ಸಾನ್ಯ ಅಯ್ಯರ್ ಮೈ ಮೇಲೆ ಕಾಮಾಕ್ಯ ದೇವಿ; ವೈರಲ್ ವಿಡಿಯೋ ಹಿಂದಿರುವ ಗುಟ್ಟು ಏನು?

By Vaishnavi Chandrashekar  |  First Published Dec 4, 2022, 2:49 PM IST

ಪುಟ್ಟಗೌರಿ ಮೈ ಮೇಲೆ ಕಾಮಾನ್ಯದೇವಿ. ಹಳೆ ವಿಡಿಯೋ ಈಗ ವೈರಲ್...ಗಿಮಿಕ್ ಎಂದು ಕಾಲೆಳೆದ ನೆಟ್ಟಿಗರು...


ಮಂಗಳಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟ ಸಾನ್ಯಾ ಅಯ್ಯರ್ ರಿಯಾಲಿಟಿ ಶೋ ಮೂಲಕ ಕನ್ನಡ ವೀಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ. ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ನಂತರ ಬಿಗ್ ಬಾಸ್ ಒಟಿಟಿ ಸೀಸನ್ 1 ಅದಾಗ ನಂತರ ಟಿವಿ ಬಿಗ್ ಬಾಸ್ ಸೀಸನ್ 9ರಲ್ಲಿ ಸ್ಪರ್ಧಿಸಿದ್ದಾರೆ. 18 ಸ್ಪರ್ಧಿಗಳಿರುವ ಈ ರಿಯಾಲಿಟಿ ಶೋನಲ್ಲಿ ಹೊರ ಬಂದ 6ನೇ ಸ್ಪರ್ಧಿ ಸಾನ್ಯ. ಸಾನ್ಯ ಹೊರ ಬರುತ್ತಿದ್ದಂತೆ ಸಂದರ್ಶನ -ಫೋಟೋಶೂಟ್ ಅಂತ ಸಖತ್ ಬ್ಯುಸಿಯಾಗಿದ್ದಾರೆ ಈ ನಡುವೆ ಮತ್ತೊಂದು ವಿಚಾರ ಸುದ್ದಿಯಾಗುತ್ತಿದೆ ...

ಹೌದು! ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋವೊಂದರಲ್ಲಿ ಮಹಿಷಾಸುರ ಮರ್ದಿನಿ ರೂಪದಲ್ಲಿ ದೇವಿ ವೇಷ ಧರಿಸಿ ಸಾನ್ಯ ಅಯ್ಯರ್ ನೃತ್ಯ ಮಾಡಿದ್ದಾರೆ. ಶೋ ಶುರುವಾಗುವ ಮುನ್ನ ಅಲಂಕಾರ ಮಾಡಿಕೊಂಡು ಕುಳಿತಿದ್ದ ಸಾನ್ಯ ಮೇಲೆ ದೇವಿ ಆವಾಹನೆಯಾಗಿದೆ ಎನ್ನಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರು ವಿಡಿಯೋದಲ್ಲಿ ಸಾನ್ಯ ವಿಚಿತ್ರವಾಗಿ ವರ್ತಿಸಿದ್ದಾರೆ ಸೆಟ್‌ನಲ್ಲಿದ್ದವರು ಗಾಬರಿಗೊಂದು ನೀರು ಕುಡಿಸಿ ಸಮಾಧಾನ ಮಾಡಿದ್ದಾರೆ ಆದರೆ ಅಲ್ಲಿಗೆ ನಿಂತಿಲ್ಲ. ಹತ್ತಿರ ಬರಬೇಡಿ ದೂರ ನಿಲ್ಲಿ ಎಂದು ಸಾನ್ಯ ಹೇಳುತ್ತಿದ್ದ ಮಾತುಗಳನ್ನು ಕೇಳಿ ತಾಯಿ ಗಾಬರಿಗೊಂದು ಆದಷ್ಟು ಬೇಗ ಎಪಿಸೋಡ್ ಚಿತ್ರೀಕರಣ ಮುಗಿಸಿದ್ದಾರೆ. ಶೂಟ್ ನಡೆದು ವೇಷ ಮತ್ತು ಮೇಕಪ್ ತೆಗೆದ ಮೇಲೆ ಸಾನ್ಯ ನಾರ್ಮಲ್ ಆಗಿ ವರ್ತಿಸಿದ್ದಾರೆ. ನೃತ್ಯ ಮಾಡುವಾಗಲು ಸಾನ್ಯ ಕೈಗೆ ತ್ರಿಶೂಲ ಕೊಡಲು ತಂಡವರು ಹೆದರಿಕೊಳ್ಳುತ್ತಿದ್ದರಂತೆ.

Tap to resize

Latest Videos

ಸಾನ್ಯ ತಾಯಿ ಮಾತು: 

'ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಸಾನ್ಯ ವೇಷ ಧರಿಸಿಕೊಂಡಾಗ ವರ್ತನೆ ನಡಿ ನನಗೆ ಶಾಕ್ ಆಯ್ತು.  ಅಲ್ಲಿದ್ದವರು ಗಾಬರಿ ಆದರು. ಸಾನ್ಯ ತುಂಬಾ ಮೆಚ್ಯೂರ್ ಆಗಿ ಮಾತನಾಡುವ ಹುಡುಗಿ  ನಾವೆಲ್ಲರೂ ಆಕೆಯನ್ನು ಅಜ್ಜಿ ಅಂತಾನೇ ರೇಗಿಸುತ್ತೇವೆ. ದೇವಿ ವೇಷ ಧರಿಸುವ ನಿರ್ಧಾರ ಆದಾಗಲೇ ಆಗ ದೇವಿಯನ್ನು ಮೈ ಮೇಲೆ ಆವಾಹನೆಯಾಗುವಂತೆ ಬೇಡಿಕೊಳ್ಳುತ್ತಿದ್ದಳ. ಸಾನ್ಯ ಮತ್ತು ನಾನು ದೀಕ್ಷೆ ತೆಗೆದುಕೊಂಡಿದ್ದೇವೆ. ಹಾಗಂತ ಆಕೆ ಸನ್ಯಾಸತ್ವ ತೆಗೆದುಕೊಳ್ಳುತ್ತಾಳೆಂದು ಅರ್ಥವಲ್ಲ. ಯಾವುದು ಬೇಕು ಅದನ್ನು ಆಕೆ ಆಯ್ಕೆ ಮಾಡಿಕೊಳ್ಳಲಿ ಇದರಿಂದ ನನಗೆ ಖಂಡಿತ ಭಯ ಅಥವಾ ಬೇಸರ ಇಲ್ಲ, ಆಕೆಗೆ ಸಂಪೂರ್ಣ ಫ್ರೀಡಂ ಕೊಟ್ಟಿದ್ದೇನೆ' ಎಂದು ಸಾನ್ಯ ತಾಯಿ ದೀಪಾ ಖಾಸಗಿ ಸಂದರ್ಶನದಲ್ಲಿ ಹೇಳಿದ್ದಾರೆ.

ಟಿವಿಯಲ್ಲಿ ಅಮ್ಮ ನೋಡಿದ್ರೆ ಬೈತಾರೆ: ರೂಪೇಶ್-ಸಾನ್ಯ ನಡುವೆ ಏನಿದು ಗುಸು ಗುಸು

ಬಿಬಿ ಮನೆಯಲ್ಲಿ ಕಣ್ಣಿರಿಟ್ಟ ಸಾನ್ಯ: 

'ನನ್ನ ತಾಯಿ ಡಬಲ್ ಡಿವೋರ್ಸಿ. ಒಂದು ನನ್ನ ಬಯೋಲಾಜಿಕಲ್ ಫಾದರ್ ಮತ್ತೊಬ್ಬರು ಫಾದರ್ ಫಿಗರ್. ಬಯೋಲಾಜಿಕಲ್ ಫಾದರ್ ಜೊತೆ ನನ್ನ ಸಂಬಂಧ ಅಷ್ಟಕ್ಕೆ ಅಷ್ಟೆ ಏಕೆಂದರೆ ಚಿಕ್ಕ ವಯಸ್ಸಿಗೆ ಅವರಿಂದ ದೂರ ಉಳಿದುಬಿಟ್ಟೆ. ಫಾದರ್‌ ಫಿಗರ್‌ನ ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿರುವೆ ನನ್ನ ತಾಯಿಗೆ ಸ್ನೇಹಿತೆ ಅಗಿರುವಾಗಲೂ ನಾನು ಅವರನ್ನು ನೋಡಿರುವೆ. ಅವರಿಬ್ಬರೂ ಮದುವೆ ಆಗುತ್ತಾರೆ. ಮದ್ವೆ ಆದ್ಮೇಲೆ ತಾಯಿಗೆ ಅನಿಸುತ್ತದೆ ಇದು ಆಕೆ ತೆಗೆದುಕೊಂಡ ತಪ್ಪು ನಿರ್ಧಾರ ಅಂತ. ಸ್ನೇಹಿತನಾಗಿದ್ದಾಗ ಸಂಬಂಧ ಚೆನ್ನಾಗಿತ್ತು ಆದರೆ ಪಾರ್ಟನರ್‌ ಆದಾಗ ಚೆನ್ನಾಗಿರಲಿಲ್ಲ. ಇದುವರೆಗೂ ನಾನು ನನ್ನ ಫಾದರ್‌ ಫಿಗರ್‌ ಜೊತೆ ಒಂದು ವಿಚಾರ ಹೇಳಿಕೊಂಡಿಲ್ಲ, ಏನೆಂದರೆ ಅವರು ನನ್ನ ಅಮ್ಮನ ಜೀವನದಲ್ಲಿ ಉಳಿಯಬೇಕು ಅಂತ ನನಗೆ ಕೆಟ್ಟ ಹೆಸರು ತರುತ್ತಾರೆ' ಎಂದು ಸಾನ್ಯ ಘಟನೆ ಬಗ್ಗೆ ವಿವರಿಸಿದ್ದಾರೆ.

'ನನ್ನ ಬಾಯ್‌ಫ್ರೆಂಡ್‌ ಜೊತೆ ನಾನು ರೂಮಿನಲ್ಲಿ ಇರುತ್ತೀನಿ. ಮೈ ತುಂಬಾ ಬಟ್ಟೆ ಧರಿಸಿರುವೆ ಏನೂ ಆಗಿರುವುದಿಲ್ಲ ನಾವಿಬ್ಬರೂ ಸುಮ್ಮನೆ ಮಂಚದ ಮೇಲೆ ಕುಳಿತುಕೊಂಡಿರುತ್ತೀವಿ. ನನ್ನ ಫಾದರ್ ಫಿಗರ್ ತುಂಬಾ ಚೀಪ್ ಆಗಿ ವರ್ತಿಸುತ್ತಾರೆ. ನಮ್ಮ ಪಕ್ಕದ ಮನೆಗೆ ಹೋಗಿ ಅಲ್ಲಿಂದ ಕಿಟಕಿಯಿಂದ ವಿಡಿಯೋ ಮಾಡಿಕೊಳ್ಳುತ್ತಾರೆ, ಏನೋ ಮಾಡುತ್ತಿರುವ ರೀತಿ ಬಿಲ್ಡಪ್ ಕೊಟ್ರು. ನಮ್ಮ ಮನೆಯಲ್ಲಿದ್ದರೂ ಅವರು ಸಪರೇಟ್ ಆಗಿರುತ್ತಿದ್ದರು ಆ ಎಲ್ಲಾ ಇರಿಟೇಷನ್‌ ಇರಬೇಕು ಈ ವಿಡಿಯೋನ ಮೊದಲ ನನ್ನ ಅಜ್ಜಿಗೆ ತೋರಿಸಿದ್ದಾರೆ. ನನ್ನ ಜಾಗದಲ್ಲಿ ಅವರು ಬರಬೇಕು ಅಂತ ಈ ರೀತಿ ಮಾಡುತ್ತಾರೆ. ನನ್ನ ಅಜ್ಜಿ ಚಿಕ್ಕಮ ಮಾತ್ರವಲ್ಲ ಇಡೀ ಇಂಡಸ್ಟ್ರಿಗೆ ತೋರಿಸುತ್ತಾರೆ. ಈಗಲ್ಲೂ ನನ್ನ ತಾಯಿ ಆ ವಿಡಿಯೋ ನೋಡಿಲ್ಲ ಈಗಲ್ಲೂ ಪ್ರಶ್ನೆ ಮಾಡುತ್ತಾರೆ ಆ ವಿಡಿಯೋದಲ್ಲಿ ಏನಿತ್ತು. ಆ ವಿಡಿಯೋದಲ್ಲಿ ಏನೂ ಇರಲಿಲ್ಲ ನಿನಗೆ ಅವಮಾನ ಮಾಡುವಂತೆ ನಾನು ಏನೂ ಮಾಡಿಲ್ಲ ಅಂತ ಪದೇ ಪದೇ ಹೇಳುವೆ. ಫಾದರ್ ಫಿಗರ್ ಚಿತ್ರರಂಗದವರೇ ಆಗಿರುವ ಕಾರಣ ವಿಡಿಯೋನ ಎಲ್ಲರಿಗೂ ತೋರಿಸಿ ಒಂಟಿ ತಾಯಿಯಾಗಿ ಅಕೆಗೆ ಮಗಳನ್ನು ನೋಡಿಕೊಳ್ಳುವುದಕ್ಕೆ ಅಗುತ್ತಿಲ್ಲ ಎನ್ನುತ್ತಾರೆ' ಎಂದು ತಂದೆ ಮಾಡಿದ ಕೆಲಸದ ಬಗ್ಗೆ ಸಾನ್ಯ ಮಾತನಾಡುತ್ತಾರೆ.

 

click me!