
ಭೂಮಿಕಾ ಶಿವರಾತ್ರಿ ಹಬ್ಬದ ನಿಮಿತ್ತ ಅಮ್ಮನ ಮನೆಗೆ ಹೋಗಿದ್ದಾಳೆ. ಅಲ್ಲಿ ಶಿವರಾತ್ರಿ ಹಬ್ಬ ಶುರುವಾಗಿದೆ. ತವರು ಮನೆಯಲ್ಲಿಯೂ ಭೂಮಿಕಾಗೆ ಮಲ್ಲಿಯದ್ದೇ ಚಿಂತೆ. ಹಬ್ಬದ ನಿಮಿತ್ತ ದೇವಸ್ಥಾನಕ್ಕೆ ಹೋಗುವಂತೆ ಮಲ್ಲಿಗೆ ಹೇಳಿ ಬಂದಿದ್ದಾಳೆ ಭೂಮಿ. ಅವಳು ದೇವಸ್ಥಾನಕ್ಕೆ ಹೋದಳೋ, ಇಲ್ಲವೋ ಎಂದು ನೋಡಲು ಫೋನ್ ಮಾಡುತ್ತಾಳೆ. ಆದರೆ ಮಲ್ಲಿ ಫೋನ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಾಳೆ. ಗಾಬರಿಯಿಂದ ಭೂಮಿಕಾ ಅತ್ತೆಗೆ ಫೋನ್ ಮಾಡಿದಾಗ, ಅತ್ತೆ ತಾವು ದೇವಸ್ಥಾನಕ್ಕೆ ಹೋಗ್ತಿರೋದಾಗಿ ಹೇಳುತ್ತಾಳೆ. ಮಲ್ಲಿ ಅವಳ ಜೊತೆ ಇದ್ದಾಳೋ ಇಲ್ಲವೋ ಗೊತ್ತಿಲ್ಲ. ಆದರೆ, ಇತ್ತ ಜೈದೇವ ಮಲ್ಲಿಯನ್ನು ಕೊಲೆ ಮಾಡುವ ಸ್ಕೆಚ್ ಹಾಕುತ್ತಿದ್ದಾನೆ. ಮುಂದೇನಾಗುತ್ತದೆ ಎನ್ನುವುದು ಈಗಿರುವ ಕುತೂಹಲ.
ಅಷ್ಟಕ್ಕೂ, ಜೈದೇವ ಪತ್ನಿ ಮಲ್ಲಿಯ ಮೇಲೆ ಕೈಮಾಡಿದ್ದಾಗಿ ಭೂಮಿಕಾ ಜೈದೇವನ ವಿರುದ್ಧ ತಿರುಗಿ ಬಿದ್ದಿದ್ದಳು. ಭೂಮಿಕಾ ಹೆಸರನ್ನು ಕೆಡಿಸಲು ಆಕೆಯ ಹೆಸರು ಹೇಳಿ ಖುದ್ದು ಜೈದೇವನೇ ತನ್ನ ಮೇಲೆ ಕೇಸು ದಾಖಲು ಮಾಡಿಕೊಂಡು ಭೂಮಿಕಾ ವಿರುದ್ಧ ಎಲ್ಲರ ದೃಷ್ಟಿಯಲ್ಲಿ ಆರೋಪಿ ಮಾಡಿದ್ದ. ಇದು ಕೊನೆಗೆ ಭೂಮಿಕಾಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಜೈದೇವನಿಗೆ ಚಾಲೆಂಜ್ ಹಾಕಿದ್ದಾಳೆ. ತನ್ನ ಮದುವೆ ಸಿಂಧುವೇ ಅಲ್ಲ ಎಂದಿದ್ದ ಜೈದೇವ. ಅಷ್ಟಕ್ಕೆ ಸುಮ್ಮನಾಗದ ಭೂಮಿಕಾ ಇಬ್ಬರ ಮದುವೆಯನ್ನು ನೋಂದಣಿ ಮಾಡಿಸಿಬಿಟ್ಟಿದ್ದಾಳೆ. ಇನ್ನು ತನ್ನ ಆಟ ಶುರು ಮಾಡಿಕೊಂಡಿದ್ದಾಳೆ. ಕಂಪೆನಿಯ ಕಾರ್ಯಕ್ರಮದಲ್ಲಿಯೂ ಮಲ್ಲಿಯನ್ನು ಕರೆತಂದಿದ್ದು, ಜೈದೇವನನ್ನು ಮತ್ತಷ್ಟು ಉರಿಸಿದ್ದಾಳೆ.
ಪತ್ನಿ ಭಾಗ್ಯಳ ಮೇಲೆ ತಾಂಡವ್‌ಗೆ ಶುರುವಾಯ್ತಾ ಲವ್ವು? ಇಂಗು ತಿಂದ ಮಂಗನಂತಾದ ಶ್ರೇಷ್ಠಾ
ಮತ್ತೆ ಮತ್ತೆ ಭೂಮಿಕಾ ವಿರುದ್ಧ ಜೈದೇವ ಕೊತಕೊತ ಕುದಿಯುವಂತಿ ಆಗಿದೆ. ಅದೇ ಇನ್ನೊಂದೆಡೆ ಅಪ್ಪಿ ಮತ್ತು ಪಾರ್ಥನ ಲವ್‌ಸ್ಟೋರಿ ಭೂಮಿಕಾಗೆ ತಿಳಿದಿದೆ. ಆದರೆ ಅಪ್ಪಿಯ ಮೇಲೆ ಕಣ್ಣುಹಾಕಿದವ ಜೈದೇವ. ಇನ್ನು ಆಕೆ ಮದುವೆಯಾಗಿ ಅದೇ ಮನೆಗೆ ಬಂದರೆ ಮುಗಿಯಿತು ಕಥೆ. ಜೈದೇವನ ವಿರುದ್ಧ ಯಾರೂ ಮಾತನ್ನು ಕೇಳಲು ಇಷ್ಟಪಡುವುದಿಲ್ಲ, ಒಂದೆಡೆ ಮಲ್ಲಿಯ ಜವಾಬ್ದಾರಿ ವಹಿಸಿಕೊಂಡಿರುವ ಭೂಮಿಕಾ, ಈಗ ಅಪ್ಪಿಯ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಇನ್ನು ಏನೇನು ಆಗುತ್ತದೆಯೋ ನೋಡಬೇಕು.
ಇದರ ನಡುವೆಯೇ ಭೂಮಿಕಾ ಮಲ್ಲಿಯನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದಾಳೆ. ಇದೇ ಟೈಂಗೆ ಕಾಯುತ್ತಿದ್ದಾನೆ ಜೈದೇವ. ಮಲ್ಲಿಯನ್ನು ಭೂಮಿಕಾಳಿಂದ ಎಸ್ಕೇಪ್ ಮಾಡಿಸುವೆ ಎಂಬ ಡೈಲಾಗ್ ಬೇರೆ ಹೊಡೆದಿದ್ದಾನೆ. ಇನ್ನು ಏನಾಗುತ್ತದೆಯೋ ಎನ್ನುವ ಆತಂಕದಲ್ಲಿದ್ದಾರೆ ಅಮೃತಧಾರೆ ಫ್ಯಾನ್ಸ್. ಮನೆಯಲ್ಲಿಯೇ ಇಷ್ಟೊಂದು ಕೆಟ್ಟ ಹುಳು ಇದ್ದರೂ, ಮನೆಯವರಿಗೆ ಗೊತ್ತಾಗದೇ ಇರಲು ಹೇಗೆ ಸಾಧ್ಯ ಎನ್ನುವುದು ಕೆಲವು ನೆಟ್ಟಿಗರ ಪ್ರಶ್ನೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಹಲವರು, ಇದು ಸೀರಿಯಲ್‌ಗಳಲ್ಲಿ ಮಾತ್ರವಲ್ಲ, ಬಹುತೇಕ ಮನೆಗಳ ಕಥೆಯೂ ಹೌದು. ಅದರಲ್ಲಿಯೂ ಶ್ರೀಮಂತರ ಮನೆಯಲ್ಲಿ ಇಂಥದ್ದನ್ನು ಸಾಕಷ್ಟು ನೋಡಲು ಸಿಗುತ್ತದೆ ಎಂದಿದ್ದಾರೆ.
ಡ್ರೋನ್ ಪ್ರತಾಪ್ ಅಮ್ಮನ ಕಣ್ಣೀರು: ಕಾಗೆ ಹಾರಿಸೋದು ಇನ್ನಾದ್ರೂ ಬಿಡಪ್ಪ ಎಂದ ನೆಟ್ಟಿಗರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.