ವೈಷ್ಣವಿ ಗುಟ್ಟಾದ ನಿಶ್ಚಿತಾರ್ಥದ ಹಿಂದಿದ್ಯಾ ಈ ವೈರಲ್‌ ವಿಡಿಯೋ? ಏನದು ಭವಿಷ್ಯವಾಣಿ?

Published : Apr 15, 2025, 02:09 PM ISTUpdated : Apr 15, 2025, 03:21 PM IST
ವೈಷ್ಣವಿ ಗುಟ್ಟಾದ ನಿಶ್ಚಿತಾರ್ಥದ ಹಿಂದಿದ್ಯಾ ಈ ವೈರಲ್‌ ವಿಡಿಯೋ? ಏನದು ಭವಿಷ್ಯವಾಣಿ?

ಸಾರಾಂಶ

ನಟಿ ವೈಷ್ಣವಿ ಗೌಡ ಅವರು ದಿಢೀರನೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಕನ್ನಡ ಬರದ ವ್ಯಕ್ತಿಯೊಬ್ಬರನ್ನು ವರಿಸಲು ಸಿದ್ಧರಾಗಿದ್ದಾರೆ. ಈ ಹಿಂದೆ ಟ್ಯಾರೋ ಕಾರ್ಡ್ ತಜ್ಞೆ ಜಯಶ್ರೀ, ವೈಷ್ಣವಿ ಮದುವೆ ಬಗ್ಗೆ ಎಚ್ಚರಿಕೆ ನೀಡಿದ್ದರು. ಮದುವೆ ವಿಷಯಗಳನ್ನು ಗುಟ್ಟಾಗಿಡಲು ಮತ್ತು ಸಂಬಂಧಕ್ಕೆ ಸಮಯ ಕೊಡಲು ಸಲಹೆ ನೀಡಿದ್ದರು. ಈ ಕಾರಣದಿಂದಲೇ ವೈಷ್ಣವಿ ಗೌಡ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಸೀತಾರಾಮ ಸೀತಾ ಉರ್ಫ್‌ ವೈಷ್ಣವಿ ಗೌಡ ಅವರು ರಾತ್ರೋರಾತ್ರಿ ಅಭಿಮಾನಿಗಳಿಗೆ ಅತಿದೊಡ್ಡ ಸರ್‌ಪ್ರೈಸ್‌ ನೀಡಿದ್ದಾರೆ. ಯಾವಾಗ ಮದ್ವೆ ಯಾವಾಗ ಮದ್ವೆ ಎಂದು ಕೆಲ ವರ್ಷಗಳಿಂದ ತಲೆ ತಿನ್ನುತ್ತಿದ್ದ ಫ್ಯಾನ್ಸ್‌ಗೆ ಶಾಕ್‌ ನೀಡಿಬಿಟ್ಟಿದ್ದಾರೆ. ಯಾವುದೇ ಪೂರ್ವ ಸೂಚನೆಯೂ ಇಲ್ಲದೇ, ದಿಢೀರನೆ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಅದೂ ಕನ್ನಡವೇ ಬರದ ಹಿಂದಿಯ ಯುವಕನ ಕೈಹಿಡಿಯಲು ನಟಿ ಸಜ್ಜಾಗಿದ್ದಾರೆ. ಸಾಮಾನ್ಯವಾಗಿ ನಟಿಯರು ತಮ್ಮ ಎಂಗೇಜ್‌ಮೆಂಟ್‌, ಮದ್ವೆ ಎಂದರೆ ವರ್ಷದ ಮೊದಲೇ ಭರ್ಜರಿ ಸದ್ದು ಮಾಡುತ್ತಿರುತ್ತಾರೆ. ಅವರ ಈ ಕಾರ್ಯಕ್ರಮಗಳು ಕೂಡ ಧೂಮ್‌ಧಾಮ್‌ ಆಗಿ ನಡೆಯುತ್ತದೆ. ಆದರೆ ಯಾವುದೇ ಸೂಚನೆ ಕೊಡದೇ ವೈಷ್ಣವಿ ಇಷ್ಟು ಸೀಕ್ರೇಟ್‌ ಆಗಿ ಎಂಗೇಜ್‌ಮೆಂಟ್‌ ಆಗಿದ್ದು ಏಕೆ ಎನ್ನುವ ಬಗ್ಗೆ ಹಲವರು ತಲೆಕೆಡಿಸಿಕೊಳ್ತಿರೋದು ಇದೆ.

ಇದೇ ವೇಳೆ, ಈ ಹಿಂದೆ ನಟಿಯ ಕುರಿತು ನುಡಿದ ಭವಿಷ್ಯವೊಂದರ ವಿಡಿಯೋ ವೈರಲ್‌ ಆಗ್ತಿದೆ. ಇದಕ್ಕೂ, ವೈಷ್ಣವಿ ಗೌಡ ಗುಟ್ಟಾಗಿ ಎಂಗೇಜ್‌ಮೆಂಟ್‌ ಆಗಿರುವುದಕ್ಕೂ ಸಂಬಂಧ ಇದ್ಯಾ ಎನ್ನುವ ಸಂಶಯ ಹುಟ್ಟುಹಾಕಿದೆ. ಅದೇನೆಂದರೆ, ಈ ಹಿಂದೆ ವೈಷ್ಣವಿ ಅವರು . ಟ್ಯಾರೋ ಕಾರ್ಡ್ ತಜ್ಞರಾದ ಜಯಶ್ರೀ ಅವರ ವಿಡಿಯೋ ಒಂದನ್ನು ಯೂಟ್ಯೂಬ್‌ನಲ್ಲಿ ಶೇರ್‌ ಮಾಡಿಕೊಂಡಿದ್ದರು. ಟ್ಯಾರೋ ಕಾರ್ಡ್​ ರೀಡಿಂಗ್​ ಕಾರ್ಟೊಮ್ಯಾನ್ಸಿಯ ಒಂದು ರೂಪವಾಗಿದೆ, ಅದರ ಮೂಲಕ   ಹಿಂದಿನ, ವರ್ತಮಾನ ಅಥವಾ ಭವಿಷ್ಯದ ಬಗ್ಗೆ ಒಳನೋಟವನ್ನು ಪಡೆಯಬಹುದಾಗಿದೆ. ಇದು ಬಹಳ ಅನಾದಿಕಾಲದಿಂದಲೂ ರೂಢಿಯಲ್ಲಿದೆ. ಅದರ ಮೂಲಕ ವೈಷ್ಣವಿ ಅವರ ಭವಿಷ್ಯವನ್ನು ಜಯಶ್ರೀ ಅವರು ನುಡಿದಿದ್ದರು. 

ಬಯಸಿದಂತೆ ಅದ್ದೂರಿಯಾಗಿ ಅಕಾಯ್‌ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ಸೀತಾರಾಮ ನಟಿ Vaishnavi Gowda!

ಈ ಸಮಯದಲ್ಲಿ ವೈಷ್ಣವಿ ಅವರ ಬದುಕಿನ ಹಲವು ವಿಷಯಗಳನ್ನು ಜಯಶ್ರೀ ಹೇಳಿದ್ದರು. ಈ ಸಂದರ್ಭದಲ್ಲಿ, ವೈಷ್ಣವಿ ಅವರು, ತಮ್ಮ ಮದುವೆ, ಹುಡುಗ ಯಾರ ರೀತಿ ಇರ್ತಾನೆ ಇತ್ಯಾದಿಗಳ ಬಗ್ಗೆ ಕೇಳಲು ಉತ್ಸುಕರಾಗಿದ್ದರು. ಆದರೆ ಈ ಬಗ್ಗೆ ಜಯಶ್ರೀ ಅವರು ಸ್ಪಷ್ಟವಾಗಿ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಮದುವೆ ವಿಷಯದಲ್ಲಿ ಎಚ್ಚರಿಕೆಯನ್ನಂತೂ ನೀಡಿದ್ದರು.  ಅದರಲ್ಲಿ ಈಗ ಗಮನ ಸೆಳೀತಾ ಇರುವುದು ಏನೆಂದರೆ, ಜಯಶ್ರೀ ಅವರು ’ನಿಮ್ಮ ಗುಟ್ಟನ್ನು ಯಾರ ಬಳಿಯೂ ಹೇಳಿಕೊಳ್ಳಬೇಡಿ. ಅದು ಮದುವೆಯದ್ದೇ ಆಗಿರಬಹುದು, ಏನಾದರೂ ಆಗಿರಬಹುದು. ಏನೇ ಆದರೂ ಹೊಸತು ಮಾಡುವುದಿದ್ದರೆ, ಯಾರಿಗೂ ಹೇಳಬೇಡಿ ಎಂದಿದ್ದರು. ರಿಲೇಷನ್​ಷಿಪ್​ಗೆ ತುಂಬಾ ಟೈಂ ಕೊಡಿ. ಮೊದಲು ನಿಮ್ಮ ಮನಸ್ಸನ್ನು ನೀವು ಬ್ಯಾಲೆನ್ಸ್​ ಮಾಡಬೇಕು. ಆಮೇಲೆ ಮುಂದುವರೆಯಬೇಕ” ಎಂದು ಮದುವೆಯ ಬಗ್ಗೆ ಅವರು ಎಚ್ಚರಿಕೆ ಕೊಟ್ಟಿದ್ದರು. 

’ಮದುವೆ, ರಿಲೇಷನ್​ಷಿಪ್​ಗೆ ಇಂತಿಷ್ಟೇ ಟೈಂ ಎಂದು ಇಟ್ಟುಕೊಳ್ಳಬೇಡಿ. ಯಾರ ಜೊತೆಗಾದರೂ ಒಂದೇ ಸಲಕ್ಕೆ ಡಿಸೈಡ್​ ಮಾಡಬೇಡಿ. ಒಂದಷ್ಟು ದಿನ ತೆಗೆದುಕೊಂಡು, ಆ ವ್ಯಕ್ತಿ ನಿಮಗೆ ಸರಿ ಎನ್ನಿಸಿದರೆ ನೀವು ಮುಂದುವರೆಯಬೇಕು. ಆದರೆ ಅದಕ್ಕೂ ಮೊದಲು ಮನಸ್ಸಿನ ಮೇಲೆ ಸಾಕಷ್ಟು ಸಂಯಮ ಸಾಧಿಸಬೇಕು. ಎಲ್ಲರನ್ನೂ ನಮ್ಮವರು ಎಂದುಕೊಳ್ಳಬಾರದು ಎಂದಿದ್ದರು ಈ ಹಿಂದೆ ಮದುವೆ ವಿಷಯದಲ್ಲಿ ಆಗಿರುವ ಕಹಿ ಘಟನೆಗಳಿಂದ ಸಾಕಷ್ಟು ನೊಂದುಕೊಂಡಿದ್ದ ನಟಿ, ಇದೀಗ ಜಯಶ್ರೀ ಅವರ ಅಣತಿಯಂತೆ ನಿಶ್ಚಿತಾರ್ಥದ ವಿಷಯವನ್ನು ಗುಟ್ಟಾಗಿಟ್ಟಲಿಕ್ಕೆ ಸಾಕು ಎನ್ನಲಾಗುತ್ತಿದೆ. 

ಒಂದೇ ಸೀರೆಯನ್ನು ಹೇಗೆಲ್ಲಾ ಧರಿಸ್ಬೋದು? ಸೀತಾರಾಮ ಸೀತಾ ಹೇಳಿಕೊಟ್ಟರು ಹಲವು ಬಗೆ... ವಿಡಿಯೋ ವೈರಲ್
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ