ರೂಪೇಶ್-ಸಾನ್ಯ ಕುಚು ಕುಚು. ಬಿಗ್ ಬಾಸ್ ಆಯ್ಕೆ ಮಾಡಿಕೊಂಡ ಕಾರಣ ತಿಳಿಸಿದ ಜೋಡಿ...
ವೋಟ್ ಸೆಲೆಕ್ಟ್‌ನಲ್ಲಿ ಬಿಗ್ ಬಾಸ್ ಕನ್ನಡ ಮೊದಲ ಸೀಸನ್ ಪ್ರಸಾರವಾಗುತ್ತಿದೆ. ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯ ಮತ್ತು ನಟ ರೂಪೇಶ್ ಸ್ನೇಹ ಎಲ್ಲರ ಗಮನ ಸೆಳೆಯುತ್ತಿದೆ. ಜಗಳ ಮಾಡುತ್ತಾರೆ ತಕ್ಷಣ ನಗುತ್ತಾರೆ ಹೀಗೆ ಫನ್ನಿ ಫನ್ನಿಯಾಗಿರುತ್ತಾರೆ. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
'ಬಿಗ್ ಬಾಸ್ ಮನೆಯಲ್ಲಿ ಏನಾದರೂ ಕಲಿಯಬೇಕು ಎಂದು ಬಂದಿರುವುದು. ಇಲ್ಲಿ ಬಂದಿರುವ ಪ್ರತಿಯೊಬ್ಬರಿಂದಲ್ಲೂ ಒಂದೊಂದು ವಿಚಾರ ಕೇಳಿ ಅದನ್ನು ನನ್ನ ಲೈಫಲ್ಲಿ ಅಳವಡಿಸಿಕೊಳ್ಳುವುದಕ್ಕೆ ಇಷ್ಟ ಪಡುವೆ. ಬಿಗ್ ಬಾಸ್ ಮನೆಯಲ್ಲಿರುವವರಿಗೆ ಮತ್ತು ವೀಕ್ಷಕರಿಗೆ ಒಂದು ವಿಚಾರ ಕ್ಲಿಯರ್ ಮಾಡಬೇಕು ನಾನು ರೂಪೇಶ್ ಒಳ್ಳೆಯ ಸ್ನೇಹಿತರು. ನೀವು ಸುಮ್ಮನೆ ರೇಗಿಸುತ್ತೀರಾ. ಅವರಿಗೆ ನನಗೆ ಒಳ್ಳೆಯ ರ್ಯಾಪೋ ಇದೆ' ಎಂದು ಸಾನ್ಯ ಹೇಳಿದ್ದಾರೆ.
ಸಾನ್ಯ ಮಾತನಾಡಿದ ನಂತರ ರೂಪೇಶ್‌ಗೆ ಮರು ಪ್ರಶ್ನೆ ಮಾಡಿದ್ದಾರೆ. 'ನಾನು ನಿಮಗೆ ಏನಾಗಬೇಕು?' ಎಂದು. 'ಫ್ಯೂಚರ್ ಅಲ್ವಾ ಅಂತ ಕೇಳೋಲ್ಲ. ಖಂಡಿತಾ ಸಾನ್ಯ ಅವರಿಗೆ ಒಳ್ಳೆಯ ಫ್ರೆಂಡ್ ಮಾತ್ರ. ನೀವೆಲ್ಲರೂ ಯೋಚನೆ ಮಾಡಬೇಕು ಏಕೆಂದರೆ ಪ್ರತಿಯೊಬ್ಬರ ಬಳಿ ನಾನೇ ಹೋಗಿ ಮಾತನಾಡಿಸುವೆ. ಇಲ್ಲಿ ಮಾತನಾಡುವವರ ಸಂಖ್ಯೆ ಹೆಚ್ಚಿದೆ ಕೇಳುವವರ ಸಂಖ್ಯೆ ಕಡಿಮೆ ಇದೆ ಹೀಗಾಗಿ ನನ್ನ ಮಾತು ಕೇಳುವವರ ಜೊತೆ ಹೆಚ್ಚಿಗೆ ಮಾತನಾಡುತ್ತೇನೆ. ನಾನು ಸಾನ್ಯ ಒಳ್ಳೆಯ ಫ್ರೆಂಡ್ ಮಾತ್ರವಲ್ಲ ಆದರೆ ಈಗ ನಾವಿಬ್ಬರೂ ಒಳ್ಳೆ ಒಳ್ಳೆಯ ಫ್ರೆಂಡ್ಸ್' ಎಂದು ರೂಪೇಶ್ ಸ್ಪಷ್ಟನೆ ಕೊಟ್ಟಿದ್ದಾರೆ.
Bigg Boss OTT; ಕಳಪೆ ಎಂದಿದ್ದಕ್ಕೆ ಬಿಕ್ಕಿ ಬಿಕ್ಕಿ ಅಳುತ್ತ ಜೈಲು ಸೇರಿದ ಅಕ್ಷತಾ; ಗೆದ್ದು ಬೀಗಿದ ರಾಕೇಶ್
ಆರ್ಯವರ್ಧನ್ ಮತ್ತು ಜಯಶ್ರೀ ಅಡುಗೆ ಮನೆಯಲ್ಲಿ ಕುಳಿತಿರುವಾಗ ರೂಪೇಶ್‌ರನ್ನು ಕರೆದು ಸಾನ್ಯ ವಿಚಾರದಲ್ಲಿ ಸ್ಪಷ್ಟನೆ ಪಡೆಯುತ್ತಾರೆ. ನೀನು ಸಾನ್ಯಗೆ ಕಾಳು ಹಾಕುತ್ತಿರುವೆ ಎಂದು ಜಯಶ್ರೀ ಹೇಳಿದಾಗ ಇಲ್ಲ ಇಲ್ಲ ನನಗೆ ಅವಳ ಜೊತೆ ಕನೆಕ್ಟ್ ಆಗಿದೆ ನೀವು ಈ ರೀತಿ ಮಾತಾಡಬೇಡಿ ಎನ್ನುತ್ತಾರೆ.
ಮಧ್ಯರಾತ್ರಿ 1 ಗಂಟೆಗೆ ರೂಪೇಶ್ ಮಲಗುವುದಕ್ಕೆ ಬೆಡ್‌ರೂಮ್ ಪ್ರವೇಶಿಸುತ್ತಾರೆ. 'ನೀನು ಏನೇ ಮಾತನಾಡಬೇಕಿದ್ದರೂ ಇಲ್ಲಿಯೇ ಮಾತನಾಡು ಬೆಡ್ ಬಳಿ ಹೋದಾಗ ಹೇಳಬೇಡ ನನಗೆ ಕೇಳಿಸುವುದಿಲ್ಲ' ಎಂದು ರೂಪೇಶ್ ಹೇಳುತ್ತಾರೆ. 'ಇಲ್ಲ ಇಲ್ಲ ಈಗ ಹೇಳುವುದಿಲ್ಲ ಇಲ್ಲಿಂದ ಹೊರ ಹೋದಮೇಲೆ ಹೇಳುವೆ' ಎನ್ನುತ್ತಾಳೆ ಸಾನ್ಯ. 'ನಾವಿಬ್ಬರೂ ಇಲ್ಲಿ ಮಾತನಾಡಿದ್ದರೆ ಗುಸು ಗುಸು ಅಂತ ಜನರು ಅಂದುಕೊಳ್ಳುತ್ತಾರೆ ಎನ್ನಪ್ಪ ಇವರೂ ಇಷ್ಟೊಂದು ಮಾತನಾಡುತ್ತಾರೆ ಅಂತ. ನಿನ್ನನ್ನು ಟ್ರೋಲ್ ಅವರು ನೋಡು ಸಖತ್ ಅಗಿ ಬೈಯುತ್ತಾರೆ. ನಾನು ಹೊರಗಡೆ ಸಿಕ್ಕರೆ ನೀನು ಮಾತನಾಡಿಸುವುದಿಲ್ವಾ?. ನಮ್ಮ ಮನೆಯವರು ಟಿವಿಯಲ್ಲಿ ನನ್ನನ್ನು ನೋಡಿ ಯಾಕೋ ಹಿಂಗಾದೆ ನೀನು ಅಂತ ಹೇಳುತ್ತಾರೆ.' ಎಂದು ರೂಪೇಶ್ ಹೇಳುತ್ತಾರೆ.
Bigg Boss OTT; ರಾತ್ರಿ 1 ಮೊಟ್ಟೆ ಕೊಟ್ಟಿದ್ರೆ ಏನಾಗ್ತಿತ್ತು, ಗುರೂಜಿಗೆ ಸೋನು ಗೌಡ ಸಖತ್ ಕ್ಲಾಸ್
ಬಿಗ್ ಬಾಸ್ ಮನೆಯಿಂದ ಹೊರ ಹೋದ ಮೇಲೆ ನಿಮ್ಮ ತಾಯಿ ಯಾಕೆ ಅವನ ಜೊತೆ ಅಷ್ಟೊಂದು ಮಾತನಾಡಿದೆ ಎಂದು ಕೇಳಿದ್ದರೆ ಏನು ಹೇಳುತ್ತೀಯಾ ಅಂದಿದಕ್ಕೆ ನಾವಿಬ್ಬರೂ ಸ್ನೇಹಿತರು ಅಂದ್ಮೇಲೆ ಯಾಕೆ ಹೆದರ ಬೇಕು ಎಂದು ಸಾನ್ಯ ಹೇಳುತ್ತಾಳೆ. ಇಬ್ಬರೂ ಆದಷ್ಟು ಗುಸು ಗುಸು ಎಂದು ಮಾತನಾಡುತ್ತಿರುತ್ತಾರೆ ತಕ್ಷಣವೇ ಬಿಗ್ ಬಾಸ್ ಅಲರ್ಟ್ ಮಾಡುತ್ತಾರೆ. 'ಸಾನ್ಯ ನಿಮ್ಮ ಮೈಕನ್ನು ಸರಿಯಾಗಿ ಧರಿಸಿಕೊಳ್ಳಿ' ಎಂದು ಹೇಳುತ್ತಾರೆ. ಬಿಡ್ ರೂಮ್‌ನಲ್ಲಿ ಮಲಗಿದ್ದ ಪ್ರತಿಯೊಬ್ಬರೂ ತಿರುಗಿ ನೋಡುತ್ತಾರೆ ಅಲ್ಲಿಗೆ ಇವರು ಮಾತು ನಿಲ್ಲಿಸುತ್ತಾರೆ.