ಪ್ರಸಿದ್ಧ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ಚಾನೆಲ್ ಹ್ಯಾಕ್, ಎಲ್ಲ ವಿಡಿಯೋ ಡಿಲೀಟ್

Published : Sep 26, 2024, 03:17 PM ISTUpdated : Sep 26, 2024, 05:55 PM IST
ಪ್ರಸಿದ್ಧ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ಚಾನೆಲ್ ಹ್ಯಾಕ್, ಎಲ್ಲ ವಿಡಿಯೋ ಡಿಲೀಟ್

ಸಾರಾಂಶ

ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ಅವರ ಎರಡು ಯೂಟ್ಯೂಬ್  ಚಾನೆಲ್ ಹ್ಯಾಕ್ ಆಗಿದೆ. ಬೀರ್ ಬೈಸೆಪ್ಸ್ ಚಾನೆಲ್ ಹ್ಯಾಕ್ ಆಗಿರುವ ವಿಷ್ಯವನ್ನು ರಣವೀರ್, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, 12 ಮಿಲಿಯನ್ ಸಬ್ಸ್ಕ್ರೈಬರ್ ಹೊಂದಿದ್ದ ಚಾನೆಲ್ ಕಥೆ ಮುಗಿತಾ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡ್ತಿದೆ. 

ಭಾರತದ ಜನಪ್ರಿಯ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ (popular YouTuber Ranveer Allahabadia )ಹಾಗೂ ಅವರ ಫ್ಯಾನ್ಸ್ ಶಾಕ್ ಆಗುವ ಘಟನೆ ನಡೆದಿದೆ. ಅವರ ಯೂಟ್ಯೂಬ್ ಚಾನೆಲ್ (YouTube Channel) ಬೀರ್ ಬೈಸೆಪ್ಸ್ (Beer Biceps) ಚಾನೆಲ್ ಹ್ಯಾಕ್ ಆಗಿದೆ. ರಣ್ ವೀರ್ ಅಲಹಬಾಡಿಯಾ ಅವರ ಎರಡು ಚಾನೆಲ್ ಹ್ಯಾಕ್ (Channel Hack) ಆಗಿದ್ದು, ಹ್ಯಾಕರ್ಸ್ ಚಾನೆಲ್ ಹೆಸರು ಬದಲಿಸಿದ್ದಾರೆ. ಅಷ್ಟೇ ಅಲ್ಲ ಅದ್ರಲ್ಲಿದ್ದ ಎಲ್ಲ ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.

ಹ್ಯಾಕರ್‌ಗಳು ಅವರ ಚಾನೆಲ್‌ನಲ್ಲಿ ಎಐ (AI) ರಚಿತ ವೀಡಿಯೊವನ್ನು ಪ್ಲೇ ಮಾಡ್ತಿದ್ದಾರೆ. ರಣವೀರ್ ಅವರ ಚಾನೆಲ್ ಹೆಸರನ್ನು ಟೆಸ್ಲಾ ಎಂದು ಬದಲಾಯಿಸಲಾಗಿದೆ. ಬೀರ್ ಬೈಸೆಪ್ಸ್ ಚಾನೆಲ್‌ನಲ್ಲಿರುವ ಎಲ್ಲಾ ವೀಡಿಯೊಗಳನ್ನು ಡಿಲಿಟ್ ಮಾಡಿ, ಎಲೋನ್ ಮಸ್ಕ್ ಮತ್ತು ಡೊನಾಲ್ಡ್ ಟ್ರಂಪ್‌ರಂತಹ ಸೆಲೆಬ್ರಿಟಿಗಳ ಹಳೆಯ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ರಣವೀರ್ ಚಾನೆಲ್ ಹೆಸರನ್ನು@Tesla.event.trump_2024  ಎಂದು ಬದಲಾಯಿಸಿದ್ದಾರೆ. ಅವರ ಎರಡನೇ ಚಾನೆಲ್ ಬೀರ್ ಬೈಸೆಪ್ಸ್ ಹೆಸರನ್ನು @Elon.trump.tesla_live2024 ಎಂದು ಬದಲಿಸಲಾಗಿದೆ.

ಅಪ್ಪನ ಜೊತೆ ಗದ್ದೆಯಲ್ಲಿ ಡ್ರೋನ್ ಪ್ರತಾಪ್, ಸುದೀಪ್‌ ನೆನೆದ ನೆಟ್ಟಿಗರು  

ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ, ಸೋಶಿಯಲ್ ಮೀಡಿಯಾದಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರ್ಗರ್ ಮತ್ತು ಫ್ರೈಗಳ ಫೋಟೋ ಪೋಸ್ಟ್ ಮಾಡಿರುವ ರಣವೀರ್, ನನ್ನ ಎರಡು ಮುಖ್ಯ ಚಾನಲ್‌ಗಳು ಹ್ಯಾಕ್  ಆಗಿದೆ ಎಂದು ಬರೆದಿದ್ದಾರೆ. ಇನ್ನೊಂದು ಇನ್ಸ್ಟಾ ಸ್ಟೋರಿಯಲ್ಲಿ, ತಮ್ಮ ಫೋಟೋ ಹಂಚಿಕೊಂಡಿರುವ ಅವರು, ಬಟ್ಟೆಯಿಂದ ಕಣ್ಣು ಮುಚ್ಚಿದ್ದು, ಇದು ನನ್ನ ಯೂಟ್ಯೂಬ್ ವೃತ್ತಿಜೀವನದ ಅಂತ್ಯವೇ?  ಎಂದು ಬರೆದಿದ್ದಾರೆ. ರಣವೀರ್ ಟೀಂ, ಡಿಲಿಟ್ ಆಗಿರುವ ಹಾಗೂ ಹ್ಯಾಕರ್ ಕೈ ಸೇರಿರುವ ಯೂಟ್ಯೂಬ್ ಚಾನೆಲ್ ಹಾಗೂ ವಿಡಿಯೋವನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದೆ. 

ರಣವೀರ್ ಅಲ್ಲಾಬಾಡಿಯಾ ಯಾರು ? : ರಣವೀರ್ ಅಲ್ಲಾಬಾಡಿಯಾ ಭಾರತದ ಪ್ರಸಿದ್ಧ ಯೂಟ್ಯೂಬರ್. ಅವರ ನಿಜವಾದ ಹೆಸರು ರಣವೀರ್ ಅರೋರಾ ಅಲಹಬಾಡಿಯಾ. ಎಂಜಿನಿಯರಿಂಗ್ ಪದವಿ ಪಡೆದಿರುವ ರಣಬೀರ್, ಬೀರ್‌ಬೈಸೆಪ್ಸ್ ಎಂಬ ಹೆಸರಿನ ಸ್ವಂತ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ರಣವೀರ್ ಅಲಹಬಾಡಿಯಾ ತನ್ನ ಪಾಡ್‌ಕ್ಯಾಸ್ಟ್‌ಗೆ ಭಾರತೀಯ ಸೆಲೆಬ್ರಿಟಿಗಳನ್ನು ಆಹ್ವಾನಿಸಿ, ಅವರ ಜೊತೆ ಮಾತನಾಡ್ತಾರೆ. ಕರೀನಾ ಕಪೂರ್, ಜಾನ್ವಿ ಕಪೂರ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಅಥವಾ ವಿದ್ಯುತ್ ಜಮ್ವಾಲ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಜೊತೆ ಮಾತುಕತೆ ನಡೆಸಿರುವ ರಣವೀರ್, ಇಂಟರೆಸ್ಟಿಂಗ್ ವಿಷ್ಯಗಳನ್ನು ಹೊರಹಾಕಿದ್ದರು. 

ರಣವೀರ್ ಅಲ್ಲಾಬಾಡಿಯಾ ಭಾರತದ ಶ್ರೀಮಂತ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಅವರು 7 ಕ್ಕೂ ಹೆಚ್ಚು ಯೂಟ್ಯೂಬ್ ಚಾನೆಲ್‌ಗಳನ್ನು ಹೊಂದಿದ್ದಾರೆ. ರಣವೀರ್ ಅಲ್ಲಾಬಾಡಿಯಾ ಒಟ್ಟು 60 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿದ್ದಾರೆ.

ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್‌ನ ಯೂಟ್ಯೂಬ್ ಚಾನೆಲ್ (, Supreme Court YouTube Channel) ಹ್ಯಾಕ್ ಆಗಿತ್ತು. ಹ್ಯಾಕರ್‌ಗಳು ಅದರ ಹೆಸರನ್ನು ಬದಲಾಯಿಸಿದ್ದರು. ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ ವೀಡಿಯೊಗಳನ್ನು ಅದರಲ್ಲಿ ಪೋಸ್ಟ್ ಮಾಡಿದ್ದರು. ದೊಡ್ಡ ಸಬ್ಸ್ಕ್ರೈಬ್ ಬೇಸ್ ಹೊಂದಿರುವ ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ಹ್ಯಾಕರ್‌ಗಳು ಹೆಚ್ಚಾಗಿ ಕಣ್ಣಿಡುತ್ತಾರೆ. ಪ್ರಸಿದ್ಧ ಯೂಟ್ಯೂಬರ್ ರಣವೀರ್ ಅಲಹಬಾಡಿಯಾ 12 ಮಿಲಿಯನ್ ಸಬ್ಸ್ಕ್ರೈಬರ್ ಹೊಂದಿದ್ದರು. 

ಮೈಸೂರು ಹುಡುಗಿ ಆಗಿ ಮೈ ಕಾಣೋ ಬಟ್ಟೆ ಹಾಕ್ಬೇಡಿ; ಕರಿಮಣಿ ಸಾಹಿತ್ಯಾ ಕಾಲೆಳೆದ ನೆಟ್ಟಿಗರು

ಹ್ಯಾಕರ್ಸ್ ಎರಡು ರೀತಿಯಲ್ಲಿ ಚಾನೆಲ್ ಹ್ಯಾಕ್ ಮಾಡ್ತಿದ್ದಾರೆ. ಒಂದರಲ್ಲಿ ಲಾಗಿನ್ ಸಾಧ್ಯವಾಗುತ್ತದೆ. ಇನ್ನೊಂದರಲ್ಲಿ ಲಾಗಿನ್ ಸಾಧ್ಯವಿಲ್ಲ. ಲಾಗಿನ್ ಸಾಧ್ಯವಾಗ್ತಿದೆ ಅಂದ್ರೆ ಮೊದಲು ಪಾಸ್ವರ್ಡ್ ಬದಲಿಸಬೇಕು. ಹ್ಯಾಕ್ ಮಾಡಿದ ಯುಟ್ಯೂಬ್ ಖಾತೆಯನ್ನು ಮರುಪಡೆಯುವುದು ಸುಲಭವಲ್ಲ. ಖಾತೆಯನ್ನು ಹ್ಯಾಕರ್‌ಗಳಿಂದ ರಕ್ಷಿಸುವುದು ಬಹಳ ಮುಖ್ಯ. ರಣವೀರ್ ಖಾತೆ ಹ್ಯಾಕ್ ಆಗ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಶುರುವಾಗಿದ್ದು, ಅನೇಕ ಯೂಟ್ಯೂಬರ್ ಗಳಿಗೆ ಭಯ ಶುರುವಾಗಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!