ಸೀತೆಗೂ ಶುರುವಾಗಿದೆ ಕುಚ್‌ ಕುಚ್‌: ಹೇಗೆ ಹೇಳೋದು ಅಂತ ಯೋಚಿಸ್ತಿರುವಾಗ್ಲೇ ಆಗತ್ತಾ ಅವಘಡ?

Published : Mar 08, 2024, 02:51 PM ISTUpdated : Mar 08, 2024, 02:52 PM IST
ಸೀತೆಗೂ ಶುರುವಾಗಿದೆ ಕುಚ್‌ ಕುಚ್‌: ಹೇಗೆ ಹೇಳೋದು ಅಂತ ಯೋಚಿಸ್ತಿರುವಾಗ್ಲೇ ಆಗತ್ತಾ ಅವಘಡ?

ಸಾರಾಂಶ

ರಾಮ್‌ ಮೇಲೆ ಸೀತೆಗೂ ಲವ್‌ ಶುರುವಾಗಿದೆ. ಆತನನ್ನು ನೋಡಲು ಕಾತರಳಾಗಿದ್ದಾಳೆ. ಆದರೆ? ಮಾಜಿ ಲವರ್‌ ಬಿಡಬೇಕಲ್ಲ!  

ಸೀತಾ ರಾಮ ಸೀರಿಯಲ್​ ಇದೀಗ ಕುತೂಹಲದ ಘಟ್ಟ ತಲುಪಿದೆ. ಇತ್ತ ಸೀತಾ- ರಾಮ ಒಂದಾಗುವ ಕಾಲ ಬಂದಿದೆ. ಇವರಿಬ್ಬರನ್ನೂ ಒಂದು ಮಾಡಲು ಅಶೋಕ ಹರಸಾಹಸ ಮಾಡುತ್ತಿದ್ದಾರೆ. ಪ್ರೀತಿಯನ್ನು ಹೇಳಿಕೊಂಡು ಬಂದ ರಾಮ್​ನನ್ನು ಬೈದು ಸೀತಾ ಮನೆಯಿಂದ ಹೊರಕ್ಕೆ ಕಳಿಸಿದ್ದಾಳೆ. ಇದೇ ಅವಮಾನದಲ್ಲಿ ರಾಮ್​ ಏನು ಮಾಡಬೇಕು ಎಂದು ತಿಳಿಯುವಷ್ಟರಲ್ಲಿಯೇ ಭಯಾನಕ ಅಪಘಾತ ಸಂಭವಿಸಿದೆ. ಅಷ್ಟಕ್ಕೂ ಈ ಆ್ಯಕ್ಸಿಡೆಂಟ್​ ಮಾಡಿಸಿದ್ದು, ಖುದ್ದು ಆತನ ಚಿಕ್ಕಮ್ಮ. ಸೀತಾಳಿಗೆ ಮೋಸ ಮಾಡುವ ಉದ್ದೇಶದಿಂದ ಮದುವೆಯಾಗಲು ಹೊರಟಿದ್ದ ರುದ್ರಪ್ರತಾಪ್​ನ ಕೈಜೋಡಿಸಿ ಚಿಕ್ಕಮ್ಮ ಅಪಘಾತ ಮಾಡಿಸಿದ್ದಾಳೆ. ಜೈಲು ಸೇರಿದ್ದ ರುದ್ರಪ್ರತಾಪ್​ನಿಗೆ ಜಾಮೀನು ಕೊಡಿಸಿ ಹೊರಕ್ಕೆ ಕರೆದುಕೊಂಡು ಬಂದಿರುವ ಚಿಕ್ಕಮ್ಮ, ರುದ್ರಪ್ರತಾಪ್​ ಕೈಯಲ್ಲಿ ಅಪಘಾತ ಮಾಡಿಸಿದ್ದಾಳೆ. ಭೀಕರ ಅಪಘಾತದಲ್ಲಿ ರಾಮ್​ ಆಸ್ಪತ್ರೆಗೆ ಸೇರಿದ್ದಾನೆ.  ಸೀತಾ ರಕ್ತ ಕೊಟ್ಟು ಪ್ರಾಣ ಕಾಪಾಡಿದ್ದಾಳೆ. 

ರಾಮ್​ ಸೀತಾಳನ್ನು ಪ್ರೀತಿ ಮಾಡುವ ವಿಷ್ಯ ರಾಮ್​ ತಾತನಿಗೆ ತಿಳಿದಿದೆ. ಆದರೆ ಸೀತಾ ಒಂದು ಮಗುವಿನ ತಾಯಿ ಎನ್ನುವ ಸತ್ಯ ಗೊತ್ತಿಲ್ಲ. ರಾಮ್​ನನ್ನೇ ಸೀತಾಳಿಗೆ ಕೊಟ್ಟು ಮದುವೆ ಮಾಡಿಸುವ ಯೋಚನೆ ಮಾಡುತ್ತಿದ್ದಾನೆ. ಇದೇ ವೇಳೆ, ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿರೋ ರಾಮ್‌ ಮನೆಗೆ  ಸೇರಿದ್ದಾನೆ. ಆತನನ್ನು ನೋಡಲು ಸಿಹಿ ಚಡಪಡಿಸುತ್ತಿದ್ದಳು.. ಅಮ್ಮ ಸೀತಾಳಿಗೆ ಹೇಳಿದರೆ ಮತ್ತೆ ಕರೆದುಕೊಂಡು ಹೋಗುವುದಿಲ್ಲ ಎನ್ನುವ ಭಯ. ಆದರೆ ಏನಾದರೂ ಮಾಡಿ ರಾಮ್‌ನನ್ನು ನೋಡಲೇಬೇಕು ಎನ್ನುವ ಛಲ ಹೊತ್ತಿದ್ದಳು.  ಅದಕ್ಕಾಗಿ ಹೇಗಾದರೂ ಮಾಡಿ ರಾಮ್‌ನ ಮನೆಗೆ ಹೋಗುವ ಪ್ಲ್ಯಾನ್‌ ಮಾಡಿದ್ದಳು ಸಿಹಿ. ಆದರೆ ಆಕೆಗೆ ದಾರಿ ಗೊತ್ತಿಲ್ಲ. ಶಾಲೆಗೆ ಹೋಗಬೇಕಿದ್ದ ಸಿಹಿ ಯಾರಿಗೂ ಹೇಳದೇ ಶಾಲೆ ತಪ್ಪಿಸಿ ರಾಮ್‌ನನ್ನು ಹುಡುಕಿ ಹೊರಟಿದ್ದಳು. ದಾರಿಯಲ್ಲಿ ಸಿಗುವ ಡೆಲವರಿ ಬಾಯ್‌ಗೆ ಅಡ್ರೆಸ್‌ ಕೇಳಿದ್ದಳು. ಆದರೆ ಆತ ತನಗೆ ಗೊತ್ತಿಲ್ಲ ಎಂದಿದ್ದ.

ಡ್ರೋನ್‌ ಪ್ರತಾಪ್‌ ಅಮ್ಮನ ಕಣ್ಣೀರು: ಕಾಗೆ ಹಾರಿಸೋದು ಇನ್ನಾದ್ರೂ ಬಿಡಪ್ಪ ಎಂದ ನೆಟ್ಟಿಗರು

ಇದೀಗ ಸಿಹಿ ಅಂತೂ ಸಕ್ಸಸ್‌ ಆಗಿದ್ದಾಳೆ. ಅಂಚೆಯಣ್ಣನ ನೆರವು ಪಡೆದುಕೊಂಡಿದ್ದಾಳೆ. ಆರಂಭದಲ್ಲಿ ಹೀಗೆ ಬಾಲಕಿಯನ್ನು ಕರೆದುಕೊಂಡು ಹೋಗುವುದು ಸರಿಯಲ್ಲ ಎಂದು ಅಂಚೆಯಣ್ಣ ಹೇಳಿದರೂ ಕೊನೆಗೆ ಸಿಹಿಯ ಒತ್ತಾಯಕ್ಕೆ ಮಣಿದು ತನ್ನ ಗಾಡಿಯಲ್ಲಿ ಕರೆದುಕೊಂಡು ಹೋಗಿದ್ದಾನೆ. ಕೊನೆಗೂ ಸಿಹಿ ರಾಮ್‌ನನ್ನು ತಲುಪಿದ್ದಾಳೆ. ಇದಾಗಲೇ ಎರಡು ಬಾರಿ ಸಿಹಿ ಕಿಡ್ನಾಪ್‌ ಆಗಿದ್ದರಿಂದ ಮತ್ತೆಲ್ಲಿ ಅವಳನ್ನು ಅಪಹರಣ ಮಾಡಿಬಿಡುವ ಸೀನ್‌ ಬರುತ್ತದೆಯೋ ಎಂದು ಗಾಬರಿಯಲ್ಲಿ ಅಭಿಮಾನಿಗಳಿಗೆ ಈಗ ಧೈರ್ಯ ಬಂದಿದೆ. ಅದೇ ಇನ್ನೊಂದೆಡೆ, ಸಿಹಿ ತಾನೇ ಕರೆಸಿಕೊಂಡಿದ್ದು, ಅವಳಿಗೆ ಬೈಬೇಡಿ ಎಂದು ರಾಮ್‌ ಸೀತಾಗೆ ಮೆಸೇಜ್‌ ಮಾಡಿದ್ದಾನೆ.

ರಾಮ್‌ ಮೆಸೇಜ್‌ ನೋಡಿ ಸೀತಾಗೆ ಲವ್‌ ಶುರುವಾಗಿದೆ. ರಾಮ್ ಹುಷಾರಾಗಿದ್ದನ್ನು ಕೇಳಿ ಮನಸ್ಸಿನಲ್ಲಿ ಗೊತ್ತಿಲ್ಲದೇ ಪ್ರೀತಿ ಚಿಗುರುತ್ತಿದೆ. ನಾಳೆ ಆಫೀಸ್‌ಗೆ ಬರುವುದಾಗಿ ರಾಮ್‌ ಹೇಳಿದಾಗ, ಈ ಸಂತೋಷವನ್ನು ಹೇಗೆ ವ್ಯಕ್ತಪಡಿಸುವುದು ಎಂದು ಆಕೆಗೆ ತಿಳಿಯದೇ ಚಡಪಡಿಸಿದಳು. ಕೊನೆಗೆ ಸಾರಿ ಎಂದು ಕೇಳಿದಳು. ಇನ್ನು ಇನ್ನೇನು ಇಬ್ಬರೂ ಒಂದಾಗುವ ಕಾಲ ಬಂದಿದೆ. ಹಾಗಂತ ಸೀರಿಯಲ್‌ ಇದು. ಇಷ್ಟು ಬೇಗ ಒಂದಾಗೋಕೆ ಸಾಧ್ಯನಾ? ಈ ನಡುವೆಯೇ ಮಾಜಿ ಲವ್ವರ್‌ ಭಾರಿ ಪ್ಲ್ಯಾನ್‌ ಮಾಡುತ್ತಿದ್ದಾಳಲ್ಲ. ಆಫೀಸ್‌ ಬೇರೆ ಸೇರಿಕೊಂಡಿದ್ದಾಳೆ. ಅವಳಿಂದ ಸೀತಾ ಮತ್ತು ರಾಮ್‌ಗೆ ಈಗ ಭಾರಿ ಆತಂಕವೂ ಇದೆ. ಮುಂದೇನು, ಅವಳು ಏನು ಅವಘಡ ಮಾಡುಬಹುದು ಎಂದು ಫ್ಯಾನ್ಸ್‌ ಚಿಂತಾಕ್ರಾಂತರಾಗಿದ್ದಾರೆ. 
ಅನಂತ್​ ಅಂಬಾನಿಯನ್ನು ಕೆಲ ದಿನ ನನ್ನ ಬಳಿ ಬಿಡಿ ಎಂದ ರಾಖಿ! ಕಾರಣ ಕೇಳಿ ನೆಟ್ಟಿಗರು ಕಿಡಿಕಿಡಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!
ಮಂತ್ರಾಲಯದ ರಾಯರ ಪವಾಡದಿಂದಲೇ ಮದುವೆಯಾಯ್ತು: Suhana Syed ಎಂದೂ ಹೇಳಿರದ ರಿಯಲ್ ಕಥೆ