ನಿಮ್ಮ ಮುಖದಲ್ಲಿ ಮೂಡಿರುವ ಮಂದಹಾಸವನ್ನು ನೋಡಿದರೇನೇ ನೀವು ಮಕ್ಕಳನ್ನು ಅದೆಷ್ಟು ಇಷ್ಟಪಡುತ್ತೀರಿ ಎಂದು ಅರ್ಥವಾಗುತ್ತದೆ ಎಂದು ಬರೆದಿದ್ದರೆ, ಇನ್ನೊಬ್ಬರು 'ಮತ್ತೆ ಸೀರಿಯಲ್ ಮಾಡಬಹುದಿತ್ತಲ್ಲ ಜೆಕೆ ಸರ್..
ಸ್ಯಾಂಡಲ್‌ವುಡ್ ನಟ ಕಾರ್ತಿಕ್ ಜಯರಾಮ್ (ಜೆಕೆ) ಅವರು ಒಂದು ಮುದ್ದಾದ ಬೇಬಿಯನ್ನು ಎತ್ತಿಕೊಂಡು ಖುಷಿ ಪಡುತ್ತಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. 'ಮುಧುಶ್ರೀ ಮಲ್ಲೇಶ್' ಇನ್ಸ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋಗೆ ಬಹಳಷ್ಟು ಲೈಕ್ಸ್ ಹಾಗೂ ಕಾಮೆಂಟ್‌ಗಳು ಹರಿದುಬರುತ್ತಿವೆ. ಜೆಕೆ (Karthik Jayaram) ಎತ್ತಿಕೊಂಡು ಮುದ್ದು ಮಾಡುತ್ತಿರುವ ಪಾಪು ಯಾರದು ಎಂಬುದು ಹಲವರ ಪ್ರಶ್ನೆ.
ಈವೀಡಿಯೋ ಪೋಸ್ಟ್ ಮಾಡಿರುವ ಮಧುಶ್ರೀ ಎಂಬವರು 'ಥ್ಯಾಂಕ್ಯೂ ಸೂಪರ್ ಸ್ಟಾರ್ ಜೆಕೆ, ಯು ಮೇಡ್ ಮೈ ಡೇ' ಎಂದು ವೀಡೀಯೋಗೆ ಕ್ಯಾಪ್ಶಶ್ ಕೊಟ್ಟಿದ್ದಾರೆ. ಅಭಿಮಾನಿಯ ಮಗುವನ್ನು ಎತ್ತಿಕೊಂಡು ಖುಷಿ ಅನುಭವಿಸುತ್ತಿರುವ ಜೆಕೆ ಅವರನ್ನು ನೋಡಿ, ಅವರ ಹಲವು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ವಿಭಿನ್ನವಾಗಿ ಮೆಚ್ಚುಗೆ ಸೂಚಿಸಿದ್ದಾರೆ, ಅವರಲ್ಲೊಬ್ಬರು, ನಿಮ್ಮ ಮುಖದಲ್ಲಿ ಮೂಡಿರುವ ಮಂದಹಾಸವನ್ನು ನೋಡಿದರೇನೇ ನೀವು ಮಕ್ಕಳನ್ನು ಅದೆಷ್ಟು ಇಷ್ಟಪಡುತ್ತೀರಿ ಎಂದು ಅರ್ಥವಾಗುತ್ತದೆ ಎಂದು ಬರೆದಿದ್ದರೆ, ಇನ್ನೊಬ್ಬರು 'ಮತ್ತೆ ಸೀರಿಯಲ್ ಮಾಡಬಹುದಿತ್ತಲ್ಲ ಜೆಕೆ ಸರ್, ಅಶ್ವಿನಿ ನಕ್ಷತ್ರದಲ್ಲಂತೂ ನಿಮ್ ಆಕ್ಟಿಂಗ್ ಸೂಪರ್' ಎಂದು ಬರೆದಿದ್ದಾರೆ.
ಬೃಂದಾವನ ವೈಂಡ್‌ಅಪ್ ಆಗೋಕೆ ವರುಣ್ ಆರಾಧ್ಯ ಕಾರಣನಾ? ಏನಂದ್ರು ರಾಮ್‌ಜಿ?
ತಮ್ಮ ಈ ಭೇಟಿ ಬಗ್ಗೆ ಸ್ಟಾರ್ ನಟ ಜೆಕೆ ಅವರೇ ಏಷ್ಯಾನೆಟ್ ಸುವರ್ಣ ವೆಬ್‌ಗೆ 'ಆ ಬೇಬಿ ನನ್ನ ಫ್ಯಾನ್ ಧನು ಎಂಬುವವರ ಮಗಳು. ಧನು-ಮಧುಶ್ರೀ ದಂಪತಿಯ ಮುದ್ದು ಮಗುವನ್ನು ನೋಡಿ ಖುಷಿ ಪಟ್ಟ ಸಂತಸದ ಕ್ಷಣದ ವೀಡೀಯೋ ಅದು' ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಮಗುವನ್ನು ನೋಡಿದ ಜೆಕೆ ಅವರಿಗೆ ಎಷ್ಟು ಖುಷಿಯಾಗಿದೆಯೋ ಅಷ್ಟೇ ಖುಷಿ ಆ ಕ್ಯೂಟ್ ಕಂದಮ್ಮನಿಗೂ ಆಗಿದೆ ಎಂದು ಆ ಪುಟ್ಟ ಮಗುವಿನ ನಗುವಿನಲ್ಲೂ ಅರ್ಥವಾಗುತ್ತದೆ. ಒಟ್ಟಿನಲ್ಲಿ, ನಟ ಜೆಕೆ ವೀಡಿಯೋಗೆ ಹಲವು ಮೆಚ್ಚುಗೆ ಕಾಮೆಂಟ್‌ಗಳು ಹರಿದು ಬಂದಿವೆ.
'ಕುಚು ಕುಚೂ' ಡೈಲಾಗ್ ಬಗ್ಗೆ ಪ್ರೇಮಾ ಹೇಳಿದ್ದೇನು; ಉಪೇಂದ್ರ ಚಿತ್ರದಲ್ಲಿ ವೇಶ್ಯೆ ಪಾತ್ರ ಮಾಡಿದ್ದಕ್ಕೆ ರಿಗ್ರೆಟ್?
ಅಂದಹಾಗೆ, ನಟ ಜೆಕೆ ಅವರು ಇತ್ತೀಚೆಗಷ್ಟೇ ತಮ್ಮ ಕ್ರಿಕೆಟ್ ಟೂರ್ನಮೆಂಟ್ ಮುಗಿಸಿ ಎಂದಿನಂತೆ ನಟನೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಅವರು ಕನ್ನಡದ ಕಿರುತೆರೆಯಲ್ಲಿ ನಟಿಸಿದ್ದ 'ಅಶ್ವಿನಿ ನಕ್ಷತ್ರ' ಸೀರಿಯಲ್ ಅದೆಷ್ಟು ಜನಪ್ರಿಯತೆ ಪಡೆದಿತ್ತು ಎಂದರೆ, ಈಗಲೂ ಕನ್ನಡ ಕಿರುತೆರೆ ಪ್ರೇಕ್ಷಕರು ಜೆಕೆ ಪಾತ್ರದ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ.
ಶಿವಣ್ಣ 'ಜೋಗಿ' ಸಿನಿಮಾ ಬಗ್ಗೆ ನಟ ವಿಷ್ಣುವರ್ಧನ್ ಭವಿಷ್ಯ ಏನಿತ್ತು? ಆಮೇಲೆ ಏನಾಯ್ತು?
ಬಳಿಕ ಅವರು ಹಿಂದಿಯ ಝೀ ಟಿವಿನಲ್ಲಿ ನಟಿಸಿದ ರಾವಣ ಪಾತ್ರವಂತೂ ಇಡೀ ದೇಶದ ಜನರ ಮೆಚ್ಚುಗೆ ಗಳಿಸಿದೆ. ಆ ಪಾತ್ರ ಅದೆಷ್ಟು ನೈಜವಾಗಿ ಬಂದಿದೆ ಎಂದರೆ, ಎಷ್ಟೋ ಜನರು 'ರಾವಣ ಎಂದ ಕೂಡಲೇ ಜೆಕೆ ಅವರನ್ನೇ ನೆನಪು ಮಾಡಿಕೊಳ್ಳುವುಷ್ಟು' ಎಂಬುದು ಅತಿಶಯೋಕ್ತಿ ಅಲ್ಲ.