ನಾನು ಕಾಮೆಂಟ್ ಮಾಡಿದ್ರೆ ಉಚ್ಚೆ ಹೊಯ್ಕಂಬಿಡಬೇಕು: ಡ್ರೋನ್‌ ಪ್ರತಾಪ್‌ ಪರ ನಿಂತವರಿಗೆ ರಕ್ಷಕ್‌ ಬುಲೆಟ್ ಟಾಂಗ್

By Vaishnavi Chandrashekar  |  First Published Jan 23, 2024, 4:12 PM IST

ಬಿಗ್ ಬಾಸ್ ಮನೆಯಲ್ಲಿ ಪ್ರತಾಪ್‌ ಜೊತೆ ಮತ್ತೆ ಕಿರಿಕಿರಿ ಮಾಡಿಕೊಂಡ ರಕ್ಷಕ್‌. ಡ್ರೋನ್ ಪ್ರತಾಪ್ ಆಕ್ಟಿಂಗ್ ಮಾಡುತ್ತಿರುವುದು ನಿಜವೇ?


ಬಿಗ್ ಬಾಸ್ ಸೀಸನ್ 10 ಫಿನಾಲೆ ವಾರಕ್ಕೆ ಕಾಲಿಟ್ಟಿದೆ. ಕೆಲವು ದಿನಗಳ ಹಿಂದೆ ಎಲಿಮಿನೇಟ್ ಅಗಿರುವ ಸ್ಪರ್ಧಿಗಳು ಮತ್ತೆ ರೀ- ಎಂಟ್ರಿ ಕೊಟ್ಟಿದ್ದರು. ಆಗ ಹಳೆ ವಿಚಾರವೊಂದನ್ನು ರಕ್ಷಕ್ ಬುಲೆಟ್‌ ಬೇಕೆಂದು ಡ್ರೋನ್ ಪ್ರತಾಪ್ ಜೊತೆ ಚರ್ಚೆ ಮಾಡುತ್ತಾರೆ. ಈ ವಿಚಾರವನ್ನು ವೀಕೆಂಡ್‌ನಲ್ಲಿ ಸುದೀಪ್ ಕೂಡ ಚರ್ಚೆ ಮಾಡಿದ್ದರು. ಆಗ ಸಂದರ್ಶನದಲ್ಲಿ ಕ್ಷಮೆ ಕೇಳಿದ ರಕ್ಷಕ್ ಮತ್ತೊಂದು ಸಂದರ್ಶನದಲ್ಲಿ ಮತ್ತೆ ಟ್ರೋಲ್ ಮಾಡುವವರಿಗೆ ಟಾಂಗ್ ಕೊಟ್ಟಿದ್ದಾರೆ. ಯಾರಿಗೂ ಗೊತ್ತಿರದ ಸತ್ಯವನ್ನು ರಿವೀಲ್ ಮಾಡಿದ್ದಾರೆ.

'ಹೊರಗಡೆ ಜನರು ಚರ್ಚೆ ಮಾಡ್ತಾನೆ ಇರ್ತಾರೆ ಅದಕ್ಕೆ ಉತ್ತರ ಕೊಡುತ್ತಾ ಕೂತರೆ ನಮಗೆ ವಯಸ್ಸಾಗುತ್ತದೆ. ಎಲ್ಲಾ ಸಾವಿರ ಮಾತನಾಡುತ್ತಾರೆ. ಕಾಮೆಂಟ್ ನಾನು ಕೊಡಬೇಕು ಅಂದ್ರೆ ಎಲ್ಲಾ ಉಚ್ಚೆ ಹೊಯ್ಕಂಬಿಡಬೇಕು. ಯಾವುದೇ ಸ್ಟೇಟ್ಮೆಂಟ್‌ ನೀಡುವ ಮುನ್ನ ಯೋಚನೆ ಮಾಡಬೇಕು. ಬಿಗ್ ಬಾಸ್ ಮನೆಯಲ್ಲಿ ನಾನು ಇದ್ದರೆ ಖಂಡಿತಾ ಅಕ್ಕ ಪಕ್ಕ ಯೋಚನೆ ಮಾಡದೆ ನೇರವಾಗಿ ಮಾತನಾಡುತ್ತಿದ್ದೆ. ಬಿಗ್ ಬಾಸ್ ನೋಡುತ್ತಿರಲಿಲ್ಲ ಅದರೆ ಅಂದು ಅದೇ ವಾರ ನೋಡಿದೆ, ಪ್ರತಾಪ್ ಈ ಹೇಳಿಕೆ ನೀಡಿ ಸಿಗಾಕೊಂಡ್ರು. ತಕ್ಷಣವೇ ಸ್ಟೋರಿಗೆ ಬರೆದುಕೊಂಡು ಹಾಕಿಕೊಂಡೆ ಅದು ಸಖತ್ ವೈರಲ್ ಆಗಿತ್ತು. ಪ್ರತಾಪ್‌ಗೆ ನಾನು ಟಾಂಗ್‌ ಕೊಟ್ಟಿಲ್ಲ ನೇರವಾಗಿ ಹೇಳಿದ್ದೀನಿ. ಅವರೇನು ಮಿನಿಸ್ಟ್ರಾ? ಸಿಎಂ? ಪ್ರಧಾನ ಮಂತ್ರಿನಾ? ಅಥವಾ ಯಾವುದಾದರೂ ದೊಡ್ಡ ಪೋಸ್ಟ್‌ನಲ್ಲಿಇದ್ದಾರಾ? ಡೋಂಗಿ ಮಾಡಿರುವವರನ್ನು ಅ ಸ್ಥಾನದಲ್ಲಿ ಕೂರಿಸಿದ್ದೀರಾ. ದೇಶಕ್ಕೆ ಪಂಗನಾಮ ಬಳಿದು ಬೇರೆ ದೇಶಕ್ಕೆ ಹೋದವನು. ದೊಡ್ಡ ಕೆಲಸ ಏನು ಮಾಡಿಲ್ಲ. ಡ್ರೋನ್‌ ನೀನು ಹುಟ್ಟುಹಾಕಿದ್ದರೆ ನೀನು ಬ್ರ್ಯಾಂಡ್ ಅಂಬಾಸಿಡರ್‌ ಆಗುಲು ಸಾಧ್ಯ...ನಾನು ರಕ್ಷಕ್ ಬುಲೆಟ್‌ ಎಂದು ಹಾಕಿಕೊಂಡಿರುವೆ ಹಾಗಂತ ಬುಲೆಟ್‌ ಕ್ರಿಯೇಟ್ ಮಾಡಿದ್ದೇ ನಾನು ಅಂತ ಹೇಳಿಕೊಂಡು ಓಡಾಡಲು ಆಗುತ್ತಾ?' ಎಂದು ರಕ್ಷಕ್ ಬುಲೆಟ್ ಕನ್ನಡ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Tap to resize

Latest Videos

ಬಿಗ್ ಬಾಸ್ ಸಂಭಾವನೆ ವಿಚಾರದಲ್ಲಿ ಬಕ್ರಾ ಆಗ್ಬಿಟ್ಟೆ, ಒಂದು ಟನ್ ಇಟ್ಟಿಗೆನೂ ಬರಲ್ಲ: ರಕ್ಷಕ್ ಬುಲೆಟ್

'ಪ್ರತಾಪ್‌ ಪಕ್ಕಾ ಆಕ್ಟಿಂಗ್ ಮಾಡ್ತಾನೆ, ಒಳ್ಳೆ ಸಿನಿಮಾ ಮಾಡ್ಬೋದು. ಯಾವ ಸಮಯದಕ್ಕೆ ಕಣ್ಣೀರು ಇಡಬೇಕು ಯಾರ ಜೊತೆ ಚೆನ್ನಾಗಿರಬೇಕು ಯಾರ ಜೊತೆ ಜಗಳ ಮಾಡಬೇಕು ಅನ್ನೋ ಲೆಕ್ಕಾಚಾರ ಗೊತ್ತಿದೆ. ವಿನಯ್ ಸುತ್ತ ಮುತ್ತ ಇರುವವರು ಮನೆಗೆ ಹೋದ್ರು ಎಂದು ಹೇಳಿಕೆ ಕೊಡುತ್ತಾರೆ. ಆದರೆ ವರ್ತೂರ್ ಸಂತೋಷ ಹೊರ ಹೋಗುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ರೂಲ್ ಬುಕ್ ಇದೆ ಅದರಲ್ಲಿ 24 ಗಂಟೆಗಳ ನಂತರ ಒಬ್ಬ ಸ್ಪರ್ಧಿ ಹೊರ ಹೋದ ಮೇಲೆ ಮತ್ತೆ ಒಳಗೆ ಬರುವಂತಿಲ್ಲ. ವರ್ತೂರ್ ಸಂತೋಷ್ ಹೋಗಿದ್ದರು, ವರ್ತೂರ್ ಮೇಲೆ ಬೇಸರವಿಲ್ಲ. ಪ್ರತಾಪ್ ಹೊರ ಹೋಗಿ ಬಂದಿದ್ದರು, ಸಂಗೀತಾ ಹೊರ ಹೋಗಿ ಬಂದಿದ್ದಾರೆ, ತನಿಷಾ ಹೋಗಿದ್ದಾರೆ...ಪ್ರತಾಪ್ ಎರಡು ಮೂರು ಸಲ ಹೋಗಿದ್ದಾರೆ. ವಿನಯ್ ತಂಡದಲ್ಲಿ ಯಾರೂ ಹೊರ ಹೋಗಿಲ್ಲ...ಹೋದವರು ಮತ್ತೆ ಒಳಗೆ ಬಂದಿಲ್ಲ. ಇದು ನ್ಯಾಯನಾ? ಅವರೇ ಹಾಕಿರುವ ರೂಲ್‌ನ ಅವರೇ ಬ್ರೇಕ್ ಮಾಡುತ್ತಿದ್ದಾರೆ. ಹಳೆ ಸೀಸನ್ ಒಬ್ಬರು ವ್ಯಕ್ತಿ ಹೇಳಿದ್ದರು..ಹೊರ ಹೋಗಿದ್ದಾಗ ಹೇಗೆ ಆಟ ಆಡಬೇಕು ಎಂದು ಹೇಳಿಕೊಡುತ್ತಾರಂತೆ' ಎಂದು ಬುಲೆಟ್‌ ರಕ್ಷಕ್ ಹೇಳಿದ್ದಾರೆ. 

ಬುಲೆಟ್ ಪ್ರಕಾಶ್ ಕಟ್ಟಿಸಿದ್ದ ಐಷಾರಾಮಿ ಮನೆ ಮಾರಿದ ಪುತ್ರ; ಜನರ ಟೀಕೆಗೆ ಉತ್ತರ ಕೊಟ್ಟ ರಕ್ಷಕ್

click me!