ಸಾಮಿ ಸಾಮಿ.. ಎಂದು ಕುಣಿದ ರಶ್ಮಿಕಾ; ಹಿಂದಿ ಕಿರುತೆರೆಯಲ್ಲೂ 'ಪುಷ್ಪ' ನಟಿಯದ್ದೇ ಹವಾ, ವಿಡಿಯೋ ವೈರಲ್

By Shruiti G Krishna  |  First Published Sep 25, 2022, 12:21 PM IST

ಗುಡ್ ಬೈ ಸಿನಿಮಾದ ಪ್ರಮೋಷನ್ ಮಾಡುತ್ತಿರುವ ನಟಿ ರಶ್ಮಿಕಾ ಮಂದಮ್ಣ ಹಿಂದಿ ಕಿರುತೆರೆಯಲ್ಲಿ ಸಾಮಿ ಸಾಮಿ ಅಂತ ಕುಣಿದು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ರಶ್ಮಿಕಾ ಡಾನ್ಸ್ ಸಖತ್ ವೈರಲ್ ಆಗಿದೆ. ರಶ್ಮಿಕಾ ಹಿಂದಿಯ ಡಾನ್ಸ್ ಇಂಡಿಯಾ ಡಾನ್ಸ್ ಸೂಪರ್ ಮಾಮ್ 3 (DID Super Moms 3) ಶೋನಲ್ಲಿ ಕಾಣಿಸಿಕೊಂಡಿದ್ದಾರೆ. 


ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೌತ್ ಮತ್ತು ಬಾಲಿವುಡ್ ಎರಡೂ ಕಡೆ ರಶ್ಮಿಕಾ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕನ್ನಡ ಸಿನಿಮಾರಂಗದಿಂದ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ ಕಿರಿಕ್ ಸುಂದರಿ ಸದ್ಯ ತೆಲುಗು, ತಮಿಳು ಮತ್ತೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗು ಸಿನಿಮಾರಂಗದಲ್ಲಿ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಂತೆ ರಶ್ಮಿಕಾ ಇದೀಗ ಹಿಂದಿಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಮುಂಬೈ, ಹೈದರಾಬಾದ್, ಚೆನ್ನೈ ಅಂತ ಸದಾ ಓಡಾಡುತ್ತಿರುತ್ತಾರೆ. ಸದ್ಯ ಬಾಲಿವುಡ್‌ನ ಗುಡ್‌ಬೈ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ರಶ್ಮಿಕಾ ಮೊದಲ ಹಿಂದಿ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಈಗಾಗಲೇ ಗುಡ್‌ಬೈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಸಿನಿಮಾತಂಡ ಪ್ರಮೋಷನ್ ನಲ್ಲಿ ನಿರತವಾಗಿದೆ. ರಶ್ಮಿಕಾ ಮುಂಬೈನಲ್ಲಿ ಪ್ರಮೋನ್ ಮಾಡುತ್ತಿದ್ದಾರೆ. 

ಈ ನಡುವೆ ರಶ್ಮಿಕಾ ಮಂದಣ್ಣ ಹಿಂದಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಸಾಮಿ ಸಾಮಿ ಅಂತ ಕುಣಿದು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ರಶ್ಮಿಕಾ ಡಾನ್ಸ್ ಸಖತ್ ವೈರಲ್ ಆಗಿದೆ. ಹೌದು ರಶ್ಮಿಕಾ ಹಿಂದಿಯ ಡಾನ್ಸ್ ಇಂಡಿಯಾ ಡಾನ್ಸ್ ಸೂಪರ್ ಮಾಮ್ 3 (DID Super Moms 3) ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶೋನಲ್ಲಿ ರಶ್ಮಿಕಾ ನಟ ಗೊವಿಂದ ಅವರ ಜೊತೆ ಮಸ್ತ್ ಡಾನ್ಸ್ ಮಾಡಿದ್ದಾರೆ. ಪುಷ್ಪ ಸಿನಿಮಾದ ಸೂಪರ್ ಹಿಟ್ ಸಾಮಿ ಸಾಮಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ರಶ್ಮಿಕಾ ಮತ್ತು ಗೊವಿಂದ ಅವರ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Tap to resize

Latest Videos

ಡಾನ್ಸ್ ಇಂಡಿಯಾ ಡಾನ್ಸ್ ಸೂಪರ್ ಮಾಮ್ 3 ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಈ ಶೋನಲ್ಲಿ ಊರ್ಮಿಳಾ ಮಾತೋಂಡ್ಕರ್, ಭಗ್ಯಶ್ರೀ ಮತ್ತು ರೊಮೋ ಡಿ ಸೋಜಾ ಅವರು ಜಡ್ಜ್ ಆಗಿದ್ದಾರೆ. ರಶ್ಮಿಕಾ ಡಾನ್ಸ್‌ಗೆ ಈ ಮೂವರು ಜಡ್ಜ್ ಕೂಡ ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಂದಹಾಗೆ ರಶ್ಮಿಕಾ ಸಾಮಿ ಸಾಮಿ ಅಂತ ಕುಣಿದು ಅಭಿಮಾನಿಗಳನ್ನು ರಂಜಿಸುತ್ತಿರುವುದು ಇದೇ ಮೊದಲಲ್ಲ. ಈ ಮದಲು ಸಹ ಅನೇಕ ಬಾರಿ ಪುಷ್ಪ ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 

ರಶ್ಮಿಕಾ ಮಂದಣ್ಣಗೆ ಮಂಡಿನೋವು; ಭಾರತದ ಟಾಪ್ ಆರ್ಥೋಪಿಡಿಕ್ ಬಳಿ ಚಿಕಿತ್ಸೆ

ರಶ್ಮಿಕಾ ನಟನೆಯ ಗುಡ್‌ಬೈ ಸಿನಿಮಾದ ಬಗ್ಗೆ ಹೇಳುವುದಾದರೆ ಈ ಸಿನಿಮಾದಲ್ಲಿ ರಶ್ಮಿಕಾ, ಅಮಿತಾಭ್ ಬಚ್ಚನ್ ಮತ್ತು ನೀನಾ ಗುಪ್ತಾ ಜತೆ ನಟಿಸಿದ್ದಾರೆ. ಅಮಿತಾಭ್-ನೀನಾ ಪುತ್ರಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ. ಸದ್ಯ ಈ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದು ರಶ್ಮಿಕಾ ಮುಂಬೈನಲ್ಲಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

Nahi hata paayenge aap bhi apni ankhiyaan, jab manch par saami, saami karenge aur ! 🔥👯Dekhiye , kal, raat 9 baje, sirf par aur kahin bhi, kabhi bhi App par. pic.twitter.com/CgsJKuXwdE

— ZeeTV (@ZeeTV)

ಮುಂಬೈನಲ್ಲಿ ರಶ್ಮಿಕಾ ಹವಾ; 'ಗುಡ್‌ಬೈ' ಪ್ರಮೋಷನ್‌ನಲ್ಲಿ ಕಾಣಿಸಿಕೊಂಡಿದ್ದು ಹೀಗೆ

ಸೌತ್ ಬ್ಯೂಟಿ ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇದುವರೆಗೂ ಒಂದು ಹಿಂದಿ ಸಿನಿಮಾ ರಿಲೀಸ್ ಆಗಿಲ್ಲ. ಮಿಷನ್ ಮಜ್ನು ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ರಶ್ಮಿಕಾ ಇನ್ನು ದೊಡ್ಡ ಪರದೆ ಮೇಲೆ ಮಿಂಚಿಲ್ಲ. ಹಾಗಾಗಿ ಮೊದಲ ಹಿಂದಿ ಸಿನಿಮಾ ರಿಲೀಸ್‌ಗೆ ರಶ್ಮಿಕಾ ಸಖತ್ ಉತ್ಸುಕರಾಗಿದ್ದಾರೆ. ಇನ್ನು ಹಿಂದಿಯಲ್ಲಿ ರಶ್ಮಿಕಾ ಅಭಿಷೇಕ್ ಬಚ್ಚನ್ ಜೊತೆ ನಟಿಸುತ್ತಿದ್ದಾರೆ. ಜೊತೆಗೆ ಟೈಗರ್ ಶ್ರಾಫ್ ಜೊತೆ ಮುಂದಿನ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ತೆಲುಗು, ತಮಿಳಿಗಿಂತ ರಶ್ಮಿಕಾ ಹಿಂದಿಯಲ್ಲಿ ಬ್ಯುಸಿಯಾಗಿದ್ದಾರೆ.

click me!