ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಕಿರುತೆರೆ ನಟಿ ಜ್ಯೋತಿ ಕಿರಣ್ ಟ್ರಾನ್ಸ್‌ಫಾರ್ಮೇಶನ್ ಫೋಟೋ. ಸಣ್ಣ ಆಗೋಕೆ ಏನೆಲ್ಲಾ ಮಾಡಿದ್ದಾರೆ ನೋಡಿ.....
ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ (Nammane Yuvarani) ಧಾರಾವಾಹಿ ಮೂಲಕ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಾಂಭವಿ ಅಲಿಯಾಸ್ ಜ್ಯೋತಿ ಕಿರಣ್ (Jyothi Kiran) ಅವರು ಇನ್‌ಸ್ಟಾಗ್ರಾಂನಲ್ಲಿ ಸಣ್ಣಗಾಗಿರುವ ಫೋಟೋ ಹಂಚಿಕೊಂಡಿದ್ದರು. ರಾತ್ರೋರಾತ್ರಿ ಈ ರೀತಿ ಬದಲಾವಣೆ ಆಗಿದೆ ಎಂದುಕೊಂಡವರಿಗೆ ನಟಿ ಸ್ಪಷ್ಟನೆ ನೀಡಿದ್ದಾರೆ.....
ಜರ್ನಿ ಶುರುವಾಗಿದ್ದು ಹೀಗೆ:
'ನನ್ನ ಮಗಳು (Dughter) ಎರಡನೇ ವರ್ಷವಿದ್ದಾಗ ನಾನು ತೂಕ ಇಳಿಸಿಕೊಳ್ಳುವುದಕ್ಕೆ ಶುರು ಮಾಡಿದೆ. ನಾನು ಧಾರಾವಾಹಿಗಳಿಗೆ ಕಮ್ ಬ್ಯಾಕ್ ಮಾಡುವ ಮುನ್ನವೇ ಈ ಕೆಲಸಕ್ಕೆ ಕೈ ಹಾಕಿದ್ದೆ. ನಾನು ಮೊದಲು ವಾಕಿಂಗ್ (Walking) ಮಾಡುವ ಮೂಲಕ ವರ್ಕ್ ಔಟ್ ಶುರು ಮಾಡಿದೆ. ನಾನು ಜಿಮ್‌ಗೆ ಸೇರುವ ಮೊದಲು ಮೂರು ತಿಂಗಳು ವಾಕಿಂಗ್ ಮಾಡುವಂತೆ ನನ್ನ ಪತಿ ಸಲಹೆ ನೀಡಿದ್ದರು. ನಾನು ಫಿಟ್ ಆಗಬೇಕು ಎನ್ನುವ ಉತ್ಸಾಹ ನನ್ನಲಿತ್ತು. ಅವರು ಮೂರು ಹೇಳಿದ್ದಂತೆ ನಾನು ಆರು ತಿಂಗಳು ವಾಕಿಂಗ್ ಮಾಡಿದೆ. ನನ್ನ ಫಿಟ್ನೆಸ್ ರೆಜಿಮ್‌ನ (Fitness Regim) ಫಾಲೋ ಮಾಡುವುದರಲ್ಲಿ ನಾನು ತುಂಬಾನೇ ಪರ್ಟಿಕ್ಯುಲರ್. ನನ್ನ ಆಹಾರ ಮತ್ತು ವರ್ಕೌಟ್ (Workout) ಎರಡರ ಬಗ್ಗೆಯೂ ನಾನು consistent ಅಗಿ ಇರುವೆ,' ಎಂದು ಜ್ಯೋತಿ ಕಿರಣ್ ಇ-ಟೈಮ್ಸ್ ಜೊತೆ ಮಾತನಾಡಿದ್ದಾರೆ.
5 ವರ್ಷಗಳ ಜರ್ನಿ:
'ಸೋಷಿಯಲ್ ಮಿಡಿಯಾದಲ್ಲಿ (Social Media) ಟ್ರಾನ್ಸ್‌ಫಾರ್ಮೇಷನ್ ಫೋಟೋ ಶೇರ್ ಮಾಡಿಕೊಂಡ ಬಳಿ ನನಗೆ ಬರುತ್ತಿರುವ ಕಾಮೆಂಟ್‌ಗಳ (Comments) ತುಂಬಾನೇ ಫನ್ನಿಯಾಗಿವೆ. ನಾನು ರಾತ್ರೋರಾತ್ರಿ ಸಣ್ಣಗಾಗಿರುವೆ ಎಂದು ಕಾಮೆಂಟ್ ಮಾಡುತ್ತಿದ್ದರು. ಕಡಿಮೆ ಸಮಯದಲ್ಲಿ ನಾನು ಬದಲಾಗಲಿಲ್ಲ. ಈಗ ಇರುವ ಫಿಟ್ನೆಸ್‌ಗೆ ಬರಲು ನಾನು 5 ವರ್ಷ ತೆಗೆದುಕೊಂಡಿದ್ದೇನೆ,' ಎಂದಿದ್ದಾರೆ.
'5 ವರ್ಷಗಳ ಸಮಯ ತೆಗೆದುಕೊಂಡು ಸಣ್ಣಗಾಗುವುದಲ್ಲ, ಅದನ್ನು ಕಾಪಾಡಿಕೊಂಡು ಹೋಗಲು ನಾನು ಅಷ್ಟೇ ಶ್ರಮ ವಹಿಸಬೇಕು. ನನ್ನ ಫಿಟ್ನೆಸ್ ರೂಟಿನ್ (Fitness Routine) ವಿಚಾರದಲ್ಲಿ ತುಂಬಾನೇ ಸ್ಟ್ರೀಟ್ ಆಗಿರುವೆ. ಏನೇ ಮಾಡಬೇಕು ಅಂದ್ರೂ ನಾವು ಮೈಂಡ್ ಸೆಟ್ (Mindset) ಮಾಡಿಕೊಳ್ಳುವುದು ತುಂಬಾ ಮುಖ್ಯ. ಯಾವತ್ತೂ ನಾನು excuse ಕೊಡುವುದಿಲ್ಲ. ನಾನು ನಿರ್ಧರಿಸಿ ಫಾಲೋ ಮಾಡುವುದಕ್ಕೆ ನಾನೇ ಜವಾಬ್ದಾರಿ.ನಾನು ಇದುವರೆಗೂ ಚೀಟ್ ಮೀಲ್ ಮಾಡಿಲ್ಲ. ನಾನು ಎಲ್ಲವನ್ನೂ ತಿನ್ನುವೆ. ಆದರೆ ಒಂದು ಲಿಮಿಟ್‌ನಲ್ಲಿ ಮಾತ್ರ. ಇದರ ಹಿಂದೆ ಯಾವ ರಾಕೆಟ್ ಸೈನ್ಸ್ ಇಲ್ಲ. ಸೆಲ್ಫ್ ಕಂಟ್ರೋಲ್ ಒಂದೇ. ನನ್ನ ದೇಹ ಡಿಮ್ಯಾಂಡ್ ಮಾಡುವುದನ್ನು ಏನು ಎಂದು ಅರ್ಥ ಮಾಡಿಕೊಂಡಿರುವೆ. ಹುಷಾರು ತಪ್ಪಿದ್ದರೆ, ನಾನು ಯಾವ ರಿಜಿಮ್ ಫಾಲೋ ಮಾಡುವುದಿಲ್ಲ ಎಲ್ಲವನ್ನೂ ತಿನ್ನುವೆ,' ಎಂದು ಎನ್ನುತ್ತಾರೆ ಈ ಕಿರುತೆರೆ ನಟಿ.
'ನಮ್ಮನೆ ಯುವರಾಣಿ' ಖ್ಯಾತಿಯ ಜ್ಯೋತಿ ಕಿರಣ್ ಫಿಟ್ನೆಸ್ ಗೋಲ್ ಫೋಟೋ ವೈರಲ್!'ನನಗೆ ಯಾವತ್ತೂ ಕ್ರೇವಿಂಗ್ಸ್ (Craving) ಅಂತ ಇರಲಿಲ್ಲ. ಅದರಲ್ಲೂ ಚಾಕೋಲೆಟ್ (Chocolate) ತಿನ್ನಬೇಕು ಎನ್ನುವ ಕ್ರೇವಿಂಗ್ಸ್ ಬಾಲ್ಯದಿಂದಲೂ ಇರಲಿಲ್ಲ. ಆದರೆ ಕೆಲವೊಮ್ಮೆ ನನಗೆ ಸ್ವೀಟ್ ತಿನ್ನಬೇಕು ಅನಿಸುತ್ತದೆ. ಆಗ ನನ್ನ ದೇಹದಲ್ಲಿ ಕಾರ್ಬ್ಸ್ (Carbohyderate) ಕಡಿಮೆ ಇದೆ ಎಂದು ಗೊತ್ತಾಗುತ್ತದೆ. ಸ್ವೀಟ್ (Sweets) ತಿನ್ನದೆ ನಾನು ಪೀನಟ್ ಬಾರ್ (Peanut Bar) ತಿನ್ನುತ್ತೇನೆ. ಅದಕ್ಕೂ ಹೆಚ್ಚಿಗೆ ಏನೂ ಸೇವಿಸುವುದಿಲ್ಲ. ಡಯಟ್ ಬಗ್ಗೆ ನಾನು ಯಾರಿಗೂ ಸಲಹೆ ನೀವುಡುದಿಲ್ಲ. ನನ್ನ ದೇಹಕ್ಕೆ ಹೊಂದುವುದು, ಬೇರೆ ಅವರಿಗೆ ಹೊಂದುವುದಿಲ್ಲ. ದೇಹ ಹೇಳಿದ ಹಾಗೆ ಕೇಳಿದರೆ ಮಾತ್ರ ಫಿಲ್ ಆಗಿರುವುದಕ್ಕೆ ಸಾಧ್ಯ. ನನ್ನ ಮೈಂಡ್ ಸೆಟ್‌ನಲ್ಲಿ ರಿಯಾಲಿಟಿನ ಒಪ್ಪಿಕೊಂಡರೆ ಏನನ್ನು ಬೇಕಾದರೂ ಸಾಧಿಸಬಹುದು,' ಎಂದ ಹೇಳುವ ಮೂಲಕ ಜೋತಿ ಮಾತು ಮುಗಿಸಿದ್ದಾರೆ.