ಮೇಕಪ್​ ಇಲ್ದೇ ಲೈವ್​ನಲ್ಲಿ ಆ್ಯಂಕರ್​ ಅನುಪಮಾ ಗೌಡ ಪ್ರತ್ಯಕ್ಷ! ಅಭಿಮಾನಿಗಳಿಗೆ ಕೊಟ್ಟರು ಈ ಸುದ್ದಿ...

Published : Feb 03, 2025, 04:22 PM ISTUpdated : Feb 03, 2025, 04:46 PM IST
ಮೇಕಪ್​ ಇಲ್ದೇ ಲೈವ್​ನಲ್ಲಿ ಆ್ಯಂಕರ್​ ಅನುಪಮಾ ಗೌಡ ಪ್ರತ್ಯಕ್ಷ! ಅಭಿಮಾನಿಗಳಿಗೆ ಕೊಟ್ಟರು ಈ ಸುದ್ದಿ...

ಸಾರಾಂಶ

ಅನುಪಮಾ ಗೌಡ "ಬಾಯ್ಸ್ ವರ್ಸಸ್ ಗರ್ಲ್ಸ್" ರಿಯಾಲಿಟಿ ಶೋ ನಿರೂಪಣೆ ಬಗ್ಗೆ ಇನ್‌ಸ್ಟಾಗ್ರಾಮ್ ನೇರಪ್ರಸಾರದಲ್ಲಿ ಮೇಕಪ್ ರಹಿತವಾಗಿ ಕಾಣಿಸಿಕೊಂಡರು. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿ, ಮನೆಯಲ್ಲಿ ಮೇಕಪ್ ಮಾಡಿಕೊಳ್ಳುವುದಿಲ್ಲ ಎಂದರು. ನಟಿ, ನಿರೂಪಕಿಯಾಗಿ ಯಶಸ್ಸು ಗಳಿಸಿರುವ ಅವರು, ಹಲವು ಧಾರಾವಾಹಿ, ಚಿತ್ರಗಳಲ್ಲಿ ನಟಿಸಿದ್ದಾರೆ.

ಹಿರಿತೆರೆ, ಕಿರುತೆರೆ ಎರಡರಲ್ಲಿಯೂ ಸಕತ್​ ಆ್ಯಕ್ಟೀವ್​ ಆಗಿರುವ ನಟಿ ಅನುಪಮಾ ಗೌಡ. ನಟನೆಗೂ ಸೈ, ನಿರೂಪಣೆಗೂ ಸೈ ಎನ್ನುವುದನ್ನು ನಟಿ ಇದಾಗಲೇ ತೋರಿಸಿಕೊಡುತ್ತಿದ್ದಾರೆ.  ಇದೀಗ ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಬಾಯ್ಸ್​ ವರ್ಸರ್ಸ್​ ಗರ್ಲ್ಸ್​ ರಿಯಾಲಿಟಿ ಷೋನಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಇದೀಗ ಅದರ ಬಗ್ಗೆ ಮಾತನಾಡುವ ಸಂಬಂಧ ಇನ್​ಸ್ಟಾಗ್ರಾಮ್​ ನೇರಪ್ರಸಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಾಗಲೇ ಈ ರಿಯಾಲಿಟಿ ಷೋ ಆರಂಭಗೊಂಡಿದ್ದು, ಅದರ ಬಗ್ಗೆ ತಮ್ಮ ಅಭಿಪ್ರಾಯದ ಜೊತೆಗೆ ಅಭಿಮಾನಿಗಳ ಅಭಿಪ್ರಾಯಗಳನ್ನೂ ಕೇಳಿಸಿಕೊಂಡಿದ್ದಾರೆ. ನೇರಪ್ರಸಾರದಲ್ಲಿ ಅನುಪಮಾ ಅವರ ಫ್ಯಾನ್ಸ್​ ಅವರನ್ನು ಹಾಡಿ ಹೊಗಳಿದ್ದಾರೆ.

ಇಲ್ಲಿ ಹೈಲೈಟ್​ ಆಗಿದ್ದು, ಅನುಪಮಾ ಅವರು ಮೇಕಪ್​ ಇಲ್ಲದೇ ಬಂದಿದ್ದು. ಈ ಬಗ್ಗೆ ಅವರ ಅಭಿಮಾನಿಯೊಬ್ಬರು ಕೇಳಿದ್ದಾರೆ. ಸದಾ ಮೇಕಪ್​ನಲ್ಲಿ ನೋಡಿ ನೋಡಿ ಅಭ್ಯಾಸ ಆಗಿರುವುದರಿಂದ ಮೇಕಪ್​ರಹಿತವಾಗಿ ನೋಡುವುದು ಎಂದರೆ ಹಲವರಿಗೆ ವಿಚಿತ್ರ ಎನ್ನಿಸುವುದು ಉಂಟು. ಅನುಪಮಾ ಅವರು ಮೇಕಪ್​ ಇಲ್ಲದೆಯೂ ಚೆನ್ನಾಗಿ ಕಾಣಿಸುತ್ತಾರೆ ಎಂದು ಲೈವ್​ನಲ್ಲಿ ಅವರ ಫ್ಯಾನ್ಸ್​ ಹೇಳಿದ್ದರೆ, ಮತ್ತೆ ಕೆಲವರು ಇದಕ್ಕೆ ಕಾರಣ ಕೇಳಿದ್ದಾರೆ. ಅದಕ್ಕೆ ನಟಿ, ನಾನು ಸೆಟ್​ನಲ್ಲಿ ಮಾತ್ರ ಮೇಕಪ್​ ಮಾಡಿಕೊಳ್ಳುವುದು. ಮನೆಯಲ್ಲಿ ಮೇಕಪ್​ ಇರುವುದಿಲ್ಲ. ಈಗ ನೇರಪ್ರಸಾರದ ಸಮಯದಲ್ಲಿ ಮನೆಯಲ್ಲಿ ಇರುವುದರಿಂದ ಮೇಕಪ್​ ಎಲ್ಲಾ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. 

ಆಂಕರ್ಸ್ & ಫೇಮಸ್ ಸ್ಟಾರ್ ನಟಿಯರ 'ಆ ಒಂದು ಗುಟ್ಟು' ಬಿಚ್ಚಿಟ್ಟ ಅನುಪಮಾ ಗೌಡ!

ಇನ್ನು ಅನುಪಮಾ ಕುರಿತು ಹೇಳುವುದಾದರೆ, ಅಕ್ಕ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ಇವರು ಬಿಗ್ ಬಾಸ್‌ ರಿಯಾಲಿಟಿ ಶೋನಲ್ಲಿ ಎರಡು ಸಲ ಸ್ಪರ್ಧಿಸಿ ಆನಂತರ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿದ್ದಾರೆ. ಈ ಮೂಲಕ  ನಟಿ ಕಮ್ ನಿರೂಪಕಿ ಎಂದೇ ಫೇಮಸ್​ ಆಗಿದ್ದಾರೆ.   ಲೋಕೇಶ್ ಪತ್ರಿಕೆ ಸಿನಿಮಾದ ಮೂಲಕ ಬಾಲ ಕಲಾವಿದೆಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ನಟಿ, ಕೊನೆಗೆ ಮನೆ ಮನೆ ಮಾತಾಗಿದ್ದು,  ಅಕ್ಕ ಸೀರಿಯಲ್​ ಮೂಲಕ. ಈ ಸೀರಿಯಲ್​ನಲ್ಲಿ ಎರಡು ಪಾತ್ರ ನಿರ್ವಹಿಸಿ, ನಾಯಕಿ, ವಿಲನ್​ ಯಾವುದಕ್ಕೂ ಸೈ ಎನಿಸಿಕೊಂಡರು.  ಭೂಮಿಕಾ ಹಾಗೂ ದೇವಿಕಾ ಎಂಬ ಎರಡು ಬಗೆಯ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿ ಜನರ ಮನಗೆದ್ದರು. ಇದಕ್ಕೂ ಮುನ್ನ ಅವರು  ಚಿ ಸೌ ಸಾವಿತ್ರಿ ಎಂಬ ಧಾರಾವಾಹಿಯಲ್ಲಿ ನಟಿಸಿ ಸಾಕಷ್ಟು ಹೆಸರು ಮಾಡಿದ್ದಾರೆ. ನಂತರ ಸಕತ್​ ಫೇಮಸ್​ ಆಗಿದ್ದು,  ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ  ಭಾಗವಹಿಸಿದ ನಂತರ.   

ಅಂದಹಾಗೆ, ಅನುಪಮಾ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಇದರಲ್ಲಿ  ತಮ್ಮ ಪರ್ಸನಲ್ ಲೈಫ್‌, ಸಿನಿಮಾ, ಸೀರಿಯಲ್, ಶೂಟಿಂಗ್, ಸ್ಕಿನ್ ಕೇರ್, ಹೇರ್ ಕೇರ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಜನರಿಗೆ ತಿಳಿಸುತ್ತಾರೆ. ನಿರೂಪಕಿಯಾಗಿಯೂ ಸಾಕಷ್ಟು ಹೆಸರು ಮಾಡಿದ್ದಾರೆ.  ಮಜಾ ಭಾರತ, ರಾಜ-ರಾಣಿ, ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ   ಗಮನ ಸೆಳೆದಿದ್ದಾರೆ.  ನಟ ವಿಜಯ್ ರಾಘವೇಂದ್ರ ಅವರೊಂದಿಗೆ 8ನೇ ದಕ್ಷಿಣ ಭಾರತದ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದರು.  ಸ್ಯಾಂಡಲ್​ವುಡ್​ನಲ್ಲಿಯೂ ಛಾಪು ಮೂಡಿಸಿರುವ ಅನುಪಮಾ ಅವರು,  ಜಯರಾಮ್ ಕಾರ್ತಿಕ್ ಅಭಿನಯದ  ಆ ಕರಾಳ ರಾತ್ರಿ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. 2019ರಲ್ಲಿ ಬಿಡುಗಡೆಗೊಂಡ, ರಾಘವೇಂದ್ರ ರಾಜ್‌ಕುಮಾರ್ ಮತ್ತು ಆರ್‌ಜೆ ರೋಹಿತ್ ಅಭಿನಯದ ತ್ರಯಂಬಕಂ  ಚಿತ್ರದಲ್ಲಿ ಪತ್ರಕರ್ತೆಯಾಗಿ ನಟಿಸಿದ್ದರು. 

ಡಿಪ್ರೆಶನ್‌ & ರಾಜ್ಯ ಪ್ರಶಸ್ತಿ ಎರಡನ್ನೂ ಅನುಭವಿಸಿದ ಅಂದಗಾತಿ ಅನುಪಮಾ; ಫೋಟೋಸ್ ನೋಡಿ, ಕಾಲೆಳಿಬೇಡಿ!  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12: ಸ್ಪಂದನಾ ಸೋಮಣ್ಣ ಮುಂದೆ ಧ್ರುವಂತ್ ಅಸಭ್ಯ ಸನ್ನೆ ಮಾಡಿದ್ರು: ರಜತ್‌ ಗಂಭೀರವಾದ ಆರೋಪ
BBK 12: ಪದೇ ಪದೇ ಕಿಚ್ಚ ಸುದೀಪ್‌ ಹೇಳ್ತಿರುವಂತೆ ರಜತ್‌ ವೈರಲ್ ವಿಡಿಯೋ ಅಸಲಿ ವಿಷಯ ಏನು? ಅಂಥದ್ದೇನಿದೆ?