ಕನಸು ಈಡೇರಿತು, ವಿಡಿಯೋ ಸಮೇತ ಗುಡ್‌ನ್ಯೂಸ್ ಹಂಚಿಕೊಂಡ ಬಿಗ್‌ಬಾಸ್ ಖ್ಯಾತಿಯ ಮೈಕಲ್

By Mahmad Rafik  |  First Published Jul 1, 2024, 5:27 PM IST

ಬಿಗ್‌ಬಾಸ್‌ನಿಂದ ಒಳ್ಳೆಯ ಹೆಸರು ಪಡೆದುಕೊಂಡು ಹೊರ ಬಂದವರಲ್ಲಿ ಎಲ್ಲರೂ ತಮ್ಮ ಕನಸುಗಳತ್ತ ಬೆನ್ನಟ್ಟಿ ಹೊರಟಿದ್ದಾರೆ. ಬಹುದಿನಗಳ ಕನಸು ಈಡೇರಿದ ಕುರಿತು ಮೈಕಲ್ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. 


ಬೆಂಗಳೂರು: ಕನ್ನಡ ಬಿಗ್‌ಬಾಸ್ ರಿಯಾಲಿಟಿ ಶೋ (Kannada Bigg Boss) ಸ್ಪರ್ಧಿಯಾಗಿದ್ದ ಮೈಕಲ್ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಜೊತೆಯಲ್ಲಿ ತಮ್ಮ ಕನಸು ನನಸು ಆಗಿರೋ ಗುಡ್‌ನ್ಯೂಸ್ ಹಂಚಿಕೊಂಡಿದ್ದಾರೆ. ಕಳೆದ ಬಾರಿಯ ಬಿಗ್‌ಬಾಸ್‌ನಲ್ಲಿ ತಮ್ಮ ಫಿಜಿಕಲ್ ಟಾಸ್ಕ್‌ಗಳಿಂದಲೇ ಮೈಕಲ್ (michaelajay) ಫೇಮಸ್ ಆಗಿದ್ದರು. ಬಿಗ್‌ಬಾಸ್‌ನಿಂದ ಒಳ್ಳೆಯ ಹೆಸರು ಪಡೆದುಕೊಂಡು ಹೊರ ಬಂದವರಲ್ಲಿ ಎಲ್ಲರೂ ತಮ್ಮ ಕನಸುಗಳತ್ತ ಬೆನ್ನಟ್ಟಿ ಹೊರಟಿದ್ದಾರೆ. ವರ್ತೂರು ಸಂತೋಷ್ ಕೃಷಿಯಲ್ಲಿ ಬ್ಯುಸಿಯಾಗಿದ್ರೆ, ತುಕಾಲಿ ಸಂತೋಷ್ ಅದೇ ವಾಹಿನಿಯ ಮತ್ತೊಂದು ಶೋನಲ್ಲಿ ಭಾಗಿಯಾಗಿದ್ದಾರೆ. ಇನ್ನು ತನಿಷಾ ತಮ್ಮದೇ ಸ್ವಂತ ಆಭರಣ ಮಳಿಗೆ ಆರಂಭಿಸಿದ್ದಾರೆ. ಅದೇ ರೀತಿ ಎಲ್ಲರೂ ತಮ್ಮದೇ ಆದ ಬದುಕು ಕಟ್ಟಿಕೊಳ್ಳುವತ್ತ ಹೊಸ ಹೆಜ್ಜೆಯನ್ನು ಇರಿಸುತ್ತಿದ್ದಾರೆ. 

ಬಿಗ್‌ಬಾಸ್‌ನಿಂದ ಹೊರ ಬಂದ ಬಳಿಕ ಮೈಕಲ್ ಜಿಮ್‌ನಲ್ಲಿ ದೇಹ ದಂಡಿಸುವ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದರು. ಇದೀಗ ತಮ್ಮ ಬಹುದಿನಗಳ ಕನಸು ಈಡೇರಿದ ಕುರಿತು ಮೈಕಲ್ ವಿಡಿಯೋ ಪೋಸ್ಟ್ ಮಾಡಿಕೊಂಡಿದ್ದಾರೆ. ಹೌದು, ಬೆಂಗಳೂರಿನ ಹೆಚ್‌ಎಸ್ಆರ್ ಲೇಔಟ್‌ನಲ್ಲಿ ಮೈಕಲ್ ಹೊಸ ಬರ್ಗರ್ ಶಾಪ್ ಆರಂಭಿಸಿದ್ದಾರೆ

Tap to resize

Latest Videos

Build Your Own Burger ಎಂಬ ಯುನಿಕ್ ಹೆಸರು

ಬರ್ಗರ್ ಶಾಪ್‌ನ ಪೂಜೆಯ ವಿಡಿಯೋ ಹಾಗೂ ಅಲ್ಲಿಗೆ ಆಗಮಿಸಿದ ಅತಿಥಿಗಳ ವಿಡಿಯೋವನ್ನು ಮೈಕಲ್ ಹಂಚಿಕೊಂಡಿದ್ದಾರೆ. ಬಿಗ್‌ಬಾಸ್ ವಿನ್ನರ್ ಕಾರ್ತಿಕ್, ಸಹ ಸ್ಪರ್ಧಿ ವಿನಯ್ ಗೌಡ ಆಗಮಿಸಿ ಮೈಕಲ್‌ಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಅದೇ ರೀತಿ ಇಲ್ಲಿಯ ಬರ್ಗರ್‌ ರುಚಿ ತುಂಬಾ ವಿಭಿನ್ನವಾಗಿದೆ ಎಂದು ಗ್ರಾಹಕರು ಹೇಳೋದನ್ನು ವಿಡಿಯೋದಲ್ಲಿ ನೋಡಬಹುದು. ಬರ್ಗರ್ ಶಾಪ್‌ಗೆ Build Your Own Burger ಎಂದು ಯುನಿಕ್ ಆಗಿ ಹೆಸರಿಡಲಾಗಿದೆ. 

ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

Build Your Own Burger ಶಾಪ್ ಆರಂಭಕ್ಕೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದು, ಒಳ್ಳೆಯ ವ್ಯಾಪಾರ ಆಗಲಿ ಎಂದು ಶುಭ ಹಾರೈಸಿದ್ದಾರೆ. ಬರ್ಗರ್ ಶಾಪ್ ನೋಡಲು ಕಲರ್‌ಫುಲ್ ಆಗಿದ್ದು, ಯುವ ಸಮುದಾಯಕ್ಕೆ ಒಳ್ಳೆಯ ಆಹಾರ ಮಳಿಗೆ ಸಿಕ್ಕಂತೆ ಆಗಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಬಿಗ್‌ಬಾಸ್ ವೇದಿಕೆ ಮೇಲೆ ನಟ ಸುದೀಪ್ ಜೊತೆ ಕ್ಲಿಕ್ಕಿಸಿಕೊಂಡಿರವ ಫೋಟೋವನ್ನು ಮೈಕಲ್ ಅಂಗಡಿಯಲ್ಲಿ ಹಾಕಿಕೊಂಡಿದ್ದಾರೆ. ನಾವು ಶೀಘ್ರದಲ್ಲಿಯೇ ಬರ್ಗರ್ ತಿನ್ನಲು ಬರೋದಾಗಿ ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ಇನ್ನು ಬಿಗ್‌ಬಾಸ್ ವಿನ್ನರ್ ಆಗಿರೋ ಕಾರ್ತಿಕ್ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗಷ್ಟೇ ಸುದೀಪ್ ಅವರೇ ಕಾರ್ತಿಕ್ ಸಿನಿಮಾಗೆ ಶುಭ ಕೋರಿದ್ದರು. ವಿನಯ್‌ ಗೌಡ ಅವರನ್ನ ಹಲವು ಸಿನಿಮಾಗಳು ಅರಸಿ ಬಂದಿವೆ. ಬರ್ಗರ್ ಶಾಪ್ ಜೊತೆಯಲ್ಲಿ ಮೈಕಲ್ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ.

click me!