ಕಾವ್ಯಾ ಮೇಡಂ... ಲವ್​ ಯೂ... ಲವ್​ ಯೂ... ಅಂತಿದ್ದಾರೆ ಭಾಗ್ಯಲಕ್ಷ್ಮಿ ಅಭಿಮಾನಿಗಳು...

Published : Jan 11, 2024, 02:50 PM IST
ಕಾವ್ಯಾ ಮೇಡಂ... ಲವ್​ ಯೂ... ಲವ್​ ಯೂ... ಅಂತಿದ್ದಾರೆ ಭಾಗ್ಯಲಕ್ಷ್ಮಿ ಅಭಿಮಾನಿಗಳು...

ಸಾರಾಂಶ

ತಾಂಡವ್​ ಮತ್ತು ಶ್ರೇಷ್ಠಾ ಎಂಗೇಜ್​ಮೆಂಟ್​ ನಡೆಯುತ್ತಿರುವ ಸಮಯದಲ್ಲಿಯೇ ಕುತೂಹಲವೊಂದು ನಡೆದಿದೆ. ಅಷ್ಟಕ್ಕೂ ಆಗಿದ್ದೇನು?   

ಭಾಗ್ಯಲಕ್ಷ್ಮಿಯ ಗಂಡ ತಾಂಡವ್​ ಮತ್ತು ಪ್ರೇಯಸಿ ಶ್ರೇಷ್ಠಾ ಮದುವೆಗೆ ಸನ್ನದ್ಧರಾಗಿದ್ದು, ಎಂಗೇಜ್​ಮೆಂಟ್​ ನಡೆಯುತ್ತಿದೆ. ಈ ಪರಿಯ ಎಂಗೇಜ್​ಮೆಂಟ್​ ಸಿದ್ಧತೆ ಮಾಡಿಕೊಂಡಿದ್ದು ಖುದ್ದು ತಾಂಡವ್​ಗೂ ಗೊತ್ತಿಲ್ಲ. ನಕಲಿ ಅಪ್ಪ-ಅಮ್ಮನ ಜೊತೆ ಶ್ರೇಷ್ಠಾಳ ಮನೆಗೆ ಬಂದಾಗಲೇ ಅಲ್ಲಿ ನಿಶ್ಚಿತಾರ್ಥದ ಸಿದ್ಧತೆ ನಡೆದಿದೆ ಎಂದು ತಿಳಿಯುತ್ತದೆ. ಅದೇ ಇನ್ನೊಂದೆಡೆ ಶ್ರೇಷ್ಠಾಳ ಅಪ್ಪ-ಅಮ್ಮನಿಗೂ ತಮ್ಮ ಮಗಳು ಏನು ಮಾಡುತ್ತಿದ್ದಾಳೆ ಎನ್ನುವ ಅರಿವು ಇಲ್ಲ. ತಾಂಡವ್​ಗೆ ಇದಾಗಲೇ ಇನ್ನೊಂದು ಮದುವೆಯಾಗಿದೆ ಎನ್ನುವುದೂ ಗೊತ್ತಿಲ್ಲ. ಅಲ್ಲಿನ ಪರಿಸ್ಥಿತಿ ನೋಡಿ ತಾಂಡವ್​ಗೆ ಶಾಕ್​ ಆದ್ರೂ ಏನೂ ಮಾಡದ ಸ್ಥಿತಿ. ಏಕೆಂದರೆ ಅವನಿಗೆ ಈಗ ಬೇಕಿರುವುದು ಶ್ರೇಷ್ಠಾ ಮಾತ್ರ.

ಶ್ರೇಷ್ಠಾ ಎಂಗೇಜ್​ಮೆಂಟ್​ ರಿಂಗ್​ ಕೊಡುವಂತೆ ಹೇಳುವಾಗ, ತಾಂಡವ್​ಗೆ ಭಾಗ್ಯಲಕ್ಷ್ಮಿಯನ್ನು ಮದುವೆಯ ದಿನಕರೆದುಕೊಂಡು ಬಂದ ನೆನಪಾಗುತ್ತದೆ. ಆತನ ಒಳ ಮನಸ್ಸು ಈ ಎಂಗೇಜ್​ಮೆಂಟ್​ ಒಪ್ಪುತ್ತಿಲ್ಲ, ಆದರೆ ಬಿಡುವಂತಿಲ್ಲ. ಅತ್ತ ಮಗಳು ತನ್ವಿ ಸಾವು ಬದುಕಿನ ನಡುವೆ ಹೋರಾಟ ಮಾಡಿದ ವಿಷಯವೂ ತಾಂಡವ್​ಗೆ ಗೊತ್ತಿಲ್ಲ. ಅಪ್ಪನ ರಕ್ತ ನೀಡಿದರೆ ಮಾತ್ರ ಮಗಳು ಬದುಕುತ್ತಾಳೆ ಎಂದು ಭಾಗ್ಯಲಕ್ಷ್ಮಿ ಶ್ರೇಷ್ಠಾಳಿಗೆ ಹೇಳಿದ ವಿಷಯ ಆಕೆ ಆತನಿಗೆ ತಲುಪಿಸಲೇ ಇಲ್ಲ.  ಇದರ ನಡುವೆಯೇ ನಿಶ್ಚಿತಾರ್ಥ ಕಾರ್ಯ ನಡೆಯುತ್ತಿದೆ.

ಎಫ್​ಐಆರ್​ ಬೆನ್ನಲ್ಲೇ ಎಚ್ಚೆತ್ತುಕೊಂಡ ಅನ್ನಪೂರ್ಣಿ! ಕ್ಷಮೆ ಕೋರುವ ಜೊತೆಗೆ ಸ್ಟ್ರೀಮಿಂಗ್​ ಕೂಡ ರದ್ದು

ಇನ್ನೇನು ಎಂಗೇಜ್​ಮೆಂಟ್​ ಆದರೆ ಗತಿಯೇನು ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವ ನಡುವೆಯೇ ಕಾವ್ಯಾಳ ಎಂಟ್ರಿ ಆಗುತ್ತದೆ. ಇದಾಗಲೇ ಈ ಮದುವೆಯನ್ನು ಆಕೆ ಒಪ್ಪುತ್ತಿಲ್ಲ. ಶ್ರೇಷ್ಠಾಳ ಗೆಳತಿಯಾಗಿದ್ದರೂ, ವಿವಾಹಿತನ ಬದುಕನ್ನು ಹಾಳು ಮಾಡಿ ಶ್ರೇಷ್ಠಾ ತಾಂಡವ್​ ಜೊತೆಮದುವೆಯಾಗುವುದು ಈಕೆಗೆ ಇಷ್ಟವಿಲ್ಲ. ಕಾವ್ಯಾ ಮೇಡಂ ಯಾಕಿಷ್ಟು ಮೌನವಾಗಿದ್ದೀರಿ, ವಿಷಯವನ್ನು ತಿಳಿಸಬಾರದೇ ಎಂದು ಪದೇ ಪದೇ ಭಾಗ್ಯಲಕ್ಷ್ಮಿ ಸೀರಿಯಲ್​ ಅಭಿಮಾನಿಗಳು ಕೇಳುತ್ತಲೇ ಇದ್ದರು. ಇದೀಗ ಅವರ ಆಸೆ ಈಡೇರಿದಂತೆ  ಕಾಣುತ್ತಿದೆ.

ಇನ್ನೇನು ಶ್ರೇಷ್ಠಾ ಎಂಗೇಜ್​ಮೆಂಟ್​ ರಿಂಗ್​ ಹಾಕಬೇಕು ಎನ್ನುವಷ್ಟರಲ್ಲಿ ಕಾವ್ಯಾಳ ಎಂಟ್ರಿ ಆಗಿದೆ. ನಿಲ್ಲಿಸಿ ಎಂದು ಕೂಗಿದ್ದಾಳೆ. ಅಷ್ಟೇ ಪ್ರೊಮೋ ಬಿಡುಗಡೆಯಾಗಿದೆ. ಇದು ಕನಸೋ, ನನಸೋ, ಮುಂದೇನಾಗುತ್ತದೆ ಎಂದು ಸೀರಿಯಲ್​ ನೋಡಿದ ಮೇಲೆ ತಿಳಿಯಬೇಕಷ್ಟೇ.  ಶ್ರೇಷ್ಠಾಳ ಅಪ್ಪ ಹಾರ್ಟ್​  ಪೇಷಂಟ್​ ಆಗಿರುವ ಕಾರಣ, ಮಗಳ ಈ ವಿಷಯವನ್ನು ಹೇಳುವುದು ಸರಿಯಲ್ಲ ಎಂದುಕೊಂಡಿದ್ದ ಕಾವ್ಯ ಇಲ್ಲಿಯವರೆಗೆ ಸುಮ್ಮನಿದ್ದಳು. ಇನ್ನು ಈ ವಿಷಯ ಅವಳು ಬಾಯಿ ಬಿಡುತ್ತಾಳಾ? ಮುಂದೇನಾಗತ್ತೆ? ವಿಷಯ ತಿಳಿದು ಶ್ರೇಷ್ಠಾಳ ಅಪ್ಪನ ಕಥೆ ಏನಾಗುತ್ತದೆ ಎನ್ನುವ ಕುತೂಹಲವನ್ನು ಜೀ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಬಿಟ್ಟಿದೆ. ಸದ್ಯ ಕಾವ್ಯಾಳ ಎಂಟ್ರಿ ಆಗಿರುವುದಕ್ಕೆ ಭಾಗ್ಯಲಕ್ಷ್ಮಿ ಫ್ಯಾನ್ಸ್​ ಕಾವ್ಯಾಳನ್ನು ಹೊಗಳುತ್ತಿದ್ದಾರೆ. 

ಐದು ವರ್ಷ ಹಿರಿಯ ಬಾರ್​ ಡ್ಯಾನ್ಸರ್​, ನೈಟ್​ ಗರ್ಲ್​ ಜೊತೆ ಆರ್ಯನ್​ ಡೇಟಿಂಗ್​? ಈಕೆ ಬಾಲಿವುಡ್​ ಹಾಟ್​ ನಟಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss 19 Winner ಘೋಷಣೆ; ಮೊದಲೇ ಪ್ರೀ ಪ್ಲ್ಯಾನ್‌ ಮಾಡಿದ್ದಕ್ಕೆ ತಿರುಗಿಬಿದ್ದ ಸಹಸ್ಪರ್ಧಿಗಳು!
ಮಂತ್ರಾಲಯದ ರಾಯರ ಪವಾಡದಿಂದಲೇ ಮದುವೆಯಾಯ್ತು: Suhana Syed ಎಂದೂ ಹೇಳಿರದ ರಿಯಲ್ ಕಥೆ