ರಾಜ ರಾಣಿ ರೀಲೋಡೆಡ್ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ಸಂಜಯ್ ಹಾಗೂ ಮೇಘಾ ಜೋಡಿ ಪ್ರಶಸ್ತಿ ಎತ್ತಿ ಹಿಡಿದಿದೆ. ಪ್ರಿಯಾಂಕಾ ಕಾಮತ್ ಹಾಗೂ ಅಮಿತ್ ಜೋಡಿ ಮೂರನೇ ಸ್ಥಾನ ಪಡೆದಿದ್ದಾರೆ, ಲೋಕೇಶ್ ಬನಹಟ್ಟಿ-ರಚನಾ ದಶರಥ್ ನಾಲ್ಕನೇ ಸ್ಥಾನ ಪಡೆದುಕೊಂಡರೆ, ಹರ್ಷಿತಾ - ವಿನಯ್ ಜೋಡಿ ಐದನೇ ಸ್ಥಾನ ಪಡೆದುಕೊಂಡರು.
ಬೆಂಗಳೂರು (ಸೆ.28): ಬಿಗ್ ಬಾಸ್ ಕನ್ನಡದ 11ನೇ ಆವೃತ್ತಿ ಭಾನುವಾರದಿಂದ ಆರಂಭವಾಗುತ್ತಿರುವಂತೆ ರಾಜ ರಾಣಿ ಶೋ ಶನಿವಾರ ಅದ್ದೂರಿಯಾಗಿ ಮುಕ್ತಾಯ ಕಂಡಿದೆ. ರಾಜ ರಾಣಿ ರೀಲೋಡೆಡ್ ಶೋನ ಗ್ರ್ಯಾಂಡ್ ಫಿನಾಲೆಯಲ್ಲಿ ಸಂಜಯ್ ಹಾಗೂ ಮೇಘಾ ಜೋಡಿ ಪ್ರಶಸ್ತಿ ಎತ್ತಿ ಹಿಡಿದಿದೆ. ಶನಿವಾರ ಸಂಜೆಯಿಡೀ ಕಾರ್ಯಕ್ರಮವನ್ನು ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಮಾಡಿದ್ದು, ಇದರ ನಡುವೆಯೇ ಬಿಗ್ ಬಾಸ್ ಕನ್ನಡದ ಸೀಸನ್ 11ನ ಕೆಲವು ಸ್ಪರ್ಧಿಗಳ ಹೆಸರನ್ನೂ ಕೂಡ ರಿವಿಲ್ ಮಾಡಿದೆ. ಮೇಘ -ಸಂಜಯ್, ಅರ್ಜುನ್ ಯೋಗಿ -ಸಾರಿಕಾ ಹಾಗೂ ಪ್ರಿಯಾಂಕಾ ಕಾಮತ್ - ಅಮಿತ್ ಜೋಡಿ ಟಾಪ್ 3 ಯಾಗಿ ವೇದಿಕೆ ಮೇಲೆ ಇಳಿದಿತ್ತು. ಬಳಿಕ ವೇದಿಕೆಯಲ್ಲಿ ಪ್ರಿಯಾಂಕಾ ಕಾಮತ್ ಹಾಗೂ ಅಮಿತ್ ಜೋಡಿ ಮೂರನೇ ಸ್ಥಾನ ಪಡೆದಿದ್ದಾರೆ. ಎಂದು ಘೋಷಣೆ ಮಾಡಲಾಯಿತು. ಲೋಕೇಶ್ ಬನಹಟ್ಟಿ-ರಚನಾ ದಶರಥ್ ನಾಲ್ಕನೇ ಸ್ಥಾನ ಪಡೆದುಕೊಂಡರೆ, ಹರ್ಷಿತಾ - ವಿನಯ್ ಜೋಡಿ ಐದನೇ ಸ್ಥಾನ ಪಡೆದುಕೊಂಡರು.
ಇದು ರಾಜಾ ರಾಣಿ ಶೋನ ಮೂರನೇ ಸೀಸನ್ ಆಗಿತ್ತು. 2021ರಲ್ಲಿ ಆರಂಭವಾಗಿದ್ದ ಈ ಶೋನ ಮೊದಲ ಆವೃತ್ತಿಯಲ್ಲಿ. ನೇಹಾಗೌಡ ಹಾಗೂ ಚಂದನ್ ಸೂಪರ್ ಜೋಡಿಯಾಗಿ ವಿನ್ನರ್ ಆಗಿದ್ದರು. ಇಶಿತಾ ವರ್ಷಾ, ಮುರುಗಾನಂದ ಮೊದಲ ರನ್ನರ್ ಅಪ್ ಆಗಿದ್ದರು. ಸೆಲಿಬ್ರಿಟಿ ಜೋಡಿಗಳು ಮಾತ್ರವೇ ಭಾಗವಹಿಸುವ ರಿಯಾಲಿಟಿ ಶೋ ಇದಾಗಿದೆ. ಎರಡನೇ ಸೀಸನ್‌ನಲ್ಲಿ ಕಾವ್ಯಾ ಮಹಾದೇವ್ ಹಾಗೂ ಕುಮಾರ್ ಗೆದ್ದಿದ್ದರು. ಸುಂದರ್ ರಾಜ್ ಮತ್ತು ವೀಣಾ ಸುಂದರ್ ಮೊದಲ ರನ್ನರ್ ಅಪ್ ಆಗಿದ್ದರು.
undefined
ರಾಜಾ ರಾಣಿ ಗ್ರ್ಯಾಂಡ್ ಫಿನಾಲೆ… ಒಂದು ಜೋಡಿ ನೇರವಾಗಿ ಬಿಗ್ ಬಾಸ್ ಮನೆಗೆ! ಯಾರಾಗ್ತಾರೆ ಆ ಜೋಡಿ?
ಲೋಕೇಶ್ ಪ್ರೊಡಕ್ಷನ್ ಅಡಿಯಲ್ಲಿ ಪ್ರಸಾರವಾಗುವ ಈ ರಿಯಾಲಿಟಿ ಶೋನಲ್ಲಿ ಸೃಜನ್ ಲೋಕೇಶ್ ಹಾಗೂ ತಾರಾ ಅನುರಾಧಾ ಮುಖ್ಯ ಜಡ್ಜ್ ಆಗಿದ್ದಾರೆ. ಅದರೊಂದಿಗೆ ಈ ಬಾರಿ ಆದಿತಿ ಪ್ರಭುದೇವ ಹಾಗೂ ಅನು ಪ್ರಭಾಕರ್ ಕೂಡ ಜಡ್ಜ್ ಲಿಸ್ಟ್‌ಗೆ ಸೇರಿಕೊಂಡಿದ್ದು, ಅನುಪಮಾ ಗೌಡ ಅವರ ನಿರೂಪಣೆ ಈ ಶೋಗೆ ಇದೆ.
ದರ್ಶನ್ ಜೈಲಿಗೆ, ಕಿಲ್ಲಿಂಗ್ ಸ್ಟಾರ್ ಬಗ್ಗೆ ಅಪ್ಡೇಟ್ ನೀಡ್ತಿದ್ದ ಲಾಯರ್ ಬಿಗ್ ಬಾಸ್‌ಗೆ..