ಗೆಳೆಯರಿಂದಲೇ ನೋವುಂಡ ರಾಮಾಚಾರಿ ಹೀರೋ! ರಿತ್ವಿಕ್‌ಗಾದ ಅವಮಾನ ಏನು?

Published : Dec 22, 2022, 03:15 PM IST
ಗೆಳೆಯರಿಂದಲೇ ನೋವುಂಡ ರಾಮಾಚಾರಿ ಹೀರೋ! ರಿತ್ವಿಕ್‌ಗಾದ ಅವಮಾನ ಏನು?

ಸಾರಾಂಶ

ರಾಮಾಚಾರಿ ಸೀರಿಯಲ್ ಹೀರೋ ರಿತ್ವಿಕ್ ಕೃಪಾಕರ್. ಸೀರಿಯಲ್‌ನಲ್ಲಿ ರಾಮಾಚಾರಿ ಪಾತ್ರದ ಮೂಲಕ ಕಮಾಲ್ ಮಾಡುತ್ತಿರೋ ಈ ಹೀರೋನ ಹಿಂದೆ ಒಂದು ನೋವಿನ ಕಥೆ ಇದೆ. ಆದರೆ ಅಂದು ಅವರು ಅನುಭವಿಸಿದ ಆ ನೋವೇ ಇಂದು ಅವರನ್ನ ಹೀರೋವನ್ನಾಗಿಸಿದೆ.  

'ರಾಮಾಚಾರಿ' ಸೀರಿಯಲ್‌ನಲ್ಲಿ ಚಾರು-ಚಾರಿ ಮಧ್ಯೆ ಸಣ್ಣದಾಗಿ ಪ್ರೇಮದ ಗಾಳಿ ಬೀಸೋ ಹಾಗೆ ಕಾಣ್ತಿದೆ. ಚಾರು ಯಾವ್ಯಾವುದೋ ವೇಷದಲ್ಲಿ ರಾಮಾಚಾರಿಯನ್ನು ಇಂಪ್ರೆಸ್ ಮಾಡೋದಕ್ಕೆ ಟ್ರೈ ಮಾಡಿದರೂ ಆತ ಜಪ್ಪಯ್ಯ ಅಂತಿಲ್ಲ. ಈ ನಡುವೆ ಶೈಲೂ ಆಗಿ ಹೊಸ ಅವತಾರ ತಾಳಿರುವ ಚಾರು ಹೇಗಾದರೂ ಮಾಡಿ ರಾಮಾಚಾರಿ ಒಲವನ್ನು ಗಳಿಸಿಕೊಳ್ಳಬೇಕು ಅಂತ ಒದ್ದಾಡ್ತಿದ್ದಾಳೆ. ಈ ಸೀನ್‌ಗಳಲ್ಲಿ ರಿತ್ವಿಕ್ ಕೃಪಾಕರ್ ನಟನೆಯನ್ನು ಜನ ಮೆಚ್ಚಿಕೊಂಡಿದ್ದಾರೆ. ಅವರ ಆಕ್ಟಿಂಗ್ ಮಾತ್ರ ಅಲ್ಲ, ಅವರ ಲುಕ್‌ ಅನ್ನೂ ಸಾಕಷ್ಟು ಜನ ಹುಡುಗೀರು ಗಮನಿಸುತ್ತಿರುತ್ತಾರೆ. ಆದರೆ ಈಗಿರುವ ಈ ದೇಹ, ಈ ಲುಕ್‌ನ ಹಿಂದೆ ಒಂದು ನೋವಿನ ಕಥೆ ಇದೆ. ಕೆಲವು ವರ್ಷಗಳ ಹಿಂದೆ ಆದ ಅವಮಾನವೇ ಅವರು ಈಗ ಈ ರೀತಿ ಕಾಣಿಸಿಕೊಳ್ಳಲು ಕಾರಣವಾಗಿದೆ. ಹಾಗೆ ನೋಡಿದರೆ ಈ ಅವಮಾನ ನಮಗೆ ಸಣ್ಣದು ಅಂತ ಕಾಣಬಹುದು, ಆದರೆ ಇನ್ನು ಚಿಕ್ಕವರಾಗಿದ್ದ ರಿತ್ವಿಕ್‌ಗೆ ಇದು ತುಂಬಾನೆ ಹರ್ಟ್ ಮಾಡಿದೆ. ಆದರೆ ಸ್ನೇಹಿತರ ಮಾತಿಂದ ಮನನೊಂದು ಅವರು ತೆಗೆದುಕೊಂಡಿರೋ ರೈಟ್‌ ಡಿಸಿಶನ್ ಇವತ್ತು ಅವರನ್ನು ರಾಮಾಚಾರಿ ಸೀರಿಯಲ್‌ನ ಹೀರೋವಾಗಿಸಿ ಕರ್ನಾಟಕದ ಮನೆಮಾತಾಗುವ ಹಾಗೆ ಮಾಡಿದೆ.

ಅಂದಹಾಗೆ ರಿತ್ವಿಕ್ ಕೃಪಾಕರ್ ತನಗಾದ ಆ ಹಳೆಯ ಘಟನೆಯನ್ನು ಹೇಳಿದ್ದು 'ನಮ್ಮಮ್ಮ ಸೂಪರ್‌ಸ್ಟಾರ್' ವೇದಿಕೆಯಲ್ಲಿ. ‘ನನ್ನಮ್ಮ ಸೂಪರ್ ಸ್ಟಾರ್​’ನ ಮೊದಲ ಸೀಸನ್ ಹಿಟ್ ಆಯಿತು, ಹೆಸರೂ ಮಾಡಿತು. ಕೆಲವು ದಿನಗಳ ಹಿಂದೆ ಎರಡನೇ ಸೀಸನ್ ಆರಂಭ ಆಗಿದೆ. ಈಗ ಈ ವೇದಿಕೆಗೆ ಇದಕ್ಕೆ ‘ರಾಮಾಚಾರಿ’ ಸೀರಿಯಲ್‌ನಿಂದ ರಿತ್ವಿಕ್ ಹಾಗೂ ಅವರ ಜೋಡಿಯಾಗಿ ಚಾರುಲತಾ ಪಾತ್ರ ಮಾಡುತ್ತಿರುವ ಮೌನ ಗುಡ್ಡೆಮನೆ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆಗೆ ಆಗಮಿಸುವಾಗ ರಿತ್ವಿಕ್ ಅವರು ದಢೂತಿ ದೇಹದ ಮೇಕೋವರ್‌ನಲ್ಲಿ ಬಂದಿದ್ದಾರೆ. ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ತೀರ್ಥಂಕರ್ ಪ್ರಸಾದ್ ಆಗಿ ಕಾಣಿಸಿಕೊಂಡಿರುವ ಆಕಾಶ್ ಅವರೂ ಈ ವೇಳೆ ಜೊತೆಗಿದ್ದರು. ಚೆಂದದ ಮೈಕಟ್ಟಿನ ತರುಣನಾಗಿ ಇವರನ್ನು ನೋಡಿದವರು ಈ ಹೊಸ ವೇಷ ನೋಡಿ ಬಿದ್ದುಬಿದ್ದು ನಕ್ಕಿದ್ದಾರೆ. ಈ ವೇಳೆ ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ ರಿತ್ವಿಕ್.

ನಂಬರ್ ದೇವರಾಣೆ ಕೊಡಲ್ಲ; ಮದುವೆ ಆಗುವ ಹುಡುಗನ ಬಗ್ಗೆ ಸುಳಿವು ಕೊಟ್ಟ ಕಿರುತೆರೆ ನಟಿ ನಮ್ರತಾ ಗೌಡ

ಅದು ನಾಲ್ಕು ವರ್ಷಗಳ ಹಿಂದಿನ ಘಟನೆ. ಆಗ ರಿತ್ವಿಕ್ ಅವರು ಹೀಗಿರಲಿಲ್ಲ. ಭರ್ತಿ 125 ಕೆಜಿ ಇದ್ದರು. ಈಗ ಊಹಿಸಲೂ ಸಾಧ್ಯವಾಗದಷ್ಟು ದಪ್ಪಗಿದ್ದರು. ಈ ಬಗ್ಗೆ ಮಾತಾಡಿದ ರಿತ್ವಿಕ್‌ ‘ನಾಲ್ಕು ವರ್ಷಗಳ ಹಿಂದೆ ನನ್ನ ದೇಹದ ತೂಕ 125 ಕೆಜಿ ಇತ್ತು. ಫ್ರೆಂಡ್ಸ್(Friends) ಜತೆ ಆಚೆ ಹೋಗಿದ್ದೆ. ಎಲ್ಲರೂ ನನ್ನ ದೇಹದ ಸೈಜ್ (size)ನೋಡಿ ಹೀಯಾಳಿಸಿದರು. ತುಂಬಾನೇ ಬೇಸರ ಆಯ್ತು. ಅವತ್ತು ನಾನು ಸಣ್ಣ ಆಗಬೇಕು ಎಂದು ನಿರ್ಧರಿಸಿದೆ. ಈಗ 85 ಕೆಜಿ ಇದ್ದೀನಿ’ ಎಂದಿದ್ದಾರೆ. ಅವರು ನಿತ್ಯ ಜಿಮ್ ಮಾಡುತ್ತಾರೆ. ಸೇವನೆ ಮಾಡುವ ಆಹಾರದ ಬಗ್ಗೆಯೂ ಅವರು ಹೆಚ್ಚು ಗಮನ ಹರಿಸುತ್ತಾರೆ.

ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರಿಗೂ ಅವಮಾನ ಆಗುತ್ತಲೇ ಇರುತ್ತದೆ. ಆದರೆ ಅದನ್ನು ಪಾಸಿಟಿವ್ ಆಗಿ ತಗೊಂಡರೆ ಯಾವ ಎತ್ತರಕ್ಕೆ(HEIGHT) ಹೋಗಬಹುದು ಅನ್ನೋದಕ್ಕೆ ರಿತ್ವಿಕ್ ಸಾಕ್ಷಿಯಾಗಿದ್ದಾರೆ. ಹಾಗಂತ ದಪ್ಪಗಿರೋರೆಲ್ಲ ಸಣ್ಣಗಾದ್ರೆ ಹೀರೋ ಆಗೋದಕ್ಕಾಗಲ್ಲ. ಹಾಗಂತ ಡಿಪ್ರೆಶನ್‌(Depression) ಮಾಡಿಕೊಂಡು ಕೂರೋ ಬದಲು ಪಾಸಿಟಿವ್‌ ವಿಧಾನದಲ್ಲಿ ಯೋಚಿಸಿದರೆ ಮನಸ್ಸಿಗೆ ಖುಷಿಯಂತೂ ಆಗುತ್ತೆ. ರಿತ್ವಿಕ್ ಅವರು ತಮ್ಮ ಬದುಕಿನ(Life) ಅವಮಾನದ ಬಗ್ಗೆ ಮಾತಾಡಿದ್ದು ಕಲರ್ಸ್ ಕನ್ನಡ ಪ್ರೋಮೋದಲ್ಲಿ ಬಂದಿದೆ. ರಿತ್ವಿಕ್ ಅವರ ಈ ಮಾತನ್ನು ಹೆಚ್ಚಿನವರು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ. ‘ನನ್ನಮ್ಮ ಸೂಪರ್​​ಸ್ಟಾರ್’ ಸಂಚಿಕೆ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರ ಆಗಲಿದೆ. ಅಲ್ಲಿ ಈ ಬಾರಿ ರಿತ್ವಿಕ್ ಇರುತ್ತಾರೆ.

BBK 9: ಮಗ ರೂಪಿ, ಈ ಟಾಸ್ಕ್‌ ನೀನೇ ಗೆಲ್ಲಬೇಕಿತ್ತು! ತಂದೆ ಪ್ರೇಮದಲ್ಲಿ ಕಣ್ಣೀರಾದ ಆರ್ಯವರ್ಧನ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?