ಬಿಗ್ ಬಾಸ್ ಮನೆಯಲ್ಲಿ ಮೊದಲೆಂದಿಗಿಂತಲೂ ಹೆಚ್ಚು ಮನಸ್ತಾಪದ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಕಾರಣ ಒಂದು, ಈಗ ಗ್ರಾಂಡ್ ಫಿನಾಲೆ ತುಂಬಾ ಹತ್ತಿರ ಬಂದಿದೆ. ಕಾರಣ ಎರಡು, ಅಲ್ಲಿರುವ ಪ್ರತಿಯೊಬ್ಬರ ಗುರಿ ಫಿನಾಲೆಯಲ್ಲಿ ಗೆಲ್ಲುವುದು ಮಾತ್ರ.
‘ಟಿಕೆಟ್ ಟು ಫಿನಾಲೆ’ ಟಾಸ್ಕ್‌ಗಳು ಬಿಗ್‌ಬಾಸ್ ಮನೆಯೊಳಗೆ ಸಾಕಷ್ಟು ಚಕಮಕಿ ಹುಟ್ಟಿಸುತ್ತಿದೆ. ಈಗ ಕಿಡಿ ಕಾರ್ತಿಕ್ ಮತ್ತು ಸಂಗೀತಾ ಮಧ್ಯೆ ಮತ್ತೆ ಹೊತ್ತಿಕೊಂಡಿದೆ. ಅದರ ಸುಳಿವು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ದೊರೆತಿದೆ. ಒಬ್ಬರನ್ನು ಆಟದಿಂದ ಹೊರಗಿಡುವ ಅಧಿಕಾರ ಸಂಗೀತಾ ಅವರಿಗೆ ಸಿಕ್ಕಂತಿದೆ. ವಿನಯ್, ಸಂಗೀತಾಗೆ ‘ನಿನಗೆ ಒಬ್ಬರನ್ನು ತೆಗೆದು ಒಬ್ಬರನ್ನು ಸೇರಿಸುವುದಕ್ಕೆ ಅಡ್ವಾಂಟೇಜ್ ಬರುತ್ತದೆ’ ಎಂದು ಹೇಳಿದಾಗ ಸಂಗೀತಾ, ‘ನಾನು ಫಸ್ಟ್ ಕಾರ್ತಿಕ್‌ನನ್ನೇ ತೆಗೆಯುವುದು’ ಎಂದು ಹೇಳಿದ್ದಾರೆ.
ಅದರಂತೆಯೇ ‘ನನಗೆ ಕಾರ್ತಿಕ್ ಆಡುವುದು ಇಷ್ಟವಿಲ್ಲ. ಹಾಗಾಗಿ ಅವರನ್ನು ಹೊರಗಿಡುತ್ತಿದ್ದೀನಿ’ ಎಂದು ಅವರನ್ನು ಹೊರಗಿಟ್ಟಿದ್ದಾರೆ.
ಇದಕ್ಕೆ ಟಾಸ್ಕ್ ಮುಗಿದ ಮೇಲೆ ಕಾರ್ತಿಕ್, ‘ವುಮನ್ ಕಾರ್ಡ್’ ಎಂದು ಟೀಕಿಸಿದ್ದಾರೆ. ಅವರ ಮಾತು ಕೇಳಿ ಸಿಟ್ಟಿಗೆದ್ದ ಸಂಗೀತಾ ಕೂಡ ಕಿರುಚಾಡಿ, ‘ಇದು ನಿಮ್ಮ ಕ್ಯಾರೆಕ್ಟರ್ ಅನ್ನು ಸೂಚಿಸುತ್ತದೆ’ ಎಂದು ಹೇಳಿದ್ದಾರೆ. ಹೀಗೆ ಹಿಂದೊಂದು ಕಾಲದಲ್ಲಿ ಆಪ್ತ ಸ್ನೇಹಿತರಾಗಿದ್ದ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಜಗಳದ ಕಿಡಿ ಮತ್ತೆ ಹೊತ್ತಿಕೊಂಡಿದೆ. ಇದರ ಪರಿಣಾಮ ಏನಾಗುತ್ತದೆ? ವಾರಾಂತ್ಯದ ಹೊತ್ತಿಗೆ ಫಿನಾಲೆಗೆ ಪ್ರವೇಶ ಪಡೆದುಕೊಳ್ಳಲಿರುವ ಸದಸ್ಯ ಯಾರು ಎಂಬುದನ್ನು ತಿಳಿದುಕೊಳ್ಳಲು ವಾರಾಂತ್ಯದವರೆಗೆ ಕಾಯಬೇಕು.
ಆಸ್ಪತ್ರೇಲಿ ಭಾಗ್ಯಳ ಕೂಗು ಕೇಳಿಸಿಕೊಂಡ ಗಣೇಶ, ಬಂದಿದ್ದು ವೈಷ್ಣವ್ ರೂಪದಲ್ಲಿ!
ಬಿಗ್ ಬಾಸ್ ಮನೆಯಲ್ಲಿ ಮೊದಲೆಂದಿಗಿಂತಲೂ ಹೆಚ್ಚು ಮನಸ್ತಾಪದ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಕಾರಣ ಒಂದು, ಈಗ ಗ್ರಾಂಡ್ ಫಿನಾಲೆ ತುಂಬಾ ಹತ್ತಿರ ಬಂದಿದೆ. ಕಾರಣ ಎರಡು, ಅಲ್ಲಿರುವ ಪ್ರತಿಯೊಬ್ಬರ ಗುರಿ ಫಿನಾಲೆಯಲ್ಲಿ ಗೆಲ್ಲುವುದು ಮಾತ್ರ. ಹೀಗಾಗಿ ಸಹಜವಾಗಿಯೇ ದಿನಗಳು ಕಳೆದಂತೆ ಬಿಗ್ ಮನೆಯ ಗೇಮ್ ಹೆಚ್ಚು ಹೆಚ್ಚು ಟಫ್ ಎನಿಸುತ್ತದೆ. ಈಗ ಇರುವ ಸ್ಪರ್ಧಿಗಳು ಸಹಜವಾಗಿಯೇ ಸ್ಟ್ರಾಂಗ್ ಇದ್ದಾರೆ. 100 ದಿನಗಳು ದಾಟಿಯೂ ಅಲ್ಲಿದ್ದಾರೆ ಎಂದರೆ ಅವರು ಖಂಡಿತವಾಗಿಯೂ ಸ್ಟ್ರಾಂಗ್ ಇರಲೇಬೇಕಲ್ಲ!
ಕಿಂಗ್ ಖಾನ್‌ರನ್ನು ಇತಿಹಾಸ ಪುಟ ಸೇರಿಸಿದ ಡಂಕಿ; ಶಾರುಖ್ ಫ್ಯಾನ್ಸ್‌ಗೆ ಆಯ್ತು ಅನಿರೀಕ್ಷಿತ ಶಾಕ್!
ಒಟ್ಟಿನಲ್ಲಿ, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಂದು ವಾರಕ್ಕೂ ಹೆಚ್ಚುಕಾಲ ಕಳೆಯಬೇಕಿದೆ. ಆದರೆ, ಗೆಲ್ಲುವ ಆಸೆಯಲ್ಲಿರುವ ಪ್ರತಿಯೊಬ್ಬರೂ ಕೂಡ ತಮ್ಮದೇ ಆದ ವಿಭಿನ್ನ ಸ್ಟ್ರಾಟಜಿ ಉಪಯೋಗಿಸುತ್ತಿದ್ದು, ಯಾರ ಪ್ಲಾನ್ ಅಲ್ಲಿನ ಗೆಲುವಿಗೆ ಕೆಲಸ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಗೆಲ್ಲುವ ಫೇವರೆಟ್ ಕಂಟೆಸ್ಟಂಟ್ಸ್ ಎಂದು ತನಿಷಾ ಕುಪ್ಪಂಡ, ಸಂಗೀತಾ ಶೃಂಗೇರಿ ಹಾಗೂ ಕಾರ್ತಿಕ್ ಅವರ ಹೆಸರುಗಳು ಸದ್ಯಕ್ಕೆ ಚಾಲ್ತಿಯಲ್ಲಿವೆ. ಮುಂದೇನು ಎಂಬುದನ್ನು ಕಾದು ನೋಡಬೇಕಿದೆ.