ಬಿಗ್ಬಾಸ್ ಸೀಸನ್ 11 ಶುರುವಾಗಲು ಇನ್ನೇನು ಮೂರು ದಿನಗಳು ಬಾಕಿ ಇವೆ. ಇದೀಗ ಸ್ಪರ್ಧಿಗಳ ಬ್ಲರ್ ಫೋಟೋಗಳು ವೈರಲ್ ಆಗುತ್ತಿದ್ದು, ಫ್ಯಾನ್ಸ್ ತಲೆಬಿಸಿ ಮಾಡಿಕೊಂಡಿದ್ದಾರೆ!
ಬಿಗ್ಬಾಸ್ ಸೀಸನ್ 11ಕ್ಕೆ ಇನ್ನೇನು ಮೂರೇ ದಿನಗಳು ಬಾಕಿ ಇವೆ. ಪ್ರೀಮಿಯರ್ ಸಂಚಿಕೆ ಸೆಪ್ಟೆಂಬರ್ 29 ಸಂಜೆ 6 ಗಂಟೆಗೆ ಪ್ರಸಾರವಾಗಲಿದ್ದು, ಸೆಪ್ಟೆಂಬರ್ 28 ರಂದು ‘ರಾಜಾ ರಾಣಿ’ ಗ್ರ್ಯಾಂಡ್ ಫಿನಾಲೆ ವೇಳೆ ಕೆಲ ಸ್ಪರ್ಧಿಗಳನ್ನ ರಿವೀಲ್ ಮಾಡಲಾಗುತ್ತದೆ ಎಂದು ಇದಾಗಲೇ ನಟ ಸುದೀಪ್ ಹೇಳಿದ್ದಾರೆ. ಇದರ ಹೊರತಾಗಿಯೂ ಇದಾಗಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿಗಳು ಆಗಾಗ್ಗೆ ಹೊರಬರುತ್ತಲೇ ಇವೆ. ಆದರೆ ಇದೀಗ ಕೆಲವು ಬ್ಲರ್ ಫೋಟೋಗಳನ್ನು ಶೇರ್ ಮಾಡಲಾಗಿದೆ. ಸಿನಿ ಸಂಚಿಕೆಯಲ್ಲಿ ಇದನ್ನು ಶೇರ್ ಮಾಡಲಾಗಿದೆ. ಇದರಲ್ಲಿ ಇರುವ ಸೆಲೆಬ್ರಿಟಿಗಳು ಯಾರು ಇರಬಹುದು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇವರು ಇರ್ಬೋದಾ, ಅವರು ಇರ್ಬೋದಾ, ಇವನು ಅವನಲ್ಲ, ಇವಳು ಅವಳಲ್ಲ... ಹೀಗೆ ತಮ್ಮದೇ ಆದ ಊಹೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಇಷ್ಟೇ ಅಲ್ಲ. ಈ ಸ್ಪರ್ಧಿಗಳನ್ನು ಎಲ್ಲಿಗೆ ಕಳಿಸ್ತೀರಿ ಎನ್ನುವ ಡೈಲಾಗ್ ಹೇಳುವ ಮೂಲಕ ಸುದೀಪ್ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಇದಾಗಲೇ ಬಿಗ್ಬಾಸ್ ಸೀಸನ್ 11ರ ಹೊಸ ಪ್ರೋಮೋ ಬಿಡುಗಡೆಯಾಗಿದ್ದು ಅದರಲ್ಲಿ ‘’ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಒಂದಲ್ಲ… ಎರಡು ಮನೆ (ಸ್ವರ್ಗ, ನರಕ) ಇರಲಿವೆ ಎಂದು ಸುದೀಪ್ ಹೇಳಿದ್ದಾರೆ. ‘ಬಿಗ್ ಬಾಸ್’ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅಸಲಿ ಆಟ ವೀಕ್ಷಕರಿಂದ ಶುರುವಾಗುತ್ತಿದೆ. ಮನೆಯೊಳಗೆ ಹೋಗುವ ಸ್ಪರ್ಧಿಗಳ ಹೆಸರನ್ನ ನಾವು ಹೇಳ್ತೀವಿ. ಸ್ವರ್ಗಕ್ಕೆ ಹೋಗಬೇಕಾ, ನರಕಕ್ಕೆ ಹೋಗಬೇಕಾ ಎಂಬ ನಿರ್ಧಾರ ನಿಮ್ಮ ಕೈಯಲ್ಲಿದೆ’’ ಎಂದೂ ಅವರು ಹೇಳಿದ್ದಾರೆ. ಇದರಿಂದ ಎಲ್ಲವೂ ವೀಕ್ಷಕರ ಕೈಯಲ್ಲಿ ಇದೆಯಾ ಎನ್ನುವುದು ಗೊತ್ತಾಗಬೇಕಿದೆ.
undefined
ಬಿಗ್ಬಾಸ್ಗೆ ಕ್ಷಣಗಣನೆ... ಸೀಸನ್ 11ರ ಕುರಿತು ನಟ ವಿಜಯ ರಾಘವೇಂದ್ರ ಮನದಾಳದ ಮಾತೇನು?
ಅಷ್ಟಕ್ಕೂ, ಸ್ಯಾಂಡಲ್ವುಡ್ ಬ್ಯೂಟಿ, ಎವರ್ಗ್ರೀನ್ ತಾರೆ ಪ್ರೇಮಾ, ಜನಪ್ರಿಯ ಟಿ.ವಿ ನಿರೂಪಕ ಹರೀಶ್ ನಾಗರಾಜು, 'ದಾಸ ಪುರಂದರ' ಮತ್ತು 'ಬೃಂದಾವನ'ದಲ್ಲಿ ನಟಿಸಿರುವ ನಟಿ ಅಮೂಲ್ಯ ಭಾರದ್ವಾಜ್, 'ಗಿಚ್ಚಿ ಗಿಲಿಗಿಲಿ ಸೀಸನ್ 3' ರ ರನ್ನರ್ ಅಪ್ ಮಾನಸಾ ತುಕಾಲಿ ಸಂತೋಷ್, ಹಾಸ್ಯನಟ ಹುಲಿ ಕಾರ್ತಿಕ್, 'ಮಗಳು ಜಾನಕಿ' ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ಗಾಯಕಿ ಮತ್ತು ನಟಿ ಐಶ್ವರ್ಯಾ ರಂಗರಾಜನ್ ಸಂಭಾವ್ಯ ಪಟ್ಟಿಯಲ್ಲಿದ್ದಾರೆ. ಆ್ಯಂಕರ್ ಸುಕನ್ಯಾ, ಒಲವಿನ ನಿಲ್ದಾಣದ ನಾಯಕ ಅಕ್ಷಯ್ ನಾಯಕ್, ಕನ್ನಡತಿ ಸೀರಿಯಲ್ನಲ್ಲಿ ಹರ್ಷನ ತಂಗಿ ಸುಚಿಯಾಗಿದ್ದ ನಟಿ ಅಮೃತಾ ಮೂರ್ತಿ, ಭೀಮಾ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿರುವ ಪ್ರಿಯಾ ಶಠಮರ್ಷಣ ಹೆಸರೂ ಕೇಳಿಬರುತ್ತಿವೆ.
ಅದೇ ರೀತಿ, ನಟಿ ಭವ್ಯಾ ಗೌಡ, ನಟ ದೀಪಕ್ ಗೌಡ, ಕನ್ನಡ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಂಗಳೂರಿನ ಪ್ರಖ್ಯಾತ ಅವಳಿ ಸಹೋದರಿಯರಾದ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ , ರೀಲ್ಸ್ ರೇಷ್ಮಾ, ಚಂದ್ರಪ್ರಭಾ, ರಾಘವೇಂದ್ರ, ಜಾಹ್ನವಿ, ಶರ್ಮಿತಾ ಗೌಡ, ತ್ರಿವಿಕ್ರಮ್, ಸುಕೃತಾ ನಾಗ್, ಗೌತಮಿ ಜಾಧವ್, ಮತ್ತು ಶರತ್ ಕುಮಾರ್ ಹೀಗೆ ಹಲವಾರು ಹೆಸರುಗಳು ಸಂಭಾವ್ಯ ಪಟ್ಟಿಯಲ್ಲಿ ಇವೆ. ಆದರೆ ಅಂತಿಮ ಹೆಸರು ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ. ಈ ಫೋಟೋಗಳನ್ನು ನೋಡಿ ನಿಮಗೆ ಏನು ಅನ್ನಿಸುತ್ತಿದೆ? ಇವರಲ್ಲಿ ಯಾರು ಇರಬಹುದು?
ಬಿಗ್ಬಾಸ್ಗೆ ಕ್ಷಣಗಣನೆ: ಇವರೇ ನೋಡಿ ದೊಡ್ಮನೆ ಹೋಗ್ತಿರೋ ಸಂಭಾವ್ಯ ಸ್ಪರ್ಧಿಗಳು- ನಿಮ್ಮ ನೆಚ್ಚಿನ ಸ್ಟಾರ್ ಯಾರು?
Any guess contestants???? pic.twitter.com/n8g0Qu9pm2
— Cine Sanchike | ಸಿನಿ ಸಂಚಿಕೆ 🎞️ (@cinesanchike)