ಮೈಮೇಲೆ ಕೆಜಿಗಟ್ಟಲೆ ಚಿನ್ನವನ್ನು ಧರಿಸಿ, ಐಷಾರಾಮಿ ಕಾರಿನಲ್ಲಿ ಓಡಾಡುತ್ತಾ, ಎಕೆ-47 ಬಂದೂಕು ಹಿಡಿದ ಇಬ್ಬರು ಗನ್ ಮ್ಯಾನ್‌ಗಳನ್ನು ಇಟ್ಟುಕೊಂಡು ಶೋಕಿಗಾಗಿ ರೀಲ್ಸ್ ಮಾಡುತ್ತಿದ್ದವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ಜು.01): ಮೈಮೇಲೆ ಕೆಜಿಗಟ್ಟಲೆ ಚಿನ್ನವನ್ನು ಧರಿಸಿ, ಐಷಾರಾಮಿ ಕಾರಿನಲ್ಲಿ ಓಡಾಡುತ್ತಾ, ಎಕೆ-47 ಬಂದೂಕು ಹಿಡಿದ ಇಬ್ಬರು ಗನ್ ಮ್ಯಾನ್‌ಗಳನ್ನು ಇಟ್ಟುಕೊಂಡು ಶೋಕಿಗಾಗಿ ರೀಲ್ಸ್ ಮಾಡುತ್ತಿದ್ದವನನ್ನು ಬೆಂಗಳೂರು ಪೊಲೀಸರು ಜೈಲಿಗೆ ಕಳಿಸಿ ಕಂಬಿ ಎಣಿಸಲು ಬಿಟ್ಟಿದ್ದಾರೆ.
ಹೌದು, ರೀಲ್ಸ್ ಮಾಡುವವರು ತಾವಾಯ್ತು, ತಮ್ಮ ಪ್ರತಿಭೆ ಆಯ್ತು ಪ್ರದರ್ಶನ ಮಾಡಿಕೊಂಡಿರಬೇಕು. ರೀಲ್ಸ್ ಶೋಕಿಗಾಗಿ ಸಾರ್ವಜನಿಕ ಸ್ಥಳದಲ್ಲಿ ನ್ಯೂಸೆನ್ಸ್ ಕ್ರಿಯೇಟ್ ಮಾಡಿದ್ರೆ ಮಾತ್ರೆ ಪೊಲೀಸರು ಸುಮ್ಮನಿರಲ್ಲ. ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯದಲ್ಲಿ ಕೆಲವು ಶ್ರೀಮಂತ ಉದ್ಯಮಿಗಳು ಮತ್ತು ಅವರ ಮಕ್ಕಳು ಮೈಮೇಲೆ 5 ರಿಂದ 10 ಕೆ.ಜಿ. ಬಂಗಾರದ ಆಭರಣನ್ನು ಧರಿಸಿ ಗನ್ ಮ್ಯಾನ್‌ಗಳನ್ನು ಇಟ್ಟುಕೊಂಡು ಶೋಕಿ ಮಾಡುತ್ತಾರೆ. ಅದೇ ರೀತಿ ಅರುಣ್ ಕಟಾರೆ ಕರ್ನಾಟಕದಲ್ಲಿ ಕೆ.ಜಿ.ಗಟ್ಟಲೆ ಬಂಗಾರವನ್ನು ಮೈಮೇಲೆ ಧರಿಸಿಕೊಂಡು ಶೋಕಿ ಮಾಡುವ ರೀಲ್ಸ್ ಮಾಡಲು ಮುಂದಾಗಿದ್ದನು. ಇನ್ನು ಉತ್ತರ ಕರ್ನಾಟಕದ ಗಡಿಭಾಗದಲ್ಲಿ ಶೋಕಿ ಮಾಡುತ್ತಿದ್ದವನು ಈಗ ಬೆಂಗಳೂರಿಗೂ ಬಂದಿದ್ದಾನೆ. ಈತನ ಶೋಕಿ ರೀಲ್ಸ್ ನೋಡಿದ ಬೆಂಗಳೂರಿನ ಖಾಕಿ ಪಡೆ ನಕಲಿ ಶೋಕಿದಾರನನ್ನು ಹೆಡೆಮುರಿಕಟ್ಟಿ ಜೈಲಿಗೆ ಹಾಕಿದ್ದಾರೆ.
undefined
ಮೂರೇ ವರ್ಷದಲ್ಲಿ ನಾನು ಹೇಗೆ ಬೆಳೆದೆ ಎಂದು ಎಲ್ಲರೂ ಕೇಳುತ್ತಾರೆ. ಅದರ ಹಿಂದೆ....: ರಕ್ಷಕ್ ಬುಲೆಟ್ ವಿಡಿಯೋ ರಿಲೀಸ್!
ಬೆಂಗಳೂರಿನಲ್ಲಿ ರಿಲ್ಸ್ ಶೋಕಿ ಮಾಡಿದವನಿಗೆ ಪೊಲೀಸರು ಜೈಲೂಟ ಕೊಟ್ಟಿದ್ದಾರೆ. ಹೌದು, ಗನ್ ಮ್ಯಾನ್, ದುಬಾರಿ ಕಾರುಗಳು, ಬಾಡಿಗಾರ್ಡ್ಸ್ ವಿತ್ ವೆಪನ್ ಶೋಕಿ ಮಾಡುವುದು ಈತನ ಖಯಾಲಿಯಾಗಿದೆ. ಮೈಮೇಲೆ ಕೆಜಿಗಟ್ಟಲೆ ಚಿನ್ನಾಭರಣ ಹಾಕಿಕೊಂಡು ಬೆಂಗಳೂರಿನಲ್ಲಿ ಶೋ ಕೊಡಲು ಹೋಗಿದ್ದ ರೀಲ್ಸ್ ಸ್ಟಾರ್ ಜೈಲು ಸೇರಿದ್ದಾನೆ. ಬೆಂಗಳೂರು ಪೊಲೀಸರು ರೀಲ್ಸ್ ಸ್ಟಾರ್ ಅರುಣ್ ಕಟಾರೆ ಎಂಬುವನನ್ನು ಬಂಧಿಸಿದ್ದಾರೆ. ಕೊತ್ತನೂರು ಪೊಲೀಸರಿಂದ ಅರುಣ್ ಕಟಾರೆ ಬಂಧನವಾಗಿದೆ. ಎಕೆ 47 ಮಾದರಿಗೆ ನಕಲಿ ಗನ್ ಹಿಡಿದು ರಸ್ತೆಯಲ್ಲಿ ಶೋ ಅಪ್ ಮಾಡಿದ್ದಾರೆ. ಅರುಣ್ ಕಟಾರೆ ಶೋ ಅಪ್‌ಗೆ ಬೆದರಿದ ಸಾರ್ವಜನಿಕರಿಗೆ ಆತಂಕ ಸೃಷ್ಟಿಯಾಗಿದೆ. ಬೆಂಗಳೂರಿನ ವಿವಿಧೆಡೆ ಮೇಲಿಂದ ಮೇಲೆ ಈ ರೀತಿಯಲ್ಲಿ ಶೋ ಅಪ್ ಕೊಡುತ್ತಿದ್ದವನ ಬಗ್ಗೆ ಮಾಹಿತಿ ಬೆಂಗಳೂರು ನಿವಾಸಿಗಳು ರೌಡಿ ಚಟುವಟಿಕೆ ಮಾಡುತ್ತಿದ್ದಾರೆ ಎಂದು ಕೊತ್ತನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಒಂದೂ ಮಾತು ಕೇಳಲಿಲ್ಲ.. ಎನ್ನುತ್ತಲೇ ಬುಲೆಟ್ ರಾಣಿ ಅನುಶ್ರೀ ಎಂಟ್ರಿ: ಯಜಮಾನ ಎಲ್ಲಿ ಎಂದ ಫ್ಯಾನ್ಸ್!
ಇದೇ ಸಮಯದಲ್ಲಿ ರೌಡಿ ಚಟುವಟಿಕೆಗಳು ಮತ್ತು ಹಳೆಯ ಎಂಓಬಿಗಳ ಮೇಲೆ ನಿಗಾ ವಹಿಸುತ್ತಿದ್ದ ಕೊತ್ತನೂರು ಪೊಲೀಸರಿಗೆ ಎಕೆ-47 ಬಂದೂಕು ಹಿಡಿದು ಓಡಾಡುವವರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇನ್ನು ಸ್ಥಳೀಯ ಬಾತ್ಮಿದಾರರಿಂದ ಬಂದ ಮಾಹಿತಿ ಮೇರೆಗೆ ಅರುಣ್ ಕಟಾರೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಅರುಣ್ ಕಟಾರೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಇದು ನಕಲಿ ಗನ್ ಎಂದು ಬಾಯಿ ಬಿಟ್ಟಿದ್ದಾನೆ. ಇನ್ನು ನಕಲಿ ಗನ್ ಹಿಡಿದು ಏರಿಯಾದಲ್ಲಿ ಆತಂಕ ಸೃಷ್ಟಿಸಿದ ಹಿನ್ನೆಲೆಯಲ್ಲಿ ರೀಲ್ಸ್ ಸ್ಟಾರ್ ಅರುಣ್ ವಿರುದ್ಧ ಆರ್ಮ್ಸ್ ಕಾಯ್ದೆ 290 ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಪೊಲೀಸರು ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದು, ರೀಲ್ಸ್ ಶೋಕಿಗೆ ಬಿದ್ದು ಪರಪ್ಪನ ಅಗ್ರಹಾರ ಸೇರಿದ್ದಾನೆ.