
ಮಾಸ್ಟರ್ ಆನಂದ್ ಮದುವೆಯಾಗಿ ಇಬ್ಬರು ಮಕ್ಕಳಾದರೂ ಇನ್ನೂ ಮಾಸ್ಟರ್ ಆಗಿಯೇ ಇದ್ದಾರೆ. ಅದಕ್ಕೆ ಕಾರಣ ಅವರು ಮಾಸ್ಟರ್ ಆಗಿದ್ದಾಗ ಮಾಡಿದ ಸೀನ್‌ಗಳು ಪಡೆದ ಜನಪ್ರಿಯತೆ. ಇದೀಗ ಅವರ ಮಗಳು ವನ್ಶಿಕಾ ಅಂಜನಿ ಕಶ್ಯಪ್ (Vanshika Kashyap) ಅಪ್ಪನ ಹಾದಿಯಲ್ಲೇ ಜನಪ್ರಿಯತೆ ಪಡೆಯುತ್ತಿದ್ದಾಳೆ. ಈ ಪುಟ್ಟ ಮಗು ಕಿರುತೆರೆ (Small Screen) ಮೇಲೆ ಮಾಡುತ್ತಿರುವ ಕಾಮಿಡಿ ಶೋಗಳನ್ನು ನೋಡಿ ಪ್ರೇಕ್ಷಕರು ಥರಾವರಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಅದರಲ್ಲಿ ಮುಖ್ಯವಾದದ್ದು ವನ್ಶಿಕಾಳಂಥಾ ಪುಟ್ಟ ಹುಡುಗಿ ದೊಡ್ಡೋರ ಥರ ಕಾಮಿಡಿ ಮಾಡ್ತಾಳೆ, ಈ ಥರ ಮಾಡೋದು ಮಕ್ಕಳ ಮೇಲೆ ಪ್ರಭಾವ ಬೀರುತ್ತೆ. ಇದು ಮಕ್ಕಳ ಮಾನಸಿಕ ಬೆಳವಣಿಗೆ (Psychological Development) ದೃಷ್ಟಿಯಿಂದ ಒಳ್ಳೆಯದಲ್ಲ ಅನ್ನೋದು. ಜೊತೆಗೆ ಇನ್ನೂ ನಾಲ್ಕೈದು ವರ್ಷದ ಪುಟ್ಟ ಮಗುವಿಗೆ ಈ ಥರ ಜನಪ್ರಿಯತೆ ಸಿಕ್ಕರೆ ಅವಳ ಓದಿನ ಮೇಲೆ, ಭವಿಷ್ಯದ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ ಅನ್ನೋದು. ಈ ಕಮೆಂಟ್‌ಗಳಿಗೆಲ್ಲ ಮಾಸ್ಟರ್ ಆನಂದ್ (Master Anand) ಉತ್ತರ ನೀಡಿದ್ದಾರೆ. ಅದಕ್ಕವರು ತನ್ನನ್ನೇ ಉದಾಹರಣೆಯಾಗಿ ತಗೊಂಡಿದ್ದಾರೆ.
ಆನಂದ್ ಮಗಳು ವನ್ಶಿಕಾ ಹಾಗೂ ಅವಳ ತಾಯಿ ಯಶಸ್ವಿನಿ ಕಿರುತೆರೆಯ ಜನಪ್ರಿಯ ಶೋ 'ನಮ್ಮಮ್ಮ ಸೂಪರ್‌ಸ್ಟಾರ್' (Nannmma Superstar) ಮೂಲಕ ಜನಪ್ರಿಯರಾದವರು. ಅಲ್ಲಿ ವನ್ಶಿಕಾ ಮ್ಯಾನರಿಸಂ, ಕಾಮಿಡಿ ಮಾಡ್ತಿದ್ದ ರೀತಿ ಕಂಡು ಎಲ್ಲರೂ ಚೋಟು ಪಟಾಕಿ ಅಂತ ಕರೀತಿದ್ರು. ಈಕೆಯ ಜನಪ್ರಿಯತೆ ಯಾವ ಮಟ್ಟಿಗೆ ಬೆಳೆಯಿತು ಅಂದರೆ ಇದೀಗ ದೊಡ್ಡವರ ಶೋ ಗೂ ಎಂಟ್ರಿ ಕೊಟ್ಟಿದ್ದಾಳೆ. 'ಗಿಜ್ಜಿ ಗಿಲಿಗಿಲಿ' ರಿಯಾಲಿಟಿ ಶೋದಲ್ಲಿ ಅವಳೇ ಆಕರ್ಷಣೆಯ ಕೇಂದ್ರಬಿಂದು ಆಗಿದ್ದಾಳೆ.
Ramachari: ತನ್ನ ಹೆಸರು ಕೂಗಿ ಅರ್ಭಟಿಸಿದ ರಾಮಾಚಾರಿ ಕಂಡು ನಡುಗಿದ ಚಾರು!
ಇಲ್ಲಿ ಈಕೆ 'ರತ್ನನ್ ಪ್ರಪಂಚ' ಚಿತ್ರದ ಶ್ರುತಿ ಮತ್ತು ಪ್ರಮೋದ್ ನಡುವಿನ ಸೀನ್‌ಅನ್ನು ರಿಕ್ರಿಯೇಟ್ ಮಾಡಲಾಗಿತ್ತು. ಇದರಲ್ಲಿ ಶ್ರುತಿ ಪಾತ್ರವನ್ನು ವನ್ಶಿಕಾ ನಿರ್ವಹಿಸಿದ್ದಳು. ಇದು ಭಲೇ ಜನಪ್ರಿಯತೆ ಪಡೆದುಕೊಂಡಿತ್ತು. ಆದರೆ ಈ ಸೀನ್ ತಾಯಿ ಮಗನ ಸಂಬಂಧದ ಕುರಿತಾದ ಗಂಭೀರ ದೃಶ್ಯವಾಗಿದ್ದು, ಪುಟ್ಟ ವನ್ಶಿಕಾಳಿಂದ ಇಂಥಾ ಪಾತ್ರ ಮಾಡಿಸಿದ್ದು ಎಷ್ಟು ಸರಿ ಅನ್ನೋ ಬಗೆಯ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ಅಂತಲ್ಲ. ಈ ಹಿಂದೆ ನಮ್ಮಮ್ಮ ಸೂಪರ್‌ಸ್ಟಾರ್ ಶೋದಲ್ಲೂ ಅವಳು ದೊಡ್ಡವರ ಥರ ಮಾಡಿದ್ದ ಕಾಮಿಡಿ ದೃಶ್ಯಗಳಿಗೂ ಟೀಕೆಗಳು ಕೇಳಿಬಂದಿದ್ದವು. ಇದೆಲ್ಲ ಮಕ್ಕಳ ಬೆಳವಣಿಗೆಗೆ ಒಳ್ಳೇದಲ್ಲ ಅನ್ನೋ ಕಮೆಂಟ್ ಮುಖ್ಯವಾಗಿ ಕೇಳಿಬಂತು. ಜೊತೆಗೆ ಟಿಆರ್‌ಪಿ ಗೋಸ್ಕರ ಚಾನೆಲ್‌ನವರು ಮಗುವಿನ ಭವಿಷ್ಯದ ಮೇಲೆ ಆಟ ಆಡ್ತಾ ಇದ್ದಾರೆ, ಹೆತ್ತವರೂ ದುಡ್ಡಿಗೋಸ್ಕರ ಹೀಗೆಲ್ಲ ಮಕ್ಕಳಿಂದ ನಟನೆ ಮಾಡಿಸ್ತಿದ್ದಾರೆ ಅನ್ನೋ ಮಾತುಗಳೂ ಕೇಳಿಬಂದವು.
ಆದರೆ ಮಾಸ್ಟರ್ ಆನಂದ್ ತನ್ನ ಅನುಭವದ ಹಿನ್ನೆಲೆಯಲ್ಲಿ ಇದನ್ನೆಲ್ಲ ಸಾರಾಗಸಟಾಗಿ ನಿರಾಕರಿಸಿದ್ದಾರೆ. 'ಮಕ್ಕಳು ದೊಡ್ಡೋರ ಕಾಮಿಡಿ ಸೀನ್‌ಗಳಲ್ಲಿ, ಡ್ರಾಮಾಗಳಲ್ಲಿ ಕಾಣಿಸಿಕೊಳ್ಳೋದು ಅವರ ಮೇಲೆ ದುಷ್ಪರಿಣಾಮ ಬೀರುತ್ತೆ ಅನ್ನೋದಾದ್ರೆ ನಾನು ಅಂಥ ಪಾತ್ರಗಳನ್ನು ಮಾಡಿಕೊಂಡೇ ಬಂದವನು. ದೊಡ್ಡಣ್ಣ -ರೇಖಾ ದಾಸ್ ಜೊತೆಗೆ ಮಡಿಕೆ ಸೀನ್‌ನಲ್ಲಿ ಕಾಣಿಸಿಕೊಂಡಾಗ ಅದರಲ್ಲಿ ದೊಡ್ಡವರ ತಮಾಷೆ ಇತ್ತು.
Kannadathi: ಮದುಮಗಳಂತೆ ರೆಡಿಯಾದ ವರೂ, ಹರ್ಷನ ಹೆಂಡ್ತಿ ನಾನೇ ಅಂತಿದ್ದಾಳಲ್ಲಪ್ಪಾ!
ಗೌರಿ ಗಣೇಶ ಚಿತ್ರದಲ್ಲಿ ತಂದೆ ಮಗನ ಸಂಬಂಧದ ಸೂಕ್ಷ್ಮಗಳಿದ್ದವು. ಅಂಥಾ ಪಾತ್ರಗಳನ್ನೆಲ್ಲ ನಿರ್ವಹಿಸಿದ ನಾನೆಲ್ಲಿ ಹಾಳಾದೆ, ಒಳ್ಳೆಯ ಬದುಕನ್ನೇ ಬದುಕ್ತಿದ್ದೀನಲ್ಲಾ, ಮಕ್ಕಳ ತಲೆಯಲ್ಲಿ ಇದೆಲ್ಲ ನಿಲ್ಲೋದಿಲ್ಲ. ಅವರು ಅವರಾಗಿಯೇ ಇರ್ತಾರೆ. ಮಗಳು ವನ್ಶಿಕಾಳನ್ನು ನೋಡಿದಾಗ ನನಗೆ ನನ್ನ ಬಾಲ್ಯವನ್ನೇ ಕನ್ನಡಿಯಲ್ಲಿ ನೋಡಿದ ಹಾಗಾಗಿದೆ' ಎಂದಿದ್ದಾರೆ.
ಆದರೆ ಮಟ್ಟಿನ ಜನಪ್ರಿಯತೆ ಮಗಳು ವನ್ಶಿಕಾ ತಲೆಗೆ ಏರದಂತೆ ಬೆಳೆಸುವ ದೊಡ್ಡ ಜವಾಬ್ದಾರಿ ತನ್ನ ಹಾಗೂ ಪತ್ನಿ ಯಶಸ್ವಿನಿ ಮೇಲಿರೋದನ್ನು ಆನಂದ್ ಒಪ್ಪಿಕೊಳ್ತಾರೆ. ಅದನ್ನ ಚಾಲೆಂಚಾಗಿ ತಗೊಂಡು ಮಗಳನ್ನು ಚೆನ್ನಾಗಿ ಬೆಳೆಸೋದೇ ಸದ್ಯಕ್ಕೆ ಅವರ ಗುರಿಯಂತೆ.
Kannadathi: ಡಾ.ದೇವ್ ಪಾತ್ರಧಾರಿ ವಿಜಯ ಕೃಷ್ಣ ಸೀರಿಯಲ್‌ನಿಂದ ಔಟ್! ಹೇಮಂತ್ ಎಂಟ್ರಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.