ನಿಮ್​ ಲೈಫ್​ನಲ್ಲಿ ನಾನು ಶನಿ ಆಗ್ತೀನಿ, ಆಗಿದ್ದೀನಿ, ಆಗ್ಬೇಕು! ಕಪ್​ ಗೆಲ್ತೇನೆಂದ ಕಾರ್ತಿಕ್ ವಿರುದ್ಧ ಸಿಡಿದೆದ್ದ ಸಿಂಹಿಣಿ

By Suvarna News  |  First Published Jan 23, 2024, 10:03 PM IST

ಫಿನಾಲೆ ಹತ್ತಿರವಾಗುತ್ತಿದ್ದಂತೆಯೇ ಬಿಗ್​ಬಾಸ್​ ಮನೆಯಲ್ಲಿ ಭರ್ಜರಿ ಫೈಟಿಂಗ್​ ಶುರುವಾಗಿದೆ. ಇದೀಗ ಶನಿ ಶಬ್ದದ ಬಗ್ಗೆ ಸಂಗೀತಾ ಮತ್ತು ಕಾರ್ತಿಕ್​ ಹೇಳಿದ್ದೇನು?
 


ಬಿಗ್​ಬಾಸ್​ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆಯೇಎ,  ಮನೆಯೊಳಗಿನ ಸದಸ್ಯರ ನಡುವಿನ ಜಟಾಪಟಿಯೂ ಭರ್ಜರಿಯಾಗಿ ನಡೆಯುತ್ತಿದೆ.  ಮಾಡು ಇಲ್ಲವೇ ಮಡಿ ಹಂತದಲ್ಲಿ ಇದ್ದಾರೆ ಸ್ಪರ್ಧಿಗಳು. ಈ ಹಿನ್ನೆಲೆಯಲ್ಲಿ ಸಿಕ್ಕ ಅವಕಾಶವನ್ನು ತಮ್ಮ ಎದುರಾಳಿಗಳನ್ನು ಕುಗ್ಗಿಸುವುದಕ್ಕೆ, ಅಂತಿಮ ಸ್ಪರ್ಧೆಯ  ದಾರಿಯನ್ನು ಸುಗಮಗೊಳಿಸಿಕೊಳ್ಳುವುದನ್ನು ನೋಡುತ್ತಿದ್ದಾರೆ.  ಬಿಗ್​ಬಾಸ್​ ಮನೆಯಲ್ಲಿ ಸದ್ಯ ಆರು ಸ್ಪರ್ಧಿಗಳು ಇದ್ದು, ಅವರ ನಡುವೆ, ಕಿತ್ತಾಟ ಜೋರಾಗಿ ನಡೀತಿದೆ. ಫಿನಾಲೆ ವಾರದ ಆರಂಭದಲ್ಲಿ ವೈಯುಕ್ತಿಕ ನಿರ್ಧಾರಗಳ ಮೇಲೆ ‘ಬಿಗ್ ಬಾಸ್‌’ ನಾಮಿನೇಷನ್‌ ಪ್ರಕ್ರಿಯೆ ನಡೆಸಿದರು. ಅದಾದ್ಮೇಲೆ ನಾಮಿನೇಷನ್ ಇಲ್ಲ ಅಂತ ‘ಬಿಗ್ ಬಾಸ್‌’ ಟ್ವಿಸ್ಟ್ ಕೊಟ್ಟಿದ್ದಾರೆ. 

ವೈಯುಕ್ತಿಕ ನಿರ್ಧಾರದ ಅನುಸಾರ ಫಿನಾಲೆ ವೇದಿಕೆ ಹತ್ತಲು ಅರ್ಹತೆ ಇಲ್ಲದ ಇಬ್ಬರನ್ನು ಸೂಕ್ತ ಕಾರಣಗಳೊಂದಿಗೆ ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್‌ ಹೇಳಿದ್ದಾಗ, ಕಾರ್ತಿಕ್  ಡ್ರೋನ್ ಪ್ರತಾಪ್, ವರ್ತೂರು ಸಂತೋಷ್
ಅವರನ್ನು ಆಯ್ಕೆ ಮಾಡಿದ್ದರೆ, ಡ್ರೋನ್ ಪ್ರತಾಪ್ ಕಾರ್ತಿಕ್ ಮತ್ತು ವಿನಯ್ ಹೆಸರು ಹೇಳಿದ್ದರು.  ತುಕಾಲಿ ಸಂತೋಷ್​  ಸಂಗೀತಾ ಮತ್ತು ಡ್ರೋನ್ ಪ್ರತಾಪ್ ಹೆಸರು ಹೇಳಿದ್ದರೆ ಸಂಗೀತಾ ಅವರು,  ಕಾರ್ತಿಕ್ ಮತ್ತು ತುಕಾಲಿ ಸಂತು ಹೆಸರು ಹೇಳಿದ್ದರು. ಇನ್ನು, ವರ್ತೂರು ಸಂತೋಷ್ ಆಯ್ಕೆ ಕಾರ್ತಿಕ್ ಮತ್ತು ಸಂಗೀತಾ ಹೆಸರನ್ನು ಹೇಳಿದ್ದರು. ಇವೆಲ್ಲವುಗಳ ನಡುವೆಯೇ ಶನಿ ಎಂಬ ಮಾತು ಕೆಲ ದಿನಗಳಿಂದ ಬಿಗ್​ಬಾಸ್​ನಲ್ಲಿ ಸಕತ್​ ಸೌಂಡ್​ ಮಾಡುತ್ತಿದೆ.

Tap to resize

Latest Videos

ಧ್ರುವ ಸರ್ಜಾ ಚಿತ್ರಕ್ಕೆ ಎಂಟ್ರಿ ಕೊಟ್ಟ ಬಾಲಿವುಡ್​ ಹಾಟ್​ ಬ್ಯೂಟಿ ನೋರಾ ಫತೇಹಿ ! ಏನಿದು ಹೊಸ ವಿಷ್ಯ?

ಸಂಗೀತಾ ಶೃಂಗೇರಿಯನ್ನು ಶನಿ ಎಂದು ಕಾರ್ತಿಕ್​ ಹೇಳಿದ್ದರಿಂದ ಇದು ಬಹಳ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಕಾರ್ತಿಕ್​ ಉಲ್ಟಾ ಹೊಡೆದಿದ್ದರು. ಕಿಚ್ಚನ ಪಂಚಾಯಿತಿಯಲ್ಲಿಯೂ  ಕಾರ್ತಿಕ್ ಮಾತಿಗೆ ಕಿಚ್ಚ ಗರಂ ಆಗಿದ್ದರು.  ಅಷ್ಟಕ್ಕೂ ಬಿಗ್ ಬಾಸ್  ಆರಂಭದಿಂದಲೂ ಸಂಗೀತಾ ಹಾಗೂ ವಿನಯ್ ಇಬ್ಬರ ನಡುವೆ ಕಿತ್ತಾಟ ನಡೆಯುತ್ತಲೇ ಇದೆ.  ಒಂದು ಹಂತದಲ್ಲಿ ಕಾರ್ತಿಕ್​ ಸಂಗೀತಾ ಅವರಿಗೆ ಶನಿ ಹೇಳಿದ್ದು ಸ್ವಲ್ಪ ಜೋರಾಗಿ ಗಲಾಟೆಯಾಗಿತ್ತು.

ಇದೀಗ ಬಿಗ್​ಬಾಸ್​ ಸಿಂಹಿಣಿ ಎಂದೇ ಖ್ಯಾತಿ ಪಡೆದಿರುವ ಸಂಗೀತಾ ಕಾರ್ತಿಕ್​ ವಿರುದ್ಧ ಅದೇ ಶನಿಯ ಮಾತನ್ನು ಇಟ್ಟುಕೊಂಡು ಗರ್ಜಿಸಿದ್ದಾರೆ. ಅತ್ತ ಕಾರ್ತಿಕ್​ ನಾನು ಯಾರನ್ನೂ ಗೆಲ್ಲಿಸಲು ಬರಲಿಲ್ಲ, ಬದಲಿಗೆ ನಾನೇ ಕಪ್​ ತೆಗೆದುಕೊಂಡು ಹೋಗಲು ಬಂದಿದ್ದು ಎನ್ನುತ್ತಾರೆ. ಆಗ ಸಂಗೀತಾ ಸಿಟ್ಟಿನಲ್ಲಿ ಶನಿಯ ವಿಷಯವನ್ನು ಕೆದಕಿ, ನಿಮ್​ ಲೈಫ್​ನಲ್ಲಿ ನಾನು ಶನಿ ಆಗ್ತೀನಿ, ಆಗಿದ್ದೀನಿ, ಆಗ್ಬೇಕು ಎಂದಿದ್ದಾರೆ. ಇದರ ಪ್ರೊಮೋ ಅನ್ನು ಬಿಗ್​ಬಾಸ್​ ರಿಲೀಸ್​ ಮಾಡಿದೆ. ಈ ನಡುವೆ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳ ಗೆಲುವಿಗೆ ಅಭಿಮಾನಿಗಳು ಹೊರಗಡೆ ಭರ್ಜರಿ ಪೈಪೋಟಿ ಶುರು ಮಾಡಿದ್ದಾರೆ. 

ಸೈಫ್‌ ಅಲಿ ಡಿಸ್‌ಚಾರ್ಜ್‌: ರಾಮನ ಪ್ರಾಣಪ್ರತಿಷ್ಠೆ ವೇಳೆ ರಾವಣ ಪಾತ್ರಧಾರಿಗೆ ಏನಾಯ್ತು? ನಟ ಹೇಳಿದ್ದೇನು?
 

click me!