
ಚೈತ್ರಾ ಕೊಟ್ಟೂರ್ ಮತ್ತು ಶೈನ್ ಶಟ್ಟಿ ನಡುವೆ ಏನೋ ಒಂದು ನಡೆಯುತ್ತಿದೆ ಎಂಬಂತ ಸನ್ನಿವೇಶ ಬಿಗ್ ಬಾಸ್ ಮನೆಯಲ್ಲಿ ಕಂಡುಬಂತು. ಮೊದಲಿನಿಂದಲೂ ಚೈತ್ರಾ ಕೊಟ್ಟೂರ್ ಶೈನ್ ಶೆಟ್ಟಿ ಅವರ ಬಳಿ ನನ್ನ ಬಗ್ಗೆ ನಿಮಗೆ ಏನನ್ನಿಸುತ್ತದೆ ಎಂದು ಕೇಳಿಕೊಂಡೆ ಬಂದಿದ್ದರು.
ಟಾಸ್ಕ್ ಒಂದರ ಸಂದರ್ಭದಲ್ಲಿ ನೀವು ಯಾರನ್ನು ಇಷ್ಟಪಡುತ್ತೀರ? ಯಾರನ್ನು ಕೊಲೆ ಮಾಡ್ತೀರ? ಎಂಬ ಪ್ರಶ್ನೆಗಳನ್ನು ಇಡಲಾಯಿತು. ಇದಕ್ಕೆ ಎಲ್ಲ ಸ್ಪರ್ಧಿಗಳು ಚೈತ್ರಾ ಕೊಟ್ಟೂರ್ ಅವರ ಹೆಸರನ್ನೇ ಹೇಳಿದ್ದು ಕಣ್ಣೀರಿಗೆ ಕಾರಣವಾಯಿತು.
ಮಬ್ಬಾಗಿ ಕುಳಿತಿದ್ದ ಚೈತ್ರಾ ಕೊಟ್ಟೂರ್ ಅವರ ಜತೆ ಚಂದ್ರಿಕಾ ಮಾತನಾಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಶೖನ್ ಶೆಟ್ಟಿ ಬಳಿ ನೀವೇ ಸಮಾಧಾನ ಮಾಡಿ ಎಂದು ಚಂದ್ರಿಕಾ ಕೇಳಿಕೊಂಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ: ಯಾರಿಗೂ ತಿಳಿಯದ ವಿಚಾರ ದೊಡ್ಡ ಮನೆಯಲ್ಲಿ ಬಯಲು
ನನ್ನನ್ನು ಎಲ್ಲರೂ ದೂರ ಇಡುತ್ತಿದ್ದಾರೆ. ಒಂಟಿ ಎನ್ನಿಸುತ್ತಿದೆ ಎಂದು ಚೈತ್ರಾ ಕೊಟ್ಟೂರ್ ಹೇಳಿದಾಗ, ನೀವೇ ಹಾಗೆ ಭಾವಿಸಿದ್ದೀರಿ, ಪದೇ ಪದೇ ಮಾಡಿದ ತಮಾಷೆಯನ್ನೇ ಮಾಡಿದರೆ ಅದು ಇರಿಟೇಶನ್ ಗೆ ಕಾರಣವಾಗುತ್ತದೆ. ನೀವೇ ಜನರೊಂದಿಗೆ ಬೆರೆಯುತ್ತಿಲ್ಲ. ಜತೆಗೆ ನೀವು ಹೇಳಿದಂತೆ ನಾನಲ್ಲ ಎಂದು ಶೈನ್ ಶೆಟ್ಟಿ ಸ್ಪಷ್ಟನೆಯ ನ್ನು ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.