
ಹಿಂದಿ ಕಿರುತೆರೆಯ ಖ್ಯಾತ ನಟಿ ರತನ್ ರಾಜ್‌ಪುತ್ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಸೌತ್ ಸಿನಿಮಾರಂಗದ ಬಗ್ಗೆ ಮತಾನಾಡಿರುವ ರತನ್ ಬಾಲಿವುಡ ಮಾತ್ರವಲ್ಲ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲೂ ಕಾಸ್ಟಿಂಗ್ ಕೌಚ್ ಇದೆ, ಸೌತ್ ಮೇಕರ್ಸ್ ಏನು ಸಾಚಗಳಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ಸೌತ್ ಸಿನಿಮಾರಂಗದಲ್ಲಿ ತಾನು ಕೂಡ ರಾಜಿ ಮಾಡಿಕೊಂಡಿದ್ದರೆ ದಕ್ಷಿಣ ಭಾರತದಲ್ಲಿ ದೊಡ್ಡ ನಟಿಯಾಗುತ್ತಿದ್ದೆ ಎಂದು ರತನ್ ರಾಜ್‌ಪುತ್ ಹೇಳಿದ್ದಾರೆ. ದಕ್ಷಿಣ ಭಾರತದಲ್ಲೂ ಕಾಸ್ಟಿಂಗ್ ಕೌಚ್ ಎನ್ನುವುದು ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ನಟಿ ರತನ್ ಪಿಂಕ್‌ವಿಲ್ಲ ಜೊತೆ ಮಾತನಾಡಿದ್ದ ರತನ್ ರಾಜ್‌ಪುತ್, ಸೌತ್ ಸಿನಿಮಾರಂಗದಲ್ಲಿ ವ್ಯಕ್ತಿಯೊಬ್ಬ ಕರೆ ಮಾಡಿ ಮಾತನಾಡಿದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ರತನ್ ಆಗ್ಲೆ ಹಿಂದಿಯಲ್ಲಿ ಜನಮ್ ಮೋಹೆ ಬಿತಿಯಾ ಹಿ ಕಿಜೋ ಎನ್ನುವ ಟಿವಿ ಧಾರಾವಾಹಿ ಮೂಲಕ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದರು. ಆ ಸಮಯದಲ್ಲಿ ದಕ್ಷಿಣ ಭಾರತೀಯ ಸಿನಿಮಾರಂಗದಿಂದನೂ ಆಫರ್‌ಗಳು ಬಂದಿತ್ತು ಎಂದು ಹೇಳಿದ್ದಾರೆ. 'ನನಗೆ ದಕ್ಷಿಣದಿಂದನೂ ಅನೇಕ ಕರೆಗಳು ಬಂದಿತ್ತು. ಕೆಲವು
ಉತ್ತಮ ನಿರ್ದೇಶಕರಿದ್ದರು. ಆದರೆ ಅದರ ಜೊತೆಗೆ ರತನ್ ಜೀ ನೀವು ಸ್ವಲ್ಪ ತೂಕ ಹೆಚ್ಚಿಸಿಕೊಳ್ಳಬೇಕು, ತುಂಬಾ ತೆಳ್ಳಗಿದ್ದೀರಿ ಎಂದು ಹೇಳುತ್ತಾರೆ. ಆದರೆ ಇದಕ್ಕೆಲ್ಲ ನಾನು ಒಪ್ಪಿಕೊಂಡೆ ಆದರೆ ಬಳಿಕ ಅವರು ರಾಜಿ ಮಾಡಿಕೊಳ್ಳಬೇಕು ಎಂದರು' ಅಂತ ಹೇಳಿದ್ದಾರೆ.
ಟಾಲಿವುಡ್‌ನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಆದರೆ...: ಕಾಸ್ಟಿಂಗ್ ಕೌಚ್ ಬಗ್ಗೆ ನಿತ್ಯಾ ಮೆನನ್ ಶಾಕಿಂಗ್ ಹೇಳಿಕೆ
'ಆಗ ಆ ವ್ಯಕ್ತಿ, 'ನಿಮಗೆ ಈಗಾಗಲೇ ಇಲ್ಲಿನ ಬಗ್ಗೆ ತಿಳಿದಿವೆಯಲ್ಲ' ಎಂದರು. ನಾನು ಅದರ ಬಗ್ಗೆ ಅವರನ್ನು ಕೇಳಿದೆ ಏನು ಅಂತ ಆಗ ಅವರು 'ಇಂಡಸ್ಟ್ರಿಯಲ್ಲಿ, ನಿರ್ದೇಶಕ, ನಿರ್ಮಾಪಕ ಮತ್ತು ನಟ ಮಾತ್ರವಲ್ಲ DOP ಜೊತೆಯೂ ರಾಜಿ ಆಗಬೇಕು' ಎಂದು ನಿಮಗೆ ಗೊತ್ತಿದೆ ಅಲ್ವಾ ಎಂದರು. ಏನಿದು ಅಂತ ನೇರವಾಗಿ ಕೇಳಿದೆ. ಆಗ ಅರು ಇಲ್ಲೂ ಕೂಡ ರಾಜಿ ಆಗಬೇಕು ಎಂದು ಹೇಳಿದರು' ಎಂದು ರತನ್ ಬಹಿರಂಗ ಪಡಿಸಿದರು. ಬಳಿಕ ರತನ್ ಅವರ ಬೇಡಿಕೆಯನ್ನು ತಿರಸ್ಕರಿಸಿದರು.
ನಾನು ಅವ್ರ ಜೊತೆ ದೇಹ ಹಂಚಿಕೊಂಡಿದ್ರೆ 30 ಸಿನಿಮಾ ಸಿಕ್ತಿದ್ವು: ನಟಿ Payal Ghosh
'ಜನರು ಬಾಲಿವುಡ್ ಬಗ್ಗೆ ಏನೇನೋ ಮಾತನಾಡುತ್ತಾರೆ, ಅದು ದಕ್ಷಿಣದಲ್ಲಿಯೂ ನಡೆಯುತ್ತದೆ. ದಕ್ಷಿಣದವರು ಇನ್ನೂ ಒಳ್ಳೆಯ ಕೆಲಸ ಮಾಡುತ್ತಿರುವುದಕ್ಕೆ ಕಾರಣವೆಂದರೆ ಅವರು ತಮ್ಮ ಸಂಸ್ಕೃತಿ, ಸಂಸ್ಕಾರ, ಬಟ್ಟೆ ಮತ್ತು ಎಲ್ಲವನ್ನೂ ಗೌರವಿಸುತ್ತಾರೆ' ಎಂದು ಹೇಳಿದರು. ಈ ಮೊದಲು ಸಹ ಕಾಸ್ಟಿಂಗ್ ಕೌಚ್ ಬಗ್ಗೆ ನಟಟಿ ರತನ್ ಬಹಿರಂಗ ಪಡಿಸಿದ್ದರು. ಬಾಲಿವುಡ್ ಬಗ್ಗೆ ಮಾತನಾಡಿದ್ದರು. ಇದೀಗ ಸೌತ್ ಸಿನಿಮಾರಂಗದ ಕಾಮಪುರಾಣವನ್ನು ಬಿಚ್ಚಿಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.