ಅಪ್ಪು ನಿಧನರಾದಾಗ ರಮ್ಯಾ ಎಲ್ಲಿದ್ರು? ಪುನೀತ್ ಜೊತೆಗಿನ ನೆನೆಪು ಬಿಚ್ಚಿಟ್ಟು ಭಾವುಕರಾದ ಮೋಹಕತಾರೆ

By Shruthi Krishna  |  First Published Mar 26, 2023, 11:23 AM IST

ಅಪ್ಪು ನಿಧನರಾದಾಗ ರಮ್ಯಾ ಎಲ್ಲಿದ್ರು? ಪುನೀತ್ ಜೊತೆಗಿನ ನೆನೆಪು ಬಿಚ್ಚಿಟ್ಟು ಭಾವುಕರಾದ ಮೋಹಕತಾರೆ 


ಕನ್ನಡ ಕಿರುತೆರೆಯ ಜನಪ್ರಿಯ ಶೋಗಳಲ್ಲಿ ವೀಕೆಂಡ್ ವಿತ್ ರಮೇಶ್ ಕೂಡ ಒಂದು. ಈಗಾಗಲೇ ನಾಲ್ಕು ಯಶಸ್ವಿ ಸೀಸನ್‌ಗಳನ್ನು ಮುಗಿಸಿರುವ ವೀಕೆಂಡ್ ವಿತ್ ರಮೇಶ್ ಇದೀಗ 5ನೇ ಸೀಸನ್ ಮೂಲಕ ಮತ್ತೆ ವಾಪಾಸ್ ಆಗಿದೆ. ಈ ಸೀಸನ್‌ನ ಮೊದಲ ಅತಿಥಿಯಾಗಿ ವೀಕೆಂಡ್ ಕುರ್ಚಿಯಲ್ಲಿ ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಕುಳಿತಿದ್ದಾರೆ. ಸಾಧಕರ ಕುರ್ಚಿಯಲ್ಲಿ ರಮ್ಯಾ ಅವರನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಮ್ಯಾ ಅವರ ಸಂಚಿಕೆ ಹೇಗಿರಲಿದೆ ಎಂದು ಪ್ರೇಕ್ಷಕರು ಕಾತರರಾಗಿದ್ದರು. ಕೊನೆಗೂ ರಮ್ಯಾ ಸಂಚಿಕೆ ಪ್ರಸಾರವಾಗಿದೆ. ಸ್ಯಾಂಡಲ್‌ವುಡ್ ಕ್ವೀನ್ ಬಗ್ಗೆ ಅನೇಕ ವಿಚಾರಗಳು ಅನಾವರಣವಾಗಿದೆ. ಬಾಲ್ಯ, ಶಾಲಾದಿನಗಳು, ಸಿನಿಮಾ ಎಂಟ್ರಿ ಸೇರಿದಂತೆ ಅನೇಕ ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ವಿಶೇಷವಾಗಿ ಸಿನಿಮಾರಂಗದ ಬೆಸ್ಟ್ ಫ್ರೆಂಡ್, ಮೊದಲ ಕೋಸ್ಟಾರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆ ಮಾತನಾಡಿ ರಮ್ಯಾ ಭಾವುಕರಾಗಿದ್ದಾರೆ.

ಸಿನಿಮಾರಂಗದಿಂದ ದೂರ ಆದ ಬಳಿಕವೂ ಪುನೀತ್ ರಾಜ್ ಕುಮಾರ್ ಸಂಪರ್ಕದಲ್ಲಿದ್ದರು, ಫೋನ್ ಮಾಡ್ತಿದ್ರು ಎಂದು ಅಪ್ಪುನ ನೆನಪಿಸಿಕೊಂಡರು. ರಮ್ಯಾ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದು ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯಿಂದ. ಅಷ್ಟಕ್ಕೂ ರಮ್ಯಾ ಮೊದಲು ಆಡಿಷನ್ ಕೊಟ್ಟಿದ್ದು ಅಪ್ಪು ಸಿನಿಮಾಗೆ. ಆದರೆ ಆಡಿಷನ್ ನಲ್ಲಿ ರಮ್ಯಾ ಸೆಲೆಕ್ಟ್ ಆಗಿಲ್ಲ. ಬಳಿಕ ಮತ್ತೆ ರಾಘವೇಂದ್ರ ರಾಜ್ ಕುಮಾರ್ ಅವರು ರಮ್ಯಾ ಅವರನ್ನು ಸಂಪರ್ಕ ಮಾಡಿ ಅಭಿ ಸಿನಿಮಾಗೆ ಆಯ್ಕೆ ಮಾಡಿದರು. ಬಳಿಕ ಅಭಿ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು ರಮ್ಯಾ. ಪುನೀತ್ ರಾಜ್ ಕುಮಾರ್‌ಗೆ ನಾಯಕಿಯಾಗಿ ಕಾಣಿಸಿಕೊಂಡರು. ಅಲ್ಲಿಂದ ಅಪ್ಪು ಮತ್ತು ರಮ್ಯಾ ಸ್ನೇಹ ಪ್ರಾರಂಭವಾಯಿತು. 

ರಮ್ಯಾ ಯಾಕಿಷ್ಟ ಆಗ್ತಾರೆ ಎಂದು ಕನ್ನಡದಲ್ಲೇ ಪತ್ರ ಬರೆದ ನಟಿ ಪೂಜಾ ಗಾಂಧಿ

Tap to resize

Latest Videos

ರಮ್ಯಾ ಮತ್ತು ಅಪ್ಪು ಇಬ್ಬರೂ ಬೆಸ್ಟ್ ಫ್ರೆಂಡ್. ಮೂರು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಅಭಿಮಾನಿಗಳ ನೆಚ್ಚಿನ ಜೋಡಿಗಳಲ್ಲಿ ರಮ್ಯಾ ಮತ್ತು ಅಪ್ಪು ಜೋಡಿ ಕೂಡ ಒಂದು. ತೆರೆಮೇಲೆ ಇಬ್ಬರ ಕೆಮಿಸ್ಟ್ರಿ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತಿತ್ತು. ರಮ್ಯಾ ಸಿನಿಮಾರಂಗದಿಂದ ದೂರ ಆದ ಮೇಲು ಇಬ್ಬರ ಸ್ನೇಹ ಹಾಗೆ ಮುಂದುವರೆದಿತ್ತು. ವೀಕೆಂಡ್ ವಿತ್ ರಮೇಶ್‌ನಲ್ಲಿ ರಮ್ಯಾ ಈ ಎಲ್ಲಾ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಅಪ್ಪು ನೆನೆದು ಭಾವುಕರಾಗಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದಾಗ ರಮ್ಯಾ ಗೋವಾದಲ್ಲಿ ಇದ್ದರಂತೆ. ಅಪ್ಪು ಇನ್ನಿಲ್ಲ ಎನ್ನುವ ಸುದ್ದಿ ಕೇಳಿದಾಗ ಮೊದಲು ನಂಬಿರಲಿಲ್ಲ ಎಂದು ರಮ್ಯಾ ಹೇಳಿದ್ದಾರೆ. 

ಮೋಹಕ ತಾರೆ ರಮ್ಯಾಗೆ ಪ್ರಾಣ ಕಂಟಕ ಎದುರಾಗಿತ್ತಾ? ಏನದು ಘಟನೆ?

'ಸ್ನೇಹಿತರೊಬ್ಬರು ಕರೆ ಮಾಡಿ ಅಪ್ಪು ಇನ್ನಿಲ್ಲ ಎಂದರು. ನೀವು ತಪ್ಪು ತಿಳಿದುಕೊಂಡಿದ್ದೀರಿ ಅನ್ಸುತ್ತೆ. ಯಾರೋ ಬೇರೆ ಇರಬೇಕು ಎಂದು ಹೇಳಿದೆ. ಅವರಿಗೆ ಸಿನಿಮಾರಂಗದ ಸಂಪರ್ಕ ಇರಲಿಲ್ಲ. ಬಳಿಕ ಮತ್ತೆ ಫೋನ್ ಮಾಡಿ ಹೌದು ಅಪ್ಪು ಇನ್ನಿಲ್ಲ ಎಂದರು. ನನಗೆ ಶಾಕ್ ಆಯಿತು. ನಾನು ಬಳಿಕ ಸ್ನೇಹಿತರಿಗೆ ಕರೆ ಮಾಡಿ ತಿಳಿದುಕೊಂಡೆ. ಅಲ್ಲಿಂದ ಹೊರಟೆ' ಎಂದು ಹೇಳಿದರು. ಅಪ್ಪು ಜೊತೆಗಿನ ವಿಡಿಯೋ ನೋಡಿ ರಮ್ಯಾ ಕಣ್ಣುಗಳು ತುಂಬಿ ಬಂದಿತ್ತು. ಅಪ್ಪು ಯಾವಾಗಲೂ ಜೊತೆಯಲ್ಲೇ ಇರುತ್ತಾರೆ, ಇವತ್ತಿಗೂ ಅಪ್ಪು ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜೊತೆಯಲ್ಲೇ ಇದ್ದಾರೆ ಎಂದು ರಮ್ಯಾ ಹೇಳಿದರು. 

click me!