ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಉಳಿಯುವುದೇ ಒಂದು ಟಾಸ್ಕ್. ಆದರೆ ವಾರ ವಾರ ನಾಮಿನೇಟ್ ಆದಾಗ ಪ್ರೇಕ್ಷಕರ ವೋಟ್ ಕೇಳುವುದು ಮತ್ತೊಂದು ಟಾಸ್ಕ್. ಅಷ್ಟಕ್ಕೂ ಯಾವ ಆಧಾರದ ಮೇಲೆ ವೋಟ್ ಹಾಕುತ್ತಾರೆ? ನೋಡಿದ್ದೆಲ್ಲಾ ನಿಜಾನಾ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಿ ಮೋಸ್ಟ್ ಪಾಪ್ಯುಲರ್ ರಿಯಾಲಿಟಿ ಶೋ 'Bigg Boss ಸೀಸನ್-7' ನಲ್ಲಿ ಸ್ಪರ್ಧಿಗಳಾಗಿ ಸೆಲೆಬ್ರಿಟಿಗಳು ಆಗಮಿಸಿದ್ದು ಹೆಚ್ಚಾಗಿ ಟಿವಿ ವೀಕ್ಷಕರ ಗಮನ ಸೆಳೆದಿದೆ.
undefined
ದಿನೇ ದಿನೇ ಕುತೂಹಲ ಹೆಚ್ಚಿಸಿರುವ, ಭರವಸೆ ಮೂಡಿಸಿರುವ ಬಿಗ್ ಬಾಸ್ ಕೆಲ ದಿನಗಳಿಂದ ಬೋರ್ ಹೊಡೆಸುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಮಾತನಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಕಿರುತೆರೆಯಲ್ಲಿ ನಟನೆಯ ಮೂಲಕ ಪ್ರಖ್ಯಾತರಾದವರನ್ನು ಹೆಚ್ಚಾಗಿ ಪೋಕಸ್ ಮಾಡುತ್ತಿದ್ದಾರೆ. ಇನ್ನಿತರ ಸ್ಪರ್ಧಿಗಳನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಮನೆಯೊಳಗಿರುವ ಇವರನ್ನ ಕೊಲೆ ಮಾಡ್ತಾರಂತೆ.. ಶುರುವಾಯ್ತು ಲವ್‌ಸ್ಟೋರಿ..!
ಅಕ್ಟೋಬರ್ 13 ರಂದು ಗ್ರ್ಯಾಂಡ್ ಓಪನಿಂಗ್ ಪಡೆದ ಬಿಗ್ ಬಾಸ್ ಸೋಮವಾರದಿಂದ ಪ್ರತಿ ದಿನ ರಾತ್ರಿ 9ಗಂಟೆಗೆ ಪ್ರಸಾರವಾಗುತ್ತಿದೆ. ಶುರುವಾದ ಒಂದು ವಾರದಲ್ಲೇ ಬಿಗ್ ಬಾಸ್ ಮನೆಯಲ್ಲಿ ಲವ್ ಸ್ಟೋರಿ ಶುರುವಾಗಿ ಹೈ ಡ್ರಾಮವೂ ಹೆಚ್ಚಾಗಿದೆ. ಹಾಗಿದ್ರೆ ಎಲ್ಲರನ್ನೂ ತೋರಿಸುತ್ತಾರಲ್ಲ ಬಿಗ್ ಬಾಸ್? ಒಂದೂವರೆ ಗಂಟೆಯಲ್ಲಿ ಎಷ್ಟೆಲ್ಲಾ ತೋರಿಸೋಕೆ ಸಾಧ್ಯ? ಎಂಬೆಲ್ಲಾ ಪ್ರಶ್ನೆ ಮೂಡುವುದು ಸಹಜ.
ಗೌರಿ ಲಂಕೇಶ್ ಹತ್ಯೆ; ಯಾರಿಗೂ ತಿಳಿಯದ ವಿಚಾರ BB ಮನೆಯಲ್ಲಿ ಬಯಲು!
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಚಟುವಟಿಕೆಯನ್ನು ಒಂದೂವರೆ ಗಂಟೆಯಲ್ಲಿ ತೋರಿಸುವುದು ಕಷ್ಟವಾಗುವ ಕಾರಣದಿಂದ ವಾಹಿನಿಯ ವೆಬ್‌ಸೈಟ್ ನಲ್ಲಿ ಎಲ್ಲವನ್ನೂ ಹಾಕಲಾಗುತ್ತದೆ ಎಂದು ವಾಹಿನಿ ಸ್ಪಷ್ಟೀಕರಣ ಕೊಟ್ಟಿತ್ತು. ಆದರೆ ಅಲ್ಲಿಯೂ ಅಪ್ಲೋಡ್ ಮಾಡುವುದೆಲ್ಲಾ ನಿಜಾನಾ? ಹೇಳಿದಂತೆ ಆಗ್ತಿದ್ಯಾ? ಎಂಬ ಅನುಮಾನ ಮೂಡಿದೆ.
ಯಾರನ್ನು ಹೆಚ್ಚಾಗಿ ತೋರಿಸುತ್ತಾರೋ ಅವರಿಗೆ ಮಾತ್ರ ವೋಟ್ ಬೀಳುವುದು. ಕೆಲ ದಿನಗಳಿಂದ ಚೈತ್ರಾ ಕುಟ್ಟೂರ್, ಶೈನ್ ಶೆಟ್ಟಿ ಹಾಗೂ ಪ್ರೀಯಾಂಕಾರನ್ನು ಮಾತ್ರ ಹೆಚ್ಚಾಗಿ ಫೋಕಸ್ ಮಾಡುತ್ತಿದ್ದಾರೆ ಯಾಕೆ? ಬಿಗ್ ಬಾಸ್‌ಗೆ ದುನಿಯಾ ರಶ್ಮಿ, ಚೈತ್ರಾ ವಾಸುದೇವನ್, ರಾಜು ತಾಳಿಕೋಟೆ, ವಾಸುಕಿ ವೈಭವ್, ಜೈ ಜಗದೀಶ್ ಕಾಣಿಸುತ್ತಿಲ್ವಾ? ಅವರನ್ನು ಯಾಕೆ ಕಡೆಗಣಿಸಲಾಗಿದೆ? ವೀಕ್ಷಕರಲ್ಲಿ ಮೂಡಿರುವ ಅನುಮಾನಕ್ಕೆಲ್ಲಾ ಬಿಗ್ ಬಾಸ್ ಉತ್ತರಿಸಬೇಕು.