ಅಮೃತಧಾರೆ ಮಲ್ಲಿ 'ಸಾರಿ' ಕೇಳಿದ್ರೆ ಪತಿ ಜೈದೇವ್​ ಹೀಗ್​ ಹೇಳೋದಾ? ನಕ್ಕೂ ನಕ್ಕು ಸುಸ್ತಾದ ಫ್ಯಾನ್ಸ್​!

By Suchethana D  |  First Published Jun 9, 2024, 5:32 PM IST

ಅಮೃತಧಾರೆಯ ಮಲ್ಲಿ ಮತ್ತು ಜೈದೇವ್​ ರೀಲ್ಸ್ ಮಾಡಿದ್ದು, ಇದಕ್ಕೆ ನೆಟ್ಟಿಗರು ಥಹರೇವಾರಿ ಕಮೆಂಟ್​ ಮಾಡುತ್ತಿದ್ದಾರೆ. ಏನಿದು ರೀಲ್ಸ್​?
 


ಅಮೃತಧಾರೆ ಸೀರಿಯಲ್​ನಲ್ಲಿ ಮಲ್ಲಿ ಮತ್ತು ಜೈದೇವ್​ ಪಾತ್ರ ಯಾರೂ ಮರೆಯುವಂತಿಲ್ಲ. ಮನೆ ಕೆಲಸದ ಮಲ್ಲಿಯನ್ನೇ ಪ್ರೆಗ್ನೆಂಟ್​ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ವಿಲನ್​ ಜೈದೇವ್​ನನ್ನು ಭೂಮಿಕಾ ಬಿಡಲಿಲ್ಲ. ಇಬ್ಬರನ್ನೂ ಕರೆಸಿ ಮದುವೆ ಮಾಡಿಸಿಬಿಟ್ಟಿದ್ದಾಳೆ. ಇದೇ ಕಾರಣಕ್ಕೆ ಜೈದೇವ್​ ಅತ್ತ ಪತ್ನಿ ಮಲ್ಲಿಯ ವಿರುದ್ಧ ಇತ್ತ ಭೂಮಿಕಾಳ ವಿರುದ್ಧ ಕೊತ ಕೊತ ಕುದಿಯುತ್ತಲೇ ಇದ್ದಾನೆ. ಇವರಿಬ್ಬರನ್ನೂ ಹೇಗಾದರೂ ಮುಗಿಸಬೇಕು ಎಂದು ತನ್ನ ತಾಯಿ ಲೇಡಿ ವಿಲನ್​ ಶಕುಂತಲಾ ದೇವಿ ಜೊತೆ ಮಸಲತ್ತು ಮಾಡುತ್ತಲೇ ಇದ್ದಾನೆ. ಆದರೆ ಭೂಮಿಕಾ ಅದ್ಯಾವುದಕ್ಕೂ ಆಸ್ಪದ ಕೊಡದೇ ಸದ್ಯ ಅಮ್ಮ-ಮಗ ಸೈಲೆಂಟ್​ ಆಗಿದ್ದಾರೆ.

ಇದೀಗ ಮಲ್ಲಿ ಮತ್ತು ಜೈದೇವ್​ ಪಾತ್ರಧಾರಿಗಳ ತಮಾಷೆಯ ರೀಲ್ಸ್​ ಮಾಡಿದ್ದು, ಫ್ಯಾನ್ಸ್​ ನಕ್ಕೂ ನಕ್ಕೂ ಸುಸ್ತಾಗಿದ್ದಾರೆ. ಮಲ್ಲಿ ಪತಿ ಜೈದೇವ್​ಗೆ ನಾನು ಸಾರಿ ಎಂದು ಹೇಳಿದ್ರೆ ರಿಟರ್ನ್​ ಹೇಳ್ತೀರಾ ಎಂದು ಕೇಳಿದ್ದಾಳೆ. ಅದಕ್ಕೆ ಜೈದೇವ್​ ಸರಿ ಎಂದಿದ್ದಾನೆ. ಕೊನೆಗೆ ಮಲ್ಲಿ ಸಾರಿ ಎಂದಿದ್ದಾಳೆ. ಅಗ ಜೈದೇವ್​ 'ರಿಟರ್ನ್​' ಎನ್ನುವ ಮೂಲಕ ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ. ಈ ಚಿಕ್ಕ ರೀಲ್ಸ್​ಗೆ ಅಭಿಮಾನಿಗಳು ಸಂತೋಷದಿಂದ ವ್ಹಾರೆವ್ಹಾ ಎನ್ನುತ್ತಿದ್ದಾರೆ. ಮಲ್ಲಿ ಪಾತ್ರಧಾರಿಯ ಹೆಸರು ರಾಧಾ ಹಾಗೂ ಜೈದೇವ್​ ಅವರ ರಿಯಲ್​ ಹೆಸರು ರಾಣವ್​ ಗೌಡ.  ರಾಮ್​ಜಿ ನಿರ್ದೇಶನದ ‘ರಾಮಾಚಾರಿ’ ಧಾರಾವಾಹಿಯಲ್ಲಿ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ರಾಧಾ ಅವರು ಇದೀಗ ಮಲ್ಲಿಯ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಕಿರುತೆರೆಯಿಂದ ಕಳೆದ ವರ್ಷ ರಿಲೀಸ್​ ಆದ ವಸಂತಕಾಲದ ಹೂವುಗಳು ಚಿತ್ರದಲ್ಲಿ ಇವರು ಅಭಿನಯಿಸುವ ಮೂಲಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟರು.  

Latest Videos

ಪೆದ್ದು ಮಲ್ಲಿಯ ಅದ್ಭುತ ಕಂಠಸಿರಿಗೆ ಮನಸೋತ ಫ್ಯಾನ್ಸ್‌: ನಟನೆಯಷ್ಟೇ ಮುದ್ದಾಗಿದೆ ದನಿ ಅಂತಿದ್ದಾರೆ...

ರಾಧಾ ಅವರು ನಟಿ ರಾಧಾ ಭಗವತಿ ಅವರು ‘ಆ 90 ದಿನಗಳು’, ‘ವಸಂತ ಕಾಲದ ಹೂಗಳು’, ‘ಅಪಾಯವಿದೆ ಎಚ್ಚರಿಕೆ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ‘ಉಘೇ ಉಘೇ ಮಾದೇಶ್ವರ’ ಧಾರಾವಾಹಿಯಲ್ಲಿಯೂ ನಟಿಸಿದ್ದರು. ಇನ್ನು ‘ಬಾನಿಗೊಂದು ತಾರೆ’ ಮ್ಯೂಸಿಕ್ ವಿಡಿಯೋದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಅಭಿಜಿತ್ ತೀರ್ಥಹಳ್ಳಿ ನಿರ್ದೇಶನದ 'ಅಪಾಯವಿದೆ ಎಚ್ಚರಿಕೆ' ಸಿನಿಮಾದಲ್ಲಿ ನಟಿಸಿದ್ದಾರೆ.  ಇದರ ಜೊತೆಗೆ ಎಸ್. ನಾರಾಯಣ್ ನಿರ್ದೇಶನದ 'ಒಂದ್ಸಲ ಮೀಟ್ ಮಾಡೋಣ' ಸಿನಿಮಾದಲ್ಲಿ ನಾಯಕನ ತಂಗಿಯಾಗಿ ನಟಿಸುತ್ತಿದ್ದಾರೆ. ಸದ್ಯ ಒಂದಾದ ಮೇಲೆ ಒಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ.

undefined


ರಾಣವ್​ ಗೌಡ ಕುರಿತು ಹೇಳುವುದಾದರೆ ಇವರು, ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತುಳಸಿ' ಧಾರಾವಾಹಿಯಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು.  ನಂತರ ಸ್ವಲ್ಪ ವರ್ಷ ನಟನೆಯಿಂದ ದೂರ ಉಳಿದು  ಎಂಜಿನಿಯರಿಂಗ್ ಸೇರಿದರು. ಆದರೆ, ಅದನ್ನು ಅರ್ಧಕ್ಕೇ ನಿಲ್ಲಿಸಿ   'ಅರಮನೆ'  'ಜೀವನದಿ' ಧಾರಾವಾಹಿಯಲ್ಲಿ ಕಾಣಿಸಿಕೊಂಡರು. ಬಳಿಕ  'ರಾಜಕುಮಾರಿ' ಧಾರಾವಾಹಿಯಲ್ಲಿ ನಟಿಸಿದರು. ಇಲ್ಲಿ ಮೊದಲ ಬಾರಿಗೆ ಖಳನಾಯಕನಾಗಿ ಗುರುತಿಸಿಕೊಂಡರು. ಬಳಿಕ 'ವರಲಕ್ಷ್ಮಿ ಸ್ಟೋರ್ಸ್' , 'ಮತ್ತೆ ವಸಂತ', 'ಕಮಲಿ' 'ಕನ್ಯಾದಾನ' ಮುಂತಾದವುಗಳಲ್ಲಿ ನಟಿಸಿದರು.  ಸಿನಿಮಾದಲ್ಲಿಯೂ  ಪೋಷಕ ಪಾತ್ರ ಮಾಡಿದ್ದಾರೆ ರಾಣವ್​.  'ಶ್ರೀಕಂಠ', 'ಮತ್ತೆ ಬಾ ಉಪೇಂದ್ರ', 'ವಿರಾಟ್' ಸಿನಿಮಾಗಳಲ್ಲಿ ನಟಿಸಿದ್ದಾರೆ.  ಇದೀಗ ಅಮೃತಧಾರೆಯಲ್ಲಿ ಜೈದೇವನ ಪಾತ್ರ ಮಾಡುತ್ತಿದ್ದಾರೆ. 

ಶ್ರೀರಸ್ತು ಶುಭಮಸ್ತು ಪೂರ್ಣಿ ಪತಿ, ಅಮೃತಧಾರೆ ಜೀವಾಗೆ ಹುಟ್ಟುಹಬ್ಬದ ಸಂಭ್ರಮ: ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ


click me!