Gehana Vasisth: ಮುಸ್ಲಿಂ ಯುವಕನ ಜೊತೆ ಪೋರ್ನ್​ ಕೇಸ್​ ನಟಿ ಮದ್ವೆ: ಇಸ್ಲಾಂಗೆ ಮತಾಂತರ?

By Suvarna News  |  First Published Jun 11, 2023, 1:36 PM IST

ಕಳೆದ ವರ್ಷ ರಾಜ್​ ಕುಂದ್ರಾ ಅವರ ಪೋರ್ನ್​​ ವಿಡಿಯೋ ಕೇಸ್​ನಲ್ಲಿ ಸಿಕ್ಕಿಬಿದ್ದು ಅರೆಸ್ಟ್​ ಆಗಿದ್ದ ನಟಿ ಗೆಹನಾ ವಶಿಷ್ಠ ಮುಸ್ಲಿಂ ಯುವಕನ ಜೊತೆ ಮದುವೆಯಾಗಿದ್ದು, ಇದೀಗ ಭಾರಿ ಚರ್ಚೆಗೆ ಒಳಗಾಗಿದೆ. 
 


ಹಲವು ಸಿನಿಮಾಗಳು ಹಾಗೂ ವೆಬ್‌ ಸರಣಿಗಳಲ್ಲಿ ಅಭಿನಯಿಸಿರುವ ನಟಿ ಗೆಹನಾ ವಸಿಷ್ಠ (Gehana Vasisth) ಕಳೆದ ವರ್ಷ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ನಟಿ. ಬಾಲಿವುಡ್​ ತಾರೆ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್​ ಕುಂದ್ರಾ ಪೋರ್ನ್​ ವಿಡಿಯೋ ಕೇಸ್​ನಲ್ಲಿ ಸಿಕ್ಕಿಬಿದ್ದ ಸಂದರ್ಭದಲ್ಲಿ ಗೆಹನಾ ಅವರ ಹೆಸರು ಥಳಕು ಹಾಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಮುಂಬೈನ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದರು. ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ವೆಬ್‌ಸೈಟ್‌ಗೆ ಅಪ್ಲೋಡ್‌ ಮಾಡುತ್ತಿದ್ದರು ಎಂಬ ಗಂಭೀರ ಆರೋಪ  ನಟಿ ಗೆಹನಾ ಅಲಿಯಾಸ್‌ ವಂದನಾ ತಿವಾರಿ ಅವರ ಮೇಲಿತ್ತು.  ಬೋಲ್ಡ್​ ಚಿತ್ರಗಳ ಮೂಲಕ ಸಕತ್​ ಸುದ್ದಿಯಾಗುತ್ತಿರುತ್ತಾರೆ. ಬಿಕಿನಿ ಬಟ್ಟೆ, ತುಂಡುಗೆಗಳಲ್ಲಿ ಪೋಸ್​ ಕೊಟ್ಟು ಇವರು ಶೂಟಿಂಗ್​ ಮಾಡಿಸಿಕೊಳ್ಳುತ್ತಾರೆ. ಗೆಹನಾ ವಸಿಷ್ಠ್​ ಅವರ ಮೂಲ ಹೆಸರು ವಂದನಾ ತಿವಾರಿ. ಮೂಲತಃ ಅವರು ಛತ್ತೀಸ್​ಗಡದವರು. ಮಾಡೆಲ್​ ಆಗಿ ಜನಪ್ರಿಯತೆ ಪಡೆದ ಅವರು ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ನಾಯಕಿಯಾಗಿ ಹಾಗೂ ಐಟಂ ಡ್ಯಾನ್ಸರ್​ ಆಗಿಯೂ ಕಾಣಿಸಿಕೊಂಡು ಖ್ಯಾತಿ ಪಡೆದಿದ್ದಾರೆ. ಹಿಂದಿ ಕಿರುತೆರೆಯಲ್ಲೂ ಅವರು ನಟಿಸಿದ್ದಾರೆ. ಅಷ್ಟೇ ಅಲ್ಲದೇ ವೆಬ್​ ಸಿರೀಸ್​ಗಳಲ್ಲಿ ಕೂಡ ಗೆಹನಾ ವಸಿಷ್ಠ್​ ಅಭಿನಯಿಸಿದ್ದಾರೆ. 

ಇಂತಿಪ್ಪ ನಟಿ ಈಗ ಫ್ಯಾನ್ಸ್​ಗೆ ಶಾಕ್​ ಕೊಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಫೈಜನ್​ ಅನ್ಸಾರಿ (Faiser Ansari) ಅವರನ್ನು ಮದುವೆಯಾಗಿದ್ದಾರೆ ಗೆಹನಾ. ಇದಾದ ಬಳಿಕ ಅವರು  ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿರುವುದಾಗಿ ಹೇಳಲಾಗಿದೆ. ಅವರ ಮದುವೆ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ.  ಮುಸ್ಲಿಂ ಸಂಪ್ರದಾಯದ ರೀತಿಯಲ್ಲೇ ಇವರ ಮದುವೆ ನಡೆದಿದ್ದು, ಅದರ  ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ  ವೈರಲ್​ ಆಗಿವೆ. ಗೆಹನಾ ವಸಿಷ್ಠ್​ ಮತ್ತು ಫೈಜನ್​ ಅನ್ಸಾರಿಯ ಮದುವೆ (Gehana Vasisth Marriage) ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಫೈಜನ್​ ಅನ್ಸಾರಿ ಮತ್ತು ಗೆಹನಾ ವಸಿಷ್ಠ್​ ಅವರು ಬಹುಕಾಲದಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮದುವೆಯ ಕಾರಣಕ್ಕಾಗಿ ಅವರು ಮತಾಂತರ ಆಗಿಲ್ಲ. ಇದು ತಮ್ಮ ಸ್ವಂತ ನಿರ್ಧಾರ ಎಂದು ನಟಿ ಹೇಳಿದ್ದಾರೆ.  ಅಂದಹಾಗೆ ಫೈಜನ್​ ಅವರು ಸೋಶಿಯಲ್​ ಮೀಡಿಯಾ ಇನ್​ಫ್ಲೂಯನ್ಸರ್ ಆಗಿದ್ದಾರೆ.​ ಕೆಲವು ರಿಯಾಲಿಟಿ ಶೋಗಳಲ್ಲೂ ಅವರು ಸ್ಪರ್ಧಿಸಿದ್ದಾರೆ.  

Tap to resize

Latest Videos

ಇಂಚಿಂಚು ದೇಹ ತೋರಿಸಿ ನಟಿ ಪೂಜಾ ವಿಡಿಯೋಶೂಟ್​: ಎರಡು ಕಣ್ಣು ಸಾಲ್ದು ಅಂತಿದ್ದಾರೆ ಫ್ಯಾನ್ಸ್​!

ಇನ್ನು ಗೆಹನಾ ಅವರ ಕುರಿತು ಹೇಳುವುದಅದರೆ, ಅವರು ನಟಿಸಿದ್ದ ‘ಗಂಧಿ ಬಾತ್​ 3’ ವೆಬ್​ ಸರಣಿ ಸಕತ್​  ಸದ್ದು ಮಾಡಿತ್ತು.  ರಾಜ್​ ಕುಂದ್ರಾ ಕೇಸ್​ನಲ್ಲಿ ಅರೆಸ್ಟ್​ ಕೂಡ ಆಗಿದ್ದ ಇವರು ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ತಾವು ಅಶ್ಲೀಲ ಚಿತ್ರಗಳಲ್ಲಿ ನಟಿಸುವುದಿಲ್ಲ. ಬಟ್ಟೆ ಧರಿಸದೇ ಲೈವ್​ನಲ್ಲಿ ಬಂದಿದ್ದ ನಟಿ, ನನ್ನದು ಅಶ್ಲೀಲತೆ ಅಲ್ಲ, ಬದಲಿಗೆ ಬೋಲ್ಡ್​ನೆಸ್​ ಎಂದಿದ್ದರು.  ಮೂರು ನಿಮಿಷ ಫ್ಯಾನ್ಸ್​ ಜೊತೆ ಚಾಟ್​ (Chat) ಮಾಡಿದ್ದ ಗೆಹನಾ,  ನಿಮ್ಮ ಕಣ್ಣಿಗೆ ನಾನು ಅಶ್ಲೀಲವಾಗಿ ಕಾಣಿಸುತ್ತಿದ್ದೇನಾ ಎಂದು ಪ್ರಶ್ನಿಸಿದ್ದರು. ಇದರ ಬಗ್ಗೆ ಪರ-ವಿರೋಧ ಚರ್ಚೆ ಎದುರಾಗಿತ್ತು.  

ಇದಕ್ಕೂ ಮೊದಲು  ಶೂಟಿಂಗ್​ ಮಾಡುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಸುದ್ದಿಯಾಗಿದ್ದರು.  ಸರಿಯಾದ ಪೌಷ್ಠಿಕಾಂಶದ ಆಹಾರವಿಲ್ಲದೆ, ವಿಶ್ರಾಂತಿಯಿಲ್ಲದೆ ಕೆಲಸ ಮಾಡಿದ್ದರಿಂದ ಹೃದಯಾಘಾತ ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದರು. ಇಂತಿಪ್ಪ ನಟಿ ಈಗ ಇಸ್ಲಾಂ ಧರ್ಮ ಸೇರಿದ್ದಾರೆ ಎನ್ನಲಾಗಿದೆ. 

ಅವರ ಜೊತೆ ಮಲಗಿದ್ರಷ್ಟೇ ಸಿನಿಮಾದಲ್ಲಿ ಫೇಮಸ್​ ಆಗೋದಂತೆ! ನಟಿ ನೋವಿನ ನುಡಿ
 

click me!