ಬಿಗ್ ಬಾಸ್ ಮನೆಯಿಂದ ಕಿಶನ್ ಔಟ್?

Published : Oct 19, 2019, 10:26 AM IST
ಬಿಗ್ ಬಾಸ್ ಮನೆಯಿಂದ ಕಿಶನ್ ಔಟ್?

ಸಾರಾಂಶ

ಬಿಗ್ ಬಾಸ್ ಮನೆಯ ಸೆಂಟರ್ ಆಫ್ ಅಟ್ರಾಕ್ಷನ್ ಕಿಶನ್ ಮನೆಯಿಂದ ಔಟ್ | ತಮಾಷೆ  ಮಾಡುತ್ತಾ, ನಕ್ಕು ನಗಿಸುತ್ತಾ ಎಲ್ಲರನ್ನು ಖುಷಿಯಾಗಿಡುತ್ತಿದ್ದರು ಕಿಶನ್ | ಕಿಶನ್ ಹೋಗಿರುವುದರಿಂದ ಮನೆಮಂದಿಯೆಲ್ಲಾ ಭಾವುಕ 

ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನು ನಕ್ಕು ನಗಿಸುತ್ತಾ, ಖುಷಿ ಖುಷಿಯಾಗಿಡುವ ಡ್ಯಾನ್ಸರ್ ಕಿಶನ್ ಬಿಗ್ ಬಾಸ್ ಮನೆಯಿಂದ ಆಚೆ ಹೋಗಿದ್ದಾರೆ.  

ಕಿಶನ್ ಗೆ ಜಾಂಡೀಸ್ ಲಕ್ಷಣಗಳು ಕಂಡು ಬಂದಿದ್ದು ವೈದ್ಯರ ಬಳಿ ಪರೀಕ್ಷೆ ಮಾಡಿಸಬೇಕೆಂದು ಅವರಿಗೆ ಕಪ್ಪು ಬಟ್ಟೆ ಕಟ್ಟಿ ಮನೆಯಿಂದ ಆಚೆ ಕರೆದುಕೊಂಡು ಹೋಗಲಾಗಿದೆ. ಹಾಗಾಗಿ ಇಂದಿನ ಎಪಿಸೋಡ್ ನಲ್ಲಿ ಸ್ವಲ್ಪ ಮಾತ್ರ ಕಿಶನ್ ಇರುತ್ತಾರೆ. ನಾಳೆಯಿಂದ ಇರುವುದಿಲ್ಲ. 

ಮನೆಯೊಳಗಿರುವ ಇವರನ್ನು ಕೊಲೆ ಮಾಡ್ತಾರಂತೆ.. ಶುರುವಾಯ್ತು ಲವ್ ಸ್ಟೋರಿ!

ಕಿಶನ್ ತಾಯಿಯನ್ನು ನೆನೆಸಿಕೊಂಡು ಭಾವುಕರಾಗುವುದು ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಒಮ್ಮೆ ಹಾಲು ಬಿಸಿ ಮಾಡುವಾಗ ಸೀಮೆಎಣ್ಣೆ ಸಿಲಿಂಡರ್ ಸಿಡಿದು ಮುಖ ವಿಕಾರವಾಗುತ್ತದೆ. ಇದು ಕಿಶನ್ ತಾಯಿಯನ್ನು ಡಿಪ್ರೆಶನ್ ಗೆ ತಳ್ಳುತ್ತದೆ. ಕನ್ನಡಿಯಲ್ಲಿ ಅವರ ಮುಖವನ್ನು ಅವರೇ ನೋಡಿಕೊಳ್ಳುವುದನ್ನು ಬಿಟ್ಟು ಬಿಟ್ಟರಂತೆ. ನಿಧಾನವಾಗಿ ಡಿಪ್ರೆಶನ್ ಗೆ ಹೋಗುತ್ತಾರೆ. ಕೊನೆ ಕೊನೆಗೆ ಅದರಿಂದ ಹೊರಬರಲಾಗದೇ ಆಲ್ಕೋಹಾಲಿಕ್ ಆಗುತ್ತಾರೆ. ಕೊನೆಗೆ ಅದರಲ್ಲೇ ಸಾವನ್ನಪ್ಪುತ್ತಾರೆ. 

BB7: ಬಯಲಾಯ್ತು ಮದ್ವೆ ಗುಟ್ಟು, ಅಗ್ನಿಸಾಕ್ಷಿ ಚಂದ್ರಿಕಾಳ ಸಿಂಗಲ್ ಲೈಫ್ ಗೆ ಬ್ರೇಕ್?

ಈ ಕಥೆಯನ್ನು ನೆನೆಸಿಕೊಂಡು ಕಿಶನ್ ಅಳುತ್ತಾರೆ. ನಾನು ತಾಯಿಯನ್ನು ಚೆನ್ನಾಗಿ ನೋಡಿಕೊಂಡಿಲ್ಲ ಎಂದು ಕಣ್ಣೀರಿಡುತ್ತಾರೆ. ಯಾರೂ ನನ್ನ ಹಾಗೆ ತಪ್ಪು ಮಾಡಬೇಡಿ. ನಿಮ್ಮ ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಹೇಳುತ್ತಾರೆ. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಇನ್‌ಫ್ಲುಯೆನ್ಸರ್‌ನ್ನು ಮಂಚಕ್ಕೆ ಕರೆದ್ನಾ ಮಾಜಿ ಬಿಗ್ ಬಾಸ್ ಸ್ಪರ್ಧಿ? ಚಾಟ್ ಸ್ಕ್ರೀನ್‌ಶಾಟ್ ಲೀಕ್
Lakshmi Nivasa:​ ನನ್ನನ್ನು ಸಾಯಿಸಿದವನಿಂದಲೇ ಕೇಕ್​ ಕಟ್​ ಮಾಡಿಸಿ ಸನ್ಮಾನಿಸಿದರು; ನಟಿ ವಿಜಯಲಕ್ಷ್ಮಿ ಭಾವುಕ