ಸುಧಾಮೂರ್ತಿ ಎದುರು ಕಪಿಲ್​ಗೆ ಕಿಸ್​ ಕೊಟ್ಟ ರವೀನಾ: ಶುರುವಾಯ್ತು ಹೊಸ ಚರ್ಚೆ

By Suvarna News  |  First Published May 12, 2023, 1:17 PM IST

ದಿ ಕಪಿಲ್​ ಶರ್ಮಾ ಶೋಗೆ ಆಗಮಿಸಿದ್ದ ನಟಿ ರವೀನಾ ಟಂಡನ್​ ಕಪಿಲ್​ ಅವರಿಗೆ ಕಿಸ್ ಮಾಡಿದ್ದು, ಬಹಳ ಚರ್ಚೆಗೆ ಗ್ರಾಸವಾಗಿದೆ.
 


ದಿ ಕಪಿಲ್​ ಶರ್ಮಾ ಷೋನಲ್ಲಿ  (The Kapil Sharma Show)  ಇದಾಗಲೇ ಹಲವಾರು ಗಣ್ಯರು ಬಂದು ಹೋಗಿದ್ದಾರೆ. ಹಲವು ಕ್ಷೇತ್ರದ ತಜ್ಞರ ಜೊತೆ ಇದಾಗಲೇ ಅವರು ಸಂದರ್ಶನ ನಡೆಸಿದ್ದಾರೆ. ಇದೀಗ ಮುಂದಿನ ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಇದು ಬಹಳ ಕುತೂಹಲ ಮೂಡಿಸಿದೆ. ಏಕೆಂದರೆ ಈ ಸಂಚಿಕೆಯಲ್ಲಿ  ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ (Sudha Murthy) ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಬಾಲಿವುಡ್​ ತಾರೆ ರವೀನಾ ಟಂಡನ್​ ಅವರೂ ಭಾಗವಹಿಸಿದ್ದಾರೆ. ರವೀನಾ ಅವರು ಸಾಮಾನ್ಯವಾಗಿ ಬೇರೆ ಬೇರೆ ಇಂಥ ಷೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಕಪಿಲ್ ಶರ್ಮಾ ಮತ್ತು ರವೀನಾ ಟಂಡನ್ ಇಬ್ಬರೂ ಆತ್ಮೀಯ ಸ್ನೇಹಿತರು. ಎಷ್ಟೋ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಹಿಂದೆಯೂ ಕಪಿಲ್ ಶರ್ಮಾ ಶೋನಲ್ಲಿ ಇವರು ಕಾಣಿಸಿಕೊಂಡಿದ್ದರು.ಆದರೆ ಸುಧಾ ಮೂರ್ತಿಯವರು ಇಂಥ ಷೋಗಳಲ್ಲಿ ಕಾಣಿಸಿಕೊಳ್ಳುವುದು ಅಪರೂಪ. ಇದೇ ಕಾರಣಕ್ಕೆ ಈ ಸಂಚಿಕೆ ಕುತೂಹಲ ಮೂಡಿಸಿದೆ.

ಈ ಪ್ರೋಮೊದಲ್ಲಿ ಕಪಿಲ್​ ಶರ್ಮಾ ಅವರು ಸುಧಾ ಮೂರ್ತಿ ಮತ್ತು ರವೀನಾ ಟಂಡನ್​ ಜೊತೆ ಕುತೂಹಲದ ಚರ್ಚೆ ನಡೆಸಿರುವುದನ್ನು ನೋಡಬಹುದು.  ಇವರ ಜೊತೆ ಆಸ್ಕರ್ ಪ್ರಶಸ್ತಿ ವಿಜೇತೆ ನಿರ್ಮಾಪಕಿ ಗುನೀತ್ ಮೋಂಗಾ (Guneet Monga) ಕೂಡ ಇದ್ದಾರೆ. ಪ್ರೋಮೊ ಬಹಳ ವೈರಲ್​ ಆಗಲು ಕಾರಣ ಸುಧಾ ಮೂರ್ತಿ ಅವರು ಇರುವಾಗಲೇ ನಟಿ ರವೀನಾ ಟಂಡನ್​ ಅವರು ಕಪಿಲ್​ ಶರ್ಮಾ ಅವರಿಗೆ ಮುತ್ತಿಕ್ಕಿದ್ದಾರೆ.  ಈ ಶೋ ಯಾವಾಗಿಂದ ಪ್ರಸಾರವಾಗಲಿದೆ ಎನ್ನುವ ಮಾಹಿತಿಯನ್ನು ವಾಹಿನಿ ನೀಡದೇ ಇದ್ದರೂ, ಕಪಿಲ್ ಶರ್ಮಾಗೆ ರವೀನಾ ಮುತ್ತಿಡುವ ಪ್ರೋಮೋ ರಿಲೀಸ್ ಮಾಡಿ ಕುತೂಹಲ ಮೂಡಿಸಿದೆ. 

Tap to resize

Latest Videos

ನಾರಾಯಣ ಮೂರ್ತಿಯನ್ನು ಮೊದಲು 'ಯಾರಿದು ಅಂತಾರಾಷ್ಟ್ರೀಯ ಬಸ್ ಕಂಡ್ಟರ್' ಅಂದ್ಕೊಂಡಿದ್ರಂತೆ ಸುಧಾ ಮೂರ್ತಿ

ಅಷ್ಟಕ್ಕೂ ಹೀಗೆ ಮುತ್ತಿಕ್ಕಲು ಕಾರಣವಾದದ್ದು ರವೀನಾ ಮತ್ತು ಕಪಿಲ್​ ಅವರ ನಡುವಿನ ಚರ್ಚೆ.  ರವೀನಾ ಟಂಡನ್ ತಮ್ಮ ವೃತ್ತಿಜೀವನದ (Career) ಆರಂಭಿಕ ವರ್ಷಗಳಲ್ಲಿನ ಕುರಿತು ಮಾಹಿತಿ ನೀಡುತ್ತಿದ್ದರು. ತಮ್ಮ  ಶ್ರೇಷ್ಠ ಚಿತ್ರ ಅಂದಾಜ್ ಅಪ್ನಾ ಅಪ್ನಾ ಕುರಿತು ಉಲ್ಲೇಖಿಸಿದರು. 

ಕ್ಲಿಪ್‌ನಲ್ಲಿ, ರವೀನಾ ಟಂಡನ್ (Raveena Tondon) ಹೇಳುತ್ತಾರೆ,  ಅಂದಾಜ್ ಅಪ್ನಾ ಅಪ್ನಾ ಚಿತ್ರದಲ್ಲಿ ನಾನು ಗುಂಗುರು ಕೂದಲು ಮಾಡಿಕೊಂಡಿದ್ದೆ. ಅದು ಯಾಕೆ ಎಂದು ಇಂದಿಗೂ ಅರ್ಥವಾಗುತ್ತಿಲ್ಲ.  ಹಿಂದಿನ ಫೋಟೋಗಳನ್ನು ನೋಡಿದಾಗ ಹೀಗೆಲ್ಲಾ ಏಕೆ ಮಾಡಿದ್ವಿ ಎಂದೇ ತಿಳಿಯುತ್ತಿಲ್ಲ ಎಂದರು. ಅದಕ್ಕೆ ಕಪಿಲ್​ ಶರ್ಮಾ, ಹೌದು ಹಿಂದಿನವರ ಫೋಟೋ (ಗರ್ಲ್​ಫ್ರೆಂಡ್ಸ್​) ನೋಡಿದರೆ ಏಕೆ ಹೀಗಾಯ್ತು ಅಂತನೇ ತಿಳಿಯುವುದಿಲ್ಲ, ಈಗಲೂ ಆಗಿನ ಭಾವನೆಯೇ ಬರುತ್ತದೆ ಎಂದು ತಮಾಷೆ ಮಾಡಿದರು. ಅದಕ್ಕೆ ರವೀನಾ, ಅಂದ್ರೆ ನೀವು ಹಿಂದಿನವರ ಫೋಟೋಗಳನ್ನು ಈಗಲೂ ನೋಡುತ್ತಲೇ ಇರುತ್ತೀರಿ ಎಂದಾಯಿತು ಎಂದು ಹೋಗಿ ಕಿಸ್​ ಮಾಡಿದರು. ಆಗ ನಾಚಿಕೊಂಡ ಕಪಿಲ್​ ಶರ್ಮಾ,  ನನ್ನನ್ನು ಇನ್​ಸಲ್ಟ್​ ಮಾಡಿ ಹೀಗೆ ಮಾಡುತ್ತೀರಿ ಎಂದಾದರೆ ಇನ್ನೊಂದೆರಡು ಇನ್​ಸಲ್ಟ್​ ಮಾಡಿ ಎಂದಾಗ ಎಲ್ಲರೂ ನಗೆಗಡಲಿನಲ್ಲಿ ತೇಲಿದರು.

ಸನ್ನಿ ಡಿಯೋಲ್​ ಪುತ್ರನ ಡೇಟಿಂಗ್ ಫೋಟೋ ನೋಡಿ ಪ್ಯಾಂಟ್​ ಹರಿದು ಬಿಡಮ್ಮಾ ಎಂದ ನೆಟ್ಟಿಗರು!
 
ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ರವೀನಾ ಅವರ ಕಿಸ್​ ಕುರಿತು ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.  ಈ ಕಿಸ್ (Kiss)​ ಹಿಂದೆಯೂ ಏನಾದರೂ ಔಚಿತ್ಯ ಇರಬಹುದೇ ಎಂದು ನೆಟ್ಟಿಗರು ಚರ್ಚೆ ಶುರು ಮಾಡಿದ್ದಾರೆ. ಇದು ಸಹಜವಷ್ಟೇ ಎಂದು ಕೆಲವರು ಹೇಳಿದರೆ, ಅಗತ್ಯವಿಲ್ಲದಿದ್ದರೂ ಈ ರೀತಿ ಏಕಾಏಕಿ ಅಷ್ಟು ಪ್ರೀತಿಯಿಂದ ಚುಂಬಿಸಿರುವುದನ್ನು ನೋಡಿದರೆ ರವೀನಾ ಅವರಿಗೆ ಏನೋ ನೆನಪಾಗಿರಬೇಕು ಎಂದು ಇನ್ನು ಕೆಲವರು ಕಾಲೆಳೆಯುತ್ತಿದ್ದಾರೆ. ಇಷ್ಟು ಸಲುಗೆಯಿಂದ ಮುತ್ತಿಕ್ಕುವುದು ನಟಿಯರಿಗೆ ಏನೂ ಹೊಸತೂ ಅಲ್ಲ, ಅದೇನೂ ವಿಶೇಷವೂ ಅಲ್ಲ.  ಆದರೆ ರವೀನಾ ಅತ್ಯಂತ ಆತ್ಮೀಯವಾಗಿ ಚುಂಬಿಸಿದ್ದಾರೆ ಎಂದು ಇನ್ನು ಕೆಲವರು ಹೇಳಿದ್ದಾರೆ. ಇದೇ ಪ್ರೋಮೋದಲ್ಲಿ ನೋಡುವಂತೆ ರವೀನಾ ಅವರು ಸುಧಾ ಮೂರ್ತಿ ಅವರಿಗೆ ಮತ್ತು ಕೊಟ್ಟಿದ್ದರೂ ಅದು ಚರ್ಚೆಯಾಗುತ್ತಿಲ್ಲ. ಅವರ ಎದುರೇ ಕಪಿಲ್​ ಅವರಿಗೆ ಮುತ್ತು ಕೊಟ್ಟಿದ್ದು ಮಾತ್ರ ವಿಧ ವಿಧ ರೀತಿಯಲ್ಲಿ ಚರ್ಚೆಯಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಸುಧಾ ಮೂರ್ತಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮೊದಲ ಬಾರಿಗೆ ಪತಿ ನಾರಾಯಣ ಮೂರ್ತಿ (Narayana Murthy) ಅವರನ್ನು ಭೇಟಿಯಾಗಿದ ಇಂಟ್ರಸ್ಟಿಂಗ್ ವಿಚಾರ ಸುಧಾ ಮೂರ್ತಿ ಬಹಿರಂಗ ಪಡಿಸಿದ್ದಾರೆ. 
 

click me!