ಭಾಗ್ಯಳಿಗೆ ಅಭಿನಂದನೆ ಸಲ್ಲಿಸಲು ಬರ್ತಿದ್ದಾರೆ ಸ್ಯಾಂಡಲ್​ವುಡ್​​ ಪ್ರಣಯರಾಜ! ಅತ್ತೆ ಕೂಲ್​ ಆಗ್ತಾಳಾ?

By Suchethana D  |  First Published Jul 1, 2024, 5:47 PM IST

ಭಾಗ್ಯ ತನಗೆ ತಿಳಿಸದೇ ಕೆಲಸ ಮಾಡುತ್ತಿರುವ ವಿಷಯ ಕೇಳಿ ಕುಸುಮಾಗೆ ಸಿಟ್ಟುಬಂದಿದೆ. ಅವಳ ಸಿಟ್ಟನ್ನು ತಣಿಸಿ ಭಾಗ್ಯಳಿಗೆ ಪ್ರೋತ್ಸಾಹಿಸಲು ಸ್ಯಾಂಡಲ್​ವುಡ್​ ಪ್ರಣಯರಾಜನ ಎಂಟ್ರಿ ಆಗಲಿದೆ!
 


ಸದ್ಯ ಭಾಗ್ಯಳ ಮನೆಯಲ್ಲಿ ಮೌನದ ವಾತಾವರಣ. ಭಾಗ್ಯಳಿಗೆ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಸಿಕ್ಕಿರುವ ಸುದ್ದಿ ಟಿ.ವಿಯಲ್ಲಿ ಬ್ರೇಕಿಂಗ್​ ಬಂದಾಗ ಮನೆಯವರೆಲ್ಲಾ ಕುಣಿದು ಕುಪ್ಪಳಿಸಿದ್ದರೂ ಅತ್ತೆ ಕುಸುಮಾ ಸಿಟ್ಟಿನಿಂದ ಒಳಕ್ಕೆ ಹೋಗಿದ್ದಾಳೆ. ತಾಂಡವ್​ ಮುಖ ಇಂಗು ತಿಂದ ಮಂಗನಂತಾಗಿದೆ.  ಭಾಗ್ಯಳ ಅಮ್ಮ, ಮಕ್ಕಳು ಮತ್ತು ಮಾವಂದಿರು ಸಂಭ್ರವನ್ನೇನೋ ದ ಸಂಭ್ರಮದ ಆಚರಣೆ. ಎಲ್ಲರೂ ಕುಣಿದು ಕುಣಿದು ಕುಪ್ಪಳಿಸುತ್ತಿರುವ ಸಮಯದಲ್ಲಿಯೇ ಅತ್ತೆ ಕುಸುಮಾ ಎಂಟ್ರಿಯಾಗಿದೆ. ಟಿ.ವಿ. ನೋಡಿ ಅವಳಿಗೆ ಶಾಕ್​ ಆಗಿಬಿಟ್ಟಿದೆ. ಖುಷಿಯನ್ನೂ ಪಡಲಾಗದೇ, ಸಿಟ್ಟನ್ನೂ ಹತ್ತಿಕ್ಕಲಾಗದೇ ಬಿಸಿತುಪ್ಪ ಆಗಿಬಿಟ್ಟಿದೆ ಈ ಸುದ್ದಿ. ಇನ್ನು ತಾಂಡವ್​ನೋ ಇಂಗುತಿಂದ ಮಂಗನಂತಾಗಿ ಬ್ರೇಕಿಂಗ್​ ಸುದ್ದಿ ಕೇಳಿ ಹಾರ್ಟೇ ಬ್ರೇಕ್​  ಆಗಿ ಹೋಗಿದೆ!  ಕುಸುಮಾ ಸಿಟ್ಟುಮಾಡಿಕೊಂಡಿರುವ ಕಾರಣ, ಇಡೀ ಮನೆಯಲ್ಲಿ ಈಗ ಮೌನದ ವಾತಾವರಣ. ಅಮ್ಮನ ಸಿಟ್ಟು ನೋಡಿ ತಾಂಡವ್​ಗೆ ಖುಷಿಯೋ ಖುಷಿ. ಭಾಗ್ಯಳಿಗೆ ಹಬ್ಬ ಇದೆ ಎಂದೇ ಅಂದು ಅವನು ಅಂದುಕೊಂಡಿದ್ದಾನೆ.

ಅದೇ ಇನ್ನೊಂದೆಡೆ ಶ್ರೇಷ್ಠಾ ಕೂಡ ಟಿ.ವಿ ನೋಡಿ ಶಾಕ್​ ಆಗಿದ್ದಾಳೆ. ಪೂಜಾ ಭಾವುಕಳಾಗಿ ಕಣ್ಣೀರು ಹಾಕಿದ್ದಾಳೆ. ತನ್ನ ಸುದ್ದಿ ಟಿ.ವಿಯಲ್ಲಿ ಬಂದಿರುವ ವಿಷಯ ನೋಡಿ ಖುದ್ದು ಭಾಗ್ಯಳಿಗೂ ಶಾಕ್​ ಆಗಿದೆ. ಅತ್ತೆಗೆ ವಿಷಯ ಗೊತ್ತಾದರೆ ಏನು ಮಾಡುವುದು ಎಂದು ಟೆನ್ಷನ್​ನಲ್ಲಿ ಇದ್ದಾಳೆ. ಈಗ ಅವಳ ಟೆನ್ಷನ್​ ದೂರ ಮಾಡಲು ಸ್ಯಾಂಡಲ್​ವುಡ್​ ಪ್ರಣಯರಾಜನ ಎಂಟ್ರಿ ಆಗುತ್ತಿದೆ. ಭಾಗ್ಯಳನ್ನು ಅಭಿನಂದಿಸಿ, ಕುಸುಮಾಳನ್ನು ತಣ್ಣಗಾಗಿಸಲು ಶ್ರೀನಾಥ್​ ಅವರು ಸಕ್ಸಸ್​ ಆಗ್ತಾರಾ ಎನ್ನುವುದು ಈಗಿರುವ ಕುತೂಹಲ. 

Tap to resize

Latest Videos

ಸಪ್ತಪದಿಯ ಜೊತೆಗೇ ಎಂಟನೇ ಹೆಜ್ಜೆ ಇಟ್ಟ ಸೀತಾ-ರಾಮ: ವನವಾಸಕ್ಕೆ ಕಳುಹಿಸಲು ಮಾಸ್ಟರ್​ ಪ್ಲ್ಯಾನ್​!

ಅಷ್ಟಕ್ಕೂ ತನಗೆ ಕೆಲಸ ಸಿಕ್ಕಿರುವ  ವಿಷಯವನ್ನು ಭಾಗ್ಯ ಮಕ್ಕಳಿಗೆ ಹೇಳಿದ್ದಳು. ಆದರೆ ಅತ್ತೆಗೆ ತಾನು ಕೆಲಸಕ್ಕೆ ಹೋಗುವುದು ಇಷ್ಟವಿಲ್ಲ ಎನ್ನುವ ಕಾರಣಕ್ಕೆ ಹೇಳಿರಲಿಲ್ಲ. ಆದರೆ ಇದೀಗ ಕುಸುಮಾಳಿಗೂ ವಿಷಯ ಗೊತ್ತಾಗಿ ಶಾಕ್​ ಆಗಿದೆ. ಸೊಸೆಯ ಮೇಲೆ ಕೋಪ ಪಡುವ ಹಾಗೂ ಇಲ್ಲ, ಅವಳನ್ನು ಹೊಗಳುವಂತೆಯೂ ಇಲ್ಲ ಎನ್ನುವ ಸ್ಥಿತಿ ಅವಳದ್ದು. ಮುಂದೆ ಹೇಗೆ ರಿಯಾಕ್ಟ್​ ಮಾಡುತ್ತಾಳೋ ಕಾದು ನೋಡಬೇಕಿದೆ. ಪತ್ನಿಯನ್ನು ಟಿ.ವಿಯಲ್ಲಿ ನೋಡಿ ಹೊಟ್ಟೆಉರಿಯಿಂದಿರುವ ಗಂಡ ತಾಂಡವ್​ ಅಲ್ಲಿಯೂ ತನ್ನ ನರಿಬುದ್ಧಿ ಬಿಟ್ಟಿಲ್ಲ. ಇವಳು ನಮ್ಮ ಮನೆಯ ಮರ್ಯಾದೆ ತೆಗೆಯುವುದಕ್ಕಾಗಿಯೇ ಹುಟ್ಟಿದ್ದಾಳೆ ಎಂದು ಮನೆಯವರ ಎದುರು ಹೇಳಿದ್ದಾನೆ. 

ಅಮ್ಮನಿಗೆ ಈ ವಿಷಯ ಗೊತ್ತಿಲ್ಲ ಎನ್ನುವ ಕಾರಣಕ್ಕೆ ಭಾಗ್ಯಳ ವಿರುದ್ಧ ಅವಳನ್ನು ಎತ್ತಿಕಟ್ಟುವ ತಂತ್ರ ಇದಾಗಿದೆ. ಮುಂದೆ ಕುಸುಮಾ ಏನು ಅನ್ನುತ್ತಾಳೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಅವಳು ಕೂಡ ಸೊಸೆಗೆ ಸಪೋರ್ಟ್​ ಮಾಡುತ್ತಾಳೆ ಎನ್ನುವುದು ಬಹುತೇಕ ಮಂದಿಯ ಅಭಿಪ್ರಾಯ. ಈಗ ಶ್ರೀನಾಥ್​ ಅವರು ಭಾಗ್ಯಳನ್ನು ವಿಷ್​ ಮಾಡಿದಾಗ ಕುಸುಮಾ ಕೂಡ ಸೊಸೆಗೆ ಭೇಷ್​ ಎನ್ನುತ್ತಾಳೆ ಎಂದು ಹೇಳಲಾಗುತ್ತಿದೆ. 

ಮೇಘನಾ ಫಿಲ್ಮ್​ಗೆ ಎಂಟ್ರಿ ಕೊಟ್ಟಿದ್ದು ನಮಗೆ ಬೇಸರವಾಗಿತ್ತು, ಆದ್ರೆ... ಅಪ್ಪ ಸುಂದರರಾಜ್​ ಮನದಾಳದ ಮಾತು

click me!