ಸತ್ಯ ಸೀರಿಯಲ್ ದಿವ್ಯಾ-ಬಾಲಾ ದಂಪತಿ ಸಖಿಯೇ ಸಖಿಯೇ ಹಾಡಿಗೆ ಸಕತ್ ರೀಲ್ಸ್ ಮಾಡಿದ್ದಾರೆ. ನಖರಾ ಬಿಟ್ಟು ಗಂಡನ ಜೊತೆ ಬಾಳು ಅಂತಿರೋದ್ಯಾಕೆ ಫ್ಯಾನ್ಸ್?
ಕೋಟಿ ಸಿನಿಮಾದ ಸಖಿಯೇ ಸಖಿಯೇ ಇದೀಗ ಸಕತ್ ಫೇಮಸ್ ಆಗಿದೆ. ಈ ಚಿತ್ರದ ಪ್ರಮೋಷನ್ಗಾಗಿ ಇದಾಗಲೇ ಹಲವಾರು ಸ್ಟಾರ್ ನಟ-ನಟಿಯರು ರೀಲ್ಸ್ ಮಾಡಿದ್ದಾರೆ. 'ಕೋಟಿ' ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ. ಈ ಕಥಾಹಂದರದ 'ಕೋಟಿ' ಸಿನಿಮಾ ಜನಮೆಚ್ಚುಗೆ ಗಳಿಸಿದ್ದು, ಅದರಲ್ಲಿನ ಸಖಿಯೇ ಸಖಿಯೇ ಹಾಡು ಭಾರಿ ವೈರಲ್ ಆಗಿದೆ. ಇದೀಗ ಸತ್ಯ ಸೀರಿಯಲ್ ಗಂಡ-ಹೆಂಡತಿ ಬಾಲಾ ಮತ್ತು ದಿವ್ಯಾ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.
ಸತ್ಯ ಸೀರಿಯಲ್ನಲ್ಲಿ ಸದ್ಯ ಹಾವು ಮುಂಗುಸಿಯ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಆದ್ದರಿಂದ ದಿವ್ಯಾಳಿಗೆ ಅಭಿಮಾನಿಗಳು ನಖರಾ ಬಿಟ್ಟು ಗಂಡನ ಜೊತೆ ಬಾಳು ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಸತ್ಯ ಸೀರಿಯಲ್ ಕುರಿತು ಹೇಳುವುದಾದರೆ, ಬಡ ಕುಟುಂಬದಲ್ಲಿ ಜನಿಸಿರುವ ದಿವ್ಯಾ ಐಷಾರಾಮಿ ಜೀವನದ ಕನಸು ಕಾಣುತ್ತ, ಶ್ರೀಮಂತನೆಂದು ತಿಳಿದು ರೌಡಿ ಬಾಲಾನ ಬಲೆಗೆ ಬೀಳುತ್ತಾಳೆ. ಆತನನ್ನೇ ಮದುವೆಯಾದ ಮೇಲೆ ಸತ್ಯ ತಿಳಿಯುತ್ತದೆ. ಆತ ಏನು ಮಾಡಿಯಾದರೂ ಸರಿ, ಇವಳಿಗೆ ಹಣ ಬೇಕು. ಹುಟ್ಟುತ್ತಲೇ ಬಡ ಕುಟುಂಬದಲ್ಲಿ ಹುಟ್ಟುವ, ತನ್ನ ಇಷ್ಟಗಳನ್ನೆಲ್ಲಾ ಮನಸ್ಸಿನಲ್ಲಿಯೇ ಅದುಮು ಇಟ್ಟುಕೊಳ್ಳುವ ಶ್ರೀಮಂತಿಕೆಯ ಕನಸು ಕಾಣುತ್ತಿರುವ ಹಲವು ಹೆಣ್ಣುಮಕ್ಕಳ ಪ್ರತೀಕ ಈ ದಿವ್ಯಾ. ತನ್ನ ತಪ್ಪಿನ ಅರಿವಾಗಿ ಪತಿ ಬಾಲ ಒಳ್ಳೆಯನಾಗುವ ಸಲುವಾಗಿ ಕೂಲಿ ಮಾಡಲು ಹೋದರೆ, ಆತನನ್ನು ರಿಜೆಕ್ಟ್ ಮಾಡುತ್ತಾಳೆ ದಿವ್ಯಾ. ತನಗೆ ಮದ್ವೆಯಾಗಿರುವ ವಿಷ್ಯವನ್ನೇ ಮುಚ್ಚಿಟ್ಟು ಶ್ರೀಮಂತ ಯುವಕನ ಬಲೆಗೆ ಬೀಳುತ್ತಾಳೆ. ಆತ ಮೋಸಗಾರ ಎಂದು ತಿಳಿದ ಮೇಲೆ ಗಂಡನೇ ಸರ್ವಸ್ವ ಎಂದು ತಿಳಿಯುತ್ತದೆ. ಆದರೆ ಅದಾಗಲೇ ಗಂಡ ಮನಸ್ಸು ಬದಲಿಸಿರುವ ಕಾರಣ, ಈಗ ಗಂಡನ ಪ್ರೀತಿ ಪಡೆಯಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾಳೆ ದಿವ್ಯಾ.
ಸತ್ಯ ಸೀರಿಯಲ್ ದಿವ್ಯಾಗೆ ಹುಟ್ಟುಹಬ್ಬವಿಂದು: ಕಮೆಂಟ್ಸ್ ನೋಡಿ ಅಳ್ತಿದ್ದ ನಟಿಯ ಇಂಟರೆಸ್ಟಿಂಗ್ ವಿಷ್ಯ ಇಲ್ಲಿದೆ...
ದಿವ್ಯಾಳ ಪಾತ್ರವನ್ನು ವಿಭಿನ್ನ ಶೇಡ್ಗಳಲ್ಲಿ ತೋರಿಸುತ್ತಲೇ ಎಲ್ಲರ ಮನಸ್ಸನ್ನು ಗೆದ್ದವರು ಪ್ರಿಯಾಂಕಾ ಶಿವಣ್ಣ. ಇವರು ತೆಲುಗು ಸೀರಿಯಲ್ಗಳಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡಿಗರಿಗೆ ಪರಿಚಯವಾದದ್ದು ಅಗ್ನಿಸಾಕ್ಷಿಯ ವಿಲನ್ ಪ್ರಿಯಾಂಕಾ ಮೂಲಕ. ಮೊದಲು ಈ ಪಾತ್ರದಲ್ಲಿ ನಟಿಸುತ್ತಿದ್ದಾಕೆ ಅರ್ಧಕ್ಕೆ ಬಿಟ್ಟಾಗ ಆ ಅವಕಾಶ ಪ್ರಿಯಾಂಕಾ ಅವರಿಗೆ ಒದಗಿ ಬಂತು. ಈ ಸೀರಿಯಲ್ನಲ್ಲಿ ನೆಗೆಟಿವ್ ರೋಲ್ ಮೂಲಕ ಎಲ್ಲರ ಮನೆ ಮಾತಾದರು ಪ್ರಿಯಾಂಕಾ. ಇದೀಗ ಸತ್ಯ ಸೀರಿಯಲ್ನಲ್ಲಿಯೂ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಪ್ರಿಯಾಂಕಾ ಅವರು ಅಗ್ನಿಸಾಕ್ಷಿಯಲ್ಲಿ ವಿಲನ್ ಮಾಡುತ್ತಿದ್ದ ಸಮಯದಲ್ಲಿ ಇವರ ವಿರುದ್ಧ ಸಿಕ್ಕಾಪಟ್ಟೆ ಜನ ಬೈಯುತ್ತಿದ್ದುದನ್ನು ನೆನಪಿಸಿಕೊಂಡಿದ್ದರು.
ಇನ್ನು ಬಾಲಾ ಕುರಿತು ಹೇಳುವುದಾದರೆ, ಆಗ ರೌಡಿಯಾಗಿ, ಈಗ ಒಳ್ಳೆಯವನಾಗಿ ಜೀವನ ಸಾಗಿಸುತ್ತ ಎರಡೂ ವಿಭಿನ್ನ ಶೇಡ್ಗಳಿಗೆ ಜೀವ ತುಂಬಿದ ಬಾಲನ ನಿಜವಾದ ಹೆಸರು ಶಶಿರಾಜ್. ಇಂದು ಅಂದರೆ ಜೂನ್ 16 ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಶಶಿ ಅವರು ಕಿರುತೆರೆಗೆ ಬಂದಿರುವ ರೋಚಕ ಪಯಣದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. ಬೆಂಗಳೂರಿನಲ್ಲಿಯೇ ಹುಟ್ಟು ಬೆಳೆದು ಬೆಂಗಳೂರಿನ ಆಚೆಯೊಂದು ಪ್ರಪಂಚವೇ ಇದೆ ಎಂದು ತಿಳಿಯದ ಶಶಿ ಅವರಿಗೆ ಜೀವನ ಪಾಠ ಕಲಿಸಿದ್ದು ರಂಗಭೂಮಿ. ಶಾಲಾ-ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂದೆ ಇದ್ದ ಶಶಿ ಅವರಿಗೆ ಗೊತ್ತಿಲ್ಲದೆ ನಟನೆಯ ಗೀಳು ಹುಟ್ಟಿತ್ತಂತೆ. ಒಮ್ಮೆ ವೇದಿಕೆ ಹತ್ತಿದ ಅವರಿಗೆ ನಟನಾಗುವ ಹುಚ್ಚು ಹತ್ತಿತ್ತು. ನಟನಾ ವೃತ್ತಿಯೇ ತಲೆ ತುಂಬಿಕೊಂಡಿದ್ದರಿಂದ ಬಿಸಿಎ, ಎಂಬಿಎ ಮಾಡಿದ್ರೂ ಅದನ್ನು ಪೂರ್ಣಗೊಳಿಸಲು ಆಗಲಿಲ್ಲ. ಆದರೆ ನೌಕರಿಗೆ ಹೋಗಲೇಬೇಕಿತ್ತು. ‘ಮೂರು ಮುತ್ತು’. ‘ಅಂಕೆ ತಪ್ಪಿದ ಶಂಕರ್ ಲಾಲ್’, ‘ತದ್ರೂಪಿ’, ‘ಕಕೇಶಿಯನ್ ಚಾಕ್ ಸರ್ಕಲ್’, ‘ಸ್ಮೃತಿ’, ‘ತಂತಿ’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ಶಾಂತಂ ಪಾಪಂ’ನಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಪ್ರೇಮಲೋಕ’ ಧಾರಾವಾಹಿಯಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಸತ್ಯ ಸೀರಿಯಲ್ನಲ್ಲಿ ಇವರು ಆಡಿಷನ್ ಕೊಟ್ಟಿದ್ದು ಕಾರ್ತಿಕ್ ಪಾತ್ರಕ್ಕೆ, ಆದರೆ ಸೆಲೆಕ್ಟ್ ಆಗಿದ್ದು ಬಾಲಾ ಪಾತ್ರಕ್ಕೆ. ಆದರೆ ಈ ಪಾತ್ರದಲ್ಲಿಯೂ ಜೀವ ತುಂಬುತ್ತಿದ್ದಾರೆ. ಬೇರೆ ಬೇರೆ ವಾಹಿನಿಗಳಿಂದ ಆಫರ್ಸ್ ಬರುತ್ತಿವೆ. ಒಳ್ಳೊಳ್ಳೆ ಪಾತ್ರಗಳು ಸಿಕ್ಕರೆ ಮಾಡುತ್ತೇನೆ. ಸಿನಿಮಾಗಳಿಂದಲೂ ಅವಕಾಶಗಳು ಬರುತ್ತಿವೆ ಎನ್ನುತ್ತಾರೆ ಶಶಿ.
ಹುಟ್ಟುಹಬ್ಬದ ಸಂಭ್ರಮದಲ್ಲಿ ಸತ್ಯ ಸೀರಿಯಲ್ ಬಾಲ: ಇನ್ಫೋಸಿಸ್ ನೌಕರಿ ಬಿಟ್ಟು ನಟನೆಗೆ ಬಂದದ್ದೇ ರೋಚಕ...