Tomato ಬೆಲೆ ಜಾಸ್ತಿ ಅಂತ 'ಗೀತಾ' ಸೀರಿಯಲ್​ ನಟಿ ಹೀಗೆ ಕದ್ಯೋದಾ?

Published : Jul 22, 2023, 12:53 PM IST
Tomato  ಬೆಲೆ ಜಾಸ್ತಿ ಅಂತ 'ಗೀತಾ' ಸೀರಿಯಲ್​ ನಟಿ ಹೀಗೆ ಕದ್ಯೋದಾ?

ಸಾರಾಂಶ

 ಕಲರ್ಸ್​ ಕನ್ನಡದಲ್ಲಿ ಬರುವ ಗೀತಾ ಧಾರಾವಾಹಿಯ ವಿಲನ್​ 'ಭಾನುಮತಿ' ಟೊಮ್ಯಾಟೋ ಕಳ್ಳತನ ಮಾಡಿರುವ ವಿಡಿಯೋ ವೈರಲ್​ ಆಗಿದೆ. ಏನಿದರ ಅಸಲಿಯತ್ತು?   

ಈಗ ಎಲ್ಲೆಲ್ಲೂ ಟೊಮ್ಯಾಟೋ (Tomato) ಮಾತೆ. 5-10 ರೂಪಾಯಿಗೆ ಮಾರಾಟವಾಗಿ ಎಲ್ಲರೂ ಕಡೆಗಣ್ಣಿನಿಂದ ನೋಡುತ್ತಿದ್ದ ಟೊಮ್ಯಾಟೋ ಈಗ 120ರ ಗಡಿ ದಾಟಿದೆ. ಟೊಮ್ಯಾಟೋ ಬೆಲೆ ಏರಿಕೆಯಾದ ನಂತರ ಇದನ್ನೇ ಇಟ್ಟುಕೊಂಡು ಬರುತ್ತಿರುವ ಮೀಮ್ಸ್​, ರೀಲ್ಸ್​, ಜೋಕ್ಸ್​ಗಳಿಗೆ ಲೆಕ್ಕವೇ ಇಲ್ಲವಾಗಿದೆ. ಒಂದಕ್ಕಿಂತ ಒಂದು ಹಾಸ್ಯಭರಿತ ರೀಲ್ಸ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಅದೇ ಇನ್ನೊಂದೆಡೆ ಟೊಮ್ಯಾಟೋ ಬೆಳೆಯುತ್ತಿರುವ ರೈತರಿಗೆ ಅದನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಏಕೆಂದರೆ ಅದರ ಕಳ್ಳತನ ಹೆಚ್ಚಾಗುತ್ತಿದೆ. ಸಿಸಿಟಿವಿಯ ನಿಗಾದಲ್ಲಿ ಟೊಮ್ಯಾಟೋ ಮಾರಾಟ ಮಾಡುತ್ತಿದ್ದಾರೆ ಕೆಲವು ತರಕಾರಿ ಅಂಗಡಿ ಮಾಲೀಕರು. ಆದರೆ ರೇಟ್​ ಎಷ್ಟೇ ಹೆಚ್ಚಾದರೂ ಟೊಮ್ಯಾಟೋಗೆ ಅದೇ ಸಾಟಿ. ಕೆಲ ದಶಕಗಳ ಹಿಂದೆ ಟೊಮ್ಯಾಟೋ ಎನ್ನುವ ಒಂದು ತರಕಾರಿ ಇದೆ ಎಂದೇ ಕಲ್ಪನೆ ಇರಲಿಲ್ಲ. ಆಗ ಅಡುಗೆ ರುಚಿಕಟ್ಟಾಗಿಯೇ ನಡೆಯುತ್ತಿತ್ತು. ಆದರೆ ಇದರ ಪರಿಚಯವಾದ ಮೇಲೆ ಟೊಮ್ಯಾಟೋ ಹಾಕದಿದ್ದರೆ ಅಡುಗೆ ಯಾಕೋ ಹಲವರಿಗೆ ಹಿಡಿಸುವುದೇ ಇಲ್ಲ.

ಅದೇನೇ ಇರಲಿ. ಈಗ ಹೇಳುತ್ತಿರುವುದು ಟೊಮ್ಯಾಟೋ ಕಳ್ಳತನದ (Theft) ಕುರಿತು. ಅಲ್ಲಲ್ಲಿ ಟೊಮ್ಯಾಟೋ ಕಳ್ಳತನ ಆಗುವ ಬಗ್ಗೆ ದಿನನಿತ್ಯವೂ ಸುದ್ದಿಗಳನ್ನು ಕೇಳಿರುತ್ತೇವೆ, ಓದಿರುತ್ತೇವೆ. ಆದರೆ ಇದೀಗ ಖುದ್ದು ಖ್ಯಾತ ಧಾರಾವಾಹಿಯ ನಟಿಯೇ ಟೊಮ್ಯಾಟೋ ಕಳ್ಳತನ ಮಾಡಿದ್ದಾರೆ! ಹೌದು. ಟೊಮ್ಯಾಟೋ ವನ್ನು ಅವರು ಎಗರಿಸಿದ್ದಾರೆ. ಇದರ ವಿಡಿಯೋ ಸಕತ್​ ವೈರಲ್​ ಆಗಿದ್ದು, ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ಅಷ್ಟಕ್ಕೂ ಈ ನಟಿ ಶರ್ಮಿತಾ ಗೌಡ (Sharmitha Gowda). ಕಲರ್ಸ್​ ಕನ್ನಡ ಚಾನೆಲ್​ನಲ್ಲಿ ಪ್ರಸಾರವಾಗುವ ಗೀತಾ ಧಾರಾವಾಹಿಯ ನಟಿ ಈಕೆ. ಈಕೆ ಖುಲ್ಲಂ ಖುಲ್ಲಾ ಆಗಿ ಟೊಮ್ಯಾಟೋ ಕದ್ದು ಸಿಕ್ಕಿಬಿದ್ದಿದ್ದಾರೆ!

Chaya Singh: 'ಅಮೃತಧಾರೆ' ಭೂಮಿಕಾ ರಿಯಲ್​ ಲೈಫ್​ ಪತಿ ಯಾರ್​ ಗೊತ್ತಾ?

ಕಲರ್ಸ್​ ಕನ್ನಡದಲ್ಲಿ ಪ್ರತಿದಿನ ಪ್ರಸಾರವಾಗ್ತಿರೋ ಗೀತಾ ಧಾರಾವಾಹಿಯಲ್ಲಿ (Geetha Serial)ನಾಯಕಿಗೆ ಇರುವಷ್ಟೇ ಮಹತ್ವ ವಿಲನ್​ ಭಾನುಮತಿಗೂ ಇದೆ. ಇದಕ್ಕೆ ಕಾರಣ, ಭಾನುಮತಿಯ ಪಾತ್ರಧಾರಿಯಾಗಿಯ ನಟನೆ. ಧಾರಾವಾಹಿಯಲ್ಲಿ ಈಕೆಯನ್ನು ಜನ ಸಕತ್​ ದ್ವೇಷಿಸುತ್ತಿದ್ದರೂ, ನಿಜ ಜೀವನದಲ್ಲಿ ಈ ವಿಲನ್ ಭಾನುಮತಿಗೆ ಸಕತ್​ ಫಾಲೋವರ್ಸ್​ ಇದ್ದಾರೆ. ಅಂದಹಾಗೆ ಈ ಭಾನುಮತಿಯ ನಿಜವಾದ ಹೆಸರೇ ಶರ್ಮಿತಾ ಗೌಡ. ವಿಲನ್​ ಪಾತ್ರಕ್ಕೆ ಜೀವ ತುಂಬಿರೋ ಈ ನಟಿ, ಈಗ ಟೊಮ್ಯಾಟೋ ಕದ್ದು ಸಿಕ್ಕಿಬಿದ್ದಿದ್ದಾರೆ!

ಅಷ್ಟಕ್ಕೂ ಇವರೇನು ನಿಜ ಜೀವನದಲ್ಲಿ ಟೊಮ್ಯಾಟೊ ಕದ್ದಿಲ್ಲ, ಬದಲಿಗೆ, ಟೊಮ್ಯಾಟೊ ಕುರಿತಾಗಿ ರೀಲ್ಸ್​ ಮಾಡಿದ್ದಾರೆ. ಶರ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಸಕತ್​ ಆ್ಯಕ್ಟೀವ್​ ಆಗಿದ್ದು, ಆಗ್ಗಾಗ್ಗೆ ಏನಾದರೂ ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಈಗ ಅವರ ವಿಡಿಯೋ ಒಂದು ವೈರಲ್​ ಆಗಿದೆ. ಆದರೆ ಅವರ ಈ ವಿಡಿಯೋ ಶೇರ್​ ಮಾಡಿದ್ದದ ನಟ ಗಿರೀಶ್​ ಶಂಕರ್​. ಇದು ಟೊಮ್ಯಾಟೋ  (Tomato) ರೀಲ್ಸ್​. ಈ ರೀಲ್ಸ್​ನಲ್ಲಿ ನಟ ಗಿರೀಶ್ ಶಂಕರ್  ತನ್ನ ಕೈಯಲ್ಲಿ  ಎರಡು ಟೊಮ್ಯಾಟೋ ಹಿಸಿದಿದ್ದಾರೆ. ಹಿನ್ನೆಲೆಯಲ್ಲಿ ಕಾವಾಲಯ್ಯ ಹಾಡು ಪ್ಲೇ ಆಗುತ್ತಿದೆ. ಆಗ  ಶರ್ಮಿತಾ ಅದಕ್ಕೆ ಸ್ಟೆಪ್​ ಹಾಕುತ್ತಲೇ  ಟೊಮ್ಯಾಟೋ ಎಗರಿಸಿದ್ದು, ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ.  ಗಿರೀಶ್ ಅವರು ಈ ವಿಡಿಯೋ ಶೇರ್​ ಮಾಡಿದ್ದು, ಟೊಮ್ಯಾಟೊ ಕಾವಾಲಯ್ಯ ಎಂದು ಶೀರ್ಷಿಕೆ ಕೊಟ್ಟಿದ್ದಾರೆ.  ಇದನ್ನು ಇದಾಗಲೇ ಸಾವಿರಾರು ಮಂದಿ ಲೈಕ್ಸ್ ಮಾಡಿದ್ದು, ಹಲವರು ಕಮೆಂಟ್​ ಮಾಡುತ್ತಿದ್ದಾರೆ. 

ಅರಸನ ಕೋಟೆ ಸೊಸೆ 'ಪಾರು'ವಿಗೆ ನಿಜ ಜೀವನದಲ್ಲಿ ವಿಶೇಷ ಚೇತನ ತಮ್ಮ, ಅವನಿಗೆ ಇವಳೇ ಅಮ್ಮ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss Kannada: ಚಾಮುಂಡಿ ದೇವಿ ಮುಂದೆ ಮಾತು ಕೊಟ್ಟು ತಪ್ಪಿದ ಗಿಲ್ಲಿ ನಟ; ಇಂಥ ಮಹಾಪ್ರಮಾದ ಯಾಕೆ?
BBK 12: ಕಾವ್ಯ ಶೈವ ಹತ್ತಿಸಿದ ಕಿಡಿ; ಧ್ರುವಂತ್‌, ರಜತ್‌ ಮಧ್ಯೆ ಮಾರಾಮಾರಿ ಜಗಳ, ಹೊರಬೀಳೋರು ಯಾರು?