ರಸ್ತೆ ಅಪಘಾತ: ಬಿಗ್ ಬಾಸ್ ವಿನ್ನರ್ ರುಬೀನಾ ದಿಲೈಕ್ ಆಸ್ಪತ್ರೆಗೆ ದಾಖಲು

Published : Jun 12, 2023, 01:37 PM IST
ರಸ್ತೆ ಅಪಘಾತ: ಬಿಗ್ ಬಾಸ್ ವಿನ್ನರ್ ರುಬೀನಾ ದಿಲೈಕ್ ಆಸ್ಪತ್ರೆಗೆ ದಾಖಲು

ಸಾರಾಂಶ

ರಸ್ತೆ ಅಪಘಾತದಲ್ಲಿ ಬಿಗ್ ಬಾಸ್ ವಿನ್ನರ್, ನಟಿ ರುಬೀನಾ ದಿಲೈಕ್ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಹಿಂದಿ ಕಿರುತೆರೆಯ ಖ್ಯಾತ ನಟಿ, ಬಿಗ್ ಬಾಸ್ ವಿನ್ನರ್ ರುಬೀನಾ ದಿಲೈಕ್ ಕಾರು ಅಪಘಾತಕ್ಕೀಡಾಗಿದೆ. ಟ್ರಾಫಿಕ್ ಸಿಗ್ನಲ್‌ನಲ್ಲಿದ್ದ ರುಬೀನಾ ಕಾರಿಗೆ ಟಾಟಾ ಯೋಧ ಟ್ರಕ್ ಬಂದು ಗುದ್ದಿದೆ. ಫೋನ್‌ನಲ್ಲಿ ಮಾತನಾಡುತ್ತಾ ಟ್ರಕ್ ಚಲಾಯಿಸುತ್ತಾ ಚಾಲಕ ರುಬೀನಾ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ಬಳಿಕ ರಿಬೀನಾ ಅರನ್ನು ಅಸ್ಪತ್ರೆಗೆ ಕರೆದೊಯ್ಯಲಾಗಿದ್ದು ತಕ್ಷಣ ಚಿಕಿತ್ಸೆ ಕೊಡಿಸಲಾಗಿದೆ. ಈ ಬಗ್ಗೆ ರಿಬೀನಾ ಪತಿ, ನಟ ಅಭಿನವ್ ಶುಕ್ಲಾ ಮಾಹಿತಿ ಹಂಚಿಕೊಂಡಿದ್ದಾರೆ. ಅಭಿನವ್ ಶೇರ್ ಮಾಡಿರುವ ಫೋಟೋಗಳಲ್ಲಿ 
ಟಾಟಾ ಯೋಧದ ಬಂಪರ್ ಮತ್ತು ಮುಂಭಾಗಕ್ಕೆ ಹಾನಿಯಾಗಿದೆ. ಇನ್ನು ರುಬೀನಾ ಇದ್ದ ಕಾರು MG ಗ್ಲೋಸ್ಟರ್‌ನ ಹಿಂಭಾಗ ಹಾನಿಯಾಗಿದೆ. 

ಈ ಬಗ್ಗೆ ನಟಿ ರುಬೀನಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ತನಗೂ ಕೆಲವು ಗಾಯಗಳಾಗಿವೆ ಎಂದು ಹೇಳಿದ್ದಾರೆ. ಬೆನ್ನು ಮತ್ತು ತಲೆಗೆ ಪೆಟ್ಟು ಬಿದ್ದು ಆಘಾತಕ್ಕೊಳಗಾಗಿದ್ದೇನೆ ಎಂದು ಹೇಳಿದ್ದಾರೆ. ಆದರೆ, ವೈದ್ಯಕೀಯ ಪರೀಕ್ಷೆಗಳ ನಂತರ ಎಲ್ಲವೂ ಸರಿಯಾಗಿದೆ ಎಂದು ವರದಿಯಾಗಿದೆ. ಅಲ್ಲದೆ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ರಸ್ತೆಯಲ್ಲಿ ಜಾಗರೂಕರಾಗಿರಿ ಎಂದು ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ . ನಿಯಮಗಳು ನಮ್ಮ ಸುರಕ್ಷತೆಗಾಗಿ' ಎಂದು ಹೇಳಿದ್ದಾರೆ.

50 ದಿನಗಳ ಬಳಿಕ ಭಾರತಕ್ಕೆ ವಾಪಾಸ್ ಆದ ನಟಿ ರುಬೀನಾ; ಏರ್ಪೋರ್ಟ್‌ಲ್ಲೇ ತಬ್ಬಿ ಮುದ್ದಾಡಿದ ಪತಿ

ಇನ್ನು ಪತಿ ಅಭಿನವ್ ಪ್ರತಿಕ್ರಿಯೆ ನೀಡಿ, 'ಇಂದು ನಮಗೆ ಸಂಭವಿಸಿದೆ. ನಿಮಗೂ ಸಂಭಿವಸಬಹುದು. ಫೋನ್ ಹಿಡಿದು ಟ್ರಾಫಿಕ್ ಜಂಪ್ ಮಾಡುವ  ಈಡಿಯಟ್ಸ್ ಬಗ್ಗೆ ಎಚ್ಚರದಿಂದಿರಿ. ಆತ ನಗುತ್ತಾ ನಿಂತಿದ್ದ. ರುಬೀನಾ ಕಾರಿನಲ್ಲಿ ಇದ್ದಳು. ಸದ್ಯ ಆರೋಗ್ಯವಾಗಿ ಇದ್ದಾಳೆ. ಅವಳನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲಾಗಿದೆ. ಆ ಚಾಲಕನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿಮ್ಮನ್ನು ವಿನಂತಿಸುತ್ತೇನೆ' ಎಂದು ಮುಂಬೈ ಪೊಲೀಸರಲ್ಲಿ ಮನವಿ ಮಾಡಿದ್ದಾರೆ. 

ರುಬಿನಾ ದಿಲೈಕ್ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಮುಂಬೈ ಪೊಲೀಸರು ಅಭಿನವ್ ಶುಕ್ಲಾ ಅವರ ಟ್ವೀಟ್‌ಗೆ ಪ್ರತ್ಯುತ್ತರ ನೀಡಿದ್ದಾರೆ. 'ಘಟನೆ ನಡೆದ ಸ್ಥಳದ ಹತ್ತಿರದ ಪೊಲೀಸ್ ಠಾಣೆಗೆ ಘಟನೆಯನ್ನು ವರದಿ ಮಾಡಿ' ಎಂದು ಹೇಳಿದ್ದಾರೆ.

TV Actresses Transformation: ಈ ಟಾಪ್ ಸೀರಿಯಲ್ ನಟಿಯರು ಹೆಂಗಿದ್ದೋರು ಹೆಂಗಾದ್ರು ನೋಡಿ…

ನಟಿ ರುಬೀನಾ ದಿಲೈಕ್ 

ಪುನರ್ ವಿವಾಹ -ಏಕ್ ನಯೀ ಉಮೀದ್, ಸಿಂದೂರ್ ಬಿನ್ ಸುಹಾಗನ್, ಚೋಟಿ ಬಹು ಮತ್ತು ಶಕ್ತಿ: ಅಸ್ತಿತ್ವ ಕೆ ಅಹಸಾಸ್ ಕಿಯಂತಹ ಧಾರಾವಾಹಿಗಳಲ್ಲಿ ರುಬಿನಾ ದಿಲೈಕ್ ನಟಿಸಿದ್ದಾರೆ. ಹಿಂದಿ ಕಿರುತೆರೆ ಲೋಕದಲ್ಲಿ ಅತ್ಯಂತ ಜನಪ್ರಿಯ ನಟಿಯರಲ್ಲಿ ರುಬೀನಾ ಒಬ್ಬರಾಗಿದ್ದಾರೆ.  ನಟಿ ಬಿಗ್ ಬಾಸ್ 14 ರ ಭಾಗವಾಗಿದ್ದರು ಬಿಗ್ ಬಾಸ್ ಗೆದ್ದರು. ಬಿಗ್ ಬಾಸ್ ನಲ್ಲಿ ಪತಿ ಅಭಿನವ್ ಶುಕ್ಲಾ ಜೊತೆ ರುಬೀನಾ ಕಾಣಿಸಿಕೊಂಡರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss: ದುಷ್ಮನ್‌ಗೂ ಯಾರೂ ಹೀಗೆ ಮಾಡಲ್ಲ- ಕೊನೆಗೂ ರಿವೀಲ್‌ ಆಯ್ತು ರಘು ದ್ವೇಷದ ಕಾರಣ
ವೈವಾಹಿಕ ಜೀವನಕ್ಕೆ ಬಿಗ್ ಬಾಸ್ ಮಾಜಿ ಸ್ಪರ್ಧಿ, ಹಿಂದೂ ಮುಸ್ಲಿಂ ಸಂಪ್ರದಾಯದಂತೆ ಮದುವೆ