ಪತ್ರಕರ್ತರ ಮನಗೆದ್ದ ಭಾಗ್ಯಾಳ ಒತ್ತು ಶ್ಯಾವಿಗೆ ಮತ್ತು ರಸಾಯನ ಮಾಡೋ ಸೀಕ್ರೇಟ್ ಇಲ್ಲಿದೆ!

By Bhavani BhatFirst Published Jun 10, 2024, 10:52 AM IST
Highlights

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ಮಾಡಿರೋ ಒತ್ತು ಶ್ಯಾವಿಗೆ ರಸಾಯನಕ್ಕೆ ಫುಲ್ ಮಾರ್ಕ್ಸ್ ಸಿಕ್ಕಿದೆ. ಆ ದೃಶ್ಯ ನೋಡಿ ನಿಮಗೂ ಒತ್ತು ಶಾವಿಗೆ ರಸಾಯನ ತಿನ್ಬೇಕು ಅನಿಸಿದ್ರೆ ಆ ರೆಸಿಪಿ ಇಲ್ಲಿದೆ.

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಎಂದೂ ಹೈಡ್ರಾಮಾ ತಪ್ಪಿದ್ದಿಲ್ಲ. ಈಗಲೂ ಅದೇ ನಡೆಯುತ್ತದೆ. ಮಲೆನಾಡಲ್ಲಿ ಮಳೆಗಾಲದಲ್ಲಿ ಮಳೆ ತಪ್ಪಬಹುದು, ಆದರೆ ಭಾಗ್ಯಾಗೆ ಕಷ್ಟದ ಮಳೆ ಮಾತ್ರ ಎಂದೂ ತಪ್ಪೋದೇ ಇಲ್ಲ. ಅವಳ ಕಷ್ಟ ನೋಡಿ ನೋಡಿ ಸಾಕಾಗಿ ಎಷ್ಟೋ ಜನ ಈ ಸೀರಿಯಲ್ ನೋಡೋದೇ ಬಿಟ್ಟು ಬಿಟ್ಟಿದ್ದಾರೆ. ಹೀಗಾಗಿ ಆರಂಭದಲ್ಲಿ ಟಿಆರ್‌ಪಿಯಲ್ಲಿ ಮುಂದಿದ್ದ ಭಾಗ್ಯಲಕ್ಷ್ಮೀ ಹಾಗೂ ಲಕ್ಷ್ಮೀ ಬಾರಮ್ಮ ಸೀರಿಯಲ್‌ಗಳು ಇದೀಗ ಟಿಆರ್‌ಪಿಯಲ್ಲಿ ಹಿಂದೆ ಬಿದ್ದಿವೆ. ಇರಲಿ, ಈ ಕಷ್ಟ ಅವಮಾನಗಳ ನಡುವೆಯೂ ಭಾಗ್ಯ ಮಾಡಿರೋ ಒತ್ತು ಶ್ಯಾವಿಗೆ ರಸಾಯನಕ್ಕೆ ಕೊಂಚ ವೀಕ್ಷಕರು ಮಾರ್ಕ್ಸ್ ನೀಡಿದ್ದಾರೆ. ಅಷ್ಟಕ್ಕೂ ಕಥೆ ಏನು ಅಂದರೆ ಭಾಗ್ಯಾ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಮಾಡಿಲ್ಲ ಆಕೆಗೆ ಸ್ಟಾರ್‌ ಹೋಟೆಲ್‌ನಲ್ಲಿ ಕೆಲಸ ಮಾಡುವ ಅರ್ಹತೆ ಇಲ್ಲ ಎಂದು ಹೀಯಾಳಿಸಿ ಹೋಟೆಲ್‌ ಮ್ಯಾನೇಜರ್‌ ಹಾಗೂ ಸೂಪರ್‌ವೈಸರ್‌ ಆಕೆಯನ್ನು ಕೆಲಸ ಬಿಟ್ಟು ಹೋಗುವಂತೆ ಸೂಚಿಸುತ್ತಾರೆ. ಹೋಟೆಲ್‌ಗೆ ಫುಡ್‌ ರಿವ್ಯೂ ಬರೆಯಲು ಬಂದ ಪತ್ರಕರ್ತ, ಅಲ್ಲಿ ದೊರೆಯುವ ಸ್ಪೆಷಲ್‌ ಫುಡ್‌ ದೊರೆಯದೆ, ನೆಗೆಟಿವ್‌ ರಿವ್ಯೂ ಬರೆಯಲು ಮುಂದಾಗುತ್ತಾನೆ.

ಪಕ್ಕದ ಹೋಟೆಲ್‌ನಲ್ಲಿ ಒತ್ತು ಶ್ಯಾವಿಗೆ ಮಾವಿನ ರಸಾಯನ ದೊರೆಯದ ಕಾರಣ ಇನ್ನು ಈ ಜರ್ನಲಿಸ್ಟ್‌ ನಮ್ಮ ಹೋಟೆಲ್‌ ಬಗ್ಗೆ ನೆಗೆಟಿವ್‌ ರಿವ್ಯೂ ಬರೆಯುತ್ತಾರೆ, ಹೋಟೆಲ್‌ ಮುಚ್ಚುವ ಪರಿಸ್ಥಿತಿ ಬರುತ್ತದೆ ಎಂದು ಸೂಪರ್‌ವೈಸರ್‌ ಹಾಗೂ ಮ್ಯಾನೇಜರ್‌, ಮಾಡಿಲ್ಲದ ತಪ್ಪಿಗೆ ಭಾಗ್ಯಾಳನ್ನು ದೂಷಿಸುತ್ತಾರೆ. ಆದರೆ ಭಾಗ್ಯಾ, ನಾನು ಅಡುಗೆ ಮಾಡಬಲ್ಲೆ ಎಂಬುದನ್ನು ಮಾತಿನಿಂದಲೇ ನಿರೂಪಿಸುತ್ತಾಳೆ. ಹೊಟೇಲಿನವರ ವಿರೋಧದ ನಡುವೆಯೂ ಆ ಪತ್ರಕರ್ತ, ಅಡುಗೆ ರುಚಿ ಮಾಡಬೇಕಿರುವವನು ನಾನು, ಆದ್ದರಿಂದ ಅಡುಗೆ ಯಾರು ಮಾಡಬೇಕೆಂದು ನಾನು ನಿರ್ಧರಿಸುತ್ತೇನೆ. ಭಾಗ್ಯಾ ನಿಮಗೆ ಈ ತಿಂಡಿ ಮಾಡಲು ಬರುತ್ತದೆ ಎಂದರೆ ಈಗಲೇ ನನಗೆ ತಯಾರಿಸಿಕೊಡಿ ಎಂದು ಹೇಳುತ್ತಾನೆ.

Latest Videos

 ಕೊನೆಗೂ ಅಭಿಮಾನಿಗಳ ಆಸೆ ಈಡೇರಿಸಿದ ಭಾವನಾ; ಫ್ಯಾನ್ಸ್‌ ಕೇಳಿದ್ದು ಒಂದು, ಸಿಕ್ಕಿದ್ದು ಎರಡು ಲಡ್ಡು!

ಭಾಗ್ಯಾಗೆ ಖುಷಿಯಾಗಿ ಅಡುಗೆ ಮನೆಗೆ ಹೋಗುತ್ತಾಳೆ. ಅಲ್ಲಿ ಸಹೋದ್ಯೋಗಿಗಳು ಮೊದಲು ಭಾಗ್ಯಾಳನ್ನು ಹೀಯಾಳಿಸಿದರೂ, ಆಕೆ ಎಲ್ಲರನ್ನೂ ಒಟ್ಟಾಗಿ ಅಡುಗೆ ಮಾಡುವಂತೆ ಮನವಿ ಮಾಡಿದಾಗ, ಆಕೆ ಒತ್ತು ಶ್ಯಾವಿಗೆ ರಸಾಯನ ಮಾಡಿದಾಗ ಆಶ್ಚರ್ಯಗೊಳ್ಳುತ್ತಾರೆ. ನೋಡಲು ದರ್ಶಿನಿ ಹೋಟೆಲ್‌ ಫುಡ್‌ನಂತೆಯೇ ಕಾಣುತ್ತಿದೆ. ಆದರೆ ರುಚಿ ಹೇಗಿರುತ್ತದೋ ಎನ್ನುತ್ತಾರೆ.

ಭಾಗ್ಯಾ, ಒತ್ತು ಶ್ಯಾವಿಗೆ ರಸಾಯನ ತಯಾರಿಸಿ ಪತ್ರಕರ್ತ ಕುಳಿತ ಟೇಬಲ್‌ ಬಳಿ ತಂದು ಇಡುತ್ತಾಳೆ. ಆದರೆ ಅಲ್ಲಿ ಆತ ಇರುವುದಿಲ್ಲ. ಭಾಗ್ಯಾ ಮಾಡಿದ ಅಡುಗೆಯನ್ನು ಆತ ಯಾವುದೇ ಕಾರಣಕ್ಕೂ ತಿನ್ನಬಾರದು ಎಂಬ ಕಾರಣಕ್ಕೆ ಸೂಪರ್‌ವೈಸರ್‌ ಮತ್ತೆ ಭಾಗ್ಯಾಗೆ ಮನೆಗೆ ಹೋಗುವಂತೆ ಬೆದರಿಸುತ್ತಾನೆ. ಆಕೆ ಮಾಡಿದ ಅಡುಗೆಯನ್ನು ಡಸ್ಟ್‌ ಬಿನ್‌ಗೆ ಹಾಕಬೇಕು ಎನ್ನುವಷ್ಟರಲ್ಲಿ ಪತ್ರಕರ್ತ ಅಲ್ಲಿಗೆ ಬರುತ್ತಾನೆ. ಭಾಗ್ಯಾ ಮಾಡಿದ ಒತ್ತು ಶ್ಯಾವಿಗೆ ರಸಾಯನ ತಿನ್ನುವ ಆತ ಆ ಫುಡ್‌ಗೆ ಎಷ್ಟು ಅಂಕ ನೀಡುತ್ತಾನೆ ಅನ್ನೋದು ಕಥೆ.

ಅಮೃತಧಾರೆ ಮಲ್ಲಿ 'ಸಾರಿ' ಕೇಳಿದ್ರೆ ಪತಿ ಜೈದೇವ್​ ಹೀಗ್​ ಹೇಳೋದಾ? ನಕ್ಕೂ ನಕ್ಕು ಸುಸ್ತಾದ ಫ್ಯಾನ್ಸ್​!

 ಈ ಒತ್ತು ಶಾವಿಗೆ ಮಾಡೋದು ಕೊಂಚ ಸಮಯ ಹಿಡಿಯೋ ಕೆಲಸ. ಅಕ್ಕಿಯನ್ನು ಹಿಂದಿನ ದಿನ ನೆನೆಹಾಕಿ ಮರುದಿನ ನುಣ್ಣಗೆ ರುಬ್ಬಿಕೊಂಡು ಉಪ್ಪು ಸೇರಿಸಿ ಬಾಣಲೆಗೆ ಹಾಕಿ ಬಿಸಿ ಮಾಡಬೇಕು. ಹಿಟ್ಟು ಗಟ್ಟಿಯಾಗುವವರೆಗೂ ತಿರುವಿ ಗಟ್ಟಿಯಾಗಿ ತಳ ಬಿಟ್ಟ ಮೇಲೆ ಉದ್ದ ಕೊಂಚ ದೊಡ್ಡ ಉಂಡೆ ಮಾಡಿ ಹಬೆಯಲ್ಲಿ ಬೇಯಿಸಬೇಕು. ಬೆಂದ ಮೇಲೆ ಶಾವಿಗೆ ಮೇಕರ್‌ನಲ್ಲಿ ಒತ್ತಬೇಕು. ಶಾವಿಗೆ ರೆಡಿ. ಇನ್ನು ಮಾವಿನ ಹಣ್ಣಿನ ರಸಾಯನಕ್ಕೆ ಬಂದ್ರೆ ಮಾವಿನ ಹಣ್ಣನ್ನು ಸಣ್ಣಗೆ ಹೆಚ್ಚಿ ಸಕ್ಕರೆ ಬೆರೆಸಿಡಬೇಕು. ಕಾಯಿ ತುರಿದು ರುಬ್ಬಿ ಕಾಯಿ ಹಾಲು ತೆಗೆದು ಸಕ್ಕರೆ ಬೆರೆಸಿಟ್ಟ ಮಾವಿನ ಹಣ್ಣಿಗೆ ಮಿಕ್ಸ್ ಮಾಡಬೇಕು. ಇದಕ್ಕೆ ಏಲಕ್ಕಿ ಪುಡಿ ಸೇರಿಸಿದರೆ ರಸಾಯನ ರೆಡಿ!

 

click me!