
ಕನ್ನಡ ಬಿಗ್‌ಬಾಸ್ ಸೀಸನ್ 11ಕ್ಕೆ ಕ್ಷಣಗಣನೆ ಶುರುವಾಗಿದ್ದು, ಕಿರುತೆರೆ ನಟಿ ಗೌತಮಿ ಬಿಗ್ ಮನೆ ಸೇರೋದು ಪಕ್ಕಾ ಆಗಿದೆ. ಕಲರ್ಸ್ ಕನ್ನಡ ವಾಹಿನಿಯೇ ಗೌತಮಿ ಎಂಟ್ರಿಯ ಪ್ರೋಮೋ ಬಿಡುಗಡೆ ಮಾಡಿದೆ. ತಮ್ಮ ಜನಪ್ರಿಯ ಧಾರಾವಾಹಿಯ ಲುಕ್‌ನಲ್ಲಿ ಲೇಡಿ ರಾಮಾಚಾರಿಯಾಗಿ ಬೈಕ್ ಏರಿ ಬಂದಿದ್ದಾರೆ. ಪ್ರೋಮೋ ಬಿಡುಗಡೆಯಾಗುತ್ತಲೇ ಸತ್ಯ ಅಭಿಮಾನಿಗಳು ಅಕ್ಕನಿಗೆ ಜೈ ಹೇಳಿ ಎಂದು ಕಮೆಂಟ್ ಮಾಡುತ್ತಿದ್ದಾರೆ. ಪಕ್ಕಾ ಮಾಸ್ ಲುಕ್‌ನಲ್ಲಿಯೇ ಬೈಕ್ ಏರಿ ಬಂದಿರುವ ಗೌತಮಿ, ಯಾವ ಮನೆಗೆ ಹೋಗ್ತಾರೆ ಎಂಬುದರ ಬಗ್ಗೆ ಕುತೂಹಲ ಮನೆ ಮಾಡಿದೆ.
ಈ ಬಾರಿಯ ಸೀಸನ್‌ನಲ್ಲಿ ಸ್ವರ್ಗ ಮತ್ತು ನರಕ ಎಂಬ ಎರಡು ಮನೆಗಳನ್ನು ಮಾಡಲಾಗಿದ್ದು, ವೀಕ್ಷಕರು ಸ್ಪರ್ಧಿ ಯಾವ ಮನೆಗೆ ಹೋಗಬೇಕು ಎಂಬುದನ್ನು ವೋಟ್ ಮೂಲಕ ಹೇಳಬೇಕು. ವೋಟ್ ಆಧಾರದ ಮೇಲೆ ಸ್ಪರ್ಧಿಗಳು ಸ್ವರ್ಗ ಅಥವಾ ನರಕದಲ್ಲಿ ಇರುತ್ತಾರೆ ಎಂಬುವುದು ನಿರ್ಧಾರವಾಗುತ್ತದೆ. ಬಿಗ್‌ಬಾಸ್‌ನಲ್ಲಿ ಗುದ್ದಾಟಕ್ಕೆ ಅಂತ ನಿಂತ್ರೆ ಫೀಲ್ಡ್ ನಂದೇ, ಶೀಲ್ಡೂ ನಂದೇ ಎಂಬ ಮಾಸ್ ಡೈಲಾಗ್ ಮೂಲಕ ಗೌತಮಿ ದೊಡ್ಮನೆಯತ್ತ ಹೊರಟಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 1 ರಿಂದ 10ರವರೆಗೆ 50 ಲಕ್ಷ ಗೆದ್ದವರಿವರು!
ಶನಿವಾರ ಪ್ರಸಾರವಾದ ರಾಜಾ-ರಾಣಿ ರಿಯಾಲಿಟಿ ಶೋನಲ್ಲಿಯೇ ಗೌತಮಿ ಸೇರಿದಂತೆ ಕೆಲವರು ಹೆಸರು ಪ್ರಕಟವಾಗಿತ್ತು. ಇದೀಗ ವಾಹಿನಿ ಸ್ಪರ್ಧಿಯ ಪ್ರೋಮೋ ಬಿಡುಗಡೆ ಮಾಡಿದೆ. ಶನಿವಾರ ಬಿಗ್‌ಬಾಸ್ ಮನೆಯ ಮೇಕಿಂಗ್ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗಿತ್ತು. ಇಂದು ಸಂಜೆ 6 ಗಂಟೆಯಿಂದ ಬಿಗ್‌ಬಾಸ್ ಗ್ರಾಂಡ್ ಒಪನಿಂಗ್ ಕಾರ್ಯಕ್ರಮ ಆರಂಭವಾಗಲಿದ್ದು, ಪ್ರತಿದಿನ ರಾತ್ರಿ 9.30ಕ್ಕೆ ಶೋ ಪ್ರಸಾರವಾಗಲಿದೆ.
BBK 11: ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಚೈತಾ ಕುಂದಾಪುರ ಬಿಗ್ ಬಾಸ್ ಮನೆಗೆ ಎಂಟ್ರಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.