ನನಗೆ ಗರ್ಭಪಾತವಾಗಿದೆ ಎಂದು ಹೇಳಿದರೂ ಕೆಲಸಕ್ಕೆ ಕರೆದರು, ಮರುದಿನವೇ ನಾನು ಶೂಟಿಂಗ್‌ಗೆ ಹೋದೆ, ಸಾಕ್ಷಿಯನ್ನು ತೋರಿಸಬೇಕಾಯಿತು ಎಂದು ಸ್ಮೃತಿ ಹಳೆಯ ಘಟನೆ ಬಹಿರಂಗಪಡಿಸಿದ್ದಾರೆ.
ನಟಿ, ರಾಜಕಾರಣಿ ಸ್ಮೃತಿ ಇರಾನಿ ಹಳೆಯ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಶೂಟಿಂಗ್ ಸಮಯದಲ್ಲಿ ಎಷ್ಟು ಕಷ್ಟ ಅನುಭವಿಸಿದ್ದರೂ ಎನ್ನುವುದನ್ನು ರಾಜಕಾರಣಿ ಸ್ಮೃತಿ ಬಹಿರಂಗ ಪಡಿಸಿದ್ದಾರೆ. ಗರ್ಭಪಾತವಾಗಿದ್ದರೂ ಕೆಲಸಕ್ಕೆ ಬರಬೇಕು ಎಂದು ಹೇಳಿದ್ದ ಘಟನೆಯನ್ನು ಸ್ಮೃತಿ ವಿವರಿಸಿದ್ದಾರೆ. ನಿರ್ಮಾಪಕಿ ಏಕ್ತಾ ಕಪೂರ್ ಅವರಿಗೆ ಸಾಕ್ಷಿ ಕೂಡ ತೋರಿಸಬೇಕಾಯಿತು ಎಂದು ಸ್ಮೃತಿ ಹೇಳಿದ್ದಾರೆ. ಸ್ಮೃತಿ ರಾಮಾಯಣ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದರು. ನಿರ್ದೇಶಕ ರವಿ ಚೋಪ್ರಾ ರೆಸ್ಟ್ ಮಾಡಿ ಎಂದು ಹೇಳಿದ್ದ ಘಟನೆಯನ್ನು ನೆನಪಿಸಿಕೊಂಡರು.
ಸ್ಮೃತಿ ಇರಾನಿ, ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ತುಳಸಿ ವಿರಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರ ಸ್ಮೃತಿ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತ್ತು. ಅದೇ ಸಮಯದಲ್ಲಿ ಸ್ಮೃತಿ ರಾಮಾಯಣದಲ್ಲಿ ದೇವಿ ಲಕ್ಷ್ಮಿ ಮತ್ತು ಸೀತೆಯಾಗಿ ಕಾಣಿಸಿಕೊಂಡಿದ್ದರು. ಆ ಧಾರಾವಾಹಿಯ ಚಿತ್ರೀಕರಣ ಅನುಭವದ ಬಗ್ಗೆ ಸ್ಮೃತಿ ಇರಾನಿ ಇತ್ತೀಚೆಗಿನ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು. ಗರ್ಭಪಾತವಾದಾಗ ಮಾನವೀಯತೆಯ ಬಗ್ಗೆ ಹೇಗೆ ಪಾಠ ಕಲಿತರು ಎಂಬುದರ ಕುರಿತು ಮಾತನಾಡಿದ್ದಾರೆ.
'ನಾನು ಗರ್ಭಿಣಿಯಾಗಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ. ನಾನು ಸೆಟ್‌ನಲ್ಲಿದ್ದೆ (ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ) ಮತ್ತು ನನಗೆ ಶೂಟಿಂಗ್ ಮಾಡಲು ಆಗುತ್ತಿರಲಿಲ್ಲ ಎಂದು ಅವರಿಗೆ ಹೇಳಿದೆ. ಮೆಗೆ ಹೋಗುತ್ತೇನೆ ಎಂದು ಹೇಳಿದೆ. ನನ್ನನ್ನು ಮನೆಗೆ ಹೋಗುಂತೆ ಹೇಳುವಷ್ಟೊತ್ತಿಗೆ ಸಂಜೆ ಆಗಿತ್ತು. ಒಂದು ಆಟೋ ನಿಲ್ಲಿಸಿ ಡ್ರೈವರ್‌ಗೆ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕೇಳಿದೆ, ನಾನು ಆಸ್ಪತ್ರೆ ತಲುಪಿದೆ, ನನಗೆ ರಕ್ತಸ್ರಾವವಾಗುತ್ತಿತ್ತು. ಆಸ್ಪತ್ರೆಯಸಲ್ಲಿ ನರ್ಸ್ ಓಡಿ ಬಂದರು, ಆಟೋಗ್ರಾಫ್ ಕೇಳಿದರು. ನಾನು ಅವಳಿಗೆ ಆಟೋಗ್ರಾಫ್ ಕೊಟ್ಟು, ಹೇಳಿದೆ ನನಗೆ ಗರ್ಭಪಾತ ಆಗುತ್ತಿದೆ ನನ್ನನ್ನು ಅಡ್ಮಿಟ್ ಮಾಡಿಕೊಳ್ಳಿ ಎಂದು ಹೇಳಿದೆ' ಎಂದು ಹೇಳಿದರು.
ಸ್ನೇಹಿತೆಯ ಪತಿಗೇ ಹೃದಯ ಕೊಟ್ಟ ನಟಿ, ಸಚಿವೆ ಸ್ಮೃತಿ ಇರಾನಿ
ಆ ಸಮಯದಲ್ಲಿ ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಧಾರಾವಾಹಿ ತಂಡದಿಂದ ಕರೆ ಬಂದಿದ್ದನ್ನು ನೆನಪಿಸಿಕೊಂಡರು. ಗರ್ಭಪಾತವಾಗಿರುವ ವಿಚಾರ ಹೇಳಿದ್ರೂ ಕೆಲಸಕ್ಕೆ ಬರುವಂತೆ ಹೇಳಿದ ಘಟನೆ ವಿವರಿಸಿದರು. ಸ್ಮೃತಿ ಆಗ ಹಗಲು ರಾತ್ರಿ ಕೆಲಸ ಮಾಡುತ್ತಿದ್ದರು. ನಿರ್ದೇಶಕ ರವಿ ಚೋಪ್ರಾ ಬಳಿ ಪರಿಸ್ಥಿತಿ ವಿವರಿಸಿದರು. ರವಿ ಚೋಪ್ರಾ ವಿಶ್ರಾಂತಿ ಪಡೆಯುವಂತೆ ಹೇಳಿದರು. 'ನೀವು ನಿಮ್ಮ ಮನಸ್ಸನ್ನು ಕಳೆದುಕೊಂಡಿದ್ದೀರಾ. ಮಗವನ್ನು ಕಳೆದುಕೊಳ್ಳುವ ನೋವು ತಿಳಿದಿದೆ. ನೀವು ಅನುಭವಿಸುತ್ತಿದ್ದೀರಿ. ನಾಳೆ ನೀವು ಕೆಲಸ ಬರವ ಅಗತ್ಯವಿಲ್ಲ. ಶೂಟಿಂಗ್ ಮಾಡಲು ಸಾಧ್ಯವಿಲ್ಲ' ಎಂದು ಹೇಳಿದರು.
ಸ್ಮೃತಿ ಇರಾನಿ ಅವರ ಮಗಳ ಮದುವೆ ರಿಸೆಪ್ಷನ್‌ನಲ್ಲಿ ಶಾರುಖ್ ಖಾನ್; ಫೋಟೋ ವೈರಲ್
ಏಕ್ತಾ ಕಪೂರ್ ಅವರ ಕ್ಯುಂಕಿ ಸಾಸ್ ಭೀ ಕಭಿ ಬಹು ಥಿ ಧಾರಾವಾಹಿ ಶೂಟಿಂಗ್‌ಗೆ ಮರಳುವುದಾಗಿ ಸ್ಮೃತಿ ನಿರ್ದೇಶಕ ರವಿ ಚೋಪ್ರಾಗೆ ಹೇಳಿದರು. ವಿಶ್ರಾಂತಿ ಮಾಡುವಂತೆ ಹೇಳಿದರು. ಆದರೆ ಸ್ಮೃತಿ ಏಕ್ತಾ ಕಪೂರ್ ನಿರ್ಮಾಣದ ಧಾರಾವಾಹಿ ಶೂಟಿಂಗ್‌ಗೆ ಹೋದರು. ಆದರೆ ಅಲ್ಲಿ ಗರ್ಭಪಾತವಾಗಿರುವುದು ಸುಳ್ಳು ಎಂದು ಸಹ ಕಲಾವಿದರು ನಿರ್ಮಾಪಕರಿಗೆ ಹೇಳಿದ್ದರು. 'ನನ್ನ ಮನೆಗೆ EMI ಗಳನ್ನು ಪಾವತಿಸಲು ನನಗೆ ಹಣದ ಅಗತ್ಯವಿದ್ದುದರಿಂದ ನಾನು ಮತ್ತೆ ಕೆಲಸಕ್ಕೆ ಹೋಗಿದ್ದೆ ಎಂದು ಅವರಿಗೆ ತಿಳಿದಿರಲಿಲ್ಲ. ಮರುದಿನ, ಇದು ಸುಳ್ಳು ಅಲ್ಲ ಎಂದು ಹೇಳಲು ನಾನು ಏಕ್ತಾಗೆ ನನ್ನ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ತೆಗೆದುಕೊಂಡು ಹೋದೆ. ಅವಳು ಇದನ್ನೆಲ್ಲ ತೋರಿಸಬೇಡ ಎಂದು ಹೇಳಿದಳು. ನಾನು ಅವಳಿಗೆ ಹೇಳಿದೆ ಭ್ರೂಣ ಇದ್ದಿದ್ದರೂ ನಾನು ತೋರಿಸುತ್ತಿದ್ದೆ ಎಂದು ಹೇಳಿದೆ' ಅಂತ ಸ್ಮೃತಿ ಹಳೆಯ ಘಟನೆಯನ್ನು ಮತ್ತೊಮ್ಮೆ ಬಿಚ್ಚಿಟ್ಟರು.