ಭಾರತದಲ್ಲೇ ಮೊದಲ ಬಾಲನಟಿ ತೆರಿಗೆ ಕಟ್ಟಿದ್ದು ಶಾಮಿಲಿ, ತಂದೆಯೇ ಆಕೆಗೆ ಫ್ರೀಡಂ ಕೊಡ್ಲಿಲ್ಲ: ಮಾಸ್ಟರ್ ಆನಂದ್

Published : Jan 11, 2024, 03:02 PM ISTUpdated : Jan 11, 2024, 03:20 PM IST
ಭಾರತದಲ್ಲೇ ಮೊದಲ ಬಾಲನಟಿ ತೆರಿಗೆ ಕಟ್ಟಿದ್ದು ಶಾಮಿಲಿ, ತಂದೆಯೇ ಆಕೆಗೆ ಫ್ರೀಡಂ ಕೊಡ್ಲಿಲ್ಲ: ಮಾಸ್ಟರ್ ಆನಂದ್

ಸಾರಾಂಶ

ಬೇಬಿ ಶಾಮಿಲಿ ಜೊತೆ ತೆರೆ ಮೇಲೆ ಮಿಂಚಿದ ಮಾಸ್ಟರ್ ಆನಂದ್. ಶಾಲಿಮಿ ನಟನೆ ಸೂಪರ್ ಆದರೆ ಫ್ರೀಡಂ ಇರಲಿಲ್ಲ ಎಂದ ಮಾಸ್ಟರ್...

90ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ರೂಲ್ ಮಾಡಿದ ಬಾಲನಟಿ ಬೇಬಿ ಶಾಮಿಲಿ ಲೆಕ್ಕವಿಲ್ಲದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಜೊತೆ ಸ್ಟಾರ್ ನಟ-ನಟಿಯರ ಜೊತೆ ಕೆಲಸ ಮಾಡಿದ ಹೆಗ್ಗಳಿಕೆ ಇದೆ. ಶಾಮಲಿ ಜೊತೆ ನಟಿಸಿರುವ ಮಾಸ್ಟರ್ ಆನಂದ್ ಏನಂತಾರೆ??

'90ರ ದಶಕದಲ್ಲಿ ನಾಯಕ- ನಾಯಕಿ ಡೇಟ್ ಸಿಗ್ತಿತ್ತು ಅನ್ಸುತ್ತೆ ಆದರೆ ಬಾಲನಟ- ಬಾಲನಟಿಯ ಡೇಟ್ ಸಿಗುತ್ತಿರಲಿಲ್ಲ. ಅದರಲ್ಲಿ ಬೇಬಿ ಶಾಮಿಲಿ ಒಂದು ಕೈ ಜಾಸ್ತಿ. ಕನ್ನಡ ಮಾತ್ರವಲ್ಲ ತಮಿಳು ತೆಲುಗು ಸಿನಿಮಾ ಮಾಡುತ್ತಿದ್ದಳು..ಅಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಡೇಟ್ಸ್‌ ರಜನಿಕಾಂತ್‌ ಅವರ ಜೊತೆ ಸಿನಿಮಾ ಡಾ. ವಿಷ್ಣುವರ್ಧನ್ ಜೊತೆ ಸಿನಿಮಾ... ಸೌತ್‌ ಇಂಡಿಯನ್ ಸ್ಟಾರ್‌ ಅಗಿದ್ದರು. ಸಣ್ಣದಾಗಿ ಬಿದ್ದು ಗಾಯ ಆದ್ರೆ ಸಿನಿಮಾಗಳೇ ನಿಂತು ಹೋಗುತ್ತದೆ. ಆಕೆ ಸಣ್ಣ ಪುಟ್ಟ ಬಂದು ಹೋಗುವ ಪಾತ್ರ ಮಾಡುತ್ತಿರಲಿಲ್ಲ...ಆ ಕಾಲದಲ್ಲಿ ನಿಜಕ್ಕೂ ರಿಯಲ್ ಸೂಪರ್ ಸ್ಟಾರ್ ಆಗಿದ್ದಳು' ಎಂದು ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ಆನಂದ್ ಮಾತನಾಡಿದ್ದಾರೆ.  

ಮಗ ಪೋಲಿ ಬಿದ್ರೆ ನಾನು ಅಥವಾ ಮೇಷ್ಟ್ರು ಹೊಡಿಬೋದು, ಇದೊಂದು ಅಗ್ನಿ ಪರೀಕ್ಷೆ: ಕಣ್ಣೀರಿಟ್ಟ ಮಾಸ್ಟರ್ ಆನಂದ್

'ಹಲವು ಸಲ ಹೇಳಿರುವೆ ಭಾರತದಲ್ಲಿ ಆಕೆ ಮೊದಲು Youngest Tax Payer. ಮೂರನೇ ವಯಸ್ಸಿಗೆ ಸಂಭಾವನೆ ಪಡೆದು ಟ್ಯಾಕ್ಸ್‌ ಕಟ್ಟುತ್ತಿದ್ದರು. ಅಂಜಲಿ ಸಿನಿಮಾ ಆದ್ಮೇಲೆ ಅಕೆಯ ಸಂಭಾವನೆಯನ್ನು ಏರಿಸಿದರು. ಆ ಕಾಲದಲ್ಲಿ ಅವರ ತಂದೆ ಒಂದು ಚಿತ್ರಕ್ಕೆ ಲಕ್ಷದಲ್ಲಿ ಸಂಭಾವನೆ ಪಡೆಯುತ್ತಿದ್ದರು. ಆಕೆ ಸಿಂಡ್ರೆಲಾ ರೀತಿ ಬೆಳೆದು ಬಿಟ್ಟರು...ಫೋಷಕರ ಅತಿಯಾದ ಕಾಳಜಿನೋ ಏನೋ ಆ ಬಾಲ್ಯದಕ್ಕೆ ಅಗತ್ಯವಿರುವ ಆಟ ಮಜಾ ಏನೂ ಇರಲಿಲ್ಲ ಮಿಸ್ ಮಾಡಿಕೊಂಡಳು. ಪ್ರತಿ ಶಾಟ್ ಆದ್ಮೇಲೆ ಬ್ರೇಕ್ ಇದೆ ಅಂತ ಹೇಳಿದ್ರೆ ಆಟವಾಡಿಕೊಂಡು ಬರುತ್ತಿದ್ದೆ...ಮತ್ತೆ ಮೇಕಪ್ ಮಾಡಿಸಿಕೊಂಡು ನಾನು ಶೂಟಿಂಗ್‌ ಶುರು ಮಾಡಬೇಕು' ಎಂದು ಆನಂದ್ ಹೇಳಿದ್ದಾರೆ. 

ವಂಶಿಕಾ ಮಗ್ಗಿ ಕೇಳಿ ಮಾಸ್ಟರ್ ಆನಂದ್ ವಯಸ್ಸು ಗೆಸ್ ಮಾಡಿ; ನಿಮ್ಮ ಮಕ್ಕಳಿಗೂ ಹೀಗೆ ಮಾಡ್ತೀರಾ?

'ಶಾಮಿಲಿ ಅವರನ್ನು ತಂದೆ ತುಂಬಾ ಕಾಪಾಡುತ್ತಿದ್ದರು. ಸಿನಿಮಾ ಪ್ರಾಜೆಕ್ಟ್‌ಗಳು ಅಷ್ಟು ಸೀರಿಯಸ್ ಆಗಿತ್ತು. ಮಕ್ಕಳ ಸಾಕ್ಷಿ ಮತ್ತು ಕರುಳಿನ ಕುಡಿ ಸಿನಿಮಾದಲ್ಲಿ ಒಟ್ಟಿಗೆ ಅನಿಸಿರುವೆ. ನಾವು ಬಾಲ್ಯದಿಂದಲೂ ಆಕೆಯ ಸಿನಿಮಾವನ್ನು ನೋಡಿಕೊಂಡು ಬಂದಿದ್ದೀವಿ. ಅವರ ಅಕ್ಕ ಶಾಲಿನಿ ಮತ್ತು ಮಾಸ್ಟರ್ ಮಂಜುನಾಥ್ ಒಟ್ಟಿಗೆ ಎಂಟ್ರಿ ಕೊಟ್ಟಿದ್ದು. ಶಾಮಿಲಿ ಮತ್ತು ನಾನು ಒಟ್ಟಿಗೆ ಎಂಟ್ರಿ ಕೊಟ್ಟಿದ್ದು. ಚಿತ್ರೀಕರಣದಲ್ಲಿ ಒಳ್ಳೆಯ ಸಮಯ ಕಳೆದಿರುವೆ. ಶಾಮಿಲಿಯನ್ನು ಹೊರಗಡೆ ಬಿಡುತ್ತಿರಲಿಲ್ಲ ಒಳಗಡೆ ಕುಳಿತುಕೊಂಡು ಆಟವಾಡುವ ವಸ್ತುಗಳನ್ನು ತರುತ್ತಿದ್ದರು. ನನಗೆ ಅದು ಇಷ್ಟವಿರುತ್ತಿರಲಿಲ್ಲ ಓಡಿ ಹೋಗುತ್ತಿದ್ದೆ. ನಮ್ಮ ತಂದೆ ಕೊಟ್ಟ ಫ್ರೀಡಮ್ ಆಕೆಗೆ ಅವರ ತಂದೆ ಕೊಟ್ಟಿರಲಿಲ್ಲ' ಎಂದಿದ್ದಾರೆ ಆನಂದ್.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?