ಜಗಳ ಆಡುವಾಗ ಕಾರ್ತಿಕ್ ಅಗ್ಲಿಯಾಗಿ ಕಾಣ್ತಾರೆ, ಇಂಥಾ ಬಾಯ್ ಫ್ರೆಂಡ್ ಬೇಡ್ವೇ ಬೇಡ: ಸಂಗೀತಾ

By Suvarna News  |  First Published Nov 24, 2023, 12:55 PM IST

ಬಿಗ್‌ಬಾಸ್ ಸೀಸನ್ 10 ನಲ್ಲಿ ಕಾರ್ತಿಕ್‌ನಂಥಾ ಬಾಯ್ ಫ್ರೆಂಡ್ ಬೇಡ್ವೇ ಬೇಡ. ಜಗಳ ಆಡುವಾಗ ಅವರು ಬಹಳ ಅಗ್ಲಿಯಾಗಿ ಕಾಣ್ತಾರೆ ಅನ್ನೋ ಸಂಗೀತ ಮಾತು ಫುಲ್ ಹೈಪ್ ಕ್ರಿಯೇಟ್ ಮಾಡಿದೆ.


ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ 'ಬಿಗ್‌ಬಾಸ್‌ ಸೀಸನ್‌ ಕನ್ನಡ 10'ನಲ್ಲಿ ಸದ್ಯ ಸಂಗೀತಾದೇ ಹವಾ. ಪಕ್ಕಾ ವಿಲನ್ ಥರ ಆಕೆಯನ್ನು ನೆಟ್ಟಿಗರು ನೋಡ್ತಿದ್ದಾರೆ. ಜಗತ್ತನ್ನೇ ನೆಗೆಟಿವ್ ಕಣ್ಣಿಂದ ನೋಡೋ ಈಕೆಗೆ ಕಾಣೋದೆಲ್ಲ ನೆಗೆಟಿವ್ ಆಗೇ ಕಾಣುತ್ತೆ. ತನ್ನನ್ನು ಬಚಾವ್ ಮಾಡಿಕೊಳ್ಳಲು ಯಾವುದಕ್ಕೂ ರೆಡಿ ಅಂತಿರೋ ಆಕೆಯ ಮನಸ್ಥಿತಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಅದರಲ್ಲೂ ಸಂಗೀತಾ ಕಾರ್ತಿಕ್‌ಗೆ ತಲೆ ಬೋಳಿಸಿಕೊಳ್ಳೋ ಟಾಸ್ಕ್ ಕೊಟ್ಟ ಮೇಲಂತೂ ಜನ ಈಕೆಯ ಬಗ್ಗೆ ಬೇಸತ್ತು ಹೋಗಿ ಈಕೆಯ ಪೇಜ್ ಫಾಲೋ ಮಾಡೋದನ್ನೇ ಬಿಟ್ಟು ಬಿಡ್ತಿದ್ದಾರೆ. ಢಂ ಅಂತ ಈಕೆಯ ಫ್ಯಾನ್ ಫಾಲೋವಿಂಗ್ ಕುಸಿದಿದೆ. ಸುಮಾರು ಹನ್ನೊಂದು ಸಾವಿರ ಜನ ಫ್ಯಾನ್ಸ್ ಫಾಲೋ ಮಾಡೋದನ್ನು ಬಿಟ್ಟಿದ್ದಾರೆ. ಎಷ್ಟೋ ಸೆಲೆಬ್ರಿಟಿಗಳಿಗೆ ಬಿಗ್‌ಬಾಸ್ ಗೆ ಹೋಗಿ ಬಂದಮೇಲೆ ಆಫರ್, ಜನಪ್ರಿಯತೆ ಹೆಚ್ಚಾಗಿದೆ. ಆದರೆ ಸಂಗೀತಾಗೆ ಮಾತ್ರ ಇದು ಉಲ್ಟಾ ಹೊಡೀತಿದೆ. ಸದ್ಯ ಕಾರ್ತಿಕ್‌ನಂಥಾ ಬಾಯ್ ಫ್ರೆಂಡ್‌ ನಂಗೆ ಬೇಡ್ವೇ ಬೇಡ ಅನ್ನೋ ಸಂಗೀತಾ ಯಾರ್ಯಾರು ಹೇಗ್ಹೇಗೆ ಅನ್ನೋದನ್ನೂ ಜಡ್ಜ್ ಮಾಡಿಬಿಟ್ಟಿದ್ದಾರೆ.

ಇಷ್ಟು ದಿನ ಕಾರ್ತಿಕ್‌ ಜೊತೆಗೆ ಆತ್ಮೀಯವಾಗಿದ್ದ ಸಂಗೀತಾ ಇದೀಗ ಕಾರ್ತಿಕ್ ಬಗ್ಗೆಯೇ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಜಗಳದ ವೇಳೆ ಕಾರ್ತಿಕ್ ಅಗ್ಲಿಯಾಗಿ ಕಾಣ್ತಾರೆ. ಅದೊಂದು ಫೇಸ್‌ನಿಂದಾಗಿ ಕಾರ್ತಿಕ್‌ನಂಥ ಬಾಯ್‌ಫ್ರೆಂಡ್ ಇರುವ ಬಗ್ಗೆ ನಾನು ಯಾವತ್ತೂ ಯೋಚಿಸುವುದಿಲ್ಲ ಅನ್ನೋ ಸಂಗೀತ ಮಾತು ವೈರಲ್ ಆಗಿದೆ. ಹಾಗೆ ನೋಡಿದರೆ 'ಬಿಗ್ ಬಾಸ್‌ ಕನ್ನಡ 10’ ಶೋದ ಆರಂಭದಲ್ಲಿ ಕಾರ್ತಿಕ್, ಸಂಗೀತಾ, ತನಿಷಾ ಮಧ್ಯೆ ಒಳ್ಳೆಯ ಸ್ನೇಹ, ಬಾಂಡಿಂಗ್ ಇತ್ತು. ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಕೆಲವೊಮ್ಮೆ ಕಾರ್ತಿಕ್ ಫ್ಲರ್ಟ್ ಮಾಡುತ್ತಿದ್ದರು. ಆಗ, 'ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಷ್ಟೇ' ಎಂದು ಸಂಗೀತಾ ಪದೇ ಪದೇ ಹೇಳುತ್ತಿದ್ದರು. ಇದೀಗ ಮೂವರ ಮಧ್ಯೆ ಗೆಳೆತನ ಮುರಿದುಬಿದ್ದಿದೆ. ಕಾರ್ತಿಕ್ ಸಂಗೀತಾ ಮಧ್ಯೆ ಜಗಳ ಹೆಚ್ಚಾಗುತ್ತಲೇ ಇದೆ. ಹೀಗಿರುವಾಗಲೇ, ಕಾರ್ತಿಕ್ ಬಗ್ಗೆ ಸಂಗೀತಾ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

Tap to resize

Latest Videos

ಬಿಗಾ ಬಾಸ್ ಸ್ಪರ್ಧಿ ಸಂಗೀತಾ ಶೃಂಗೇರಿ ಫಾಲೋವರ್ಸ್ ಸಂಖ್ಯೆಯಲ್ಲಿ ಭಾರೀ ಇಳಿತ! ಕಾರಣ ನಿಮಗೂ ಗೊತ್ತಲ್ವಾ?

'ಜಗಳ ಮಾಡುವಾಗ ಕಾರ್ತಿಕ್ ತುಂಬಾ ಅಗ್ಲಿಯಾಗಿ (ugly) ಕಾಣ್ತಾರೆ. ಇದೊಂದು ಫೇಸ್‌ನಿಂದ ಕಾರ್ತಿಕ್‌ನಂಥ ಬಾಯ್‌ಫ್ರೆಂಡ್ (boyfriend) ಇರುವ ಬಗ್ಗೆ ನಾನು ಎಂದಿಗೂ ಯೋಚಿಸುವುದಿಲ್ಲ. ನಾನು ನಿಜ ಹೇಳಬೇಕು ಅಂದ್ರೆ, ನನಗೆ ತನಿಷಾ ತುಂಬಾ ಇರಿಟೇಟಿಂಗ್ ಅನ್ಸುತ್ತೆ. ಅವರು ಬೇರೆಯವರ ಜೊತೆ ಜಗಳ ಆಡುವಾಗಲೂ ನನಗೆ ಅಗ್ಲಿ ಅನ್ಸುತ್ತೆ. ನಮ್ರತಾ, ನೀವು ಮತ್ತು ತನಿಷಾ ಅವತ್ತು ಜಗಳ ಆಡಿದಾಗ ನಂಗೆ ತನಿಷಾ ಅಗ್ಲಿ ಅನ್ಸಿತ್ತು. ಅದು ಬಿಟ್ಟು ಬೇರೆ ಯಾವುದೂ ನಿಮ್ಮದು ಅಗ್ಲಿ ಅನಿಸಲಿಲ್ಲ.’ ಎಂದು ಸಂಗೀತಾ ನಮ್ರತಾ ಬಳಿ ಹೇಳಿದ್ದಾರೆ.

'ನಂಗೆ ಕಾರ್ತಿಕ್‌ದು ತೀರಾ ಅಗ್ಲಿ ಅನ್ಸುತ್ತೆ. ಮೋರ್ ದ್ಯಾನ್ ತನಿಷಾ. ದಿಸ್ ಈಸ್‌ ವೆರಿ ಸ್ಕೇರಿ (scary). ಕಾರ್ತಿಕ್‌ಗೇ ನೇರವಾಗಿ ಹೇಳಿದ್ದೀನಿ, ಜಗಳ ಮಾಡುವಾಗ ನೀವು ತುಂಬಾ ಅಗ್ಲಿ ಕಾಣಿಸ್ತೀರಾ ಅಂತ. ಅಂದ್ರೆ ಭವಿಷ್ಯದಲ್ಲಿ ಯಾವಾಗ್ಲಾದರೂ ಅಂದ್ರೆ 100 ವರ್ಷ (100 year) ಆದ್ಮೇಲೂ ಅವರು ನನಗೆ ಬಾಯ್‌ಫ್ರೆಂಡ್ ಆಗೋದಾದರೂ ಇದೊಂದು ಫೇಸ್‌ನ ನೋಡಿಕೊಂಡು ನಾನು ಅವರಿಂದ ದೂರ ಹೋಗ್ತೀನಿ ಅನ್ಸುತ್ತೆ. ಇದೊಂದು ಫೇಸ್‌ನಿಂದ I will never even think about having a boyfriend like that ಅಂತ ಅನ್ಸುತ್ತೆ' ಅನ್ನೋ ಸಂಗೀತಾ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರ ವಿಚಿತ್ರ ಪ್ರತಿಕ್ರಿಯೆ (comment) ಬರುತ್ತಿದೆ.

ನಮ್ರತಾ ಜೊತೆ ಸೇರಿದ ಸಂಗೀತಾ! ಈ ಜೋಡಿ ನೋಡಿ ಜನ ಏನ್ ಹೇಳ್ತಿದ್ದಾರೆ ಗೊತ್ತಾ?

click me!