ಕುಂಭಮೇಳದಲ್ಲಿ ಸಾನ್ಯಾ ಅಯ್ಯರ್… ನಾಗ ಸಾಧುಗಳಿಂದ ಆಶೀರ್ವಾದ ಪಡೆದ ನಟಿ

Published : Feb 03, 2025, 06:31 PM ISTUpdated : Feb 04, 2025, 10:30 AM IST
ಕುಂಭಮೇಳದಲ್ಲಿ ಸಾನ್ಯಾ ಅಯ್ಯರ್… ನಾಗ ಸಾಧುಗಳಿಂದ ಆಶೀರ್ವಾದ ಪಡೆದ ನಟಿ

ಸಾರಾಂಶ

ನಟಿ ಸಾನ್ಯಾ ಅಯ್ಯರ್, ಕುಂಭಮೇಳದಲ್ಲಿ ಪಾಲ್ಗೊಂಡು ಆಧ್ಯಾತ್ಮಿಕ ಅನುಭವ ಪಡೆದಿದ್ದಾರೆ. ತಾಯಿಯೊಂದಿಗೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ, ಶಾಹಿ ಸ್ನಾನ ಮಾಡಿ, ನಾಗ ಸಾಧುಗಳ ಆಶೀರ್ವಾದ ಪಡೆದರು. ಈ ಅನುಭವವನ್ನು "ಪುನರ್ಜನ್ಮ" ಎಂದು ಬಣ್ಣಿಸಿದ ಸಾನ್ಯಾ, ಹೊಸ ಯೋಜನೆಯೊಂದರಲ್ಲಿ ತೊಡಗಿಕೊಳ್ಳುವ ಸೂಚನೆ ನೀಡಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಹಾಗೂ  ಕನ್ನಡ ಕಿರುತೆರೆ ನಟಿ ಸಾನ್ಯಾ ಅಯ್ಯರ್ (Saanya Iyer).  ಗೌರಿ ಸಿನಿಮಾದಲ್ಲಿ ನಟಿಸಿದ ಬಳಿಕ ಸಿನಿಮಾ ಬಳಿಕ ಸಿನಿಮಾದಿಂದ ದೂರವೇ ಉಳಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಕಾಣಿಸಿಕೊಳ್ಳೋದು ಕಡಿಮೆ. ಆದರೆ ಹೆಚ್ಚಾಗಿ ಫ್ಯಾಮಿಲಿ ಜೊತೆ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಆಧ್ಯಾತ್ಮಿಕ ಜರ್ನಿ ಹೆಚ್ಚಾಗಿ ಮಾಡುತ್ತಿರುತ್ತಾರೆ. ಸದ್ಯ ಎಲ್ಲಿದ್ದಾರೆ ಅಂತ ಕೇಳಿದ್ರೆ, ಇವರು ಕುಂಭಮೇಳದಲ್ಲಿ ಇದ್ದಾರೆ. 

ಈ ವರ್ಷ ನಾನು ಎಲ್ಲಾ ವ್ಯಾಮೋಹಗಳಿಂದ ಮುಕ್ತಳಾಗಿ ಡಿಟ್ಯಾಚ್‌ಮೆಂಟ್‌ ಬೆಳೆಸಿಕೊಳ್ಳಬೇಕು: ಸಾನ್ಯಾ ಅಯ್ಯರ್‌

ಹೌದು, ದೈವ ಭಕ್ತೆಯಾಗಿರುವ ಸಾನ್ಯಾ ಅಯ್ಯರ್, ತಮ್ಮ ತಾಯಿ ಜೊತೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುವ ಮಹಾ ಕುಂಭಮೇಳಕ್ಕೆ (Maha Kumbh Mela) ತೆರಳಿದ್ದು, ಈ ಕುರಿತಂತೆ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕುಂಭ ಮೇಳದಲ್ಲಿ ಜನಸಾಗರದ ಮಧ್ಯೆ ಓಡಾಡುವ, ಹಣೆ ಮೇಲೆ ಚಂದನದ ಮೂರು ನಾಮ ಹಾಗೂ ಕೇಸರಿ ತಿಲಕ ಹಚ್ಚಿ, ವಿವಿಧ ನಾಗ ಸಾಧುಗಳನ್ನು ಭೇಟಿ ನೀಡಿ, ಅವರ ಆಶೀರ್ವಾದ ಪಡೆದು ಬಂದಿದ್ದಾರೆ. ಈ ವಿಡಿಯೋವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಅದರ ಜೊತೆಗೆ ಅಲ್ಲಿ ಆದಂತಹ ಅನುಭವವನ್ನು ಸಹ ಬಿಚ್ಚಿಟ್ಟಿದ್ದಾರೆ. ಮಹಾಕುಂಭ ಮೇಳದ ಬಗ್ಗೆ ಸಾನ್ಯಾ ಅಯ್ಯರ್ ಹೇಳಿದ್ದೇನು ನೋಡಿ. 

ನಯಾಗರ ಫಾಲ್ಸ್ ಮುಂದೆ ಅಜ್ಜಿ,ಅಮ್ಮ, ಚಿಕ್ಕಮ್ಮನ ಜೊತೆ ಪೋಸ್ ಕೊಟ್ಟ ಸಾನ್ಯಾ ಅಯ್ಯರ್…

ಮಹಾಕುಂಭಮೇಳ 2025!  ಸಂಗಮದಲ್ಲಿ ಮೌನಿ ಅಮಾವಾಸ್ಯೆಯ (Mouni Amavasye) ಶಾಹಿ ಸ್ನಾನವು ನನ್ನ ಆಂತರಿಕ ಜಗತ್ತನ್ನೆ ಅಲುಗಾಡಿಸುವಂತೆ ಮಾಡಿತು! ಈ ಪವಿತ್ರ ಸ್ನಾನವು ನನಗೆ ಪುನರ್ಜನ್ಮವಲ್ಲದೆ ಬೇರೇನೂ ಅಲ್ಲ ಎಂದು ನಾನು ಭಾವಿಸಿದೆ ಮತ್ತು ನನ್ನ ಮುಂದಿನ ಹೊಸ ಪ್ರಯಾಣಕ್ಕಾಗಿ ನನ್ನ ಎಲ್ಲಾ ಪಿತೃಗಳು / ಪೂರ್ವಜರಿಂದ ಆಶೀರ್ವಾದವನ್ನು ಕೋರಿದೆ. ನಾವೆಲ್ಲರೂ ಮಾನವ ಜೀವನವನ್ನು ಅನುಭವಿಸುತ್ತಿರುವ ಆಧ್ಯಾತ್ಮಿಕ ಜೀವಿಗಳು, ನೀವೆಲ್ಲರೂ ಉನ್ನತ ಕ್ಷೇತ್ರಗಳಿಗೆ ಏರಬಹುದು ಮತ್ತು ನೀವು ನಿಜವಾಗಿಯೂ ಯಾರೆಂದು ನೋಡಬಹುದು ಎಂದು ನಾನು ಭಾವಿಸುತ್ತೇನೆ. ಭೂಮಿಯ ಮೇಲಿನ ನಿಮ್ಮ ಉದ್ದೇಶವು ನೆರವೇರಲಿ. ಲೋಕ ಸಮಸ್ತ ಸುಖಿನೋ ಭವತು ಎಂದು ಬರೆದುಕೊಂಡಿದ್ದಾರೆ. 

ನನ್ನ ಪ್ರಪಂಚದ ಜೊತೆ ಪ್ರಪಂಚ ನೋಡ್ತಿದ್ದೀನಿ… ಅಮ್ಮನ ಜೊತೆಗಿನ ಸಾನ್ಯಾ ಅಯ್ಯರ್ ಟ್ರಾವೆಲ್ ಫೋಟೊ ವೈರಲ್!

ಸಾನ್ಯಾ ಅಯ್ಯರ್ ಪೋಸ್ಟ್ ನೋಡಿದರೆ, ಇವರು ಯಾವುದೋ ಒಂದು ಪ್ರಾಜೆಕ್ಟ್ ನಲ್ಲಿ ಸದ್ಯದಲ್ಲೇ ಬ್ಯುಸಿಯಾಗಲಿದ್ದಾರೆ ಎನ್ನುವಂತಿದೆ. ಹಾಗಿದ್ರೆ ಸಾನ್ಯಾ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ? ಅಥವಾ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಳ್ಳಲಿದ್ದಾರ? ಅಥವಾ ಸೀರಿಯಲ್ ನಲ್ಲಿ ನಟಿಸುವರೇ ಎನ್ನುವ ಪ್ರಶ್ನೆಯೂ ಮೂಡಿದೆ. ಯಾವುದಕ್ಕೂ ಸಾನ್ಯಾ ಅಯ್ಯರ್ ಅವರೇ ಉತ್ತರ ನೀಡಬೇಕು. ಅಲ್ಲಿವರೆಗೆ ಕಾದು ನೋಡೋಣ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Amruthadhaare: ಜೊತೆಯಲ್ಲಿ ಗೌತಮ್​-ಭೂಮಿ! ಮಕ್ಕಳು ಶಾಕ್​: ಅಪ್ಪ-ಅಮ್ಮನ್ನೇ ಹೇಗೆ ಆಡಿಸ್ತಿದ್ದಾರೆ ನೋಡಿ!
Brahmagantu: ಚಾಲೆಂಜ್​ ಸೋತು ಮನೆಬಿಟ್ಟ ದೀಪಾ- ಖುಷಿ ಬದ್ಲು ಅಡಕತ್ತರಿಯಲ್ಲಿ ಒದ್ದಾಡಿದ ಸೌಂದರ್ಯ! ಏನಾಯ್ತು?