿಗ್ಬಾಸ್ನಿಂದ ಬಂದ ಮೇಲೆ ಜೀವನ ಹೇಗೆ ಬದಲಾಯಿತು ಎಂದು ಹೇಳಿದ್ದಾರೆ. ಬಿಗ್ಬಾಸ್ನಿಂದ ಬಂದ ಮೇಲೆ ಸಿನಿಮಾಗಳಿಂದ ಬಹಳ ಆಫರ್ ಬರುತ್ತಿವೆ ಎನ್ನುತ್ತಲೇ ಬಿಗ್ಬಾಸ್ನ ಕೀರ್ತಿ ತಾತ್ಕಾಲಿಕವಾದದ್ದು ಎಂದೂ ಹೇಳಿದ್ದಾರೆ. ಬಿಗ್ಬಾಸ್ನ ಮುಂದಿನ ಸಂಚಿಕೆ ಶುರುವಾದ ಮೇಲೆ ಹಿಂದಿನದ್ದನ್ನು ಜನ ಮರೆಯುತ್ತಾರೆ. ಅದು ತಾತ್ಕಾಲಿಕ ಕೀರ್ತಿಯಷ್ಟೇ. ಅದರೆ ಬಿಗ್ಬಾಸ್ನಿಂದ ಹಲವಾರು ಸಿನಿಮಾ ಆಫರ್ಗಳು ಬರುತ್ತಿವೆ. ಇದು ತುಂಬಾ ಖುಷಿ ಕೊಟ್ಟಿದೆ ಎಂದಿದ್ದಾರೆ.
ಪ್ರತಾಪ್ ಹೀರೋ ಆದ್ರೆ ಫ್ರೀಯಾಗಿ ವಿಲನ್ ಆಗುವೆ! ಡ್ರೋನ್ ಆ್ಯಕ್ಟಿಂಗ್ ಬಗ್ಗೆ ವಿನಯ್ ಗೌಡ ಹೇಳಿದ್ದೇನು?
ಇದೇ ವೇಳೆ ತಾವು ಯಾವುದೇ ಸಿನಿಮಾದಲ್ಲಿ ನಾಯಕನಾಗಿ ನಟಿಸಲು ಇಷ್ಟಪಡುವುದಿಲ್ಲ ಎಂದು ವಿನಯ್ ಹೇಳಿದ್ದಾರೆ. ನನಗೆ ಖಳನಾಯಕನ ಪಾತ್ರ ಇಷ್ಟ. ಎಲ್ಲರೂ ನಾಯಕನಾಗಿ ಬಿಟ್ಟರೆ ವಿಲನ್ ಆಗುವವರು ಯಾರು ಎಂದು ಪ್ರಶ್ನಿಸಿರುವ ಅವರು, ಈಗ ವಿಲನ್ಗಳ ಕೊರತೆ ಚಿತ್ರರಂಗದಲ್ಲಿ ಇದೆ. ಮುಂಬೈನಿಂದ ನಟರನ್ನು ಕರೆಸುತ್ತಿದ್ದಾರೆ. ಯಾಕೆ, ನಮ್ಮಲ್ಲಿ ಅಂಥ ನಟರು ಇಲ್ವಾ? ಅವರಂತೆ ಬಾಡಿ ಬಿಲ್ಡ್ ಮಾಡಲ್ವಾ? ಗಡ್ಡ ಬಿಡಲ್ವಾ? ಹೇರ್ಸ್ಟೈಲ್ ಮಾಡಲ್ವಾ ಎಂದು ಪ್ರಶ್ನಿಸಿರೋ ವಿನಯ್, ತಾವು ವಿಲನ್ ಪಾರ್ಟ್ ಇಷ್ಟಪಡುವುದಾಗಿ ಹೇಳಿದ್ದಾರೆ.
ವಿನಯ್ ಗೌಡ ಅವರು ಈಗಾಗಲೇ ಕೆಲವು ಧಾರಾವಾಹಿಗಳಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ. ಸದ್ಯಕ್ಕೆ ಅವರು ಕಿರುತೆರೆಯಲ್ಲಿ ಲೀಡ್ರೋಲ್ ಮಾಡೋ ಆಲೋಚನೆಯಲ್ಲಿ ಇಲ್ಲ. ಅವರಿಗೆ ಕೈ ತುಂಬಾ ಸಿನಿಮಾ ಆಫರ್ಗಳು ಸಿಕ್ಕಿವೆ. ‘ಕನ್ನಡದಲ್ಲಿ ಎರಡು ದೊಡ್ಡ ಸಿನಿಮಾ ಸಹಿ ಮಾಡಿದ್ದೇನೆ. ತಮಿಳಿನ ಒಂದು ಸಿನಿಮಾ ಕೆಲಸ ನಡೆಯುತ್ತಿದೆ. ತೆಲುಗಿನ ಒಂದು ಚಿತ್ರದ ಜೊತೆ ಮಾತುಕತೆ ನಡೆಯುತ್ತಿದೆ’ ಎಂದು ಈ ಹಿಂದಿನ ಸಂದರ್ಶನವೊಂದರಲ್ಲಿ ವಿನಯ್ ಗೌಡ ಹೇಳಿದ್ದರು. ‘ಒಂದು ಕರೆಕ್ಟ್ ಆಗಿರೋ ಚಾನ್ಸ್ ಹಾಗೂ ಪಾತ್ರ ಸಿಗಬೇಕು. ಬಂದಿರೋ ಎರಡೂ ಸಿನಿಮಾಗಳು ದೊಡ್ಡ ಸ್ಟಾರ್ಗಳ ಸಿನಿಮಾ. ಇದಾದ ಬಳಿಕ ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಫ್ಯೂಚರ್ ಚೆನ್ನಾಗಿರುತ್ತೆ ಎಂದು ನಾನು ಭಾವಿಸಿದ್ದೇನೆ. ನನ್ನ ಮೇಲೆ ನನಗೆ ನಂಬಿಕೆ ಇದೆ’ ಎಂದಿದ್ದಾರೆ ವಿನಯ್ ಗೌಡ. ಈ ಪಾತ್ರಗಳಿಗೆ ಅಗತ್ಯ ಇರೋ ಸಿದ್ಧತೆಯನ್ನು ಅವರು ಮಾಡಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಖಡಕ್ ವಿಲನ್ ಆಗಬೇಕು ಎಂದು ಅವರು ಕನಸು ಕಾಣುತ್ತಿದ್ದಾರೆ.
ಹನಿಮೂನ್ನಿಂದ ಬರುತ್ತಿದ್ದಂತೆಯೇ ಮದ್ವೆ ಫೋಟೋ ಡಿಲೀಟ್ ಮಾಡಿದ ನಟಿ: ಕಾರಣ ಕೇಳಿ ಫ್ಯಾನ್ಸ್ ಶಾಕ್!