ನೀ ಬಂದು ನಿಂತಾಗ... ಬಾರಾ.. ಬಾರಾ... ಎಂದ ಸತ್ಯ: ಈ ನಗುವಿಗೆ ನಾನು ಸೋತೆ ಸೋತೆ ಅಂತಿದ್ದಾರೆ ಫ್ಯಾನ್ಸ್​

Published : May 26, 2024, 04:04 PM IST
ನೀ ಬಂದು ನಿಂತಾಗ... ಬಾರಾ.. ಬಾರಾ... ಎಂದ ಸತ್ಯ: ಈ ನಗುವಿಗೆ ನಾನು ಸೋತೆ ಸೋತೆ ಅಂತಿದ್ದಾರೆ ಫ್ಯಾನ್ಸ್​

ಸಾರಾಂಶ

ನೀ ಬಂದು ನಿಂತಾಗ ಹಾಡಿಗೆ ರೀಲ್ಸ್​ ಮಾಡಿದ ಸತ್ಯ ಸೀರಿಯಲ್​ ನಾಯಕಿ ಸತ್ಯ ಅರ್ಥಾತ್​ ಗೌತಮಿ ಜಾಧವ್​. ಫ್ಯಾನ್ಸ್ ಏನು ಹೇಳಿದ್ರು ನೋಡಿ...  

ಆಕೆ ರಗಡ್​ ಪೊಲೀಸ್​ ಅಧಿಕಾರಿ. ಸತ್ಯದ ಮಾತು ಬಂದಾಗ ಮನೆಯವರೆಂದೂ ನೋಡದೇ ಖುದ್ದು ಗಂಡನನ್ನೇ ಜೈಲಿಗೆ ಸೇರಿಸಿದಳು. ಗಂಡುಬೀರಿ ಎಂದೆಲ್ಲಾ ಹೆಸರು ಪಡೆದುಕೊಂಡು ಸಂಪ್ರದಾಯಸ್ಥ ಅತ್ತೆ ಮನೆಯಲ್ಲಿ ಹೊಂದಿಕೊಳ್ಳಲು ಹೆಣಗಾಡಿದ್ದವಳು ಇವಳೇ. ಇದೀಗ ಗಂಡ ಕಾರ್ತಿಕ್​ನನ್ನು ಮೆಡಿಕಲ್​ ಮಾಫಿಯಾದ  ಮೇಲೆ ಜೈಲಿಗೆ ಕಳುಹಿಸದಾಲಂತೂ ಖುದ್ದು ಅಮ್ಮನಿಂದಲೇ ಗೆಟ್​ಔಟ್​ ಎನಿಸಿಕೊಂಡಳು. ಇದೀಗ ಈ ಸತ್ಯಳ ಸತ್ಯ ಬಯಲಾಗಿದೆ. ಎಲ್ಲರೂ ಈಕೆಯ ಬಳಿ ಕ್ಷಮೆ ಕೋರಿದ್ದಾರೆ. ತನ್ನ ಗಂಡ ನಿರಪರಾಧಿ ಎಂದು ಸಾಬೀತು ಮಾಡಲು ಹೆಣಗಾಡಿ ಕೊನೆಗೂ ಯಶಸ್ವಿಯಾಗಿದ್ದಾಳೆ. ಅತ್ತೆ-ಮಾವ ಸೇರಿದಂತೆ ಎಲ್ಲರ ಅಚ್ಚುಮೆಚ್ಚಿನ ಮುದ್ದು ಸೊಸೆ ಎನಿಸಿಕೊಂಡಿದ್ದಾಳೆ. ಹೌದು. ಇವಳೇ ಸತ್ಯ ಸೀರಿಯಲ್​ ಸತ್ಯ.

ಬಾಬ್​ ಕಟ್​ ಮಾಡಿಸಿಕೊಂಡು ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿರೋ ಸತ್ಯಳ ಅಸಲಿ ಮುಖ ನೋಡಿದರೆ ನಿಜವಾಗಿಯೂ ಇವಳು ಅವಳೇನಾ ಎನ್ನಬೇಕು ಹಾಗಿದೆ ಲುಕ್ಕು. ಇವರ ನಿಜವಾದ ಹೆಸರು ಗೌತಮಿ ಜಾಧವ್​. ಸತ್ಯ ಸೀರಿಯಲ್​ನಲ್ಲಿ ಪೊಲೀಸ್​ ಅಧಿಕಾರಿ ಪಾತ್ರಕ್ಕೆ ಸಾಕಷ್ಟು ವರ್ಕ್​ಔಟ್​ ಮಾಡಿದ್ದಾರೆ ಗೌತಮಿ. ಆದರೆ ಇವರನ್ನು ರಿಯಲ್​ ಆಗಿ ನೋಡಿದಾಗ ಅಬ್ಬಾ ಇವರೂ ಅಷ್ಟೆಲ್ಲಾ ಮಾಡಲು ಸಾಧ್ಯನಾ ಎನ್ನಿಸುವುದು ಉಂಟು. ಇದೀಗ ಗೌತಮಿ ಅವರು, ಡಾ.ರಾಜ್​ಕುಮಾರ್​ ಮತ್ತು ಆರತಿ ಅವರ ಅಭಿನಯದ ಕಸ್ತೂರಿ ನಿವಾಸದ ಫೇಮಸ್​ ಹಾಡು ನೀ ಬಂದು ನಿಂತಾಗ ಹಾಡಿಗೆ ರೀಲ್ಸ್​  ಮಾಡಿದ್ದಾರೆ. ಇದಕ್ಕೆ ಹಾರ್ಟ್​ ಇಮೋಜಿಗಳ ಮಹಾಪೂರವೇ ಹರಿದು ಬರುತ್ತಿದೆ. ನಟಿಯ ಅಭಿನಯದ ಬಗ್ಗೆ ಶ್ಲಾಘನೆಗಳನ್ನು ಹರಿಸುತ್ತಿದ್ದಾರೆ ಅಭಿಮಾನಿಗಳು.

ಸೋನು ಗೌಡ ಮಾತು ಕೇಳಿಯಾದ್ರೂ ವಾಪಸ್​ ಆಗ್ತಾರಾ ಪೆನ್​ಡ್ರೈವ್​ ಸಂಸದ? ವೈರಲ್​ ಆಗ್ತಿದೆ ನಟಿಯ ವಿಡಿಯೋ...

ಅಂದಹಾಗೆ, ನಟಿ ಗೌತಮಿ ಅವರ ಕುರಿತು ಹೇಳುವುದಾದರೆ, ಇವರು ಬೆಂಗಳೂರಿನಲ್ಲಿ 1993 ಆಗಸ್ಟ್ 22 ರಂದು ಜನಿಸಿದರು. ಅವರಿಗೆ ಈಗ 31 ವರ್ಷ ವಯಸ್ಸು.    ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಜೀ ಕನ್ನಡದ ಸತ್ಯ ಧಾರಾವಾಹಿಯ ಟಾಮ್ ಬಾಯ್ ಪಾತ್ರದ ಮೂಲಕ ಗೌತಮಿ ಕರ್ನಾಟಕದ ಮನೆಮಾತಾಗಿದ್ದಾರೆ.   ಕನ್ನಡದ ಖ್ಯಾತ ಸಿನಿಮಾ ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡ್ ಅವರನ್ನು ವಿವಾಹವಾಗಿದ್ದಾರೆ. ಗೌತಮಿ ನಟಿಸಿದ ಮೊದಲ ಚಿತ್ರ 2018 ರಲ್ಲಿ ತೆರೆಕಂಡ ಕಿನಾರೆ. ನಂತರ ಆದ್ಯ ಚಿತ್ರದಲ್ಲಿ ನಟಿಸಿದ್ದಾರೆ. ಕೆಲ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಆಪರೇಶನ್ ಅಲಮೇಲಮ್ಮ', 'ಮಾಯಾಬಜಾರ್', 'ಅನಂತು v/s ನುಸ್ರತ್' ಮುಂತಾದ ಸಿನಿಮಾಗಳಲ್ಲಿ ಅಭಿಷೇಕ್ ಕೆಲಸ ಕೂಡ ಮಾಡಿದ್ದಾರೆ.  

 2012ರ ಪ್ರಖ್ಯಾತ ಧಾರಾವಾಹಿ 'ನಾಗಪಂಚಮಿ'ಯಲ್ಲಿ ಗೌತಮಿ ನಟಿಸಿದ್ದರು. 'ಲೂಟಿ', 'ಆದ್ಯಾ', 'ಕಿನಾರೆ' ಹಾಗೂ ತಮಿಳಿನ ಸಿನಿಮಾವೊಂದರಲ್ಲಿ ಅವರು ಬಣ್ಣ ಹಚ್ಚಿದ್ದರು. ಕಿರುತೆರೆಯಲ್ಲಿ ಮತ್ತೆ ಕಾಣಿಸಿಕೊಳ್ಳಲು ಗೌತಮಿ ಒಂದು ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದರು. ಸತ್ಯ ಪಾತ್ರಕ್ಕಾಗಿ ಗೌತಮಿ ಗಾಡಿ ಓಡಿಸುವುದನ್ನು ಕೂಡ ಕಲಿತಿದ್ದಾರೆ. ಮಾತ್ರವಲ್ಲದೇ ಪೊಲೀಸ್​ ಪಾತ್ರಕ್ಕಾಗಿ ಟಫ್​ ಎನ್ನುವ ಪೊಲೀಸ್​​ ಟ್ರೇನಿಂಗ್​ ಕೂಡ ಪಡೆದಿದ್ದಾರೆ. 

ತಕಿಟ ತಕಿಟ ಎಂದು ರೀಲ್ಸ್​ ಮಾಡಿದ ಸತ್ಯ ಟೀಂ: ಕೂದಲು ಬಿಟ್ಟ ಸತ್ಯಳ ನೋಡಿ ಫ್ಯಾನ್ಸ್​ ಅಚ್ಚರಿ...

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!