
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎರಡು ಜನಪ್ರಿಯ ಧಾರಾವಾಹಿಗಳಾದ ಭಾಗ್ಯ ಲಕ್ಷ್ಮಿ ಮತ್ತು ಲಕ್ಷಣ ತಮಿಳು ಭಾಷೆಗೆ ಡಬ್ ಆಗುತ್ತಿದೆ. ಮಲೇಷ್ಯಾ ಮತ್ತು ಸಿಂಗಾಪುರ್‌ನಲ್ಲಿ ತಮಿಳು ಮಾತನಾಡುವವರು ಹಾಗೂ ಧಾರಾವಾಹಿಗಳು ನೋಡುವವರ ಸಂಖ್ಯೆ ಹೆಚ್ಚಿರುವ ಕಾರಣ ಸಖತ್ ಪಾಪ್ಯೂಲಾರಿಟಿ ಪಡೆದುಕೊಂಡಿದೆ.
'ಭಾಗ್ಯಲಕ್ಷ್ಮಿ ಮತ್ತು ಲಕ್ಷಣ ಧಾರಾವಾಹಿ ಮಲೇಷ್ಯಾ ಮತ್ತು ಸಿಂಗಾಪುರ್‌ನ ಕಲರ್ಸ್ ತಮಿಳು ವಾಹಿಯಲ್ಲಿ ಡಬ್ಬಿಂಗ್ ಆಗಿ ಪ್ರಸಾರವಾಗುತ್ತಿದೆ. ಸುಮಾರು 1 ತಿಂಗಳಲ್ಲಿ ತುಂಬಾ ಜನಪ್ರಿಯತೆ ಪಡೆದುಕೊಂಡಿದೆ ಶೀಘ್ರದಲ್ಲಿ ಎಷ್ಟು ಗಂಟೆಗೆ ಪ್ರಸಾರವಾಗಲಿದೆ ಎಂದು ರಿವೀಲ್ ಮಾಡುತ್ತಾರೆ' ಎಂದು ಟೆಲಿಕೆಫೆ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಪೋಸ್ಟ್ ಆಗಿದೆ.
ಪದೇ ಪದೇ ಹುಡ್ಗಿ ಗೆಟಪ್ ಹಾಕೋದು ಯಾಕೆ?; ನೆಟ್ಟಿಗರ ಪ್ರಶ್ನೆಗೆ ಖಡಕ್ ಉತ್ತರ ಕೊಟ್ಟ ಗಿಚ್ಚಿ ಗಿಲಿಗಿಲಿ ಧನರಾಜ್
ಲಕ್ಷಣ ಧಾರಾವಾಹಿ ಪ್ರಸಾರ ಅರಂಭಸಿದ ದಿನದಿಂದಲೂ ಟಿಆರ್‌ಪಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಇಬ್ಬರು ಹೆಣ್ಣು ಮಕ್ಕಳ ನಡುವೆ ಬಣ್ಣದ ತಾರತಮ್ಯ ಒಬ್ಬಳು ಬಡವಿ ಮತ್ತೊಬ್ಬಳು ಸಿರಿವಂತೆ ಸತ್ಯ ತಿಳಿದ ಮೇಲೆ ಇಡೀ ಜೀವನವೇ ಉಳ್ಟಾ. ಮದುವೆ ಹಸೆಮಣೆಯಿಂದ ಹೊರ ಬಂದ ಶ್ವೇತಾ....ಆ ಜಾಗದಲ್ಲಿ ಭೂಪತಿ ಪಕ್ಕಾ ಲಕ್ಷಣ. ಶಕುಂತಲಾ ದೇವಿ ದರ್ಪಾ...ಒಟ್ಟಾರೆ ಸೀರೆಯಲ್ ಚೆನ್ನಾಗಿದೆ. ಇನ್ನು ಭಾಗ್ಯಲಕ್ಷ್ಮಿ ಶುರುವಾಗಿ ಕೆಲವು ತಿಂಗಳು ಆಗಿದೆ ಅಷ್ಟೆ ಆಗಲೇ ಭಾಗ್ಯ ಮತ್ತು ಲಕ್ಷ್ಮಿ ಕನ್ನಡಿಗರ ಮನೆ ಮಕ್ಕಳಾಗಿದ್ದಾರೆ. ತಾಂಡವ್ ಸೂರ್ಯವಂಶಿ ಕಾಟ ಕೊಟ್ಟಷ್ಟು ಭಾಗ್ಯ ಜನರಿಗೆ ಇಷ್ಟವಾಗುತ್ತಿದ್ದಾಳೆ. ವೈಷ್ಣವ್ ಪಾತ್ರದಲ್ಲಿ ಬ್ರೋ ಗೌಡ ಕಾಣಿಸಿಕೊಳ್ಳುತ್ತಿದ್ದಾರೆ.
ಮನೆ ಬಿಟ್ಟ ತಾಂಡವ್?
ತಾಂಡವ್ ಮಾತುಗಳನ್ನು ಕೇಳಿಸಿಕೊಂಡು ತಾಳ್ಮೆ ಕಳೆದುಕೊಂಡ ಕುಸುಮಾ ಈಗ ಮಗನ ವಿರುದ್ಧ ತಿರುಗಿ ಬಿದ್ದಿದ್ದಾಳೆ. ಹೇಗಾದರೂ ಸೊಸೆ ಭಾಗ್ಯಳನ್ನು ಚೆನ್ನಾಗಿ ಓದಿಸಬೇಕು ಎನ್ನುವುದು ಅತ್ತೆಯ ಆಸೆ. ಇದೇ ವಿಷಯಕ್ಕೆ ತಾಯಿ-ಮಗನ ನಡುವೆ ವಾದ-ಪ್ರತಿವಾದ ತಾರಕಕ್ಕೇರಿದೆ. ಈಗ ಅವಳು ಓದಿ ಏನಾಗಬೇಕಿದೆ? ಜನರು ಏನಂದುಕೊಳ್ಳುತ್ತಾರೆ ಎಂದಾಗ ಕುಸುಮಾ, 'ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಮಗ ಬೇರೆಯವರ ರೀತಿ ಆಗದೇ ಆದರ್ಶಗಳನ್ನು ಇಟ್ಟುಕೊಳ್ಳಬೇಕು ಎಂದು ನಾನು ಬೆಳೆಸಿದ್ದು. ಆದ್ರೆ ನನ್ನ ಮಗನ ಯೋಚನೆಗಳು ತುಂಬಾ ಕೆಳಮಟ್ಟದಲ್ಲಿ ಇವೆ. ಅವಳನ್ನು ಓದಿಸಿದ್ರೆ ನಿನಗೇನಾಗುತ್ತದೆ ಎಂದು ಬೈಯೋ ಕುಸುಮಾ, ಕಳೆದ ಸಂಚಿಕೆಯಲ್ಲಿ ನೋಡಿದಂತೆ ಕುಡಿದ (Drunken) ತಾಂಡವ್ನನ್ನು ಹೀಗಳೆಯುತ್ತಾ, 'ನಿನ್ನೆನೇ ಗೊತ್ತಾಯ್ತು. ನಿನಗೆ ನಮ್ಮ ಮೇಲೆ ಎಷ್ಟು ಗೌರವ ಇದೆ ಅಂತ. ನಿನ್ನೆ ಎಲ್ಲಾ ಮಾತನಾಡಿ ಮುಗಿಸಿದ್ದೀಯಾ ನೀನು. ಈಗ ನಿನ್ನಿಂದ ನಾನು ಹೊಸದಾಗಿ ತಿಳಿದುಕೊಳ್ಳುವುದು ಏನೂ ಇಲ್ಲ. ಇವತ್ತು ನೀನು ಏನೂ ಮಾತನಾಡಬೇಡ. ಇವತ್ತು ನಾನು ಮಾತನಾಡ್ತೀನಿ. ನೀನು ಕೇಳಿಸಿಕೋ. ನಾನು ಹೇಳಿದ ರೀತಿಯೇ ಈ ಮನೆಯಲ್ಲಿ ನಡೆಯುತ್ತೆ' ಎನ್ನುತ್ತಾಳೆ.ಅಷ್ಟೇ ಅಲ್ಲದೇ, ನನ್ನ ನಿರ್ಧಾರವನ್ನು ನಾನು ಬದಲಿಸಲ್ಲ. ನನಗೆ ಯಾವುದು ಸರಿ ಅನ್ನಿಸಸುತ್ತೋ ಅದನ್ನೇ ಮಾಡ್ತೀನಿ. ನೀನು ಅರ್ಥ ಮಾಡಿಕೊಂಡು ನನ್ನ ಜೊತೆ ಬದುಕಬೇಕೋ, ಬದುಕು. ಇಷ್ಟ ಇಲ್ವಾ ಹೊರಡು. ಈ ಮನೆಯಲ್ಲಿ ಯಾರು ಬೇಕಾದ್ರೂ ಇರಬಹುದು. ಇಷ್ಟ ಇಲ್ಲದವರು ಹೋಗಬಹುದು ಎಂದು ಕುಸುಮಾ ಮಗನಿಗೆ ವಾರ್ನ್ (warn) ಮಾಡುತ್ತಾಳೆ. ಮಗ ಮನೆ ಬಿಟ್ಟು ಹೋಗ್ತಾನಾ ಅಥವಾ ಇನ್ನೇನು ಮಾಡ್ತಾನಾ ಕಾದು ನೋಡಬೇಕಿದೆ. ಪ್ರೋಮೋ ನೋಡಿ ಪ್ರೇಕ್ಷಕರಂತೂ ಫುಲ್ ಖುಷ್ ಆಗಿದ್ದಾರೆ. ಕುಸುಮಾಳಿಗೆ ಜೈಕಾರ ಹಾಕುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.