ಶಿವರಾತ್ರಿಗೆ ಸೀರಿಯಲ್‌ಗಳ ಲಿಂಕ್‌: ಹಬ್ಬಕ್ಕೆ ವಿಶೇಷ ರೀತಿಯಲ್ಲಿ ವಿಷ್‌ ಮಾಡಿದ ತಾರೆಯರು- ವಿಡಿಯೋ ರಿಲೀಸ್‌

Published : Mar 08, 2024, 02:00 PM ISTUpdated : Mar 08, 2024, 02:01 PM IST
ಶಿವರಾತ್ರಿಗೆ ಸೀರಿಯಲ್‌ಗಳ ಲಿಂಕ್‌: ಹಬ್ಬಕ್ಕೆ ವಿಶೇಷ ರೀತಿಯಲ್ಲಿ ವಿಷ್‌ ಮಾಡಿದ ತಾರೆಯರು- ವಿಡಿಯೋ ರಿಲೀಸ್‌

ಸಾರಾಂಶ

ಇಂದು ಮಹಾಶಿವರಾತ್ರಿ. ಈ ಸಂದರ್ಭದಲ್ಲಿ ಜೀ ಕನ್ನಡ ವಾಹಿನಿಯ ಸೀರಿಯಲ್‌ಗಳ ತಾರೆಯರು ವಿಶೇಷವಾಗಿ ವಿಷ್‌ ಮಾಡಿದ್ದಾರೆ. ಅದರ ಪ್ರೊಮೋ ರಿಲೀಸ್‌ ಆಗಿದೆ.   

ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಾಗಿರುವ ಇಂದು ಮಹಾಶಿವರಾತ್ರಿ ಹಬ್ಬದ ಸಂಭ್ರಮ. ಇಂದು  ಶಿವನ ಭಕ್ತರು ಉಪವಾಸ ಕೈಗೊಳ್ಳುವ ಮೂಲಕ, ಧ್ಯಾನ , ಜಾಗರಣೆಗಳನ್ನು ಮಾಡುವ ಮೂಲಕ ಶಿವನನ್ನು ಆರಾಧಿಸುತ್ತಾರೆ. ಈ ದಿನ ಶಿವನ ದೇಗುಲದಲ್ಲಿ ಭಕ್ತರು ರಾತ್ರಿಯಿಡೀ ಜಾಗರಣೆ ಕೈಗೊಂಡು ಈಶ್ವರನನ್ನು ಆರಾಧಿಸುತ್ತಾರೆ.  ಈ ಹಿನ್ನೆಲೆಯಲ್ಲಿ, ಜೀ ಕನ್ನಡ ವಾಹಿನಿ ವಿಶೇಷವಾದ ಪ್ರೊಮೋ ಒಂದನ್ನು ರಿಲೀಸ್‌ ಮಾಡಿದೆ. ಇದರಲ್ಲಿ ಎಲ್ಲಾ ಸೀರಿಯಲ್‌ ನಾಯಕ-ನಾಯಕಿ ತಮ್ಮದೇ ಆದ ರೀತಿಯಲ್ಲಿ, ತಮ್ಮ ಸೀರಿಯಲ್‌ ಕುರಿತು ಹೇಳುತ್ತಲೇ ಶಿವರಾತ್ರಿಯ ಹಬ್ಬಕ್ಕೆ ಅದನ್ನು ಲಿಂಕ್‌ ಮಾಡುವ ಮೂಲಕ ವಿಷ್‌ ಮಾಡಿದ್ದಾರೆ. ಇದರ ಪ್ರೊಮೋ ಬಿಡುಗಡೆಯಾಗಿದ್ದು, ಶುಭಾಶಯಗಳ ಸುರಿಮಳೆಯೇ ಆಗುತ್ತಿದೆ. 

ಬ್ರಹ್ಮಾಂಡದ ಎರಡು ಅತ್ಯುನ್ನತ ಶಕ್ತಿಗಳಾದ ಶಿವ ಹಾಗೂ ಪಾರ್ವತಿಯ ಸಂಯೋಗದ ಪ್ರತೀಕವಾಗಿ ಮಹಾಶಿವರಾತ್ರಿಯ ಆಚರಣೆ ಮಾಡುವುದು ಎಂಬುದರಿಂದ ಹಿಡಿದು ಸಮುದ್ರ ಮಥನದ ಸಂದರ್ಭದಲ್ಲಿ ಬಂದ ಹಾಲಾಹಲವನ್ನು ಕುಡಿದ ಶಿವ ಜಗತ್ತನ್ನು ಉಳಿಸಿದ ಮಹಾ ಪರ್ವದಿದ ಎಂಬವರೆಗೆ ಹಲವು ಪೌರಾಣಿಕ ಕಥೆಗಳು ಮಹಾಶಿವರಾತ್ರಿಗೆ ಥಳಕು ಹಾಕಿಕೊಂಡಿವೆ. ಇದೇ ಹಿನ್ನೆಲೆಯಲ್ಲಿ ಇದೇ ವಿಷಯವನ್ನು ಹೇಳುವ ಮೂಲಕ ಹಿಟ್ಲರ್‌ ಕಲ್ಯಾಣದ ಲೀಲಾ ಶಿವರಾತ್ರಿಗೆ ಶುಭಾಶಯ ಕೋರಿದ್ದಾರೆ. ಇದಾದ ಬಳಿಕ ಪುಟ್ಟಕ್ಕನ ಮಕ್ಕಳು ಸ್ನೇಹಾ ಮತ್ತು ಕಂಠಿ ಜೋಡಿ ಬಂದಿದೆ. ಪುರುಷ ಹಾಗೂ ಸ್ತ್ರೀ ಶಕ್ತಿಗಳನ್ನು ಪ್ರತಿನಿಧಿಸುವ ಶಿವ ಹಾಗೂ ಶಕ್ತಿಯು ಒಟ್ಟಾಗಿ ಸೇರಿದ ರಾತ್ರಿಯನ್ನು ಗೌರವಿಸುವುದು ಮಹಾ ಶಿವರಾತ್ರಿಯನ್ನು ಆರಾಧಿಸಲು ಇನ್ನೊಂದು ಕಾರಣ. ಈ ಕುರಿತು ಮಾತನಾಡಿದ ಜೋಡಿ, ಹೆಂಡ್ತಿಗೋಸ್ಕರ ಶ್ರೀಕಂಠೇಶ್ವರ ಸಾಹಸ ಮಾಡಿದಂತೆ, ಪುಟ್ಟಕ್ಕನ ಮಕ್ಕಳು ಕಂಠಿ ಪತ್ನಿಗಾಗಿ ರೈತನಾಗಲು ಹೊರಟಿದ್ದಾನೆ ಎಂದಿದೆ.

ಡ್ರೋನ್‌ ಪ್ರತಾಪ್‌ ಅಮ್ಮನ ಕಣ್ಣೀರು: ಕಾಗೆ ಹಾರಿಸೋದು ಇನ್ನಾದ್ರೂ ಬಿಡಪ್ಪ ಎಂದ ನೆಟ್ಟಿಗರು

 ಪಾರ್ವತಿಯು ವಿಷವು ಶಿವನ ದೇಹ ತಲುಪುವುದನ್ನು ತಪ್ಪಿಸಲು ಅವನ ಗಂಟಲನ್ನು ಒತ್ತಿ ಹಿಡಿಯುತ್ತಾಳೆ. ಪರಿಣಾಮ ಶಿವನ ಕಂಠವು ನೀಲಿ ಬಣ್ಣಕ್ಕೆ ತಿರುಗುತ್ತದೆ. ಇದೇ ಕಾರಣಕ್ಕೆ ಶಿವನಿಗೆ ನೀಲಕಂಠ ಎಂಬ ಹೆಸರು ಬಂದಿತು. ಈ ಬಗ್ಗೆ ಮಾಹಿತಿ ನೀಡುತ್ತಲೇ ಶ್ರೀರಸ್ತು ಶುಭಮಸ್ತು ಸೀರಿಯಲ್‌ ಪೂರ್ಣಿ ಮತ್ತು ಅಭಿ ಮಾಧವ ಮತ್ತು ತುಳಸಿಗೆ ಅನುಗುಣವಾಗಿ ಶಿವರಾತ್ರಿಯ ಕುರಿತು ಹೇಳಿದ್ದಾರೆ. ಬಳಿಕ ಲಕ್ಷ್ಮೀ ನಿಲಯ ಸೀರಿಯಲ್‌ನ ಪಾತ್ರಧಾರಿಗಳು ಕೂಡ ಶಿವನ ಮಹಿಮೆ ಕುರಿತು ಹೇಳಿದ್ದರೆ, ಸೀತಾರಾಮ ಸೀರಿಯಲ್‌ ಸೀತೆ ಮತ್ತು ರಾಮ ಕೂಡ ತಮ್ಮ ಸೀರಿಯಲ್‌ ಮೂಲಕ ಶಿವನ ಮಹಿಮೆ ತಿಳಿಸಿದ್ದಾರೆ. ಸೀತೆಯನ್ನು ಹುಡುಕಲು ಹೊರಟಾಗ ಆ ರಾಮ ಪೂಜಿಸಿದ್ದು ಶಿವನನ್ನೇ ಎನ್ನುವ ಮೂಲಕ ತಮ್ಮ ಸೀರಿಯಲ್‌ಗೆ ಶಿವರಾತ್ರಿ ಥಳುಕು ಹಾಕಿದ್ದಾರೆ. 

ಪ್ರತಿ ವರ್ಷ ಆಚರಿಸಲ್ಪಡುವ ಒಟ್ಟು 12 ಶಿವರಾತ್ರಿಗಳಲ್ಲಿ ಮಹಾ ಶಿವರಾತ್ರಿಯನ್ನು ಅತ್ಯಂತ ಮಹತ್ವಪೂರ್ಣವಾದದ್ದು ಎಂದು ಪರಿಗಣಿಸಲಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಇದು ಅತ್ಯಂತ ಮಹತ್ವದ ಹಬ್ಬವಾಗಿದೆ. ಕತ್ತಲೆಯಿಂದ, ಅಜ್ಞಾನದ ಹಾದಿಯಿಂದ ಬೆಳಕಿನ ವಿಜಯವನ್ನು ಸಾಧಿಸುವ ಹಬ್ಬ ಇದಾಗಿದೆ.
 

ರಾಮಾಚಾರಿ 2.0 ನಟಿಗೆ ಕಂಕಣ ಭಾಗ್ಯ: ಸೈಲೆಂಟಾಗಿ ನಡೆಯಿತು ನಿಶ್ಚಿತಾರ್ಥ- ಹುಡುಗ ಯಾರು?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?