ಕೂದಲ ಅಂದಕ್ಕಾಗಿ ಬಿಗ್​ಬಾಸ್​ 'ಸತ್ಯ' ಇಷ್ಟೊಂದು ಸರ್ಕಸ್ಸಾ? ವಿಡಿಯೋ ನೋಡಿ ಫ್ಯಾನ್ಸ್​ ಸುಸ್ತು!

By Suchethana D  |  First Published Oct 18, 2024, 2:34 PM IST

ಸತ್ಯ ಸೀರಿಯಲ್​ ಖ್ಯಾತಿಯ ಬಿಗ್​ಬಾಸ್​ ಗೌತಮಿ ಜಾಧವ್​ ಅವರು ಹೇರ್​ಸ್ಟೈಲ್​ ಮಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರು ಏನು ಹೇಳಿದ್ದಾರೆ ನೋಡಿ...
 


ಗೌತಮಿ ಜಾಧವ್​ ಎನ್ನುವ ಹೆಸರು ಕೆಲ ದಿನಗಳ ಹಿಂದಷ್ಟೇ ಫೇಮಸ್​ ಆಗಿದೆ. ಇದಕ್ಕೆ ಕಾರಣ ಬಿಗ್​ಬಾಸ್​ನ ಸೀಸನ್​ 11. ಇಲ್ಲಿ ಗೌತಮಿ ಅವರು ಫೇಮಸ್​ ಆಗುತ್ತಿದ್ದಾರೆ. ಆದರೂ ಗೌತಮಿ ಎನ್ನುವುದಕ್ಕಿಂತಲೂ ಹೆಚ್ಚಾಗಿ ಇವರು ಫೇಮಸ್​ ಆಗಿರೋದೇ ಸತ್ಯ ಎನ್ನುವ ಹೆಸರಿನಲ್ಲಿ ಕೆಲ ದಿನಗಳ ಹಿಂದಷ್ಟೇ ಜೀ ಕನ್ನಡದಲ್ಲಿ ಮುಗಿದಿರುವ ಸತ್ಯ ಸೀರಿಯಲ್​ ಖ್ಯಾತಿಯ ಸತ್ಯ ಉರ್ಫ್​ ಗೌತಮಿ ಅವರು ಈಗ ಬಿಗ್​ಬಾಸ್​ ಸತ್ಯ ಎಂದೇ ಫೇಮಸ್ಸು.  ಬಾಬ್​ ಕಟ್​ ಮಾಡಿಸಿಕೊಂಡು ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿರೋ ಸತ್ಯಳ ಅಸಲಿ ಮುಖವೇ ಬೇರೆ ಎನ್ನುವುದು ಬಿಗ್​ಬಾಸ್​ ನೋಡುಗರಿಗೆ ಈಗ ತಿಳಿದಿದೆ.  ಸತ್ಯ ಸೀರಿಯಲ್​ನಲ್ಲಿ ಪೊಲೀಸ್​ ಅಧಿಕಾರಿ ಪಾತ್ರಕ್ಕೆ ಸಾಕಷ್ಟು ವರ್ಕ್​ಔಟ್​ ಮಾಡಿದ್ದಾರೆ ಗೌತಮಿ. ಆದರೆ ಇವರನ್ನು ರಿಯಲ್​ ಆಗಿ ನೋಡಿದಾಗ ಅಬ್ಬಾ ಇವರೂ ಅಷ್ಟೆಲ್ಲಾ ಮಾಡಲು ಸಾಧ್ಯನಾ ಎನ್ನಿಸುವುದು ಉಂಟು. ಸತ್ಯ ಸೀರಿಯಲ್​ನಲ್ಲಿ ಕಾರ್ತಿಕ್​ ಅವರ ಪತಿಯಾದರೆ ರಿಯಲ್​ ಲೈಫ್​ನ ಪತಿಯ ಹೆಸರು ಅಭಿಷೇಕ್ ಕಾಸರಗೋಡು. ಪತಿಯ ಜೊತೆ ಆಗಾಗ್ಗೆ ಫೋಟೋಶೂಟ್​, ರೀಲ್ಸ್​ಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ ಗೌತಮಿ.

ಮದುವೆಯಾದರೂ ಬಿಗ್​ಬಾಸ್​ನಲ್ಲಿ ಹಲವರ ಕ್ರಷ್​ ಆಗಿದ್ದಾರೆ ನಟಿ. ಇದೀಗ ಇವರು, ಹೇರ್​ಸ್ಟೈಲ್​ ಮಾಡಿಸಿಕೊಳ್ಳುತ್ತಿರುವ ವಿಡಿಯೋ ಒಂದು ವೈರಲ್​ ಆಗಿದೆ. ಅದರಲ್ಲಿ ಚಿತ್ರ-ವಿಚಿತ್ರ ರೀತಿಯಲ್ಲಿ ಇವರ ಹೇರ್​ಡ್ರೆಸ್​ ಮಾಡಲಾಗಿದೆ. ಹಲವಾರು ರೀತಿಯ ಸರ್ಕಸ್​ ಮಾಡಿದ ಬಳಿಕ ಕೂದಲಿಗೆ ಸುಂದರವಾದ ಶೇಪ್​ ಬಂದಿದ್ದು, ಅದರಲ್ಲಿ ಗೌತಮಿ ಸಕತ್​ ಆಗಿ ಕಾಣಿಸುತ್ತಾರೆ. ಸತ್ಯ ಸೀರಿಯಲ್​ನಲ್ಲಿ ಬಾಯ್​ಕಟ್​ ಲೇಡಿಗಿಂತಲೂ ರಿಯಲ್​ ಆಗಿರುವ ಸತ್ಯಳ ಹೇರ್​ಸ್ಟೈಲ್​ ಸಕತ್​ ಆಗಿದೆ. ಅದಕ್ಕೆ ಇನ್ನಷ್ಟು ರೂಪು ಕೊಟ್ಟಿದ್ದಾರೆ ಹೇರ್​ ಸ್ಟೈಲಿಸ್ಟ್​ಗಳು.  ಆದರೂ ಈ ಪರಿಯಲ್ಲಿ ಕೂದಲಿನ ಮೇಲೆ ಸರ್ಕಸ್​ ಮಾಡುವುದನ್ನು ನೋಡಿದ ಕಮೆಂಟಿಗರು ಇಷ್ಟೊಂದು ಸರ್ಕಸ್​  ಮಾಡುವ ಬದಲು ಸತ್ಯ ಸೀರಿಯಲ್​ ರೀತಿ ವಿಗ್​ ಹಾಕಿಕೊಳ್ಳಬಾರ್ದಾ ಎಂದು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ತಮ್ಮ ರಿಯಲ್​ ಕೂದಲನ್ನು ಇನ್ನಷ್ಟು ಅಂದಗಾಣಿಸಲು ಹಲವಾರು ಯುವತಿಯರು ಸಹಸ್ರಾರು ರೂಪಾಯಿ ಖರ್ಚು  ಮಾಡುತ್ತಾರೆ ಎನ್ನುವುದು ಗೊತ್ತಿರುವ ವಿಷಯವೇ. ಆದರೂ ನಟಿಯರ ವಿಷಯಕ್ಕೆ ಬಂದಾಗ ಅವರ ಕಾಲೆಳೆಯುವುದು ಸಹಜ. 

Tap to resize

Latest Videos

undefined

ಮಾಜಿ ಸಚಿವೆ ಸ್ಮೃತಿ ಇರಾನಿ ಸೀರಿಯಲ್​ಗೆ ಕಮ್​ಬ್ಯಾಕ್​? 'ಅನುಪಮಾ'ದಲ್ಲಿ ನಟಿಸ್ತಾರಾ? ಅವರೇ ಹೇಳಿದ್ದೇನು ಕೇಳಿ....

ಅಂದಹಾಗೆ, ನಟಿ ಗೌತಮಿ ಅವರ ಕುರಿತು ಹೇಳುವುದಾದರೆ, ಇವರು ಬೆಂಗಳೂರಿನಲ್ಲಿ 1993 ಆಗಸ್ಟ್ 22 ರಂದು ಜನಿಸಿದರು. ಅವರಿಗೆ ಈಗ 31 ವರ್ಷ ವಯಸ್ಸು.    ಗೌತಮಿ ಜಾಧವ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಜೀ ಕನ್ನಡದ ಸತ್ಯ ಧಾರಾವಾಹಿಯ ಟಾಮ್ ಬಾಯ್ ಪಾತ್ರದ ಮೂಲಕ ಗೌತಮಿ ಕರ್ನಾಟಕದ ಮನೆಮಾತಾಗಿದ್ದಾರೆ.   ಕನ್ನಡದ ಖ್ಯಾತ ಸಿನಿಮಾ ಛಾಯಾಗ್ರಾಹಕ ಅಭಿಷೇಕ್ ಕಾಸರಗೋಡ್ ಅವರನ್ನು ವಿವಾಹವಾಗಿದ್ದಾರೆ. ಗೌತಮಿ ನಟಿಸಿದ ಮೊದಲ ಚಿತ್ರ 2018 ರಲ್ಲಿ ತೆರೆಕಂಡ ಕಿನಾರೆ. ನಂತರ ಆದ್ಯ ಚಿತ್ರದಲ್ಲಿ ನಟಿಸಿದ್ದಾರೆ. ಕೆಲ ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ಆಪರೇಶನ್ ಅಲಮೇಲಮ್ಮ', 'ಮಾಯಾಬಜಾರ್', 'ಅನಂತು v/s ನುಸ್ರತ್' ಮುಂತಾದ ಸಿನಿಮಾಗಳಲ್ಲಿ ಅಭಿಷೇಕ್ ಕೆಲಸ ಕೂಡ ಮಾಡಿದ್ದಾರೆ.  

 2012ರ ಪ್ರಖ್ಯಾತ ಧಾರಾವಾಹಿ 'ನಾಗಪಂಚಮಿ'ಯಲ್ಲಿ ಗೌತಮಿ ನಟಿಸಿದ್ದರು. 'ಲೂಟಿ', 'ಆದ್ಯಾ', 'ಕಿನಾರೆ' ಹಾಗೂ ತಮಿಳಿನ ಸಿನಿಮಾವೊಂದರಲ್ಲಿ ಅವರು ಬಣ್ಣ ಹಚ್ಚಿದ್ದರು. ಕಿರುತೆರೆಯಲ್ಲಿ ಮತ್ತೆ ಕಾಣಿಸಿಕೊಳ್ಳಲು ಗೌತಮಿ ಒಂದು ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದರು. ಸತ್ಯ ಪಾತ್ರಕ್ಕಾಗಿ ಗೌತಮಿ ಗಾಡಿ ಓಡಿಸುವುದನ್ನು ಕೂಡ ಕಲಿತಿದ್ದಾರೆ. ಮಾತ್ರವಲ್ಲದೇ ಪೊಲೀಸ್​ ಪಾತ್ರಕ್ಕಾಗಿ ಟಫ್​ ಎನ್ನುವ ಪೊಲೀಸ್​​ ಟ್ರೇನಿಂಗ್​ ಕೂಡ ಪಡೆದಿದ್ದಾರೆ. ಸದ್ಯ ಬಿಗ್​ಬಾಸ್​ನಲ್ಲಿ ಹವಾ ಸೃಷ್ಟಿಸಿದ್ದಾರೆ. ಇವರ ಬಗ್ಗೆ ಪರ-ವಿರೋಧ ನಿಲುವುಗಳೂ ವ್ಯಕ್ತವಾಗುತ್ತಿವೆ. 

ಇವ ಯಾವ ಸೀಮೆಯ ಗಂಡು... ಎಂದು ಭರ್ಜರಿ ಸ್ಟೆಪ್ ಹಾಕಿದ ಶ್ರೀರಸ್ತು ಶುಭಮಸ್ತು ಸೊಸೆಯಂದಿರು!

click me!