ರೂಪೇಶ್‌ ಶೆಟ್ಟಿ ಬೇಕೆಂದು ದೂರ ಉಳಿಯುತ್ತಿದ್ದಾನೆ, ನಮ್ಮ ಸಂಬಂಧ ಬದಲಾಗುವುದಿಲ್ಲ: ಸಾನ್ಯಾ ಅಯ್ಯರ್

By Vaishnavi Chandrashekar  |  First Published Dec 4, 2022, 3:45 PM IST

ಬಿಗ್ ಬಾಸ್ ಜರ್ನಿಯಲ್ಲಿ ಭೇಟಿ ಆದ ಅದ್ಭುತ ವ್ಯಕ್ತಿ ಬಗ್ಗೆ ಮಾತನಾಡಿದ ಸಾನ್ಯ ಅಯ್ಯರ್. ಸುದೀಪ್ ವಾರ್ನಿಂಗ್‌ಯಿಂದ ರೂಪಿ ದೂರ ಆಗಿದ್ದು ನಿಜ....


ಬಿಗ್ ಬಾಸ್ ಒಟಿಟಿ ಮತ್ತು ಸೀಸನ್ 9 ರಿಯಾಲಿಟಿ ಶೋಯಿಂದ ಹೊರ ಬಂದ ನಂತರವೂ ಸುದ್ದಿಯಲ್ಲಿರುವ ಸಾನ್ಯಾ ಅಯ್ಯರ್ ರೂಪೇಶ್ ಶೆಟ್ಟಿ ಫ್ರೆಂಡ್‌ಶಿಪ್‌ ಬಗ್ಗೆ ಮಾತನಾಡಿದ್ದಾರೆ. 

ಸಾನ್ಯ ಮಾತು:

Tap to resize

Latest Videos

'ಬಿಗ್ ಬಾಸ್‌ ಒಂದು ಅಡ್ವೆಂಜರ್ ಜರ್ನಿ ಆಗಿರುವ ಕಾರಣ ಸ್ಪರ್ಧಿಸಲು ನಾನು ಆಯ್ಕೆ ಮಾಡಿಕೊಂಡೆ. ಓಟಿಟಿ ಫಿನಾಲೆ ಸ್ಟೇಜ್‌ನಲ್ಲಿ ನಿಂತುಕೊಂಡ ಕ್ಷಣವನ್ನು ಜೀವನದಲ್ಲಿ ಎಂದೂ ಮರೆಯುವುದಿಲ್ಲ. ಬಿಗ್ ಬಾಸ್ ಜೊತೆ ನನ್ನ ಜರ್ನಿ ಇಷ್ಟೊಂದು ದೂರ ಬರುತ್ತೀನಿ ಅಂದುಕೊಂಡಿರಲಿಲ್ಲ. ಫಿನಾಲೆ ದಿನವೇ ನಾವು ಟಿವಿ ಬಿಗ್ ಬಾಸ್ ಪ್ರವೇಶ ಮಾಡುತ್ತೀವಿ ಎಂದು ಗೊತ್ತಾಗಿದ್ದು ಆಗ ಸರ್ಪ್ರೈಸ್ ಆಯ್ತು. ಈ ರಿಯಾಲಿಟಿ ಶೋ ಮೂಲಕ ನಾನು ಸಾಕಷ್ಟು ಒಳ್ಳೆ ವ್ಯಕ್ತಿಗಳನ್ನು ಭೇಟಿ ಮಾಡಿರುವೆ. ರೂಪೇಶ್ ಶೆಟ್ಟಿ, ಜಶ್ವಂತ್ ಮತ್ತು ನಂದಿನಿ ನನಗೆ ಬೆಸ್ಟ್‌ ಫ್ರೆಂಡ್ ಆಗಿ ಬಿಟ್ಟರು. ರಿಯಾಲಿಟಿ ಶೋ ಮೂಲಕ ನಾನು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದನೆ ಮಾಡಲು ಸಾಧ್ಯವಾಗಿದೆ ನನ್ನ ಕಷ್ಟ ಸಮಯದಲ್ಲಿ ನನ್ನ ಪರ ನನ್ನ ಫ್ಯಾಮಿಲಿ ಅಗಿ ಸ್ನೇಹಿತರು ನಿಂತಿದ್ದಾರೆ' ಎಂದು ಸಾನ್ಯ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ನನ್ನ ಮನಸ್ಸು ಪದೇ ಪದೇ ಹೇಳುತ್ತಿತ್ತು ಈ ವಾರ ನಾನೇ ಮನೆಯಿಂದ ಹೊರ ನಡೆಯುವುದು ಎಂದು ಹೀಗಾಗಿ ನನಗೆ ಇದರಿಂದ ಸರ್ಪ್ರೈಸ್ ಆಗಲಿಲ್ಲ. ಓಟಿಟಿಯಿಂದ ಟಿವಿ ಪ್ರವೇಶ ಮಾಡಿರುವುದಕ್ಕೂ ಯಾವ ಬದಲಾವಣೆಗಳನ್ನು ಮಾಡಿಲ್ಲ ಏಕೆಂದರೆ ಸಂಪೂರ್ಣ ಫಾರ್ಮೆಟ್‌ ನಮಗೆ ಗೊತ್ತಿತ್ತು ಜನರು ಬೇರೆ ಇದ್ದರು ಟಾಸ್ಕ್‌ ಬೇರೆ ಇದೆ ಅಲ್ಲದೆ ಬಂದವರು ಟಫ್‌ ಫೈಟ್‌ ಕೊಡುತ್ತಿದ್ದರು.' ಎಂದು ಸಾನ್ಯ ಹೇಳಿದ್ದಾರೆ.

ರೂಪೇಶ್‌ ಸಂಬಂಧ:

'ರೂಪೇಶ್ ಶೆಟ್ಟಿ ಮತ್ತು ನಾನು ಸ್ನೇಹಿತರು ಅನ್ನೋ ವಿಚಾರ ಎಲ್ಲರಿಗೂ ಗೊತ್ತಿದೆ. ರೂಪೇಶ್ ಒಳ್ಳೆ ಮನಸ್ಸಿನ ಹುಡುಗ. ಶೋ ಮುಗಿಯುವ ಹಂತದಲ್ಲಿ ನಾನು ರೂಪೇಶ್‌ನ ಒಮ್ಮೆ ಭೇಟಿ ಮಾಡಬೇಕು. ಮೂರು ತಿಂಗಳುಗಳ ಕಾಲ ದಿನ 24 ಗಂಟೆ ಒಟ್ಟಿಗೆ ಜೀವನ ನಡೆಸುವ  ಸಂದರ್ಭದಲ್ಲಿದ್ದೆವು ಹೀಗಾಗಿ ಕನೆಕ್ಟ್‌ ಆಗಿರುವುದು. ಸುದೀಪ್ ಸರ್ ವಾರ್ನಿಂಗ್ ಕೊಟ್ಟಿರುವುದರಲ್ಲಿ ತಪ್ಪಿಲ್ಲ ಏಕೆಂದರೆ ನಾವು ಸದಾ ಒಟ್ಟಿಗೆ ಇರುವುದರಿಂದ ನಮ್ಮನ್ನು ಕ್ಯಾಮೆರಾ ನೋಡುತ್ತಿದೆ ಎಂದು ಲೆಕ್ಕ ಮಾಡುವುದಕ್ಕೆ ಆಗುವುದಿಲ್ಲ. ಆ ಕ್ಷಣದಿಂದ ನಾವು ಹುಷಾರ್ ಆಗಿದ್ದೀವಿ' ಎಂದಿದ್ದಾರೆ. ಸಾನ್ಯ.

ಸಾನ್ಯ ಅಯ್ಯರ್ ಮೈ ಮೇಲೆ ಕಾಮಾಕ್ಯ ದೇವಿ; ವೈರಲ್ ವಿಡಿಯೋ ಹಿಂದಿರುವ ಗುಟ್ಟು ಏನು?

ರೂಪೇಶ್ ದೂರ ಗಿದ್ದು ನಿಜವೇ?

'ಸುದೀಪ್ ಸರ್ ವಾರ್ನಿಂಗ್‌ ಕೊಟ್ಟ ನಂತರ ರೂಪೇಶ್‌ ನನ್ನ ಜೊತೆ ವರ್ತಿಸುವ ರೀತಿ ಬದಲಾಗಿದೆ ಹೊರಗಿನ ಜನರು ನಮ್ಮನ್ನು ಹೇಗೆ ನೋಡುತ್ತಾರೆಂದು ಚಿಂತಿಸಿ ರೂಪೇಶ್ ನನ್ನಿಂದ ದೂರವಾದರು. ರೂಪಿ ಇಮೇಜ್‌ ಬಗ್ಗೆ ಹೆಚ್ಚಿಗೆ ಚಿಂತಿಸುತ್ತಿದ್ದರು . ಹೀಗಾಗಿ ರೂಪಿ ದೂರ ಉಳಿಯುವ ಪ್ರಯತ್ನ ಮಾಡಿದ್ದರು. ಆದರೆ ಈ ರೀತಿ ಘಟನೆಗಳಿಂದ ನಮ್ಮ ಸಂಬಂಧ ಬದಲಾಗುವುದಿಲ್ಲ. ರೂಪೇಶ್ ತುಂಬಾ ಸೆಂಸಿಟಿವ್ ಮತ್ತು ಎಮೋಷನ್‌ ವ್ಯಕ್ತಿ. ಆ ಕ್ಷಣ ನಾನು ನಿರ್ಧಾರ ಮಾಡಿದೆ ರೂಪಿಗೆ ಅವರ ಪರ್ಸನಲ್ ಸ್ಪೇಸ್ ಕೊಡಬೇಕು ಎಲ್ಲವೂ ಸರಿಹೋಗುತ್ತದೆ' ಎಂದು ಸಾನ್ಯ ಹೇಳಿದ್ದಾರೆ.

ನೆಚ್ಚಿನ ಟಾಸ್ಕ್‌:

'ಸುಮಾರು 6 ಗಂಟೆಗಳ ಕಾಲ ನಾನು ನಿಂತುಕೊಂಡು ಓವರ್ ನೈಟ್‌ ಟಾಸ್ಕ್‌ ಗೆದ್ದಿರುವೆ. ಆ ಕ್ಷಣದಿಂದ ನನ್ನ ಕಾನ್ಫಿಡೆನ್ಸ್‌ ಹೆಚ್ಚಿಗೆ ಅಯ್ತು. ಆ ಇನ್ನಿತ್ತರ ಸ್ಪರ್ಧಿಗಳಿಗೆ ನನ್ನ ಮೇಲೆ ಧೈರ್ಯ ಬಂತು ಟೀಂಗೆ ಸೇರಿಸಿಕೊಳ್ಳಲು ಆರಂಭಿಸಿದ್ದರು. ಸೀಸನ್ 9 ವಿನ್ನರ್ ಆಗಿ ನಾನು ರೂಪೇಶ್‌ ಶೆಟ್ಟಿನ ನೋಡಲು ಇಷ್ಟ ಪಡುತ್ತೀನಿ ಆಟ ಮತ್ತು ವೃತ್ತಿ ಜೀವನದ ಬಗ್ಗೆ ಹೆಚ್ಚಿಗೆ ಗಮನ ಕೊಡುತ್ತಾರೆ. ಈ ಶೋ ರೂಪಿ ಗೆದ್ದೆ ತುಳು ಸಿನಿಮಾ ಇಂಡಸ್ಟ್ರಿಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುವ ಮನಸ್ಸು ಮಾಡಿದ್ದಾನೆ. ನನಗೆ ಸಿನಿಮಾ ಆಫರ್‌ಗಳು ಬರುತ್ತಿದೆ. ಸಮಯ ತೆಗೆದುಕೊಂಡು ಒಳ್ಳೆಯ ಪಾತ್ರದ ಮೂಲಕ ಲಾಂಚ್ ಆಗುವೆ' ಎಂದು ಸಾನ್ಯ ಹೇಳಿದ್ದಾರೆ.

click me!