ಬಿಗ್ಬಾಸ್ ಮನೆಯಲ್ಲಿ ಹುಚ್ಚಾಟ ಮಿತಿ ಮೀರುತ್ತಿದೆ. ಗಂಡ-ಹೆಂಡತಿಯನ್ನು ಒಟ್ಟಿಗೆ ಮಲಗಲು ಸ್ಪರ್ಧಿಯೊಬ್ಬರು ಬಿಡದ ಕಾರಣ ಇಬ್ಬರೂ ಪ್ರತ್ಯೇಕ ಮಲಗಿದರು. ಆಗಿದ್ದೇನು?
ಬಿಗ್ ಬಾಸ್ ಎಂದ್ರೆನೇ ಅದು ಹುಚ್ಚಾಟದ ಮನೆ. ಅಲ್ಲಿ ಜಗಳ, ಕಿತ್ತಾಟ, ಕದನ, ಪ್ರೇಮ ಪ್ರಸಂಗ, ಅಶ್ಲೀಲತೆ, ಕೆಟ್ಟ ಪದಗಳ ಬಳಕೆ... ಇತ್ಯಾದಿ ಇತ್ಯಾದಿ ಎಲ್ಲವೂ ಕಾಮನ್ ಎನಿಸಿಬಿಟ್ಟಿವೆ. ಹೀಗೆ ಇದ್ದರೇನೇ ಪ್ರೇಕ್ಷಕರಿಗೆ ಅದು ಹೆಚ್ಚು ಆಪ್ತವಾಗುತ್ತದೆ ಎಂಬುದನ್ನು ಇದಾಗಲೇ ಪ್ರೇಕ್ಷಕರು ತೋರಿಸಿಕೊಟ್ಟಿದ್ದಾರೆ. ದಿನನಿತ್ಯವೂ ಬೈದುಕೊಳ್ಳುತ್ತಲೇ ಬಿಗ್ಬಾಸ್ ನೋಡುವ ದೊಡ್ಡ ಪ್ರೇಕ್ಷಕ ವರ್ಗ ಇರುವುದು ಬಿಗ್ಬಾಸ್ಗಳ ಟಿಆರ್ಪಿ ರೇಟ್ ನೋಡಿದರೆ ತಿಳಿಯುತ್ತದೆ. ಅದೇ ರೀತಿ, ಹಿಂದಿ ಬಿಗ್ಬಾಸ್ನಲ್ಲಿಯೂ ಹುಚ್ಚಾಟ ಮಿತಿ ಮೀರುತ್ತಿದೆ. ಅದರಲ್ಲಿಯೂ ಹೆಚ್ಚಾಗಿ ಎಲ್ಲರ ಗಮನ ಸೆಳೆದಿರುವುದು ಉದ್ಯಮಿ ವಿಕ್ಕಿ ಜೈನ್ ಮತ್ತು ನಟಿ ಅಂಕಿತಾ ಲೋಖಂಡೆ ಜೋಡಿ.
ಈ ಬಾರಿ ಹಿಂದಿ ಬಿಗ್ಬಾಸ್ನಲ್ಲಿ ದಂಪತಿ ಜೋಡಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅದೇ ರೀತಿ, ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಪ್ರವೇಶಿಸಿ ಇದಾಗಲೇ ಸಾಕಷ್ಟು ಹಲ್ಚಲ್ ಸೃಷ್ಟಿಸುತ್ತಿದ್ದಾರೆ. ಇವರಿಬ್ಬರ ಜಗಳ ವೀಕ್ಷಕರಿಗೆ ಬಲು ಪ್ರೀತಿ. ಅಂದಹಾಗೆ ಈ ಜೋಡಿ ಡಿಸೆಂಬರ್ 2021 ರಲ್ಲಿ ಮದುವೆಯಾಗಿದೆ. ದಂಪತಿ ಒಟ್ಟಿಗೆ ಬಿಗ್ ಬಾಸ್ 17 ಮನೆಗೆ ಪ್ರವೇಶಿಸಿದ್ದಾರೆ. ಸದ್ಯ ಇವರು ಮುಖ್ಯಾಂಶದಲ್ಲಿದ್ದಾರೆ. ವಿಕ್ಕಿ ಮತ್ತು ಅಂಕಿತಾ ಆಗಾಗ್ಗೆ ಪರಸ್ಪರ ಜಗಳಗಳಾಗುವ ಮೂಲಕ ಸುದ್ದಿ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಪತಿಗೆ ಅಂಕಿತಾ ಚಪ್ಪಲಿ ಕೂಡ ಎಸೆದಿದ್ದರು. ಆಹಾರದ ವಿಷಯದಲ್ಲಿ ವಿಕ್ಕಿ ಪತ್ನಿಯ ಕುತ್ತಿಗೆ ಹಿಡಿದು ಓಡಿದ್ದರೆ, ಪತ್ನಿ ಪತಿಯತ್ತ ಎರಡೂ ಚಪ್ಪಲಿ ಎಸೆದಿದ್ದರು. ಕೊನೆಗೆ ಇದು ತಮಾಷೆ ಆಟ ಎನ್ನಲಾಗಿತ್ತು. ಒಟ್ಟಿನಲ್ಲಿ ಹುಚ್ಚಾಟಕ್ಕೆ ಎಲ್ಲೆಯೇ ಇಲ್ಲವಾಗಿದೆ.
ಇದೀಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಲಾಗಿದೆ. ಅದೇನೆಂದರೆ, ಬಿಗ್ ಬಾಸ್ ಇತ್ತೀಚೆಗೆ ಸ್ಪರ್ಧಿಗಳ ಕೊಠಡಿಗಳನ್ನು ಷಫಲ್ ಮಾಡಿದೆ. ವಿಕ್ಕಿ ಜೈನ್ ಅವರನ್ನು ದಿಮಾಗ್ ಕೋಣೆಗೆ ಕಳುಹಿಸಿದರೆ, ಅಂಕಿತಾ ಲೋಖಂಡೆ ದಿಲ್ ರೂಮ್‌ಗೆ ಕಳುಹಿಸಲಾಗಿದೆ. ಒಂದೇ ಕೊಠಡಿಯಲ್ಲಿದ್ದಾಗ ಈಗಾಗಲೇ ಹಲವು ವಿವಾದಗಳನ್ನು ಈ ದಂಪತಿ ಎದುರಿಸುತ್ತಿದ್ದ ಕಾರಣ ಇಬ್ಬರನ್ನೂ ಪ್ರತ್ಯೇಕಗೊಳಿಸಲಾಗಿದೆ. ಇದರ ಹೊರತಾಗಿಯೂ ವಿಕ್ಕಿ ಮತ್ತು ಅಂಕಿತಾ ಒಟ್ಟಿಗೇ ಮಲಗಿದ್ದರು. ಆದರೆ, ಇದನ್ನು ಸಹಿಸದ ಇನ್ನೋರ್ವ ಸ್ಪರ್ಧಿ ವಕೀಲೆಯಾಗಿರುವ ಸನಾ ರಯೀಸ್ ದಂಪತಿಗೆ ಹಾಸಿಗೆ ಹಂಚಿಕೊಳ್ಳಲು ಅವಕಾಶ ನೀಡಲಿಲ್ಲ. ಮಿತಿಮೀರಿದ ಬೆಳಕಿನಿಂದ ದಿಲ್ ಕೋಣೆಯಲ್ಲಿ ಸರಿಯಾಗಿ ಮಲಗಲು ಸಾಧ್ಯವಾಗುತ್ತಿಲ್ಲ ಎಂದು ಸನಾ ರಯೀಸ್ ರೇಗಿದರು ಮತ್ತು ವಿಕ್ಕಿ-ಅಂಕಿತಾ ಅವರು ಕಳೆದ ನಾಲ್ಕು ದಿನಗಳಿಂದ ಮಲಗಿದ್ದ ಹಾಸಿಗೆಯನ್ನು ಖಾಲಿ ಮಾಡುವಂತೆ ದಬಾಯಿಸಿದ್ದಾರೆ. ಏತನ್ಮಧ್ಯೆ, ಅನುರಾಗ್ ಮತ್ತು ಡಿಮಾಗ್ ಕೋಣೆಯ ಇತರ ಸದಸ್ಯರು ಸನಾಗೆ ತಮ್ಮ ಹಾಸಿಗೆಯನ್ನು ನೀಡುವ ಮೂಲಕ ವಿಕ್ಕಿ ಮತ್ತು ಅಂಕಿತಾ ಒಟ್ಟಿಗೇ ಇರಲಿ ಎಂದಿದ್ದಾರೆ. ಆದರೆ ಸನಾ ಮಾತ್ರ ದಂಪತಿ ಒಟ್ಟಿಗೇ ಮಲಗಲು ನಾನು ಬಿಡುವುದಿಲ್ಲ ಎಂದಿದ್ದಾರೆ.
ಸನಾ ಅವರ ವರ್ತನೆಯು ವಿಕ್ಕಿಯನ್ನು ಕೆರಳಿಸಿತು. ಇದು ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಘಟನೆಯಿಂದ ಅಸಮಾಧಾನಗೊಂಡ ಅಂಕಿತಾ ಮಧ್ಯ ಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಲು ಯತ್ನಿಸಿದರು. ಆದಾಗ್ಯೂ, ಸನಾ ಹೊಂದಿಕೊಳ್ಳಲು ನಿರಾಕರಿಸಿದರು, ಮತ್ತು ಅಂಕಿತಾ ಮತ್ತು ವಿಕ್ಕಿ ತಮ್ಮ ತಮ್ಮ ಕೊಠಡಿಗಳಲ್ಲಿ ಮಲಗಬೇಕಾಯಿತು.
ಸದಾ ನಟಿಯರ ಮೈಗೆ ಅಂಟಿಕೊಂಡೇ, ತಬ್ಬಿಕೊಂಡೇ ಇರೋ 'ಡ್ರಗ್ಸ್ ಪ್ರೇಮಿ' ಓರಿ ಬಿಗ್ಬಾಸ್ಗೆ?