ಬಿಗ್ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಅವರ ಯಾರಿಗೂ ತಿಳಿಯದ ಎರಡು ಸೀಕ್ರೆಟ್ಗಳನ್ನು ನಮ್ರತಾ ರಿವೀಲ್ ಮಾಡಿದ್ದಾರೆ. ಏನದು?
ಬಿಗ್ಬಾಸ್ ಸೀಸನ್ 10 ಮುಗಿದು ತಿಂಗಳುಗಳೇ ಆದರೂ, ವೀಕ್ಷಕರೂ ಅದರಿಂದ ಹೊರಬಂದಿಲ್ಲ, ಜೊತೆಗೆ ಬಿಗ್ಬಾಸ್ ಸ್ಪರ್ಧಿಗಳಿಗೆ ಈಗ ಭರ್ಜರಿ ಡಿಮ್ಯಾಂಡೂ ಬರುತ್ತಿದೆ. ಹಲವಾರು ಕಾರ್ಯಕ್ರಮಗಳಲ್ಲಿ ಈ ಸ್ಪರ್ಧಿಗಳಿಗೆ ಆಹ್ವಾನ ನೀಡಲಾಗುತ್ತಿದೆ. ಅದರಲ್ಲಿಯೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಿರುವ ಬಹುತೇಕ ರಿಯಾಲಿಟಿ ಷೋಗಳಿಗೆ ಇವರದ್ದೇ ಕಾರುಬಾರು. ಇವರನ್ನು ಕರೆಸಿದರೆ ಕಾರ್ಯಕ್ರಮಗಳಿಗೆ ಟಿಆರ್ಪಿ ರೇಟ್ ಹೆಚ್ಚುವುದು ಸಾಮಾನ್ಯವಾಗಿದ್ದರಿಂದ ಬಿಗ್ಬಾಸ್ ಸ್ಪರ್ಧಿಗಳಿಗೆ ಡಿಮ್ಯಾಂಡೋ ಡಿಮ್ಯಾಂಡ್.
ಇನ್ನೇನು ಯುಗಾದಿ ಬರ್ತಾ ಇದೆ. ಈ ಸಂದರ್ಭದಲ್ಲಿ ಕಲರ್ಸ್ ಕನ್ನಡ ವಾಹಿನಿ ಯುಗಾದಿ ಸೆಲೆಬ್ರೇಷನ್ ಜೋರಾಗಿ ಮಾಡಿದೆ. ಇದರಲ್ಲಿ ಕೂಡ ಹೈಲೈಟ್ ಆಗಿರುವುದು ಬಿಗ್ಬಾಸ್ ಸೀಸನ್ 10ನ ಕೆಲವು ಸ್ಪರ್ಧಿಗಳು. ತುಕಾಲಿ ರಮೇಶ್, ನಮ್ರತಾ ಗೌಡ, ತನಿಷಾ ಸೇರಿದಂತೆ ಕೆಲವು ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದಾರೆ. ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. ಇದರಲ್ಲಿ ಕೆಲವು ತಮಾಷೆಯ ಘಟನೆಗಳನ್ನು ಶೇರ್ ಮಾಡಲಾಗಿದೆ.
ಕೋಟಿ ಕೋಟಿ ಬೆಲೆಬಾಳೋ ಕಾರು, ಹೋಗ್ತಾ ಬರ್ತಾ ಡ್ರೈವರ್ ಸೆಲ್ಯೂಟ್...ಅಬ್ಬಾ...ನಮ್ಗೆ ಇವೆಲ್ಲಾ ಹಿಂಸೆನಪ್ಪಾ...
ಬಿಗ್ಬಾಸ್ನಲ್ಲಿ ಸದಾ ತಮಾಷೆ ಎಂದರೆ ನೆನಪಾಗುವುದು ತುಕಾಲಿ ಸಂತೋಷ್. ಅವರನ್ನು ವೇದಿಕೆ ಮೇರೆ ಬರಮಾಡಿಕೊಂಡಿರುವ ಆ್ಯಂಕರ್, ಅವರ ಕುರಿತು ಏನಾದರೂ ಬೇರೆಯವರಿಗೆ ಆಗದ ವಿಷಯವನ್ನು ಹೇಳುವಂತೆ ನಮ್ರತಾ ಅವರಿಗೆ ಕೇಳಿದ್ದಾರೆ. ಆಗ ನಮ್ರತಾ, ತುಕಾಲಿ ಅವರ ಕುರಿತು ಎರಡು ತಮಾಷೆಯ ವಿಷಯಗಳನ್ನು ಹೇಳಿದ್ದಾರೆ. ಅದೇನೆಂದರೆ, ತುಕಾಲಿ ಅವರಿಗೆ ಗ್ಯಾಸ್ ಪ್ರಾಬ್ಲೆಮ್ ಜಾಸ್ತಿ. ಬಿಗ್ಬಾಸ್ ಮನೆಯಲ್ಲಿಯೂ ಅವರು ಯಾವಾಗ ಬೇಕೆಂದ್ರೆ ಆವಾಗ ಗ್ಯಾಸ್ ಬಿಡ್ತಾ ಇದ್ರು. ಅದಕ್ಕೆ ಅವರ ಪಕ್ಕದಲ್ಲಿ ಇರೋದೇ ಕಷ್ಟವಾಗಿತ್ತು ಎಂದಿದ್ದಾರೆ. ಇದನ್ನು ಕೇಳುತ್ತಿದ್ದಂತೆಯೇ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದಾರೆ. ಮತ್ತೊಂದು ವಿಷಯ ಏನೆಂದರೆ, ತುಕಾಲಿ 2-3 ದಿನಕ್ಕೆ ಒಮ್ಮೆ ಸ್ನಾನ ಮಾಡುತ್ತಾರೆ. ಬಿಗ್ಬಾಸ್ನಲ್ಲಿ ಇರುವಾಗ ಹೀಗೆ ಮಾಡುತ್ತಿದ್ರು. ಸ್ನಾನ ಮಾಡಲು ಹೇಳಿದ್ರೆ ಯಾಕೆ ಒತ್ತಾಯ ಮಾಡ್ತೀರಿ ಅಂತ ಕೇಳ್ತಾ ಇದ್ರು ಎಂದಿದ್ದಾರೆ.
ಇದೇ ವೇಳೆ ನಮ್ರತಾ ಗೌಡ, ಎಲ್ಲಾ ಬಿಗ್ಬಾಸ್ ಸ್ಪರ್ಧಿಗಳನ್ನು ಯುಗಾದಿಗೆ ತಮ್ಮ ಮನೆಗೆ ಕರೆದಿರುವುದಾಗಿ ಹೇಳಿದ್ದಾರೆ. ಬಿಗ್ಬಾಸ್ ಮನೆಯೊಳಕ್ಕೆ ಇರುವ ಸಮಯದಲ್ಲಿ ಯಾರೂ ಚೆನ್ನಾಗಿ ಮಾತನಾಡಲಿಲ್ಲ. ಅದಕ್ಕಾಗಿ ಈಗಾದ್ರೂ ಮಾತನಾಡುತ್ತಾರಾ ನೋಡಲು ಎಲ್ಲರನ್ನೂ ಕರೆದಿರುವುದಾಗಿ ಹೇಳಿದ್ದಾರೆ.
6ನೇ ಕ್ಲಾಸ್ನಲ್ಲಿ ಯಕ್ಷ ಪಯಣ: ಯಕ್ಷಗಾನ ಧಾರಿಯಾದ ರಿಷಬ್ ಶೆಟ್ಟಿಯ ಅಪರೂಪದ ಫೋಟೋ ವೈರಲ್