ಬಿಗ್‌ಬಾಸ್‌ಗೆ ಸಾರಾ ಅಣ್ಣಯ್ಯ? ಪ್ರೋಮೋದಲ್ಲಿ ಬ್ಲರ್ ಇಮೇಜ್! ಅಮೃತಧಾರೆಯಲ್ಲಿ ಕಾಣದ್ದಕ್ಕೆ ಇದೇ ಕಾರಣಾನಾ?

By Gowthami K  |  First Published Sep 26, 2024, 7:19 PM IST

ಅಮೃತಧಾರೆ ಸೀರಿಯಲ್‌ನಲ್ಲಿ ಮಹಿಮಾ ಪಾತ್ರಧಾರಿ ಸಾರಾ ಅಣ್ಣಯ್ಯ ಕಾಣಿಸಿಕೊಳ್ಳದಿರುವುದಕ್ಕೆ  ಕಾರಣ ಊಹಿಸಲಾಗಿದೆ. ಇಲ್ಲಿದೆ ಅದಕ್ಕೆ ಉತ್ತರ.


ಅಮೃತಧಾರೆ ಸೀರಿಯಲ್‌ನಲ್ಲಿ ಕಥೆ ಸಿಕ್ಕಾಪಟ್ಟೆ ಟ್ವಿಸ್ಟ್ ಆಂಡ್ ಟರ್ನ್ ತಗೊಳ್ತಿದೆ. ಸದ್ಯ ಅಬಾರ್ಷನ್ ಆಗಿ ಪ್ರಜ್ಞೆ ತಪ್ಪಿದ್ದ ಮಲ್ಲಿಗೆ ಪ್ರಜ್ಞೆ ಬಂದಿದೆ. ಅಮೃತಧಾರೆಯಲ್ಲಿ ಮಲ್ಲಿಯನ್ನು ಕಾಪಾಡಲು ಒಂದಲ್ಲ ಒಂದು ರೀತಿಯಲ್ಲಿ ಯಾರಾದರೂ ಇರುತ್ತಿದ್ದರು. ಒಮ್ಮೆ ಭೂಮಿಕಾ-ಗೌತಮ್ ಕಾಪಾಡಿದ್ದರು. ಆಮೇಲೆ ಮಹಿಮಾಳಿಂದ ಜೀವ ಉಳಿದಿತ್ತು.

 ಆದರೆ ವಿಷ್ಯ ಅದಲ್ಲ  ಮಲ್ಲಿಯ ಸೀಮಂತ ಶಾಸ್ತ್ರದಲ್ಲಿ ಮಹಿಮಾ ಮತ್ತು ಜೀವ ಜೋಡಿ ಯಾಕೆ ಕಾಣಿಸಿಕೊಳ್ಳೋದೇ ಇಲ್ಲ ಅಂತ ವೀಕ್ಷಕರು ಪ್ರಶ್ನೆ ಮಾಡಿದ್ದರು. ನೆಗೆಟಿವ್ ಶೇಡ್‌ನಲ್ಲಿದ್ದ ಮಹಿಮಾ ಪಾತ್ರ ಜೀವ ಮನೆ ಸೇರಿದ ಮೇಲೆ ಪಾಸಿಟಿವ್ ಆಗಿ ಬದಲಾಗಿತ್ತು. ಇದೀಗ ಮಹಿಮಾ ಮತ್ತು ಜೀವ ಈ ಸೀರಿಯಲ್‌ನಲ್ಲಿ ಕಾಣಿಸಿಕೊಳ್ಳದೆ ಬಹಳ ದಿನಗಳಾಗಿವೆ. ಅಟ್‌ಲೀಸ್ಟ್ ಮಲ್ಲಿ ಸೀಮಂತದಲ್ಲಾದರೂ ಅವರಿಬ್ಬರನ್ನು ಕರೆತರಬಹುದಿತ್ತು  ಅಂತ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಮಹಿಮಾ ಪಾತ್ರವನ್ನು ಸಾರಾ ಅಣ್ಣಯ್ಯ ಮತ್ತು ಜೀವನ್ ಪಾತ್ರವನ್ನು ಶಶಿ ಹೆಗ್ಡೆ ನಿರ್ವಹಿಸಿದ್ದರು.

Tap to resize

Latest Videos

undefined

ಬಿಗ್‌ಬಾಸ್ ಆರಂಭಕ್ಕೆ ಇನ್ನು ಕೇವಲ 5 ದಿನ, ರಾಜಾ-ರಾಣಿ ಶೋ ಮುಂಚೆಯೇ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ ವೈರಲ್!

ಅದಕ್ಕೆ ಈಗ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯು ಸಮಯ ಬಂತು ಎನ್ನಲಾಗುತ್ತಿದೆ. ಮಹಿಮಾ ಪಾತ್ರಧಾರಿ ಸಾರ ಅಣ್ಣಯ್ಯ ಅಮೃತಧಾರೆಯಲ್ಲಿ ಕಾಣಿಸಿಕೊಳ್ಳದಿರುವುದಕ್ಕೆ ಬಿಗ್‌ಬಾಸ್‌ ಕಾರಣ ಎನ್ನಲಾಗುತ್ತಿದೆ. ಅದಕ್ಕೆ ಪೂರಕ ಎಂಬಂತೆ ಹೊಸದಾಗಿ ಬಿಡುಗಡೆಯಾದ ಪ್ರೋಮೋದಲ್ಲಿ   ಸ್ಪರ್ಧಿಗಳ ಬ್ಲರ್ ಆಗಿರುವ, ಕ್ಲಾರಿಟಿ ಇಲ್ಲದ, ಅರ್ಧ ಮುಖವನ್ನು ತೋರಿಸಲಾಗಿದೆ. ಇದರಲ್ಲಿ ಸಾರಾ ಅವರ ಮುಖವನ್ನು ಹೋಲುವ ರೀತಿಯಲ್ಲಿ ಒಂದು ಫೋಟೋವಿದೆ. ಹೇಳಿ ಕೇಳಿ ಸಾರಾ ಅಣ್ಣಯ್ಯ ಈ ಹಿಂದೆ ಕನ್ನಡತಿ ಧಾರವಾಹಿಯಲ್ಲಿ "ವರು" ಎಂಬ ಪಾತ್ರದಲ್ಲಿ ಮಿಂಚಿದ್ದರು. ಹೀಗಾಗಿ ಸಾರಾ ಅಣ್ಣಯ್ಯಗೆ ಕಲರ್ಸ್ ಕನ್ನಡ ತವರು ಮನೆ ಇದ್ದಂತೆ.

ರಾಜಾ-ರಾಣಿ ಶೋ ಫಿನಾಲೆ ಸೆ.28ರಂದು ನಡೆಯಲಿದ್ದು, ಇಂದು ಬಿಡುಗಡೆಯಾಗಿರುವ ಪ್ರೋಮೋದಲ್ಲಿರುವ ಕೆಲವು ಸ್ಪರ್ಧಿಗಳ ಆಯ್ಕೆ ಅಂದು ನಡೆಯಲಿದೆ. ಹೀಗಾಗಿ ಅವರು ಬಿಗ್‌ಬಾಸ್‌ಗೆ ಹೋಗುತ್ತಿರುವುದಿಂದ ಅಮೃತಧಾರೆ ಧಾರವಾಹಿಯಲ್ಲಿ ಕಾಣಿಸುತ್ತಿಲ್ಲ ಎಂದು ಪ್ರೋಮೋ ಬಿಡುಗಡೆಯಾದ ಬಳಿಕ ಅನೇಕರು ಕಮೆಂಟ್‌ ಮಾಡಿದ್ದಾರೆ. ಇದು ಎಷ್ಟು ನಿಜವೋ ಸುಳ್ಳೋ ಗೊತ್ತಿಲ್ಲ ಆದರೆ ಇವೆಲ್ಲ ಗೊಂದಲಗಳಿಗೆ ಉತ್ತರ ಬಿಗ್‌ಬಾಸ್‌ ಆರಂಭವಾದ ಬಳಿಕ ತಿಳಿಯಲಿದೆ.

ಡಯೆಟ್‌ ನಲ್ಲಿ ಅನ್ನ ತಿನ್ನಬಾರದೆನ್ನುವುದು ತಪ್ಪು, ಅನ್ನ ತಿಂದೂ ತೂಕ ಇಳಿಸಿಕೊಳ್ಳಬಹುದು ಹೇಗೆ ಗೊತ್ತಾ?

ಇನ್ನು  ಬಿಡುಗಡೆಯಾದ ಪ್ರೋಮೋದಲ್ಲಿ ಯಾರೆಲ್ಲ ಇದ್ದಾರೆ ಎಂಬದನ್ನು ಊಹಿಸಿ ಇಲ್ಲಿ ನೀಡಲಾಗಿದೆ. ಫೋಟೋ ನೋಡಿ ನೀವೂ ಊಹಿಸಿ ಕಮೆಂಟ್‌ ಮಾಡಿ
1 ನಟಿ ಸಾರಾ ಅಣ್ಣಯ್ಯ ಅಥವಾ ನಟಿ ನಭಾ ನಟೇಶ್  
2 ನಟ ಕಿರಣ್ ರಾಜ್ ಅಥವಾ ನಟ ಅಕ್ಷಯ್ ನಾಯಕ್ 
3 ನಟಿ ಗೌತಮಿ ಜಾಧವ್ 
4 ನಟಿ  ಭಾವನಾ ಮೆನನ್, ನಟಿ ಪ್ರಿಯಾ (ಭೀಮಾ)  
5 ನಟಿ ಹರಿಪ್ರಿಯಾ ಅಥವಾ ನಿರೂಪಕಿ ಸುಕನ್ಯಾ    
6 ಸೋಷಿಯಲ್ ಮೀಡಿಯಾ ಫೇಮ್ ಭೂಮಿಕಾ ಬಸವರಾಜ್  
7 ನಟಿ ಪ್ರೇಮಾ , ತನ್ವಿ ಬಾಲರಾಜ್ , ನಟಿ ತನ್ವಿ ರಾವ್
8 ನಟ ಪಂಕಜ್ ನಾರಾಯಣ, ನಕಲಿ ದರ್ಶನ್ ಅಲಿಯಾಸ್ ಅವಿನಾಶ್

click me!