ದಿನದಿಂದ ದಿನಕ್ಕೆ ಕುತೂಹಲದ ತಿರುವು ಪಡೀತೀರೋ ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಗಂಡನಿಗೆ ಭಾಗ್ಯ ಮಾತಿನ ಏಟು ನೀಡಿದ್ದಾಳೆ. ಏನಿದು ಕಥೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶನಿವಾರ ಸಂಜೆ ಏಳುಗಂಟೆಗೆ ಪ್ರಸಾರ ಆಗುತ್ತಿರುವ ಭಾಗ್ಯಲಕ್ಷ್ಮೀ (BhagyaLakshmi) ಸೀರಿಯಲ್ ಮನೆಮನೆ ಮಾತಾಗಿದೆ. ಟಿಆರ್‌ಪಿಯಲ್ಲೂ ಮುಂದಿರೋ ಈ ಧಾರಾವಾಹಿಯ ಪ್ರತಿಯೊಂದು ಪಾತ್ರವನ್ನೂ ತಮ್ಮ ಜೀವನದ ಪಾತ್ರವೇ ಎಂದು ಅಂದುಕೊಂಡು, ನೋಡುವವರ ಅದರಲ್ಲಿಯೂ ಮಹಿಳಾ ಪ್ರೇಕ್ಷಕರ ಸಂಖ್ಯೆ ಹೆಚ್ಚಿದೆ. ಹೆಚ್ಚು ಓದಿಲ್ಲದ ಭಾಗ್ಯಾ ಸಂಸ್ಕಾರ ಇರೋ ಹೆಣ್ಣು ಮಗಳು. ಸಿರಿವಂತ ತಾಂಡವ್ ಮದುವಾಯಾಗಿದ್ದಾಳೆ. ಆದರೆ, ಅವನಿಗೋ ಇವಳ ಕಂಡ್ರೆ ತಾತ್ಸಾರ. ಭಾಗ್ಯಾಳ ವ್ಯಕ್ತಿತ್ವಕ್ಕೆ ಬೆಲೆ ಕೊಡೋ ಅತ್ತೆ ಇವಳನ್ನು ಓದಿಸಬೇಕು ಅಂತ ಮುಂದಾಗಿದ್ದಾಳೆ. ಅದಕ್ಕೆ ಕಲ್ಲು ಹಾಕಲು ತಾಂಡವ್ ಶತಯಾ ಗತಾಯ ಯತ್ನಿಸುತ್ತಿದ್ದು, ಅತ್ತೆ-ಸೊಸೆಗೆ ಜಗಳ ತಂದಿಡಲು ಹತ್ತು ಹಲವು ಪ್ಲ್ಯಾನ್ ಮಾಡುತ್ತಿದ್ದಾನೆ. ಒಳ್ಳೇಯವನ ಮುಖವಾಡವನ್ನೂ ಹಾಕ್ಕೊಂಡಿದ್ದಾನೆ.
ಹಲವು ಸಂಚಿಕೆಗಳಲ್ಲಿ ಭಾಗ್ಯಳನ್ನು ಅಳುಮುಂಜಿ ಪಾತ್ರದಲ್ಲಿಯೇ ನೋಡ್ತಿದ್ದ ಪ್ರೇಕ್ಷಕರು ಕೆಲ ಕಂತುಗಳಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಭಾಗ್ಯಾಳನ್ನು ಗಟ್ಟಿಗಿತ್ತಿ ಮಾಡಿ ಎಂದು ಹೇಳುತ್ತಲೇ ಬಂದಿದ್ದ ಪ್ರೇಕ್ಷಕರಿಗೆ ಈಗ ಭಾಗ್ಯಳ ಪಾತ್ರ ಸಕತ್ ಇಷ್ಟವಾಗುತ್ತಿದೆ. ಈಕೆ ಗಟ್ಟಿಯಾದರೆ ಈ ಥರ ಇರೋ ಹೆಣ್ಮಕ್ಕಳಿಗೂ ಪಾಠ ಆಗುತ್ತೆ ಅನ್ನೋ ಮಾತನ್ನು ವೀಕ್ಷಕರು ಕಳೆದ ಕೆಲವು ಸಮಯದಿಂದ ಹೇಳುತ್ತಲೇ ಬಂದಿದ್ದರು. ಅದಕ್ಕೆ ಒಪ್ಪಿಗೆ ಎಂಬಂತೆ ಭಾಗ್ಯಳನ್ನು ಗಟ್ಟಿಗಿತ್ತಿ ಮಾಡಲಾಗಿದ್ದು, ಈಗ ಖುದ್ದು ಮಗಳು, ಗಂಡನ ವಿರುದ್ಧವೇ ತಿರುಗಿ ಬೀಳುತ್ತಿದ್ದಾಳೆ. ಈ ಪಾತ್ರವನ್ನು ಧಾರಾವಾಹಿ ಪ್ರಿಯರು ಸಾಕಷ್ಟು ಮೆಚ್ಚಿಕೊಳ್ಳುತ್ತಿದ್ದು, ಪ್ರತಿ ದಿನವೂ ಇದು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತ್ತಲೇ ಇದೆ. ಒಳ್ಳೇಯವನ ಮುಖವಾಡವನ್ನು ಹಾಕಿಕೊಂಡಿರುವ ಪತಿ ತಾಂಡವ್ ಬಗ್ಗೆ ಭಾಗ್ಯಳಿಗೆ ತಿಳಿದಿದೆ. ಆದರೆ, ಗೋಮುಖ ವ್ಯಾಘ್ರವಾಗಿರೋ ಪತಿಯ ಮನಸ್ಸಲ್ಲಿ ಏನಿದೆ ಎಂದು ಭಾಗ್ಯಳಿಗೆ ಗೊತ್ತಾಗಿದೆ. ಇದೀಗ ತಿರುಗಿ ಬಿದ್ದಿದ್ದಾಳೆ. ಇದನ್ನೇ ಪ್ರೇಕ್ಷಕರು ಇಷ್ಟು ದಿನ ಕಾಯುತ್ತಿದ್ದರು. ಸೂಪರ್ ಅನ್ನುತ್ತಿದ್ದಾರೆ.
Tomato ಬೆಲೆ ಜಾಸ್ತಿ ಅಂತ 'ಗೀತಾ' ಸೀರಿಯಲ್ ನಟಿ ಹೀಗೆ ಕದ್ಯೋದಾ?
ಈಗ ಮಗಳನ್ನು ಹಾಸ್ಟೆಲ್ಗೆ ಕಳಿಸುವ ಕುರಿತು ಮನೆಯಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಗಿದೆ. ಖುದ್ದು ಮಗಳು ಹಾಗೂ ಅಪ್ಪ ಇಬ್ಬರಿಗೂ ಹಾಸ್ಟೆಲ್ಗೆ ಹೋಗುವ ಆಸೆ. ಆದರೆ ಈಗ ಭಾಗ್ಯ ಇಬ್ಬರ ವಿರುದ್ಧ ವಾಕ್ಸಮರ ಸಾರಿದ್ದಾಳೆ. ಪತ್ನಿಯ ಮೇಲೆ ಅಪಾರ ಗೌರವ ಹೊಂದಿರುವಂತೆ ನಾಟಕವಾಡ್ತಿರೋ ಗಂಡ ತಾಂಡವ್, ನಿನ್ನನ್ನು ಕಂಡರೆ ಮಗಳಿಗೆ ಗೌರವ ಇಲ್ಲ, ಆಕೆಯನ್ನು ಹಾಸ್ಟೆಲ್ಗೆ ಕಳಿಸು ಎನ್ನುತ್ತಾನೆ. ಆಗ ಗಂಡನ ಕಪಟ ಪ್ರೀತಿಯ ಬಗ್ಗೆ ಅರಿವಿರೋ ಭಾಗ್ಯ, 'ಅವಳು ಸಾವಿರ ಹೇಳ್ತಾಳೆ. ಕೈತುಂಬಾ ಕಾಸು, ಹೊಟ್ಟೆ ತುಂಬಾ ಊಟ ಇದ್ರೆ ಬಾಯಿಗೆ ಬಂದ ಹಾಗೆ ಒದರುತ್ತಾಳೆ. ಅವಳು ಬಾಯಿಗೆ ಬಂದ ಹಾಗೆ ಹೇಳಿದರೆ ನಾಲ್ಕು ಬಾಯಿ ಮೇಲೆ ಬಿಟ್ಟು ಕಲಿಸಬೇಕು. ಅಪ್ಪ-ಅಮ್ಮ ಇರೋದು ಮಕ್ಕಳು ಹೇಳಿದ ಹಾಗೆ ಕುಣಿಯೋಕೆ ಅಲ್ಲ' ಎನ್ನುತ್ತಾಳೆ. ಅವಳ ಈ ಬದಲಾದ ಪ್ರವೃತ್ತಿಗೆ ತಾಂಡವ್ ನಲುಗಿ ಹೋಗುತ್ತಾನೆ.
ಆದರೆ ಹಾಸ್ಟೆಲ್ನಲ್ಲಿ ಇದ್ದರೆ ಆಕೆಗೆ ಬುದ್ಧಿ ಬರುತ್ತೆ ಎಂದಾಗ ಭಾಗ್ಯ, 14 ವರ್ಷದಲ್ಲಿ ಕಲಿದೇ ಇರೋ ಪಾಠನಾ ಒಂದೇ ದಿನದಲ್ಲಿ ಹೇಗೆ ಕಲೀತಾಳೆ ಎಂದು ಪ್ರಶ್ನಿಸುತ್ತಾಳೆ. ಒಂದಿಷ್ಟು ವಿಷ ಬುದ್ಧಿ ಹಾಗೆಲ್ಲಾ ಬೇಗ ಕರಗಲ್ಲ, ರಾತ್ರೋರಾತ್ರಿ ಜನ ಬದಲಾಗುತ್ತಾರೆ ಎನ್ನೋದು ನಮ್ಮ ಭ್ರಮೆ. ಅಷ್ಟು ಸುಲಭದಲ್ಲಿ ಯಾರೂ ಬದಲಾಗಲ್ಲ ಎಂದು ಗಂಡನಿಗೆ ಚಚ್ಚುವ ಹಾಗೆ ಎದುರೇಟು ನೀಡುತ್ತಾಳೆ. ಅದನ್ನು ಕೇಳಿ ತಾಂಡವ್ಗೆ ಶಾಕ್ ಆಗುತ್ತದೆ. ಮಧ್ಯೆ ಬಾಯಿ ಹಾಕುವ ಮಗಳು ನಿನ್ನ ಒಪ್ಪಿಗೆ ಯಾರು ಕೇಳ್ತಾರೆ ಎನ್ನುತ್ತಿದ್ದಂತೆಯೇ ಭಾಗ್ಯ ಗದರಿಸುತ್ತಾಳೆ. ಆದರೆ ತಾಂಡವ್ ತನ್ನ ಪಟ್ಟು ಬಿಡುವುದಿಲ್ಲ. ಹೆತ್ತ ತಾಯಿಯನ್ನು ನೋಡುವ ರೀತಿ ಇದೇನಾ ಎಂದು ಕೇಳುತ್ತಾನೆ. ನಿನ್ನ ಬಗ್ಗೆ ಸ್ವಲ್ಪನಾದ್ರೂ ಗೌರವ ಪ್ರೀತಿ ಇದ್ಯಾ ಕೇಳುತ್ತಾನೆ. ಗಂಡನ ಈ ಮಾತಿಗೆ ವ್ಯಂಗ್ಯವಾಗಿ ನಗುತ್ತಾಳೆ ಭಾಗ್ಯ.
ದಿ ಟ್ರಯಲ್' ವೆಬ್ ಸೀರೀಸ್‌ನ ಕಾಜೋಲ್ ಕಿಸ್ಸಿಂಗ್ ದೃಶ್ಯ: ನಿರಾಶೆಗೊಂಡ ಫ್ಯಾನ್ಸ್
ಭಾಗ್ಯಳ ಈ ಬದಲಾದ ಅವತಾರ ನೋಡಿ ಅತ್ತೆ- ಮಾನವಿಗೂ ಶಾಕ್ ಆದರೂ ಒಳಗೊಳಗೇ ಖುಷಿ ಪಡುತ್ತಾರೆ. ಮಗಳ ಬಗ್ಗೆ ಭಾಗ್ಯ ಮಾಡುತ್ತಿರೋ ಪ್ಲ್ಯಾನ್ ಏನು ಎನ್ನುವುದೇ ಮುಂದಿರುವ ಕುತೂಹಲ. ಆದರೆ ಈ ಪ್ರೋಮೋ ನೋಡುತ್ತಿದ್ದಂತೆಯೇ ಭಾಗ್ಯಳ ಬದಲಾದ ಪಾತ್ರಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೆಣ್ಣು ಒಮ್ಮೊಮ್ಮೆ ಹೆಮ್ಮಾರಿಯೂ ಆಗಬೇಕಾಗುತ್ತದೆ. ಪರಿಸ್ಥಿತಿಗೆ ತಕ್ಕಂತೆ ಹೆಣ್ಣು ಬದಲಾಗಲೇ ಬೇಕು ಎಂದು ಹಲವರು ಕಮೆಂಟ್ ಮೂಲಕ ಅಭಿಪ್ರಾಯ ಹೇಳುತ್ತಿದ್ದಾರೆ.